ಗೆದ್ದವರು-ಸೋತವರ ನಡುವೆ ಫೈನಲ್​ ಟಿಕೆಟ್​ಗೆ ಕಾಳಗ; ಪಿಚ್ ವರದಿ, ವೆದರ್ ರಿಪೋರ್ಟ್ ವಿವರ ಇಲ್ಲಿದೆ-sunrisers hyderabad vs rajasthan royals ipl 2024 qualifier 2 preview weather report picth report head to head record prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಗೆದ್ದವರು-ಸೋತವರ ನಡುವೆ ಫೈನಲ್​ ಟಿಕೆಟ್​ಗೆ ಕಾಳಗ; ಪಿಚ್ ವರದಿ, ವೆದರ್ ರಿಪೋರ್ಟ್ ವಿವರ ಇಲ್ಲಿದೆ

ಗೆದ್ದವರು-ಸೋತವರ ನಡುವೆ ಫೈನಲ್​ ಟಿಕೆಟ್​ಗೆ ಕಾಳಗ; ಪಿಚ್ ವರದಿ, ವೆದರ್ ರಿಪೋರ್ಟ್ ವಿವರ ಇಲ್ಲಿದೆ

SRH vs RR Qualifier 2: 17ನೇ ಆವೃತ್ತಿಯ ಐಪಿಎಲ್​ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್ ಪ್ರವೇಶಿಸಲಿದೆ. ಪಿಚ್ ರಿಪೋರ್ಟ್, ಹವಾಮಾನ ಮುನ್ಸೂಚನೆ, ಪ್ಲೇಯಿಂಗ್ XI ಇಲ್ಲಿದೆ ನೋಡಿ.

ಗೆದ್ದವರು-ಸೋತವರ ನಡುವೆ ಫೈನಲ್​ ಟಿಕೆಟ್​ಗೆ ಕಾಳಗ; ಪಿಚ್ ವರದಿ, ವೆದರ್ ರಿಪೋರ್ಟ್ ವಿವರ ಇಲ್ಲಿದೆ
ಗೆದ್ದವರು-ಸೋತವರ ನಡುವೆ ಫೈನಲ್​ ಟಿಕೆಟ್​ಗೆ ಕಾಳಗ; ಪಿಚ್ ವರದಿ, ವೆದರ್ ರಿಪೋರ್ಟ್ ವಿವರ ಇಲ್ಲಿದೆ

ತಲಾ ಒಂದೊಂದು ಬಾರಿ ಚಾಂಪಿಯನ್ ಮತ್ತು ರನ್ನರ್​​ಅಪ್ ಆಗಿರುವ ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 17ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸೆಣಸಾಟಕ್ಕೆ ಸಜ್ಜಾಗಿದ್ದು, ಉಭಯ ತಂಡಗಳು ತಮ್ಮ ಮೂರನೇ ಫೈನಲ್ ಪ್ರವೇಶಿಸಲು ಸನ್ನದ್ಧಗೊಂಡಿವೆ. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನವು ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಮೊದಲ ಕ್ವಾಲಿಫೈಯರ್​​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಕೋಲ್ಕತ್ತಾ ನೈಟ್​ ರೈಡರ್ಸ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದು, ಮತ್ತೊಂದು ತಂಡಕ್ಕಾಗಿ ಕಾಯುತ್ತಿದೆ.

ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್​-2ಕ್ಕೆ ಲಗ್ಗೆ ಹಾಕಿದರೆ, ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ರೈಸರ್ಸ್ ಮತ್ತೊಂದು ಅವಕಾಶ ಪಡೆದುಕೊಂಡಿದೆ. ಆರ್​ಆರ್​ 2008ರಲ್ಲಿ ಚಾಂಪಿಯನ್ ಆಗಿತ್ತು. 2022ರಲ್ಲಿ ರನ್ನರ್​ಅಪ್ ಆಗಿತ್ತು. ಅತ್ತ 2016ರಲ್ಲಿ ಟ್ರೋಫಿ ಗೆದ್ದಿದ್ದ ಎಸ್​ಆರ್​ಹೆಚ್, 2018ರಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು. ಹಾಗಾಗಿ ಈ ಎರಡರಲ್ಲಿ ಗೆದ್ದ ತಂಡವು ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದಂತಾಗುತ್ತದೆ. ಜಯಿಸಿದ ತಂಡವು ಮೇ 26ರಂದು ಕೆಕೆಆರ್ ವಿರುದ್ಧ ಫೈನಲ್ ಆಡಲಿದೆ.

ಚಿದಂಬರಂ ಮೈದಾನದ ಪಿಚ್ ರಿಪೋರ್ಟ್

ಪ್ರಸಕ್ತ ಐಪಿಎಲ್​ನಲ್ಲಿ ಎಂಎ ಚಿದಂಬರಂ ಪಿಚ್​​ನಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 164 ಆಗಿದ್ದರೆ, ಎರಡನೇ ಇನ್ನಿಂಗ್ಸ್ ಸರಾಸರಿ ಸ್ಕೋರ್ 151 ಆಗಿದೆ. ಆಟವು ಮುಂದುವರೆದಂತೆ ಪಿಚ್​​ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಇದು ಹಿಟ್ಟರ್​​ಗಳಿಗೆ ಕಷ್ಟವಾಗಬಹುದು. ಸ್ಪಿನ್​​ ಪಿಚ್​ ಆಗಿರುವ ಚೆಪಾಕ್​ ಈ ಬಾರಿ ಬ್ಯಾಟಿಂಗ್​-ಬೌಲಿಂಗ್​ ಎರಡಕ್ಕೂ ಸಹಕಾರಿಯಾಗಿದೆ. ಹಲವು ಬಾರಿ 200 ಪ್ಲಸ್​ ಸ್ಕೋರ್​ ಕೂಡ ದಾಟಿದೆ. ಒಂದೆರಡು ಬಾರಿ ಮಾತ್ರ ಕಡಿಮೆ ಸ್ಕೋರ್ ಮಾಡಲಾಗಿದೆ. ಇನ್ನು ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿದ್ದರೆ, ರಾಜಸ್ಥಾನ್ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದೆ. ಹೀಗಾಗಿ ಮಹತ್ವದ ಪಂದ್ಯದಲ್ಲಿ ಉತ್ತಮ ಪೈಪೋಟಿ ನಿರೀಕ್ಷಿಸಲಾಗಿದೆ.

ಚೆನ್ನೈನ ಹವಾಮಾನ ವರದಿ

ಹೈದರಾಬಾದ್ ಮತ್ತು ರಾಜಸ್ಥಾನ ನಡುವಿನ ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಮೇ24 ಶುಕ್ರವಾರ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಚೆನ್ನೈನಲ್ಲಿ ನಡೆಯುವ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ. ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಮೂರು ಪಂದ್ಯಗಳು ಮಳೆಯಿಂದಾಗಿ ಸಂಪೂರ್ಣ ರದ್ದಾಗಿದ್ದು, ಈ ಮಹತ್ವದ ಪಂದ್ಯಕ್ಕೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಅಭಿಮಾನಿಗಳಿಗೆ ಸಮಾಧಾನದ ಸುದ್ದಿಯಾಗಿದೆ.

ಮುಖಾಮುಖಿ ದಾಖಲೆ

ಒಟ್ಟ ಪಂದ್ಯ - 19

ಎಸ್​ಆರ್​ಹೆಚ್ ಗೆಲುವು - 10

ಆರ್​ಆರ್ ಗೆಲುವು - 09

ಆರ್​ಆರ್ ಸಂಭಾವ್ಯ​​ ಪ್ಲೇಯಿಂಗ್ XI

ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ಕ್ಯಾಪ್ಟನ್ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ. (ಇಂಪ್ಯಾಕ್ಟ್ ಪ್ಲೇಯರ್- ಯುಜ್ವೇಂದ್ರ ಚಹಲ್)

ಎಸ್​ಆರ್​ಹೆಚ್ ಸಂಭಾವ್ಯ​ ಪ್ಲೇಯಿಂಗ್​ XI

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ , ಏಡೆನ್ ಮಾರ್ಕ್ರಮ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ಕ್ಯಾಪ್ಟನ್ 9 ), ಭುವನೇಶ್ವರ್ ಕುಮಾರ್, ಟಿ ನಟರಾಜನ್ (ಇಂಪ್ಯಾಕ್ಟ್ ಪ್ಲೇಯರ್- ಮಯಾಂಕ್ ಮಾರ್ಕಾಂಡೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point