ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್​ಗೆ ತಿರುಗೇಟು ನೀಡಿದ ಶಾದಾಬ್ ಖಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್​ಗೆ ತಿರುಗೇಟು ನೀಡಿದ ಶಾದಾಬ್ ಖಾನ್

ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್​ಗೆ ತಿರುಗೇಟು ನೀಡಿದ ಶಾದಾಬ್ ಖಾನ್

Shadab Khan: ಪಾಕಿಸ್ತಾನದ ಬೌಲರ್​ಗಳಿಗೆ ಸಂಬಂಧಿಸಿ ಹೇಳಿಕೆ ನೀಡಿದ್ದ ಅಜಿತ್ ಅಗರ್ಕರ್​ ಅವರಿಗೆ ಆಲ್​ರೌಂಡರ್​ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ. ಹೇಳಿಕೆಯಿಂದ ಎಲ್ಲವೂ ಆಗದು ಎಂದು ಉತ್ತರ ನೀಡಿದ್ದಾರೆ.

ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್​ಗೆ  ಶಾದಾಬ್ ತಿರುಗೇಟು.
ಅವರನ್ನು ವಿರಾಟ್ ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದ ಅಗರ್ಕರ್​ಗೆ ಶಾದಾಬ್ ತಿರುಗೇಟು.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೆಸರನ್ನು ಉಲ್ಲೇಖಿಸಿ ನಗುತ್ತಾ ಉತ್ತರಿಸಿದ್ದ ಚೀಫ್​ ಸೆಲೆಕ್ಟರ್ ಅಜಿತ್​ ಅಗರ್ಕರ್​ ಹೇಳಿಕೆಗೆ ಇದೀಗ ಪಾಕಿಸ್ತಾನದ ಆಲ್​ರೌಂಡರ್​ ಶಾದಾಬ್ ಖಾನ್​ ತಿರುಗೇಟು ನೀಡಿದ್ದಾರೆ.

ಟೂರ್ನಿಗೆ ಪ್ರಕಟಿಸಿದ ನಂತರ ಪತ್ರಕರ್ತರೊಬ್ಬರು, ಪಾಕಿಸ್ತಾನದ ಶಾಹೀನ್​ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರಂತಹ ಬೌಲಿಂಗ್​​ ಎದುರಿಸಲು ಸಿದ್ಧತೆ ಹೇಗಿದೆ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಅಗರ್ಕರ್​, ಅವರೆಲ್ಲರನ್ನೂ ವಿರಾಟ್ ಕೊಹ್ಲಿ ನೋಡಿಕೊಳ್ಳುತ್ತಾರೆ ಎಂದು ನಗುತ್ತಾ ಹೇಳಿದ್ದರು.

ಅಫ್ಘಾನಿಸ್ತಾನದ ಎದುರಿನ 3ನೇ ಏಕದಿನ ಪಂದ್ಯದಲ್ಲಿ 59 ರನ್​​​ಗಳಿಂದ ಗೆದ್ದ ನಂತರ ಎದುರಾದ ಅರ್ಗಕರ್​​ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಆಲ್​ರೌಂಡರ್​ ಮತ್ತು ಉಪನಾಯಕ ಶಾದಾಬ್ ಖಾನ್ ಉತ್ತರಿಸಿದ್ದಾರೆ. ನಗುತ್ತಾ ಉತ್ತರ ಕೊಟ್ಟ ಶಾದಾಬ್, ಕೇವಲ ಮಾತುಗಳು ನಿಜ ಆಗಲಲ್ಲ. ಮುಂದಾಗುವ ಸತ್ಯವನ್ನೂ ಎಂದಿಗೂ ನೋಡಲಾಗದು ಎಂದಿದ್ದಾರೆ.

‘ಹೇಳಿಕೆಯಿಂದ ಎಲ್ಲವೂ ಆಗದು’

ಇದೊಂದು ನಿರ್ದಿಷ್ಟ ದಿನದ ಮೇಲೆ ಅವಲಂಬಿತವಾಗಿದೆ. ಭಾರತ ಅಥವಾ ನಮ್ಮಿಂದಲೇ ಏನು ಬೇಕಾದರೂ ಹೇಳಬಹುದು. ಯಾರಾದರೂ ಏನು ಬೇಕಾದರೂ ಮಾತನಾಡಬಹುದು. ಆದರೆ ಅವು ಕೇವಲ ಪದಗಳು ಎನ್ನುವುದಷ್ಟೇ ನಾವು ಭಾವಿಸುತ್ತೇವೆ. ಒಂದು ಹೇಳಿಕೆ ಏನನ್ನೂ ಬದಲಾಯಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಒಂದು ಹೇಳಿಕೆ ಪರಿಣಾಮ ಬೀರುವುದಿಲ್ಲ. ನಾವು ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡದೇ ಹೋದರೆ, ಅದರ ಪರಿಣಾಮವೇ ಬೇರೆ. ಆದರೆ ಆ ಹೇಳಿಕೆ ಫಲಿತಾಂಶಕ್ಕೆ ಅವಲಂಬಿತವಾಗಿಲ್ಲ ಎಂದಿದ್ದಾರೆ. ಪಂದ್ಯದಲ್ಲಿ ಹೇಗೆ ಪ್ರದರ್ಶನ ಮೂಡಿಸುತ್ತದೆ, ಏನಾಗುತ್ತದೆ ಎಂದು ನಾವು ಕೂಡ ಕಾದು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.

2022ರ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ಪಾಕ್ ಎದುರು ಸೋಲುವ ಪಂದ್ಯವನ್ನು ಗೆದ್ದುಕೊಟ್ಟಿದ್ದರು. ಅದರಲ್ಲೂ ಹ್ಯಾರಿಸ್ ರವೂಫ್​​ಗೆ ಕೊಹ್ಲಿ ಸಿಡಿಸಿದ್ದ ರೋಮಾಂಚನಕಾರಿ ಎರಡು ಸಿಕ್ಸರ್​​ಗಳು, ವಿಶ್ವ ಕ್ರಿಕೆಟ್​​​ನ ಮನ ಗೆದ್ದಿತ್ತು. ಹಾಗಾಗಿ ಅಂತಹ ಬೌಲರ್​​ಗಳನ್ನು ಎದುರಿಸಲು ಟೀಮ್ ಇಂಡಿಯಾ ಯಾವ ರೀತಿ ಸಿದ್ಧತೆ ನಡೆಸುತ್ತಿದೆ ಎಂಬ ಪ್ರಶ್ನೆಗೆ ಅಗರ್ಕರ್​​​, ಕೊಹ್ಲಿ ನೋಡಿಕೊಳ್ತಾರೆ ಎಂದಿದ್ದರು.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

Whats_app_banner