Rajinikanth birthday: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ; 2.0ನಿಂದ ಕಬಾಲಿ ತನಕ
ಕನ್ನಡ ಸುದ್ದಿ  /  ಮನರಂಜನೆ  /  Rajinikanth Birthday: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ; 2.0ನಿಂದ ಕಬಾಲಿ ತನಕ

Rajinikanth birthday: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ; 2.0ನಿಂದ ಕಬಾಲಿ ತನಕ

Rajinikanth 74th birthday: ಇಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಹುಟ್ಟುಹಬ್ಬ. ರಜನಿಕಾಂತ್‌ ನಟನೆಯ ಬಹುತೇಕ ಸಿನಿಮಾಗಳು ಸೂಪರ್‌ಹಿಟ್‌ ಆಗಿವೆ. ಅವುಗಳಲ್ಲಿ ಕೆಲವು ಸಿನಿಮಾಗಳಂತೂ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ದಾಖಲೆ ಬರೆದಿವೆ. ಭಾರತ ಮಾತ್ರವಲ್ಲದೆ ಜಾಗತಿಕ ಬಾಕ್ಸ್‌ಆಫೀಸ್‌ನಲ್ಲೂ ರಜನಿಕಾಂತ್‌ ಸಿನಿಮಾಗಳು ಧೂಳೆಬ್ಬಿಸಿವೆ.

Rajinikanth birthday: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಲಿಸ್ಟ್‌
Rajinikanth birthday: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಲಿಸ್ಟ್‌ (PTI)

Rajinikanth 74th birthday: ಇಂದು ಅಂದರೆ ಡಿಸೆಂಬರ್ 12, ಗುರುವಾರದಂದು ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್‌ಗೆ 74ನೇ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ರಜನಿಕಾಂತ್‌ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ. ತಲೈವಾನ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಒಟಿಟಿಯಲ್ಲಿ ಮತ್ತೆ ನೋಡುತ್ತ ಅಭಿಮಾನ ತೋರಿಸುವವರು ಸಾಕಷ್ಟು ಜನರು ಇದ್ದಾರೆ. ರಜನಿಕಾಂತ್‌ ನಟಿಸಿದ ಸಿನಿಮಾಗಳಲ್ಲಿ ಕೆಲವು ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿವೆ. ಅತಿ ಹೆಚ್ಚು ಗಳಿಕೆ ಮಾಡಿದ ಕೆಲವು ಚಲನಚಿತ್ರಗಳ ವಿವರ ಇಲ್ಲಿದೆ.

1. 2.0 (2018)

'ಎಂಥಿರನ್ (ರೋಬೋಟ್)'ನ ಮುಂದುವರೆದ ಭಾಗ ಇದಾಗಿದೆ.ಇದು ಆ ಸಮಯದಲ್ಲಿ ಭಾರತದ ದುಬಾರಿ ಸಿನಿಮಾಗಳಲ್ಲಿ ಒಂದಾಗಿತ್ತು. ರಜನಿಕಾಂತ್ ಈ ಸಿನಿಮಾದಲ್ಲಿ ಚಿಟ್ಟಿ ರೋಬೋಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2.0 ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿತ್ತು. ವಿಶೇಷವಾಗಿ ಹಿಂದಿ ಮತ್ತು ಚೈನೀಸ್ ಮಾರುಕಟ್ಟೆಗಳಲ್ಲಿ ಈ ಸಿನಿಮಾ ಸಖತ್‌ ಹಿಟ್‌ ಆಯಿತು.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 723.30 ಕೋಟಿ ರೂ

2. ಕಬಾಲಿ (2016)

ಇದು ಕೂಡ ಆ ಸಮಯದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ ಚಿತ್ರವಾಗಿತ್ತು. ರಜನಿಕಾಂತ್ ಅವರ "ಡಾನ್" ನೋಟ ಮತ್ತು ಚಲನಚಿತ್ರದ ಸೊಗಸಾದ ನಿರೂಪಣೆಯು ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ಜಾಗತಿಕವಾಗಿ ಯಶಸ್ವಿಯಾಯಿತು. ಭಾರತದಲ್ಲಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸು ಪಡೆಯಿತು.

ಬಾಕ್ಸ್ ಆಫೀಸ್ ಕಲೆಕ್ಷನ್ (ಜಾಗತಿಕ): 650 ಕೋಟಿ ರೂ

3. ಜೈಲರ್ (2023)

ಸಾರ್ವಕಾಲಿಕ ತಮಿಳು ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ಜೈಲರ್ ಒಂದಾಗಿದೆ. ಚಿತ್ರದ ಆಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್‌ಗಳು, ಅನಿರುದ್ಧ್ ಅವರ ಸಂಗೀತ ಮತ್ತು ರಜನಿಕಾಂತ್ ಅವರ ಸೂಪರ್‌ ನಟನೆ ಜಗತ್ತಿನ ಪ್ರೇಕ್ಷಕರ ಗಮನ ಸೆಳೆಯಿತು.

ಬಾಕ್ಸ್ ಆಫೀಸ್ ಕಲೆಕ್ಷನ್ (ಜಾಗತಿಕ): 604.5 ಕೋಟಿ ರೂ

4. ಎಂಥಿರನ್ (ರೋಬೋಟ್) (2010)

ಎಂಥಿರಾನ್ ಭಾರತೀಯ ಚಿತ್ರರಂಗದಲ್ಲಿ ಮೊದಲ ದೊಡ್ಡ-ಬಜೆನ್‌ನ ಸೈನ್ಸ್‌ ಫಿಕ್ಷನ್‌ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರಜನಿಕಾಂತ್‌ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವಿಜ್ಞಾನಿ ಮತ್ತು ರೋಬೊ ಪಾತ್ರದಲ್ಲಿ ಕಾಣಿಸಿದ್ದಾರೆ.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 291 ಕೋಟಿ ರೂ

5. ವೆಟ್ಟೈಯನ್ (2024)

ರಜನೀಕಾಂತ್, ಸೂಪರಿಂಟೆಂಡೆಂಟ್ ಅಥಿಯಾನ್ ಪಾತ್ರದಲ್ಲಿ ನಟಿಸಿದ್ದಾರೆ. ಕೊಲೆ ತನಿಖೆಯ ಸಮಯದಲ್ಲಿ ಅಮಾಯಕ ಯುವತಿಯ ಸಾವು ಸಂಭವಿಸಿದ ನಂತರ ವೆಟ್ಟೈಯನ್‌ ಸತ್ಯಾಕ್ಕಾಗಿ ಹೋರಾಟ ನಡೆಸುತ್ತಾನೆ. ಈ ವರ್ಷ ಬಿಡುಗಡೆಯಾದ ಈ ಸಿನಿಮಾ ಇದೀಗ ಒಟಿಟಿಯಲ್ಲಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 253.6 ಕೋಟಿ ರೂ

6. ಪೆಟ್ಟಾ (2019)

ತನ್ನ ಎಂದಿನ ಮಾಸ್‌ ಇಮೇಜ್‌ ಲುಕ್‌ನಲ್ಲಿ ರಜನಿಕಾಂತ್‌ ಅಭಿಮಾನಿಗಳನ್ನು ರಂಜಿಸಿದ್ದರು. ನಾಸ್ಟಾಲ್ಜಿಕ್ ಕ್ಷಣಗಳು, ಪಂಚ್ ಡೈಲಾಗ್‌ಗಳು ಮತ್ತು ಎಲೆಕ್ಟ್ರಿಫೈಯಿಂಗ್ ಆಕ್ಷನ್ ಸೀಕ್ವೆನ್ಸ್‌ಗಳ ಚಿತ್ರವಾಗಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 232.92 ಕೋಟಿ ರೂ

7. ದರ್ಬಾರ್ (2020)

ಮುಂಬೈ ಪೊಲೀಸ್ ಕಮಿಷನರ್ ಆದಿತ್ಯ ಅರುಣಾಸಲಂ (ರಜನಿಕಾಂತ್) ಹರಿ ಚೋಪ್ರಾ (ಸುನೀಲ್ ಶೆಟ್ಟಿ) ನೇತೃತ್ವದ ತಂಡವು ಡ್ರಗ್ ಮಾಫಿಯಾ ವಿರುದ್ಧ ನಡೆಸುವ ಯುದ್ಧದ ಕಥೆ ಇದಾಗಿದೆ. ಸಾಹಸದ ಜತೆ ಭಾವನಾತ್ಮಕ ಅಂಶಗಳೂ ಚಿತ್ರದಲ್ಲಿವೆ.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 247.80 ಕೋಟಿ ರೂ

8. ಅನ್ನತ್ತೆ (2021)

ಈ ಚಿತ್ರದ ಕುರಿತು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ವಾಣಿಜಿಕ್ಯವಾಗಿ ದೊಡ್ಡಮಟ್ಟದ ಯಶಸ್ಸು ಪಡೆಯಿತು. ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ಹೊರಹೊಮ್ಮಿತ್ತು.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 172 ಕೋಟಿ ರೂ

9. ಶಿವಾಜಿ: ದಿ ಬಾಸ್ (2007)

ಶಿವಾಜಿ 100 ಕೋಟಿ ರೂಪಾಯಿಗಳ ಗಡಿ ದಾಟಿದ ಮೊದಲ ತಮಿಳು ಚಲನಚಿತ್ರವಾಗಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 150 ಕೋಟಿ ರೂ

10. ಲಿಂಗಾ (2014)

2014ರಲ್ಲಿ ಬಿಡುಗಡೆಯಾದ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಖ್ಯಾತಿಗೆ ಪಾತ್ರವಾಯಿತು.

ಬಾಕ್ಸ್ ಆಫೀಸ್ ಕಲೆಕ್ಷನ್ (ವಿಶ್ವಾದ್ಯಂತ): 150-160 ಕೋಟಿ ರೂ

Whats_app_banner