Kolkata Knight Riders: ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ವೆಂಕಟೇಶ್ ಅಯ್ಯರ್ ಖರೀದಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬಲ ಹೇಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Kolkata Knight Riders: ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ವೆಂಕಟೇಶ್ ಅಯ್ಯರ್ ಖರೀದಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬಲ ಹೇಗಿದೆ

Kolkata Knight Riders: ಐಪಿಎಲ್ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ವೆಂಕಟೇಶ್ ಅಯ್ಯರ್ ಖರೀದಿಸಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬಲ ಹೇಗಿದೆ

2025ರ ಐಪಿಎಲ್ ಟೂರ್ನಿಗೆ ಕೋಲ್ಕತ್ತ ನೈಟ್ ರೈಡರ್ಸ್ ಬಲಿಷ್ಠ ತಂಡವನ್ನು ಕಟ್ಟಿದೆ. ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರೆಹಮಾನುಲ್ಲಾ ಗುರ್ಬಾಜ್ ಸೇರಿದಂತೆ ಘಟಾನುಘಟಿಗಳ ಸೇನೆಯನ್ನು ಕಟ್ಟಿದೆ. 2025ರ ಐಪಿಎಲ್ ಹರಾಜು ಬಳಿಕ ಕೆಕೆಆರ್ ತಂಡದ ಸಂಪೂರ್ಣ ವಿವರ ಇಲ್ಲಿದೆ.

2025ರ ಐಪಿಎಲ್ ಟೂರ್ನಿಗೆ ಕೆಕೆಆರ್ ತಂಡದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ
2025ರ ಐಪಿಎಲ್ ಟೂರ್ನಿಗೆ ಕೆಕೆಆರ್ ತಂಡದ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ

2024ರಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮುವ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಒಟ್ಟು ನಾಲ್ಕು ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಕೋಲ್ಕತ್ತ ನೈಟ್ ರೈಡರ್ಸ್ ದೊಡ್ಡ ಬದಲಾವಣೆಯೊಂದಿಗೆ ಬರಲು ಸಜ್ಜಾಗಿದೆ. 2025ರ ಟೂರ್ನಿಗೆ ಮತ್ತಷ್ಟು ಬಲಿಷ್ಠ ತಂಡದೊಂದಿಗೆ ಎಂಟ್ರಿ ಕೊಡಲು ಹೊಸ ಆಟಗಾರರನ್ನು ಖರೀದಿ ಮಾಡಿದೆ. ಜೆದ್ದಾದಲ್ಲಿನ ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರಿಗೆ ಮಣೆಹಾಕಿದೆ. ವಿಶೇಷವಾಗಿ ಹರಾಜಿನಲ್ಲಿ ಕೆಕೆಆರ್ ದಾಖಲೆಯನ್ನು ಬರೆದಿದೆ. ವೆಂಕಟೇಶ್ ಅಯ್ಯರ್ ಅವರಿಗೆ 23.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಇದು ಈ ವರ್ಷದ ಹರಾಜಿನಲ್ಲಿ ಮೂರನೇ ಗರಿಷ್ಠ ಮೊತ್ತದ ಆಟಗಾರನ ಖರೀದಿ ಎನಿಸಿದೆ.

2024ರ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಿದ್ದರು. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಹೀಗಾಗಿ ವೆಂಕಟೇಶ್ ಅಯ್ಯರ್ 2025ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಕೆಕೆಆರ್ 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ರಿಂಗು ಸಿಂಗ್ (13 ಕೋಟಿ ರೂ.), ವರುಣ್ ಚಕ್ರವರ್ತಿ, ಸುನೀಲ್ ನರೇನ್ ಹಾಗೂ ಆಂಡ್ರೊ ರಸೆಲ್ (ತಲಾ 13 ಕೋಟಿ ರೂ.), ಹರ್ಷಿತ್ ರಾಣಾ ಹಾಗೂ ರಮನ್ ದೀಪ್ (ತಲಾ 4 ಕೋಟಿ ರೂ.) ಅವರನ್ನು ಹರಾಜಿಗೂ ಮುನ್ನವೇ ಉಳಿಸಿಕೊಂಡಿತ್ತು

ಇನ್ನು ಈ ಬಾರಿ (2025) ಐಪಿಎಲ್ ಹರಾಜಿನಲ್ಲಿ ಮೊದಲ ದಿನ 23.75 ಕೋಟಿ ರೂಪಾಯಿಗೆ ವೆಂಕಟೇಶ್ ಅಯ್ಯರ್ ಖರೀದಿ ಬಳಿಕ ಬೇರೆ ಯಾವೆಲ್ಲಾ ಆಟಗಾರರಿಗೆ ನೈಟ್ ರೈಡರ್ಸ್ ದೊಡ್ಡ ಮೊತ್ತವನ್ನು ನೀಡಿ ಖರೀದಿ ಮಾಡಿದೆ ಎಂಬುದನ್ನು ನೋಡುವುದಾರೆ, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕಂ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರನ್ನು 3.6 ಕೋಟಿ ರೂಪಾಯಿಗೆ ತಂಡಕ್ಕೆ ಸೇರಿಸಿಕೊಂಡಿದೆ. ಅನ್ರಿಚ್ ನಾರ್ಟ್ಜೆ ಅವರಿಗೆ 6.5 ಕೋಟಿ ರೂಪಾಯಿಗೆ ಖರೀದಿಸಿದೆ.

ಕೋಲ್ಕತ್ತ ನೈಟ್ ರೈಡರ್ಸ್ 2 ದಿನಗಳ ಹರಾಜಿನಲ್ಲಿ ಖರೀದಿಸಿರುವ ಆಟಗಾರರ ವಿವರ

1. ವೆಂಕಟೇಶ್ ಅಯ್ಯರ್ - 23.75 ಕೋಟಿ ರೂ

2. ಅನ್ರಿಚ್ ನಾರ್ಟ್ಜೆ - 6.5 ಕೋಟಿ ರೂ

3. ಕ್ವಿಂಟನ್ ಡಿ ಕಾಕ್ - 3.6 ಕೋಟಿ ರೂ

4. ಅಂಗ್ಕ್ರಿಶ್ ರಘುವಂಶಿ - 3 ಕೋಟಿ ರೂ

5. ಸ್ಫೆನ್ಸರ್ ಜಾನ್ಸೆನ್ - 2.80 ಕೋಟಿ ರೂ.

6. ರೆಹಮಾನುಲ್ಲಾ ಗುರ್ಬಾಜ್ - 2 ಕೋಟಿ ರೂ

7. ವೈಭವ್ ಆರೋರ್ - 1.8 ಕೋಟಿ ರೂ

8. ರೊವ್ಮನ್ ಪೊವೆಲ್ - 1.5 ಕೋಟಿ

9. ಮನೀಶ್ ಪಾಂಡೆ - 75 ಲಕ್ಷ ರೂಪಾಯಿ

10 ಮಯಾಂಕ್ ಮಾರ್ಕಂಡೆ - 30 ಲಕ್ಷ

ಹರಾಜಿಗೂ ಮೊದಲೇ ರಿಟೈನ್ ಮಾಡಿಕೊಂಡಿರುವ ಆಟಗಾರರು

ಸುನೀಲ್ ನರೇನ - 12 ಕೋಟಿ ರೂ.

ರಿಂಕು ಸಿಂಗ್ - 13 ಕೋಟಿ ರೂ.

ವರುಣ್ ಚಕ್ರವರ್ತಿ - 12 ಕೋಟಿ ರೂ.

ಆಂಡ್ರೊ ರಸೆಲ್ - 12 ಕೋಟಿ ರೂ.

ರಮಣದೀಪ್ ಸಿಂಗ್ - 4 ಕೋಟಿ ರೂ.

ಹರ್ಷಿತ್ ರಾಣಾ - 4 ಕೋಟಿ ರೂ.

Whats_app_banner