ಆಸ್ಕರ್‌ ರೇಸ್‌ಗೆ ಭಾರತೀಯ ಚಿತ್ರರಂಗದಿಂದ ಲಾಪತಾ ಲೇಡೀಸ್‌ ಎಂಟ್ರಿ; ಖಂಡಿತ ಪ್ರಶಸ್ತಿ ಗೆಲುತ್ತೇವೆ ಎಂದ ನಿರ್ದೇಶಕಿ ಕಿರಣ್‌ ರಾವ್‌
ಕನ್ನಡ ಸುದ್ದಿ  /  ಮನರಂಜನೆ  /  ಆಸ್ಕರ್‌ ರೇಸ್‌ಗೆ ಭಾರತೀಯ ಚಿತ್ರರಂಗದಿಂದ ಲಾಪತಾ ಲೇಡೀಸ್‌ ಎಂಟ್ರಿ; ಖಂಡಿತ ಪ್ರಶಸ್ತಿ ಗೆಲುತ್ತೇವೆ ಎಂದ ನಿರ್ದೇಶಕಿ ಕಿರಣ್‌ ರಾವ್‌

ಆಸ್ಕರ್‌ ರೇಸ್‌ಗೆ ಭಾರತೀಯ ಚಿತ್ರರಂಗದಿಂದ ಲಾಪತಾ ಲೇಡೀಸ್‌ ಎಂಟ್ರಿ; ಖಂಡಿತ ಪ್ರಶಸ್ತಿ ಗೆಲುತ್ತೇವೆ ಎಂದ ನಿರ್ದೇಶಕಿ ಕಿರಣ್‌ ರಾವ್‌

ಆಮೀರ್‌ ಖಾನ್‌ ನಿರ್ಮಾಣದಲ್ಲಿ ಕಿರಣ್‌ ರಾವ್‌ ನಿರ್ದೇಶನ ಮಾಡಿರುವ ಲಾಪತಾ ಲೇಡೀಸ್‌ ಸಿನಿಮಾ ಭಾರತೀಯ ಚಿತ್ರರಂಗದಿಂದ 2025ರ ಆಸ್ಕರ್‌ ರೇಸ್‌ಗೆ ಎಂಟ್ರಿ ಕೊಟ್ಟಿದೆ. ಸಿನಿಮಾ 2023 ಸೆಪ್ಟೆಂಬರ್‌ನಲ್ಲಿ ತೆರೆ ಕಂಡಿತ್ತು. ಸಿನಿಮಾ ಖಂಡಿತ ಪ್ರಶಸ್ತಿ ಗೆಲ್ಲುವುದು ಎಂದು ನಿರ್ದೇಶಕಿ ಕಿರಣ್‌ ರಾವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಕರ್‌ ರೇಸ್‌ಗೆ ಭಾರತೀಯ ಚಿತ್ರರಂಗದಿಂದ ಲಾಪತಾ ಲೇಡೀಸ್‌ ಎಂಟ್ರಿ; ಖಂಡಿತ ಪ್ರಶಸ್ತಿ ಗೆಲುತ್ತೇವೆ ಎಂದ ನಿರ್ದೇಶಕಿ ಕಿರಣ್‌ ರಾವ್‌
ಆಸ್ಕರ್‌ ರೇಸ್‌ಗೆ ಭಾರತೀಯ ಚಿತ್ರರಂಗದಿಂದ ಲಾಪತಾ ಲೇಡೀಸ್‌ ಎಂಟ್ರಿ; ಖಂಡಿತ ಪ್ರಶಸ್ತಿ ಗೆಲುತ್ತೇವೆ ಎಂದ ನಿರ್ದೇಶಕಿ ಕಿರಣ್‌ ರಾವ್‌

ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಆಸ್ಕರ್‌ ಕೂಡಾ ಒಂದು. ಯಾವುದೇ ನಟ, ನಟಿ ಅಥವಾ ತಂತ್ರಜ್ಞರಿಗೆ, ಚಿತ್ರತಂಡಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿದೆ ಎಂದರೆ ಅದು ವೃತ್ತಿ ಜೀವನದ ದೊಡ್ಡ ಯಶಸ್ಸು ಎಂದೇ ಅರ್ಥ. ಪ್ರತಿ ಬಾರಿಯೂ ಆಸ್ಕರ್‌ ಪ್ರಶಸ್ತಿಗೆ ಯಾವೆಲ್ಲಾ ಸಿನಿಮಾಗಳು, ಯಾವ ವಿಭಾಗಕ್ಕೆ ಎಂಟ್ರಿ ಕೊಟ್ಟಿವೆ ಅಂತ ತಿಳಿಯಲು ಸಿನಿಮಾಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುತ್ತಾರೆ.

ಕಿರಣ್‌ ರಾವ್‌ ನಿರ್ದೇಶನದ ಸಿನಿಮಾ

ಆಸ್ಕರ್‌ ಪ್ರಶಸ್ತಿಗೆ ವಿವಿಧ ದೇಶಗಳ ವಿವಿಧ ಸಿನಿಮಾಗಳು ರೇಸ್‌ಗೆ ಎಂಟ್ರಿ ಕೊಡುತ್ತವೆ. ಕಳೆದ ಬಾರಿ ಭಾರತದಿಂದ ಆರ್‌ಆರ್‌ಆರ್‌ ಸಿನಿಮಾ ಆಸ್ಕರ್‌ ವೇದಿಕೆಗೆ ಎಂಟ್ರಿ ಕೊಟ್ಟಿತ್ತು. ಚಿತ್ರದ ನಾಟು ನಾಟು ಹಾಡಿಗೆ ಉತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ದೊರೆತಿತ್ತು. ಈ ಬಾರಿ ಭಾರತದಿಂದ ಯಾವ ಸಿನಿಮಾ ಆಸ್ಕರ್‌ಗೆ ಎಂಟ್ರಿ ಕೊಡಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬಾಲಿವುಡ್‌ನ ಲಾಪತಾ ಲೇಡೀಸ್‌ ಸಿನಿಮಾ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. 2025 ನೇ ಸಾಲಿನ ಆಸ್ಕರ್ ರೇಸ್‌ಗೆ ಭಾರತ ದೇಶದಿಂದ ಆಯ್ಕೆಯಾಗಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸಿದೆ. ಈ ಚಿತ್ರ ನಮ್ಮ ದೇಶದ ಪರವಾಗಿ ಆಸ್ಕರ್‌ಗೆ ಆಯ್ಕೆಯಾಗುವುದು ಖಚಿತ ಎಂದು ಚಿತ್ರದ ನಿರ್ದೇಶಕಿ ಕಿರಣ್ ರಾವ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.‌

ಅದಲು ಬದಲಾಗುವ ವಧುಗಳ ಕಥೆ

ಲಾಪತಾ ಲೇಡೀಸ್, ರೈಲು ಪ್ರಯಾಣ ಮಾಡುವ ಗ್ರಾಮೀಣ ಪ್ರದೇಶದ ಇಬ್ಬರು ಮದು ಮಕ್ಕಳು ಆಕಸ್ಮಿಕವಾಗಿ ಅದಲು ಬದಲಾಗುತ್ತಾರೆ. ರೈಲು ಇಳಿದ ನಂತರ ಒಬ್ಬ ವರ ಬೇರೊಬ್ಬಳು ವಧುವನ್ನು ಕರೆದುಕೊಂಡು ಹೋಗುತ್ತಾನೆ. ಗ್ರಾಮವೊಂದಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡಿರುವ ಈ ಇಬ್ಬರು ಹೆಣ್ಣು ಮಕ್ಕಳು ಬೇರೆಬೇರೆ ಗ್ರಾಮಗಳಿಗೆ ವಧುಗಳಾಗಿ ಹೋಗುತ್ತಾರೆ. ಮುಂದೆ ಏನು ನಡೆಯಲಿದೆ ಅನ್ನೋದು ಈ ಸಿನಿಮಾ ಕಥೆ. ಈ ಸಿನಿಮಾವು ಸಿನಿಪ್ರಿಯರಿಂದ ಮೆಚ್ಚುಗೆ ಪಡೆದಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಅಂದುಕೊಂಡಷ್ಟು ಯಶಸ್ಸು ಗಳಿಸದಿದ್ದರೂ ನಂತರ ಈ ಸಿನಿಮಾ ಬಾಯಿ ಮಾತಿನ ಪ್ರಚಾರದ ಮೂಲಕವೇ ಸಕ್ಸಸ್‌ ಕಂಡಿತ್ತು.

ಆಮೀನ್‌ ಖಾನ್‌ ನಿರ್ಮಾಣದ ಲಾಪತಾ ಲೇಡೀಸ್

ಲಾಪತಾ ಚಿತ್ರವನ್ನು ಜಿಯೋ ಸ್ಟುಡಿಯೋಸ್‌, ಆಮೀರ್‌ ಖಾನ್‌ ಪ್ರೊಡಕ್ಷನ್ಸ್‌ ಹಾಗೂ ಕಿಂಡ್ಲಿಂಗ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ, ಆಮೀರ್‌ ಖಾನ್‌, ಕಿರಣ್‌ ರಾವ್‌ ಹಾಗೂ ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕಿರಣ್‌ ರಾವ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ರಾಮ್‌ ಸಂಪತ್‌ ಸಂಗೀತ ನೀಡಿದ್ದಾರೆ. ಸಿನಿಮಾ 2023 ಸೆಪ್ಟೆಂಬರ್‌ 8 ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ನಿತಾನ್ಷಿ ಗೋಯಲ್‌, ಸ್ಪರ್ಶ್‌ ಶ್ರೀವಾತ್ಸವ್‌, ರವಿ ಕಿಶನ್‌, ಪ್ರತಿಭಾ ರಾಂತಾ, ಪಂಕಜ್‌ ಶರ್ಮಾ, ದುರ್ಗೇಶ್‌ ಕುಮಾರ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಸದ್ಯಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ.

Whats_app_banner