ಎಣ್ಣೆ ಮುಖದ ಭಾಗ್ಯಾಗೆ ಫ್ಯಾಷನ್ ಸೆನ್ಸ್,ಲೋಕಜ್ಞಾನ ಎರಡೂ ಇಲ್ಲ,ಅಮ್ಮನ ಮುಂದೆ ಹೆಂಡತಿಯನ್ನು ಹೀಯಾಳಿಸಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆ.24ರ ಎಪಿಸೋಡ್‌ನಲ್ಲಿ ತಾಂಡವ್ ಅಮ್ಮನ ಮುಂದೆ ಮತ್ತೆ ಭಾಗ್ಯಾಗೆ ಅವಮಾನ ಮಾಡುತ್ತಾನೆ. ಎಣ್ಣೆ ಮುಖದ ಭಾಗ್ಯಾಗೆ ಫ್ಯಾಷನ್ ಸೆನ್ಸ್, ಲೋಕಜ್ಞಾನ ಎರಡೂ ಇಲ್ಲ ಎಂದು ಹೀಯಾಳಿಸುತ್ತಾನೆ. ಅವಳನ್ನು ನಿನ್ನಿಷ್ಟದಂತೆ ಬದಲಿಸುತ್ತೇನೆ ಎಂದು ಕುಸುಮಾ ಚಾಲೆಂಜ್ ಮಾಡುತ್ತಾಳೆ.
Bhagyalakshmi Serial: ಮದುವೆ ನಿಲ್ಲಿಸುವ ಕುಸುಮಾ ಮಗನನ್ನು ಎಳೆದು ಮನೆಗೆ ಕರೆದೊಯ್ಯುತ್ತಾಳೆ. ಮಗ ಮಾಡಿದ ಮೋಸಕ್ಕೆ ಕಣ್ಣೀರಿಡುತ್ತಾಳೆ. ಪೂಜಾ ಕೂಡಾ ಕುಸುಮಾ ಜೊತೆ ಹೆಜ್ಜೆ ಹಾಕುತ್ತಾಳೆ. ತಾಂಡವ್, ಮದುವೆ ಮನೆಯಲ್ಲಿ ಅಮ್ಮನಿಗೆ ಎದುರು ಮಾತನಾಡಲು ಆಗದೆ ಸುಮ್ಮನೆ ಅಲ್ಲಿಂದ ಹೊರಡುತ್ತಾನೆ.
ತನ್ನ ತಪ್ಪಿಗೆ ಅಮ್ಮನನ್ನು ಹೊಣೆಯನ್ನಾಗಿಸಿದ ತಾಂಡವ್
ರಸ್ತೆಯಲ್ಲಿ ತಾಳ್ಮೆ ಕಳೆದುಕೊಳ್ಳುವ ತಾಂಡವ್, ಕತ್ತಿಗೆ ಹಾಕಿದ್ದ ಶಲ್ಯವನ್ನು ಕಿತ್ತೆಸೆದು, ಇನ್ನೂ ಎಷ್ಟು ದೂರ ಹೀಗೇ ಎಳೆದುಕಂಡು ಹೋಗುತ್ತೀಯ ಎಂದು ಅರಚುತ್ತಾನೆ. ಕುಸುಮಾ ಕೈಯಲ್ಲಿ ರಕ್ತ ನೋಡಿ, ನೋಡು ಕೈ ಹೇಗಾಗಿದೆ ಈ ಬಟ್ಟೆ ಕಟ್ಟುತ್ತೇನೆ ಎಂದು ಹತ್ತಿರ ಹೋಗುತ್ತಾನೆ. ಆದರೆ ಕುಸುಮಾ ದೂರ ನಿಲ್ಲುತ್ತಾಳೆ. ನೀನು ನನ್ನ ಹೃದಯಕ್ಕೆ ಗಾಯ ಮಾಡಿದ್ದೀಯ ಅದರ ಮುಂದೆ ಈ ಗಾಯ ದೊಡ್ಡದಲ್ಲ. ನನ್ನ ನಂಬಿಕೆಯನ್ನು ಮುರಿದಿದ್ದೀಯ ನೀನು ಮನೆಹಾಳ. ಕೈ ಹಿಡಿದ ಹೆಂಡತಿಗೆ ಮೋಸ ಮಾಡಿದೀಯ. ನೀನು ಎಂದಿಗೂ ಒಳ್ಳೆ ಮಗನಾಗಲು, ಗಂಡನಾಗಲು, ಮಕ್ಕಳಿಗೆ ಒಳ್ಳೆ ಅಪ್ಪನಾಗಲು ಸಾಧ್ಯವೇ ಇಲ್ಲ, ನೀನು ನಾಲಾಯಕ್ ಎಂದು ಬೈಯ್ಯುತ್ತಾಳೆ. ಪೂಜಾ ಕೂಡಾ ಭಾವನ ಬುದ್ಧಿಗೆ ಬೇಸರ ವ್ಯಕ್ತಪಡಿಸುತ್ತಾಳೆ.
ಆದರೆ ಅಮ್ಮನ ಮಾತಿಗೆ ಕೋಪಗೊಳ್ಳುವ ತಾಂಡವ್, ಸಾಕು ಸುಮ್ಮನಿರು ನಾನು ಸುಮ್ಮನಿದ್ದೇನೆ ಅಂತ ನಿನ್ನಿಷ್ಟ ಬಂದಂತೆ ಮಾತನಾಡಬೇಡ, ಇಂದು ನಾನು ಏನೇ ತಪ್ಪು ಮಾಡಿದ್ದರೂ ನನ್ನ ಜೀವನದಲ್ಲಿ ಏನೇ ನಡೆಯುತ್ತಿದ್ದರೂ ಅದಕ್ಕೆಲ್ಲಾ ನೀನೇ ಕಾರಣ ಎಂದು ತಾನು ಮಾಡಿದ ತಪ್ಪಿಗೆ ಅಮ್ಮನತ್ತೆ ಬೆರಳು ತೋರಿಸುತ್ತಾನೆ. ಭಾಗ್ಯಾಗೆ ಮೋಸ ಮಾಡು ಅಂತ ನಾನು ನಿನಗೆ ಹೇಳಿಕೊಟ್ಟಿದ್ದಾ? ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೋ ಅಂತ ಹೇಳಿಕೊಟ್ಟಿದ್ದು ನಾನಾ? ಎರಡನೇ ಮದುವೆ ಮಾಡಿಕೋ ಎಂದು ನಾನು ಹೇಳಿಕೊಟ್ಟಿದ್ದಾ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ಇದಕ್ಕೆ ಉತ್ತರಿಸುವ ತಾಂಡವ್, ನೀನು ಹೇಳಿಕೊಡದಿದ್ದರೂ ನಾನು ಈ ರೀತಿ ಮಾಡಲು ನೀನೇ ಕಾರಣ ಎಂದು ತನ್ನ ತಪ್ಪಿಗೆ ಅಮ್ಮನನ್ನು ಆರೋಪಿಸುತ್ತಾನೆ.
ಎಣ್ಣೆ ಮುಖದವಳ ಜೊತೆ ಬದುಕಲು ಸಾಧ್ಯವಿಲ್ಲ
ನಿನ್ನ ಸಂಸ್ಕಾರ, ದಬ್ಬಾಳಿಕೆ ಇದಕ್ಕೆಲ್ಲಾ ಕಾರಣ, ನನ್ನ ಹುಡುಗಿ ಬಗ್ಗೆ ನಾನು ಕನಸು ಕಂಡಿದ್ದೆ. ಆದರೆ ನಾನು ಹುಟ್ಟಿದಾಗಿನಿಂದ ನಿನ್ನಿಷ್ಟದಂತೆ ಬದುಕಿದ್ದೇನೆ ಹೊರತು ಒಂದು ದಿನವೂ ನನ್ನಿಷ್ಟದಂತೆ ಬದುಕಿಲ್ಲ. ಮಕ್ಕಳು ಅಪ್ಪ, ಅಮ್ಮನಿಂದ ಜನಿಸುತ್ತಾರೆಯೇ ಹೊರತು, ಅಪ್ಪ ಅಮ್ಮನಿಗಾಗಿ ಜನಿಸುವುದಿಲ್ಲ. ಇದು ನನ್ನ ಜೀವನ, ನನ್ನ ಲೈಫ್ ಹೇಗಿರಬೇಕು ಅಂತ ನಿರ್ಧರಿಸೋದು ನಾನು. ನೀನು ಏನು ಹೇಳಿದರೂ ನನಗೆ ಭಾಗ್ಯಾ ಇಷ್ಟವಿಲ್ಲ, ಆ ಎಣ್ಣೆ ಮುಖದವಳಿಂದ ನನ್ನ ಬದುಕು ಉಸಿರುಗಟ್ಟುತ್ತಿದೆ. ಅವಳಿಗೆ ಫ್ಯಾಷನ್ ಸೆನ್ಸ್ ಇಲ್ಲ, ಲೋಕಜ್ಞಾನ ಇಲ್ಲ. ಅವಳ ಜೊತೆ ಬದುಕಲು ಸಾಧ್ಯವೇ ಇಲ್ಲ ಎನ್ನುತ್ತಾನೆ.
ಮಗನ ಮಾತಿಗೆ ಬೇಸರ ವ್ಯಕ್ತಪಡಿಸುವ ಕುಸುಮಾ, ನೀನು ಬದುಕುವುದಿಲ್ಲ ಎಂದರೆ ಬಿಡುವವರು ಯಾರು? ನನಗೆ ಒಂದು ತಿಂಗಳು ಸಮಯ ಕೊಡು. ನೀನು ಇಷ್ಟಪಟ್ಟಂತೆ ಭಾಗ್ಯಾಳನ್ನು ಬದಲಿಸುತ್ತೇನೆ. ಭಾಗ್ಯಾ ನನ್ನ ಹೆಂಡತಿ ಎಂದು ನೀನು ಖುಷಿಯಿಂದ ಹೇಳಿಕೊಳ್ಳುವಂತೆ ಅವಳನ್ನು ಬದಲಿಸುತ್ತೇನೆ ಎನ್ನುತ್ತಾಳೆ. ಅಮ್ಮನ ಮಾತು ಕೇಳಿ ತಾಂಡವ್ ವ್ಯಂಗ್ಯವಾಗಿ ನಗುತ್ತಾನೆ.
ಕುಸುಮಾ, ತಾನು ಹೇಳಿದಂತೆ ಭಾಗ್ಯಾಳನ್ನು ಬದಲಿಸುತ್ತಾಳಾ? ಎಲ್ಲದಕ್ಕೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ