RAGHU | ವಿಜಯ್‌ ರಾಘವೇಂದ್ರ ಈಗ ರಾಘು; ಅಣ್ಣನ ಸಿನಿಮಾಕ್ಕೆ ಮದಗಜನ ಹಾರೈಕೆ
ಕನ್ನಡ ಸುದ್ದಿ  /  ಮನರಂಜನೆ  /  Raghu | ವಿಜಯ್‌ ರಾಘವೇಂದ್ರ ಈಗ ರಾಘು; ಅಣ್ಣನ ಸಿನಿಮಾಕ್ಕೆ ಮದಗಜನ ಹಾರೈಕೆ

RAGHU | ವಿಜಯ್‌ ರಾಘವೇಂದ್ರ ಈಗ ರಾಘು; ಅಣ್ಣನ ಸಿನಿಮಾಕ್ಕೆ ಮದಗಜನ ಹಾರೈಕೆ

ನಟನೆಯಿಂದ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಇದೀಗ ರಾಘು ಆಗಿದ್ದಾರೆ. ಅಂದರೆ, ರಾಘು ಶೀರ್ಷಿಕೆಯ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು

<p>ರಾಘು ಶೀರ್ಷಿಕೆಯ ಸಿನಿಮಾಕ್ಕೆ ಮುಹೂರ್ತ</p>
ರಾಘು ಶೀರ್ಷಿಕೆಯ ಸಿನಿಮಾಕ್ಕೆ ಮುಹೂರ್ತ

ಬೆಂಗಳೂರು: ವಿಭಿನ್ನ ಬಗೆಯ ಪಾತ್ರಗಳ ಮೂಲಕ, ತಮ್ಮ ಅಮೋಘ ನಟನೆಯಿಂದ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಇದೀಗ ರಾಘು ಆಗಿದ್ದಾರೆ. ಅಂದರೆ, ರಾಘು ಶೀರ್ಷಿಕೆಯ ಸಿನಿಮಾದ ಮುಹೂರ್ತ ಗುರುವಾರ ಬೆಂಗಳೂರಿನ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ರಾಘು ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರುಳಿ ಸಾಥ್ ನೀಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ಎಲ್ಲರೂ ಪ್ರೀತಿಯಿಂದ ಬಂದಿದ್ದೀರಾ. ಖುಷಿಯಾಗ್ತಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಶುಭ ಹಾರೈಸೋದಿಕ್ಕೆ ಶ್ರೀಮುರಳಿ ಬಂದಿದ್ದಾರೆ. ಇಡೀ ತಂಡದ ಮೇಲೆ ನಿಮ್ಮ ಸಹಕಾರ ಇರಲಿ ಎಂದರು. ಅಣ್ಣನ ಸಿನಿಮಾದ ಬಗ್ಗೆ ಶ್ರೀಮುರಳಿ ಸಹ ಮಾತನಾಡಿದರು. ಟೈಟಲ್ ತುಂಬಾ ಚೆನ್ನಾಗಿದೆ. ಇಡೀ ತಂಡ ಎನರ್ಜಿಟಿಕ್ ಟೀಂ. ನಮ್ಮಣ್ಣನಿಗೆ ಒಳ್ಳೆದಾಗಲಿ. ಒಳ್ಳೆ ಸಿನಿಮಾ ಮಾಡಿದಾಗ ಅಭಿಮಾನಿ ದೇವರುಗಳು ಇಷ್ಟಪಡುತ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ಈ ಹಿಂದೆ ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಆನಂದ್ ರಾಜ್, ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಅಂದಹಾಗೆ ರಾಘು ಹೆಸರಿನ ಸಿನಿಮಾ ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಶೈಲಿಯದ್ದು. ಕನ್ನಡದಲ್ಲಿ ಇದೊಂದು ಹೊಸಬಗೆಯ ಪ್ರಯತ್ನ, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ ಎಂದರು ನಿರ್ದೇಶಕರು.

ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ, ಬ್ಯಾಂಗ್', 'ಫ್ಯಾಮಿಲಿ ಪ್ಯಾಕ್' ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್, ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ರಾಘು‌ ಬಳಗ ಶುಭ ಶುಕ್ರವಾರದಿಂದ ಶೂಟಿಂಗ್ ಅಖಾಡಕ್ಕೆ ಧುಮುಕಿದೆ.

ಬ್ಯಾಕ್‌ ಟು ಬ್ಯಾಕ್‌ ಚಿನ್ನಾರಿ ಮುತ್ತನ ಸಿನಿಮಾ

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟ ವಿಜಯ್‌ ರಾಘವೇಂದ್ರ ಕಳೆ ವಾರವಷ್ಟೇ FIR 6 to 6 ಹೆಸರಿನ ಸಿನಿಮಾಕ್ಕೂ ಮುಹೂರ್ತ ನೆರವೇರಿದೆ. ಈಗಾಗಲೇ ಕನ್ನಡ ಮತ್ತು ತೆಲುಗಿನಲ್ಲಿ ವಿರಾಮ ಮತ್ತು 24/7 ಸಿನಿಮಾ ಮಾಡಿದ್ದ ರಮಣ್‌ ರಾಜ್‌ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ. ಈ ಸಿನಿಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ಅಕ್ಷಿತಾ ಬೋಪಯ್ಯ ನಟಿಸುತ್ತಿದ್ದು, ಯಶ್‌ ಶೆಟ್ಟಿ, ಬಲರಾಜವಾಡಿ, ನಾಗೇಂದ್ರ ಅರಸ, ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ಯಶ್ ಫಿಲ್ಮಂ ಬ್ಯಾನರ್ ಅಡಿಯಲ್ಲಿ ಭಾಗ್ಯ ಆರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸತೀಶ್ ಬಾಬು ಸಂಗೀತ, ಓಂ.ಜಿ ಛಾಯಾಗ್ರಹಣ ಸಿನಿಮಾಕ್ಕಿದೆ. ಇದರ ಜತೆಗೆ ಹಕೂನ ಮಟಾಟ ವೆಬ್‌ಸಿರೀಸ್‌, ಜೋಗ 101 ಸೇರಿ ಹಲವು ಸಿನಿಮಾಗಳಲ್ಲಿ ವಿಜಯ್‌ ನಟಿಸುತ್ತಿದ್ದಾರೆ.

Whats_app_banner