Annayya Serial: ಅಣ್ಣಯ್ಯನ ಮನೆಯಲ್ಲಿ ಮುಂದುವರೆದ ಮದುವೆ ಶಾಸ್ತ್ರ; ಇಂದು ಶಿವು ಹಾಗೂ ಪಾರು ಮೊದಲನೇ ರಾತ್ರಿ
ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಶಿವು ಹಾಗೂ ಪಾರು ಮದುವೆ ಈಗಷ್ಟೇ ಆಗಿದೆ. ಆದರೆ ಇದು ಇಬ್ಬರಿಗೂ ಇಷ್ಟವಿಲ್ಲದ ಮದುವೆ ಹಾಗಾಗಿ ಇಬ್ಬರೂ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಎಲ್ಲ ಸತ್ಯ ಗೊತ್ತಿದ್ದೂ ಪಾರುನ ಮದುವೆ ಆಗೋದು ಶಿವುಗೂ ತುಂಬಾ ಕಷ್ಟವಾಗಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಮದುವೆ ಆಗಿದೆ. ಇದರಿಂದ ಅಣ್ಣಯ್ಯನ ಮನೆಯ ಎಲ್ಲರಿಗೂ ಅವನ ತಂಗಿಯರೆಲ್ಲರಿಗೂ ತುಂಬಾ ಖುಷಿ ಆಗಿದೆ. ಅವರೆಲ್ಲರೂ ತುಂಬಾ ಖುಷಿಯಿಂದ ಅತ್ತಿಗೆಯನ್ನು ಮನೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಶಿವು ಮತ್ತು ಪಾರು ಪರಿಸ್ಥಿತಿ ಮಾತ್ರ ತುಂಬಾ ಕಷ್ಟಕರವಾಗಿದೆ. ಇಬ್ಬರದ್ದೂ ಅಳು ಮುಖವೇ ಆಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಲ್ಲ. ಮದುವೆ ಆಗಬೇಕು ಎಂಬ ಯಾವ ನಿರ್ಧಾರವೂ ಇರಲಿಲ್ಲ. ಆದರೂ ವೀರಭದ್ರನ ಕೋಪಕ್ಕೆ ಇಷ್ಟೆಲ್ಲ ಆಗಿದೆ. ಇದರಿಂದ ಪಾರು ತನ್ನ ಪ್ರಿಯಕರ ಸಿದ್ದಾರ್ಥ್‌ನನ್ನು ನೆನೆಸಿಕೊಂಡು ಅಳುತ್ತಿದ್ದಾಳೆ. ಇದಾದ ನಂತರದಲ್ಲಿ ಶಾಸ್ತ್ರಗಳು ಮುಂದುವರೆಯುತ್ತದೆ.
ಮುಂದುವೆದ ಶಾಸ್ತ್ರ
ಅಣ್ಣಯ್ಯ ತಂಗಿಯರು ಸೇರನ್ನು ಇಟ್ಟು ಅದನ್ನು ಪಾರು ಹತ್ತಿರ ಒದ್ದು ಒಳಗಡೆ ಬರಲು ಹೇಳುತ್ತಾರೆ. ನಂತರದಲ್ಲಿ ಅವರೆಲ್ಲ ಸೇರಿ ಎಲ್ಲ ಶಾಸ್ತ್ರಗಳನ್ನು ಮಾಡುತ್ತಾರೆ. ನಂತರ ಒಂದು ಪಾತ್ರೆಯಲ್ಲಿ ಹಾಲು ತುಂಬಿ ಅದರಲ್ಲಿ ಉಂಗುರ ಹುಡುಕುವ ಓಕುಳಿ ಆಟವನ್ನೂ ಆಡಿಸುತ್ತಾರೆ. ಇದೆಲ್ಲ ಮಾಡುತ್ತಿದ್ದರೂ ಪಾರು ಎಲ್ಲೋ ಕಳೆದು ಹೋಗಿರುತ್ತಾಳೆ. ತನ್ನ ಮನಸಿನ ನೋವನ್ನು ಹೇಳಿಕೊಳ್ಳಲು ಅವಳಿಗೆ ಯಾರೂ ಸಿಗೋದೇ ಇಲ್ಲ.
ಪಾರು ತಾಯಂದಿರ ನೋವು
ಇನ್ನು ಇಷ್ಟು ದಿನ ಅವಳು ತನ್ನ ಎಲ್ಲ ನೋವನ್ನು ಶಿವು ಹತ್ತಿರವೇ ಹೇಳಿಕೊಂಡಿದ್ದಳು. ಆದರೆ ಇನ್ನು ಮುಂದೆ ಅವನೇ ತನ್ನ ಗಂಡ ಎಂದು ಒಪ್ಪಿಕೊಳ್ಳಲು ಅವಳಿಗೆ ತುಂಬಾ ಕಷ್ಟ ಆಗುತ್ತಿದೆ. ನಂದತ ಮಾದಪ್ಪಣ್ಣ ಹೆಂಡತಿಗೆ ಪಾರು ತಾಯಂದಿರು ಕಾಲ್ ಮಾಡಿ ಕೆಲವು ವಿಚಾರಗಳನ್ನು ಹೇಳುತ್ತಾರೆ. ನೋಡು ನಾವು ತವರು ಮನೆಯವರು ಮಾಡಬೇಕಾದ ಯಾವ ಶಾಸ್ತ್ರವನ್ನೂ ಮಾಡೋಕೆ ಆಗ್ತಾ ಇಲ್ಲ. ಎಲ್ಲವನ್ನು ನೀನೇ ಮಾಡಬೇಕು ಎಂದು ಅದಕ್ಕೆ ಅವಳು ಖುಷಿಯಿಂದ ಒಪ್ಪಿಕೊಂಡಿದ್ದಾಳೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.