ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಡರ್​-19 ಏಷ್ಯಾಕಪ್ ಫೈನಲ್; ಯುಎಇ ವಿರುದ್ಧ ಗೆದ್ದು ಚರಿತ್ರೆ ಸೃಷ್ಟಿಸಿದ ಬಾಂಗ್ಲಾದೇಶ

ಅಂಡರ್​-19 ಏಷ್ಯಾಕಪ್ ಫೈನಲ್; ಯುಎಇ ವಿರುದ್ಧ ಗೆದ್ದು ಚರಿತ್ರೆ ಸೃಷ್ಟಿಸಿದ ಬಾಂಗ್ಲಾದೇಶ

  • U-19 Asia Cup Final 2023: ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ. ಮೊದಲ ಬಾರಿಗೆ ಅಂಡರ್​-19 ಏಷ್ಯಾ ಕಪ್ ಗೆದ್ದಿದೆ. ಬಾಂಗ್ಲಾದ ಹಿರಿಯರ ತಂಡ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿ ಸೋತರೆ, ಕಿರಿಯರ ತಂಡ ಅದ್ಭುತ ಪ್ರದರ್ಶನ ನೀಡಿ ಏಷ್ಯಾಕಪ್​ ಗೆದ್ದಿದೆ.

ಡಿಸೆಂಬರ್​ 17ರಂದು ದುಬೈನಲ್ಲಿ ಜರುಗಿದ ಅಂಡರ್​​-19 ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಯುಎಇ ತಂಡವನ್ನು ಮಣಿಸಿ ಬಾಂಗ್ಲಾದೇಶ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. 195 ರನ್​ಗಳ ಗೆಲುವು ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
icon

(1 / 6)

ಫೈನಲ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 282 ರನ್​ಗಳ ಗುರಿ ನೀಡಿತು. ಈ ಗುರಿ ಹಿಂಬಾಲಿಸಿದ ಯುಎಇ ತಂಡ, ಬಾಂಗ್ಲಾದೇಶ ಬೌಲರ್​​ಗಳ ದಾಳಿಗೆ ನಡುಗಿತು. ಪರಿಣಾಮ 24.5 ಓವರ್​​ಗಳಲ್ಲಿ ಕೇವಲ 87 ರನ್​​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಚೊಚ್ಚಲ ಏಷ್ಯಾಕಪ್ ಟ್ರೋಫಿ ಕನಸು ಭಗ್ನಗೊಂಡಿತು.
icon

(2 / 6)

ಬಾಂಗ್ಲಾದೇಶದ ಪರ ಶತಕ ಸಿಡಿಸಿದ ಆರಂಭಿಕ ಆಶಿಕುರ್‌ ರೆಹಮಾನ್‌ ಶಿಬ್ಲಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದುಕೊಂಡರು. ಫೈನಲ್​ನಲ್ಲಿ ರೆಹಮಾನ್​, 149 ಎಸೆತಗಳಲ್ಲಿ 12 ಫೋರ್, 1 ಸಿಕ್ಸರ್​ ಸಹಿತ ಭರ್ಜರಿ 129 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
icon

(3 / 6)

ಬಾಂಗ್ಲಾದೇಶ ಪರ ಮಾರುಫ್ ಮೃಧಾ (7 ಓವರ್‌ಗಳಲ್ಲಿ 29 ರನ್) ಮತ್ತು ರಹ್ನತ್ ದೌಲ್ಲಾ ಬೋರ್ಸನ್ (6 ಓವರ್‌ಗಳಲ್ಲಿ 26 ರನ್) ತಲಾ ಮೂರು ವಿಕೆಟ್ ಪಡೆದರು. ಶೇಖ್ ಪರ್ವೇಜ್ ಜಿಬಾನ್ (4.5 ಓವರ್‌ಗಳಲ್ಲಿ 7 ರನ್) ಮತ್ತು ಇಕ್ಬಾಲ್ ಹುಸೇನ್ ಇಮಾನ್ (6 ಓವರ್‌ಗಳಲ್ಲಿ 15 ರನ್) 2 ವಿಕೆಟ್ ಪಡೆದರು.
icon

(4 / 6)

ಬಾಂಗ್ಲಾದೇಶ ಯುವ ಆಟಗಾರರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಭಾರತದ ಮಾಜಿ ಆಟಗಾರ ವಾಸೀಂ ಜಾಫರ್ ಎಂಬುದು ವಿಶೇಷ. ಅವರು ಬ್ಯಾಟಿಂಗ್​ ಸಲಹೆಗಾರರಾಗಿ ಬಾಂಗ್ಲಾ ಅಂಡರ್​-19 ತಂಡಕ್ಕೆ ನೇಮಕಗೊಂಡಿದ್ದರು.
icon

(5 / 6)

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗೆಲುವಿನ ನಂತರ ಬಾಂಗ್ಲಾದೇಶ ತಂಡವನ್ನು ಅಭಿನಂದಿಸಿದರು.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು