Sanjiv Goenka: ರಿಷಭ್ ಪಂತ್​ಗೆ 27 ಕೋಟಿ ಜಾಸ್ತಿ ಆಯ್ತು; ಖರೀದಿಸಿದ ಬಳಿಕ ಲಕ್ನೋ ಮಾಲೀಕ ಬೇಸರ
ಕನ್ನಡ ಸುದ್ದಿ  /  ಕ್ರಿಕೆಟ್  /  Sanjiv Goenka: ರಿಷಭ್ ಪಂತ್​ಗೆ 27 ಕೋಟಿ ಜಾಸ್ತಿ ಆಯ್ತು; ಖರೀದಿಸಿದ ಬಳಿಕ ಲಕ್ನೋ ಮಾಲೀಕ ಬೇಸರ

Sanjiv Goenka: ರಿಷಭ್ ಪಂತ್​ಗೆ 27 ಕೋಟಿ ಜಾಸ್ತಿ ಆಯ್ತು; ಖರೀದಿಸಿದ ಬಳಿಕ ಲಕ್ನೋ ಮಾಲೀಕ ಬೇಸರ

Sanjiv Goenka: ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ 27 ಕೋಟಿ ರೂಪಾಯಿ ತುಸು ಹೆಚ್ಚಾಯಿತು ಎಂದು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಬೇಸರ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್​ಗೆ 27 ಕೋಟಿ ಜಾಸ್ತಿ ಆಯ್ತು; ಖರೀದಿಸಿದ ಬಳಿಕ ಲಕ್ನೋ ಮಾಲೀಕ ಬೇಸರ
ರಿಷಭ್ ಪಂತ್​ಗೆ 27 ಕೋಟಿ ಜಾಸ್ತಿ ಆಯ್ತು; ಖರೀದಿಸಿದ ಬಳಿಕ ಲಕ್ನೋ ಮಾಲೀಕ ಬೇಸರ

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್​ ಪಂತ್ ಶ್ರೀಮಂತ ಕ್ರಿಕೆಟ್ ಲೀಗ್ ಇತಿಹಾಸದಲ್ಲೇ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬರೋಬ್ಬರಿ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಪಾಲಾದರು. ಇದರೊಂದಿಗೆ ಪಂತ್ ಲಕ್ನೋ ಕ್ಯಾಪ್ಟನ್ ಆಗುವುದು ಖಚಿತ. ಆದರೆ ರಿಷಭ್ ಖರೀದಿಸಿದ ನಂತರ ಹರಾಜಿನ ವಿರಾಮದ ಅವಧಿಯಲ್ಲಿ ಪ್ರತಿಕ್ರಿಯಿಸಿದ ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ಪಂತ್ ಅವರನ್ನು ಖರೀದಿಸಲು ಸ್ವಲ್ಪ ಜಾಸ್ತಿ ಹಣ ಕೊಡುವಂತಾಯಿತು ಎಂದು ಬೇಸರ ಹೊರಹಾಕಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿ ಹಲವು ಫ್ರಾಂಚೈಸಿಗಳು ಎಡಗೈ ಆಟಗಾರನ ಖರೀದಿಗೆ ಜಿದ್ದಿಗೆ ಬಿದ್ದಂತೆ ಪೈಪೋಟಿ ನಡೆಸಿದವು. ಗೋಯೆಂಕಾ ಅವರು ಈ ಬಗ್ಗೆ ಮಾತನಾಡಿ, ಪಂತ್ ಖರೀದಿಗೆ 26 ಕೋಟಿ ಎತ್ತಿಟ್ಟಿದ್ದೆವು. ಆದರೆ ತಮ್ಮ ಬಜೆಟ್​ನಿಂದ ಒಂದು ಕೋಟಿ ರೂಪಾಯಿ ಹೆಚ್ಚುವರಿಯಾಗಿ ಕೊಡಬೇಕಾಯಿತು. ಹಾಗಾಗಿ ಖರೀದಿಯಲ್ಲಿ ಕೊಂಚ ಹೆಚ್ಚಾಯಿತು. ಆದರೆ ಇದು ಅಭಿಮಾನಿಗಳಿಗೆ ಖುಷಿ ನೀಡಲಿದೆ ಎಂದು ಹೇಳಿದ್ದಾರೆ. ಶ್ರೇಯಸ್ ಅಯ್ಯರ್ 26.5 ಕೋಟಿಗೆ ಪಂಜಾಬ್ ಪಾಲಾದರು. ಕೆಲವೇ ನಿಮಿಷಗಳಲ್ಲಿ ಪಂತ್ ಈ ದಾಖಲೆ ಬರೆದರು. ರಿಷಬ್ ಪಂತ್ ಸೇರ್ಪಡೆಯೊಂದಿಗೆ ಲಕ್ನೋ ತನ್ನ ಮಧ್ಯಮ ಕ್ರಮಾಂಕ ಬಲಪಡಿಸಿದೆ.

ಲಕ್ನೋ ಖರೀದಿಸಿದ ಆಟಗಾರರು

ರಿಷಭ್ ಪಂತ್ - ಮೂಲ ಬೆಲೆ 2 ಕೋಟಿ - ಪಡೆದ ಮೊತ್ತ 27 ಕೋಟಿ

ಅವೇಶ್ ಖಾನ್ - ಮೂಲ ಬೆಲೆ 2 ಕೋಟಿ - ಪಡೆದ ಮೊತ್ತ 9.75 ಕೋಟಿ

ಡೇವಿಡ್ ಮಿಲ್ಲರ್ - ಮೂಲ ಬೆಲೆ 1.50 ಕೋಟಿ - ಪಡೆದ ಮೊತ್ತ 7.50 ಕೋಟಿ

ಅಬ್ದುಲ್ ಸಮದ್ - ಮೂಲ ಬೆಲೆ 30 ಲಕ್ಷ - ಪಡೆದ ಮೊತ್ತ 4.20 ಕೋಟಿ

ಮಿಚೆಲ್ ಮಾರ್ಷ್ - ಮೂಲ ಬೆಲೆ 2 ಕೋಟಿ - ಪಡೆದ ಮೊತ್ತ 3.40 ಕೋಟಿ

ಐಡೆನ್ ಮಾರ್ಕ್ರಾಮ್ - ಮೂಲ ಬೆಲೆ 2 ಕೋಟಿ - ಪಡೆದ ಮೊತ್ತ 2 ಕೋಟಿ

ಆರ್ಯನ್ ಜುಯಲ್ - ಮೂಲ ಬೆಲೆ 30 ಲಕ್ಷ - ಪಡೆದ ಮೊತ್ತ 30 ಲಕ್ಷ

ಎಲ್​ಎಸ್​ಜಿ ಉಳಿಸಿಕೊಂಡಿದ್ದ ಆಟಗಾರರು

ನಿಕೋಲಸ್ ಪೂರನ್ - 21 ಕೋಟಿ

ರವಿ ಬಿಷ್ಣೋಯ್ - 11 ಕೋಟಿ

ಮಯಾಂಕ್ ಯಾದವ್ - 11 ಕೋಟಿ

ಮೊಹ್ಸಿನ್ ಖಾನ್ - 4 ಕೋಟಿ

ಆಯುಷ್ ಬದೋನಿ - 4 ಕೋಟಿ

Whats_app_banner