ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಅನುಭವಿ ಸ್ಪಿನ್ನರ್​ಗೆ ಮಣೆ ಹಾಕಲು ಚಿಂತನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಅನುಭವಿ ಸ್ಪಿನ್ನರ್​ಗೆ ಮಣೆ ಹಾಕಲು ಚಿಂತನೆ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಅನುಭವಿ ಸ್ಪಿನ್ನರ್​ಗೆ ಮಣೆ ಹಾಕಲು ಚಿಂತನೆ

ಲೀಗ್​ನಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಮೊದಲ ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನೂ ಮಣಿಸಿ ಫೈನಲ್​​​ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. 2019ರ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್​​ ​ಪ್ಲಾನ್​ ರೂಪಿಸಿದೆ. ಅದಕ್ಕೆ ತಂಡದಲ್ಲಿ ಬದಲಾವಣೆ ಮೊರೆ ಹೋಗಿದೆ.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ. (PTI)

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ (ICC Cricket World Cup 2023) ಮಹತ್ವದ ಘಟ್ಟ ತಲುಪಿದೆ. ಲೀಗ್ ಹಂತ ಮುಕ್ತಾಯಗೊಂಡಿದೆ. ಈಗ ನಾಕೌಟ್​​ ಪಂದ್ಯಗಳು ನಡೆಯಲಿವೆ. ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ನಾಲ್ಕು ತಂಡಗಳು ಅಳಿವು-ಉಳಿವಿನ ಹೋರಾಟ ನಡೆಸಬೇಕಿದೆ. ಸೆಮಿಫೈನಲ್​ಗೆ ಅರ್ಹತೆ ಪಡೆದಿರುವ 4 ತಂಡಗಳೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿವೆ.

ಅದರಂತೆ ನವೆಂಬರ್​ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುವ ಮೊದಲ ಸೆಮಿಫೈನಲ್​​ನಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳ (India vs New Zealand) ನಡುವೆ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯ ನವೆಂಬರ್​ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳ ನಡುವೆ (Australia vs South Africa) ನಡೆಯಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೆ ಪ್ರವೇಶಿಸಲಿದೆ.

ತಂಡದಲ್ಲಿ ಮಹತ್ವದ ಬದಲಾವಣೆ

ಲೀಗ್​ನಲ್ಲಿ ಆಡಿದ ಎಲ್ಲಾ 9 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಮೊದಲ ಸೆಮಿಫೈನಲ್​​ನಲ್ಲಿ ನ್ಯೂಜಿಲೆಂಡ್ ತಂಡವನ್ನೂ ಮಣಿಸಿ ಫೈನಲ್​​​ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. 2019ರ ವಿಶ್ವಕಪ್​ ಸೆಮೀಸ್​ನಲ್ಲಿ ಉಭಯ ತಂಡಗಳು ಎದುರಾಗಿದ್ದವು. ಈಗ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್​​ ​ಪ್ಲಾನ್​ ರೂಪಿಸಿದೆ. ಅದಕ್ಕೆ ತಂಡದಲ್ಲಿ ಬದಲಾವಣೆ ಮೊರೆ ಹೋಗಿದೆ.

ಕಿವೀಸ್ ಎದುರಿನ ದೊಡ್ಡ ಪಂದ್ಯಕ್ಕಾಗಿ ಭಾರತ ತಂಡವು ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್​ ಡೆಪ್ತ್​ ಅನ್ನು ಮುಂದಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ. ಬ್ಲ್ಯಾಕ್​ ಕ್ಯಾಪ್ಸ್​ ತಂಡದಲ್ಲಿ ಎಡಗೈ ಬ್ಯಾಟರ್​ಗಳನ್ನೇ ಗಮನದಲ್ಲಿಟ್ಟುಕೊಂಡು ಹಿರಿಯ ಹಾಗೂ ಅನುಭವಿ ಆಟಗಾರನಿಗೆ ಮಣೆ ಹಾಕಲು ಟೀಮ್ ಮ್ಯಾನೇಜ್​ಮೆಂಟ್ ನಿರ್ಧರಿಸಿದೆ.

ಅಶ್ವಿನ್​ಗೆ ಮಣೆ ಹಾಕಲು ಚಿಂತನೆ

ಹೌದು, ಸೂರ್ಯಕುಮಾರ್ ಯಾದವ್​ (Suryakumar Yadav) ಬದಲಿಗೆ ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​​ಗೆ (Ravichandran Ashwin) ಮಣೆ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಸೂರ್ಯಕುಮಾರ್​ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ತಂಡದಲ್ಲಿ 6ನೇ ಬೌಲಿಂಗ್​ ಆಯ್ಕೆಯೊಂದಿಗೆ ಹೋಗಲು ನಿರ್ಧರಿಸುತ್ತಿದೆ. ಇದು ಸೆಮಿಫೈನಲ್​ನಂತಹ ದೊಡ್ಡ ಪಂದ್ಯದಲ್ಲಿ ಅಗತ್ಯ ಇದೆ ಎಂಬ ಚರ್ಚೆ ನಡೆದಿರುವ ಬಗ್ಗೆ ವರದಿಯಾಗಿದೆ.

ಹಾರ್ದಿಕ್ ಗಾಯಗೊಂಡಾಗಿನಿಂದ ಭಾರತ ತಂಡವು ಕೇವಲ 5 ಬೌಲರ್​​​ಗಳೊಂದಿಗೆ ಮಾತ್ರ ಆಡಿದೆ. ಈ ಯೋಜನೆ ವರ್ಕೌಟ್ ಕೂಡ ಆಗಿದೆ. ಆದರೆ ನಾಕೌಟ್​​​ ಪಂದ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಶ್ವಿನ್​ರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಆದರೆ ಈ ಒಂದು ಬದಲಾವಣೆ ಹೊರತುಪಡಿಸಿ ಉಳಿದ ಯಾವುದೇ ಬದಲಾವಣೆ ಕಾಣುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾ ವಿರುದ್ಧ ಮಾತ್ರ ಆಡಿದ್ದರು!

ಹಿರಿಯ ಸ್ಪಿನ್ನರ್ ಅಶ್ವಿನ್​ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಆ ಪಂದ್ಯದ ನಂತರ ಬೆಂಚ್ ಬಿಸಿ ಮಾಡುತ್ತಿದ್ದಾರೆ. ಬದಲಿಗೆ ವೇಗದ ಆಲ್​ರೌಂಡರ್​ ಶಾರ್ದೂಲ್​ ಠಾಕೂರ್​​ಗೆ ಆದ್ಯತೆ ನೀಡಲಾಗಿತ್ತು. ಆದರೆ ಹಾರ್ದಿಕ್ ಗಾಯಗೊಂಡಾಗ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಲಾಯಿತು. ಸೂರ್ಯಗೆ ಅವಕಾಶ ನೀಡಿ ಬ್ಯಾಟಿಂಗ್​ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿತು.

3ನೇ ವೇಗಿಯಾಗಿ ಕಾಣಿಸಿಕೊಂಡ ಶಮಿ ಕೇವಲ 5 ಪಂದ್ಯಗಳಲೇ 16 ವಿಕೆಟ್ ಪಡೆದು ಮಿಂಚಿದರು. ಮತ್ತೊಂದೆಡೆ ಸೂರ್ಯಗೆ ಬ್ಯಾಟಿಂಗ್​ ನಡೆಸಲು ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಏಕೆಂದರೆ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್​​​ಗಳೇ ಭರ್ಜರಿ ಫಾರ್ಮ್​​ನಲ್ಲಿ ರನ್​ ಬೇಟೆಯಾಡುತ್ತಿದ್ದಾರೆ. ಹಾಗಾಗಿ ಎದುರಾಳಿಯ ಎಡಗೈ ಬ್ಯಾಟರ್​​ಗಳಿಗೆ ಕಾಡುವ ಮತ್ತು ಬ್ಯಾಟಿಂಗ್​​ನಲ್ಲಿ ಕೊಡುಗೆ ನೀಡುವ ಅಶ್ವಿನ್​ರನ್ನು ಪರಿಗಣಿಸಲು ನಿರ್ಧರಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​​ಗೆ ಭಾರತದ ಸಂಭಾವ್ಯ ತಂಡ

ರೋಹಿತ್​ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಸೂರ್ಯಕುಮಾರ್​​ ಯಾದವ್/ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

Whats_app_banner