IPL 2025 Auction: 5.75 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಅಣ್ಣನನ್ನು ಖರೀದಿಸಿದ ಆರ್‌ಸಿಬಿ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2025 Auction: 5.75 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಅಣ್ಣನನ್ನು ಖರೀದಿಸಿದ ಆರ್‌ಸಿಬಿ

IPL 2025 Auction: 5.75 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಅಣ್ಣನನ್ನು ಖರೀದಿಸಿದ ಆರ್‌ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ ಹರಾಜಿನ ಎರಡನೇ ದಿನ ಹಾರ್ದಿಕ್ ಪಾಂಡ್ಯ ಅವರ ಸಹೋದರನನ್ನು 5.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಎರಡನೇ ದಿನದ ಹರಾಜಿನಲ್ಲಿ ಆರ್ ಸಿಬಿ ಖರೀದಿ ಮಾಡಿದ ಮೊದಲ ಆಟಗಾರ ಇವರಾಗಿದ್ದಾರೆ. ಐಪಿಎಲ್ ನಲ್ಲಿ ಈ ಆಟಗಾರನ ಈವರೆಗಿನ ಪ್ರದರ್ಶನ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.

ಐಪಿಎಲ್ 2025 ಹರಾಜಿನಲ್ಲಿ ಭಾಗವಹಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ
ಐಪಿಎಲ್ 2025 ಹರಾಜಿನಲ್ಲಿ ಭಾಗವಹಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು-ಆರ್ ಸಿಬಿ ಜೆದ್ದಾದಲ್ಲಿನ ಎರಡನೇ ದಿನದ ಐಪಿಎಲ್ ಹರಾಜಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಅಣ್ಣ ಕೃನಾಲ್ ಪಾಂಡ್ಯವನ್ನು 5.75 ಕೋಟಿ ರೂಪಾಯಿಗೆ ಖರೀದಿಸಿದೆ. ಕೃನಾಲ್ ಪಾಂಡ್ಯ ಅವರಿಗೆ 2 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಆರ್ ಸಿಬಿ ಬಿಡ್ಡಿಂಗ್ ಆರಂಭಿಸಿತು. ತೀವ್ರ ಬಿಡ್ಡಿಂಗ್ ನಡುವೆ ರಾಜಸ್ಥಾನ್ ರಾಯಲ್ಸ್ ಭಾರಿ ಪೈಪೋಟಿ ನೀಡಿತು. ಅಂತಿಮವಾಗಿ 5.75 ಕೋಟಿ ರೂಪಾಯಿಗೆ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರು ಆರ್ ಬಿಸಿ ಪಾಲಾದರು.

ಕೃನಾಲ್ ಪಾಂಡ್ಯ ಐಪಿಎಲ್ ಸಾಧನೆ

ಕೃನಾಲ್ ಪಾಂಡ್ಯ ಐಪಿಎಲ್ ನಲ್ಲಿ ಈವರೆಗೆ 127 ಪಂದ್ಯಗಳನ್ನು ಆಡಿದ್ದಾರೆ. 111 ಇನ್ನಿಂಗ್ಸ್ ಗಳಿಂದ 1647 ರನ್ ಬಾರಿಸಿದ್ದಾರೆ. ಇದರಲ್ಲಿ 1 ಅರ್ಧ ಶತಕ ಸೇರಿದೆ. ಇನ್ನೂ ಬೌಲಿಂಗ್ ನಲ್ಲಿ 76 ವಿಕೆಟ್ ಗಳನ್ನು ಕಬಳಿಸಿದ್ದಾರೆ. 11 ರನ್ ನೀಡಿ 3 ವಿಕೆಟ್ ಪಡೆದಿರುವುದು ವೈಯಕ್ತಿಕ ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

Whats_app_banner