Annayya Serial: ದೀಪೋತ್ಸವದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಪಾರು; ರಕ್ಷಣೆಗಾಗಿ ಈಗ ಶಿವಣ್ಣನೇ ಬೇಕು
Zee Kannada Serial: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳಿಗೆ ಸಹಾಯ ಮಾಡಲು ಯಾರೂ ಬರದ ಸಂದರ್ಭದಲ್ಲಿ ಇದೀಗ ಶಿವು ಅವಳನ್ನು ಕಾಪಾಡಲು ತನ್ನ ಪ್ರಾಣವನ್ನೇ ಒತ್ತೆ ಇಡಲು ರೆಡಿಯಾಗಿದ್ದಾನೆ. ಮುಂದೇನಾಗುತ್ತದೆ ನೋಡಿ.
ದೀಪೊತ್ಸವ ಮಾಡಲು ಎಲ್ಲರೂ ರೆಡಿಯಾಗಿ ಬಂದು ಕಾಯುತ್ತಾ ಇದ್ದರೂ ಗಂಡಿನ ಮನೆಯವರು ಬಂದಿರುವುದಿಲ್ಲ. ಗಂಡಿನ ಮನೆಯವರು ಬಂದಿಲ್ಲ ಎಂದು ಹೇಳಿಕೊಳ್ಳುತ್ತಿರುವಾಗಲೇ ಅವರು ಬಂದು ಬಿಡುತ್ತಾರೆ. ಅವರು ಬಂದ ತಕ್ಷಣ ಎಲ್ಲರಿಗೂ ಒಂದು ತರದ ಗಾಬರಿ. ಯಾಕೆಂದರೆ ಅವರು ಆಡುವ ಮಾತುಗಳೇ ಆ ರೀತಿ ಇರುತ್ತವೆ. ಒಂದು ರೀತಿ ದಬ್ಬಾಳಿಕೆ ಮಾಡಿದ ಹಾಗೆ ಮಾತಾಡುತ್ತಾರೆ. ಆದ್ದರಿಂದ ಪಾರು ಸುಮ್ಮನೆ ಒಂದು ಮೂಲೆಯಲ್ಲಿ ನಿಂತುಕೊಳ್ಳುತ್ತಾಳೆ. ಇನ್ನು ಮಾವಯ್ಯ ಎಲ್ಲರನ್ನೂ ಮಾತನಾಡಿಸಿ, “ಅವರು ಬಂದಿರುವುದು ಒಳ್ಳೆದಾಯ್ತು. ಇನ್ನು ದೀಪೊತ್ಸವ ಆರಂಭ ಮಾಡೋಣ” ಎಂದು ಹೇಳುತ್ತಾ ಎಲ್ಲರನ್ನೂ ಒಳಗಡೆ ಕರೆದುಕೊಂಡು ಹೋಗುತ್ತಾರೆ.
ಒಲ್ಲದ ಮನಸ್ಸಿನ ಪಾರ್ವತಿ
ಆದರೆ ಪಾರುಗೆ ತಾನು ಇದೆಲ್ಲ ಸೋಮೆಗೌಡನಿಗಾಗಿ ಮಾಡುತ್ತಿದ್ದೇನೆ ಎಂಬುದು ಬೇಸರ ಇರುತ್ತದೆ. ಆದರೆ ಅವಳು “ನಾನು ಮದುವೆ ಆಗ್ತೀನಿ ಸೋಮೆಗೌಡನನ್ನಲ್ಲ” ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾಳೆ. ಏನೇ ಮಾಡುವುದಿದ್ದರೂ ಅವಳು ಸಿದ್ಧಾರ್ಥ್‌ನನ್ನು ನೆನೆಸಿಕೊಂಡು ಮಾಡುತ್ತಾ ಇರುತ್ತಾಳೆ. ಇದರಿಂದ ಅವಳಿಗೆ ಖುಷಿ ಸಿಗುತ್ತಾ ಇರುತ್ತದೆ. ಇಂದು ಅಲ್ಲಿಗೆ ಸಿದ್ಧಾರ್ಥ್ ಕೂಡ ಬರುವವನಿರುತ್ತಾನೆ. ಅವನಿಗಾಗಿ ಇವಳು ಕಾಯುತ್ತಾ ಇರುತ್ತಾಳೆ.
ಪಾರುಗೆ ಖುಷಿ
ಆನಂತರದಲ್ಲಿ ಅವಳು ಮಾವನನ್ನು ಮಾತಾಡಿಸುತ್ತಾಳೆ. ಅವಳಿಗೆ ಸಿರ್ಧಾರ್ಥ್ ಬಗ್ಗೆ ತಿಳಿದುಕೊಳ್ಳುವ ಕೂತೂಹಲ ಅಷ್ಟೇ ಆಗಿರುತ್ತದೆ. ಆದರೆ ಗಂಡಿನ ಕಡೆಯವರು ಅವಳನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ. ಶಿವು ಹಾಗೂ ಪಾರುಗೆ ಸಂಬಂಧ ಇದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಸತ್ಯಾಂಶ ಅದಾಗಿರುವುದಿಲ್ಲ. ನಂತರ ಪಾರು ಹತ್ತಿರ “ಸಿದ್ದಾರ್ಥ್ ಇನ್ನೇನು ಬರ್ತಾನೆ. ನೀನೂ ಏನೂ ಆಲೋಚನೆ ಮಾಡ್ಬೇಡ” ಎಂದು ಹೇಳುತ್ತಾನೆ. ಅವಳಿಗೆ ಸಂತೋಷ ಆಗುತ್ತದೆ.
ಕೊಲ್ಲುವ ಪ್ಲ್ಯಾನ್ ಮಾಡಿಕೊಂಡೆ ಬಂದ್ರು
ಗಂಡಿನ ಮನೆಯವರು ಶಿವುನಾ ಸಾಯಿಸಲು ಸಂಚು ಮಾಡಿಕೊಂಡು ಬಂದಿದ್ದಾರೆ. ಅವನು ಅಡುಗೆ ಮನೆಗೆ ಹೋದ ತಕ್ಷಣ ಅವನಿಗೆ ಬೆಂಕಿಹಚ್ಚಿ ಕೊಲ್ಲಬೇಕು ಎಂದು ಅಂದುಕೊಂಡಿದ್ದಾರೆ. ಆದರೆ ಅವರ ಐಡಿಯಾ ಪ್ಲಾಪ್ ಆಗಿದೆ. ಪಾರು ಸಿದ್ದಾರ್ಥ್ ಅಲ್ಲಿಗೆ ಬರ್ತಾನೆ ಎಂದು ಅಂದುಕೊಂಡು ಒಳಗಡೆ ಹೋಗುತ್ತಾಳೆ. ಹೋದಾಗ ಇವರು ಗೊತ್ತಾಗದೇ ಬೆಂಕಿ ಹಚ್ಚುತ್ತಾರೆ. ಆಗ ಅವಳನ್ನು ಕಾಪಾಡಲು ಶಿವು ರೆಡಿ ಆಗ್ತಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.