ಕನ್ನಡ ಸುದ್ದಿ  /  Cricket  /  Michael Clarke Michael Vaughan Nasser Hussain Slammed Bazballer Ben Duckett After His Comment On Yashasvi Jaiswal Prs

ಜೈಸ್ವಾಲ್ ಯಶಸ್ಸು ಬಜ್​ಬಾಲ್​ಗೆ ಸಲ್ಲಬೇಕು ಎಂದ ಡಕೆಟ್; ತಮ್ಮ ದೇಶದವರ ಜೊತೆ ಆಸೀಸ್ ಮಾಜಿಗಳಿಂದಲೂ ಆಕ್ರೋಶ

India vs England Test Series : ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾದ ನಾಸರ್ ಹುಸೇನ್, ಮೈಕಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್​ ಸೇರಿದಂತೆ ಪ್ರಮುಖರೇ ಬೆನ್ ಡಕೆಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಜೈಸ್ವಾಲ್ ಯಶಸ್ಸು ಬಜ್​ಬಾಲ್​ಗೆ ಸಲ್ಲಬೇಕು ಎಂದ ಡಕೆಟ್; ತಮ್ಮ ದೇಶದವರ ಜೊತೆ ಆಸೀಸ್ ಮಾಜಿಗಳಿಂದಲೂ ಆಕ್ರೋಶ
ಜೈಸ್ವಾಲ್ ಯಶಸ್ಸು ಬಜ್​ಬಾಲ್​ಗೆ ಸಲ್ಲಬೇಕು ಎಂದ ಡಕೆಟ್; ತಮ್ಮ ದೇಶದವರ ಜೊತೆ ಆಸೀಸ್ ಮಾಜಿಗಳಿಂದಲೂ ಆಕ್ರೋಶ

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಧಮಾಕ ಸೃಷ್ಟಿಸಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿರುವ ಜೈಸ್ವಾಲ್​ ಸತತ ದ್ವಿಶತಕ ಬಾರಿಸಿ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಆದರೆ ಆತನ ಸ್ಪೋಟಕ ಆಟ ಇಂಗ್ಲೆಂಡ್​ನ ಬಜ್​ಬಾಲ್​ ತಂತ್ರದಿಂದ ಪ್ರಭಾವಕ್ಕೊಳಗಾಗಿದೆ ಎಂದು ಇಂಗ್ಲೀಷ್ ಬ್ಯಾಟರ್​ ಬೆನ್​ ಡಕೆಟ್ ನೀಡಿದ್ದ ಹೇಳಿಕೆಗೆ ತಮ್ಮ ದೇಶದ ಮಾಜಿ ಆಟಗಾರರಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ.

ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾದ ನಾಸರ್ ಹುಸೇನ್, ಮೈಕಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್​ ಸೇರಿದಂತೆ ಪ್ರಮುಖರೇ ಬೆನ್ ಡಕೆಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ. 3ನೇ ಟೆಸ್ಟ್ ಪಂದ್ಯದಲ್ಲಿ ರಾಜ್​ಕೋಟ್​ ಟೆಸ್ಟ್​ನ ಮೂರನೇ ದಿನದಾಟದ ಅಂತ್ಯದ ನಂತರ ಮಾತನಾಡಿದ್ದ ಡಕೆಟ್, ಜೈಸ್ವಾಲ್ ಅವರನ್ನು ಗುಣಗಾನ ಮಾಡಿದ್ದರು. ಆತನ ಆಟಕ್ಕೆ ನಾವೂ ಕ್ರೆಡಿಟ್ ಪಡೆಯುತ್ತೇನೆ. ಬೇರೆಯವರಿಗಿಂತ ಅವರು ವಿಭಿನ್ನವಾಗಿ ಆಡುತ್ತಾರೆ ಎಂದಿದ್ದರು.

ನಾಸರ್ ಹುಸೇನ್ ಕಿಡಿ

ಇಂಗ್ಲೆಂಡ್ ಎಡಗೈ ಆಟಗಾರನ ಕಾಮೆಂಟ್​ ಇಷ್ಟಪಡದ ಹುಸೇನ್, ಕಠಿಣ ಪರಿಶ್ರಮ ಮತ್ತು ಐಪಿಎಲ್ ಜೈಸ್ವಾಲ್ ಅವರ ಯಶಸ್ಸಿಗೆ ಕಾರಣ ಎಂದು ಮಾಜಿ ನಾಯಕ ಹೇಳಿದ್ದಾರೆ. ಆತನೇನು ನಿಮ್ಮಿಂದ ಕಲಿತಿಲ್ಲ, ಅವನು ತನ್ನ ಸ್ವಂತ ಪಾಲನೆಯಿಂದ ಕಲಿತಿದ್ದಾನೆ. ಅವನು ಕಷ್ಟ ಪಟ್ಟು ಬೆಳೆದಿದ್ದಾನೆ. ಏನಾದರೂ ಇದ್ದರೆ, ನಾನು ಅವನನ್ನು ನೋಡಿ ಅವನಿಂದ ಕಲಿಯಬೇಕಿದೆ ಎಂದು ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೆಲ್ ಅಥರ್ಟನ್ ಜೊತೆಗಿನ ಚರ್ಚೆಯಲ್ಲಿ ಹುಸೇನ್ ಹೇಳಿದ್ದಾರೆ.

ಮೈಕಲ್ ವಾನ್ ಆಕ್ರೋಶ

ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ 600 ರನ್​ಗಳ ಗುರಿ ಕೊಟ್ಟರೂ ಚೇಸ್ ಮಾಡುತ್ತೇವೆ ಎಂದು ಜೇಮ್ಸ್ ಆ್ಯಂಡರ್ಸನ್ ಹೇಳಿದ್ದರು. ಮೂರನೇ ಪಂದ್ಯದಲ್ಲಿ ಇನ್ನಷ್ಟು ಗುರಿ ಕೊಟ್ಟರೂ ಒಳ್ಳೆಯದು ಎಂದು ಡಕೆಟ್ ಹೇಳಿದ್ದರು. ಆದರೆ 434 ರನ್​​ಗಳ ಅಂತರದಿಂದ ಸೋತರು. ಇದೀಗ ಜೈಸ್ವಾಲ್​ ಮಾಡಿದ ಬ್ಯಾಟಿಂಗ್ ಮಾಡಿದ್ದು ನೋಡಿ ಬಜ್​ಬಾಲ್​ಗೆ ಸಲ್ಲಬೇಕೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಆಕ್ರಮಣಕಾರಿಯಾಗಿ ಟೆಸ್ಟ್ ಕ್ರಿಕೆಟ್​ ಆಡಿಲ್ಲವೇ ಎಂದು ಮೈಕಲ್ ವಾನ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ICC Test Ranking: ಸತತ ದ್ವಿಶತಕ ಸಿಡಿಸಿ 14 ಸ್ಥಾನ ಮೇಲೇರಿದ ಯಶಸ್ವಿ ಜೈಸ್ವಾಲ್; ರೋಹಿತ್-ಜಡೇಜಾ ಶ್ರೇಯಾಂಕದಲ್ಲೂ ಏರಿಕೆ

ನಾವು ಡ್ರಾ ಸಾಧಿಸಲು ಆಡುವುದಿಲ್ಲ ಎಂದು ಇಂಗ್ಲೆಂಡ್ ಆಟಗಾರರು ಹೇಳುತ್ತಿದ್ದಾರೆ. ಆದರೆ ನೀವು ಟೆಸ್ಟ್‌ ಕ್ರಿಕೆಟ್‌ಗೆ ನೀವು ಗೌರವ ಕೊಡುತ್ತಿಲ್ಲ. ಅಗೌರವ ಕೊಡುತ್ತಿದ್ದೀರಿ. ಟೆಸ್ಟ್‌ ಕ್ರಿಕೆಟ್​​ನಲ್ಲಿ ಡ್ರಾ ಸಾಧಿಸುವುದು ಕೂಡ ಆಟದ ಒಂದು ಭಾಗವಾಗಿದೆ. ಗೆಲುವೊಂದೇ ಮಂತ್ರ ಪಠಿಸಿದರೆ, ಕಷ್ಟ ಆಗಲಿದೆ. ಹೀಗಾದರೆ, 5 ಪಂದ್ಯಗಳ ಟೆಸ್ಟ್‌ ಸಿರೀಸ್​ನಲ್ಲಿ ಕೆಲ ಅದ್ಭುತ ಗೆಲವಷ್ಟೇ ಪಡೆಯಬಹುದು ಎಂದು ಟೆಲಿಗ್ರಾಫ್‌ನಲ್ಲಿ ತಿಳಿಸಿದ್ದಾರೆ.

ಮೈಕಲ್ ಕ್ಲಾರ್ಕ್​ ಕೂಡ ಟೀಕೆ

ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಪ್ರತಿಕ್ರಿಯಿಸಿದ್ದಾರೆ. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ತಂಡಗಳಲ್ಲಿ ಇಂಗ್ಲೆಂಡ್​ಗೆ ಅಗ್ರಸ್ಥಾನ ನೀಡಲು ಸಾಧ್ಯವಿಲ್ಲ. ಆಧುನಿಕ ತಂಡಗಳು ನಿರ್ದಿಷ್ಟವಾಗಿ ಯಾವುದೇ ಹೆಚ್ಚುವರಿ ಆಕ್ರಮಣಶೀಲತೆ ತೋರಿಸುತ್ತಿಲ್ಲ. ನೀವು ರಿವರ್ಸ್ ಸ್ವೀಪ್ ಅಥವಾ ಸ್ವಿಚ್ ಹಿಟ್ ಅಥವಾ ರಾಂಪ್ ಶಾಟ್ ಅನ್ನು ಆಡುವ ಕಾರಣ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದೀರಿ ಎಂದರ್ಥವಲ್ಲ ಎಂದು​ ಡಕೆಟ್​ ವಿರುದ್ಧ ಕಿಡಿಕಾರಿದ್ದಾರೆ.

ಟಿ20 ಕ್ರಿಕೆಟ್‌ನಿಂದ ನಾವು ವಿಭಿನ್ನ ಹೊಡೆತಗಳನ್ನು ನೋಡುತ್ತಿದ್ದೇವೆ. ಈಗ ಎಲ್ಲಾ 3 ಸ್ವರೂಪಗಳಲ್ಲಿ ಆಟಗಾರರು 360 ಡಿಗ್ರಿ ಬ್ಯಾಟಿಂಗ್ ನಡೆಸುವುದನ್ನು ನೋಡುತ್ತಿದ್ದೇವೆ. ಆದರೆ ಮ್ಯಾಥ್ಯೂ ಹೇಡನ್, ಮೈಕೆಲ್ ಸ್ಲೇಟರ್, ರಿಕಿ ಪಾಂಟಿಂಗ್, ಮಾರ್ಟಿನ್, ಆಡಮ್ ಗಿಲ್​ಕ್ರಿಸ್ಟ್ ಹೇಗೆ ಆಡುತ್ತಿದ್ದಾರೆಯೇ ಎಂಬುದನ್ನು ಕೇಳಿದ್ದಾರೆ ತಾನೆ. ಇವರು ಇಂಗ್ಲೆಂಡ್ ಆಟಗಾರರಿಗಿಂತ ತುಂಬಾ ಆಕ್ರಮಣಕಾರಿಯಾಗಿ ಆಡುತ್ತಿದ್ದರು ಎಂದು ಕ್ಲಾರ್ಕ್, ಡಕೆಟ್‌ನನ್ನು ದೂಷಿಸಿದ್ದಾರೆ.

IPL_Entry_Point