ಅಂದು ಹೀಯಾಳಿಸಿದವರಿಗೆ ಇಂದು ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಡ್ರೋನ್ ಪ್ರತಾಪ್; ಸಾಧನೆಗೆ ಫ್ಯಾನ್ಸ್ ಕಡೆಯಿಂದ ಸಿಕ್ತು ಮೆಚ್ಚುಗೆ
Drone Prathap: ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಮಿಂಚಿದ್ದ ಡ್ರೋನ್ ಪ್ರತಾಪ್ ಆ ಸಂದರ್ಭದಲ್ಲಿ ಒಂದು ಮಾತಾಡಿದ್ದರು. ಮುಂದೊಂದು ದಿನ ತಾನು ಕೃಷಿಗೆ ಸಹಾಯ ಆಗುವ ಡ್ರೋನ್ ತಯಾರಿಸುತ್ತೇನೆ ಎಂದು ಹೇಳಿದ್ದರು. ಆಗ ಡೋಂಗಿ ಮಾಡ್ತಾ ಇದೀಯಾ ಎಂದು ಕೆಲವರು ನಕ್ಕು ಕಡೆಗಣಿಸಿದ್ದರು.
ಹಾರೋದು ಡ್ರೋಣಾ ಇಲ್ಲ ಕಾಗೇನಾ ಅಂತ ಪ್ರಶ್ನೆ ಮಾಡಿದವರ ಎದುರು ಇಂದು ಡ್ರೋನ್ ಪ್ರತಾಪ್ ಸಾಧನೆ ಮಾಡಿ ತೋರಿಸಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಅಡಿಕೆ ಮರಗಳಿಗೆ ಅಥವಾ ಇನ್ಯಾವುದೇ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಔಷಧಿ ಹೊಡೆಯುವಂತೆ ನಾನು ಡ್ರೋನ್ ಒಂದನ್ನು ತಯಾರಿಸುತ್ತಾ ಇದ್ದೇನೆ. ಮುಂದಿನ ದಿನಗಳಲ್ಲಿ ಅದರಿಂದ ಹಲವರಿಗೆ ಪ್ರಯೋಜನವಾಗುತ್ತದೆ. ಅದು ತುಂಬಾ ಎತ್ತರದ ಮರಗಳಿಗೂ ಸಹ ಔಷಧಿ ಸಿಂಪಡನೆ ಮಾಡುತ್ತದೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಆಗ ಅಲ್ಲಿ ಕುಳಿತು ಕೆಲವರು ಅವರನ್ನು ಗೇಲಿ ಮಾಡಿದ್ದರು. ನೀನು ಹೇಳೋದೆಲ್ಲ ಸುಳ್ಳು ಎಂಬ ರೀತಿಯಲ್ಲಿ ಅವರ ಎದುರೇ ಪ್ರತಾಪ್ ಅವರನ್ನು ತಮಾಷೆ ಮಾಡಿ ನಕ್ಕಿದ್ದರು. ಆದರೆ ಆಗ ಸುಮ್ಮನಿದ್ದ ಡ್ರೋನ್ ಪ್ರತಾಪ್ ಅಂದು ಹೇಳಿದ್ದನ್ನು ಇಂದು ನಿಜಮಾಡಿ ತೋರಿಸಿದ್ದಾರೆ.
ಅವರು ದೊಡ್ಡದೊಂದು ಡ್ರೋನ್ ತಯಾರಿಸಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಒಂದು ಮನೆಯ ಮುಂದೆ ಅವರು ತಯಾರಿಸಿದ ದೊಡ್ಡ ಡ್ರೋನ್‌ಗೆ ಆರತಿ ಮಾಡಿದ್ದಾರೆ. ಅರಶಿನ ಕುಂಕುಮ ಇಟ್ಟು ಪೂಜೆ ಮಾಡಿದ್ದಾರೆ. ಆ ಮನೆ ಅಂಗಳದಲ್ಲಿ ಹಿರಿಯರು ಹಾಗೂ ಒಂದಷ್ಟು ಯುವಕರು ಕಾಣಿಸುತ್ತಾರೆ. ನಂತರ ಡ್ರೋನ್ ಪ್ರತಾಪ್ ಅವರು ಅದನ್ನು ಹಾರಿಸುತ್ತಾರೆ. ಇನ್ನು ಡ್ರೋನ್ ಕೆಲವು ವಿಶೇಷತೆಯನ್ನು ಹೊಂದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಮೇಲಿನಿಂದ ದೊಡ್ಡದಾದ ಬಾಡಿ, ಅಗಲವಾದ ರೆಕ್ಕೆಗಳು, ಗಟ್ಟಿ ಲೋಹದಿಂದ ಮಾಡಿದ ಸ್ಟ್ಯಾಂಡ್. ಇನ್ನು ಒಂದು ಆಯ್ಲ್ ಕ್ಯಾನ್ ಕಾಣಿಸುತ್ತದೆ.
ಆ ಆಯ್ಲ್ ಕ್ಯಾನ್‌ನಂತೆ ಕಾಣುವ ಜಾಗದಲ್ಲಿ ಔಷಧಿಯನ್ನು ಶೇಖರಿಸಿಕೊಂಡು ನಂತರ ಅದನ್ನು ಸಿಂಪಡನೆ ಮಾಡಬಹುದಾದ ತಂತ್ರಜ್ಞಾನವನ್ನು ಅವರು ಅಭಿವೃದ್ದಿ ಪಡಿಸಿದ್ದಾರೆ. ಅದರ ಒಂದು ನೋಟವನ್ನು ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇಲ್ಲೇ ಇದೆ ನೋಡಿ ವಿಡಿಯೋ
ಈ ವಿಡಿಯೋಗೆ ಎಲ್ಲ ಪಾಸಿಟಿವ್ ಕಾಮೆಂಟ್‌ಗಳು ಬಂದಿದೆ. ಆಡಿಕೊಂಡವರ ನಡುವೆ ಬೆಳೆಯುವು ನಿಜವಾದ ಸಾಧನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಜನ ಶುಭಾಶಯ ತಿಳಿಸಿದ್ಧಾರೆ.
ಬೆಳಿಯೋ ತಾಕತ್ತು ನಿಂಗೆ ಇದೆ ಅಣ್ಣ ನೀನು ಬೆಳಿಯೋದು ನಾನು ನೋಡಬೇಕು ಲವ್ ಯು ಅಣ್ಣ ಎಂದು ಕಾಮೆಂಟ್ ಮಾಡಿದ್ದಾರೆ. ಎಷ್ಟು ಅವಮಾನ ಎಷ್ಟು ಟೀಕೆಗಳು ಎಲ್ಲವನ್ನು ಸಹಿಸಿಕೊಂಡು ತಾಳ್ಮೆ ಇಂದ ಇದ್ದು ಇವತ್ತು ಈ ರೀತಿ ಉತ್ತರ ಕೊಟ್ಟಿದಿರಾ ಬ್ರದರ್ ಎಂದು ಖುಷಿಯಾಗಿ ವಿಶ್ ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಧನಾತ್ಮಕ ಸ್ಪಂದನೆಯನ್ನು ಡ್ರೋನ್ ಪ್ರತಾಪ್ ಪಡೆದುಕೊಂಡಿದ್ದಾರೆ.