ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಅದ್ಭುತ ನಟನೆ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಮೆಚ್ಚುಗೆಯ ಪೋಸ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಅದ್ಭುತ ನಟನೆ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಮೆಚ್ಚುಗೆಯ ಪೋಸ್ಟ್‌

ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಅದ್ಭುತ ನಟನೆ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಮೆಚ್ಚುಗೆಯ ಪೋಸ್ಟ್‌

ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ, ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ನೋ ಕಂಟ್ರಿ ಫಾರ್‌ ಓಲ್ಡ್‌ ಮೆನ್‌, ಬ್ಯೂಟಿಫುಲ್‌ ಎರಡೂ ಸಿನಿಮಾಗಳಲ್ಲಿ ಬಾರ್ದೆಮ್‌ ವಿಭಿನ್ನ ಪಾತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಅದ್ಭುತ ನಟನೆ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಮೆಚ್ಚುಗೆಯ ಪೋಸ್ಟ್‌
ಸ್ಪಾನಿಷ್‌ ನಟ, ಆಸ್ಕರ್‌ ವಿಜೇತ ಹಾವಿಯರ್ ಬಾರ್ದೆಮ್ ಅದ್ಭುತ ನಟನೆ ಕುರಿತು ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಮೆಚ್ಚುಗೆಯ ಪೋಸ್ಟ್‌ (PC: Deepa Hiregutti Facebook)

ನಟನೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ನಟನೆ ಮೂಲಕ ಕಲಾಭಿಮಾನಿಗಳನ್ನು ಮೆಚ್ಚಿಸುವುದು ಕೂಡಾ ಸುಲಭದ ಮಾತಲ್ಲ. ಆದರೆ ಕೆಲವು ನಟರು, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಾರೆ. ಅದು ನಟನೆ ಅಲ್ಲ, ವಾಸ್ತವ ಎನಿಸುವಷ್ಟೂ ಮನಸ್ಸಿಗೆ ನಾಟುವಂತೆ ನಟಿಸುತ್ತಾರೆ. ಅಂತಹ ನಟರಲ್ಲಿ ಸ್ಪಾನಿಷ್‌ ನಟ ಹಾವಿಯರ್‌ ಬಾರ್ದೆಮ್‌ ಕೂಡಾ ಒಬ್ಬರು.

ಹಾವಿಯರ್‌ ಬಾರ್ದೆಮ್‌ ಆಸ್ಕರ್‌ ಪ್ರಶಸ್ತಿ ವಿಜೇತ ನಟ. ಈ ಅದ್ಭುತ ನಟನ ಬಗ್ಗೆ ಡಿಜಿಟಲ್‌ ಕ್ರಿಯೇಟರ್‌ ದೀಪಾ ಹಿರೇಗುತ್ತಿ ಸೊಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನೋ ಕಂಟ್ರಿ ಫಾರ್‌ ಓಲ್ಡ್‌ ಮೆನ್‌

ಮೊನ್ನೆ ಯಾರೋ ‘ನೋ ಕಂಟ್ರಿ ಫಾರ್‌ ಓಲ್ಡ್‌ ಮೆನ್‌’ ಚಿತ್ರದ ಬಗ್ಗೆ ಇಲ್ಲಿ ಮೆನ್ಷನ್‌ ಮಾಡಿದ್ದರು. 2007ರಲ್ಲಿ ಬಿಡುಗಡೆಯಾದ ಕ್ರೈಮ್‌ ಥ್ರಿಲ್ಲರ್.‌ ಕೋಯೆನ್‌ ಬ್ರದರ್ಸ್‌ ನಿರ್ದೇಶನದ ಈ ಚಿತ್ರ 2008ರ ಅತ್ಯುತ್ತಮ ಚಿತ್ರ ಎಂದು ಆಸ್ಕರ್‌ ಪ್ರಶಸ್ತಿ ಪಡೆದಿತ್ತು. ಒಟ್ಟು ನಾಲ್ಕು ಆಸ್ಕರ್‌ ಈ ಸಿನಿಮಾಗೆ ಬಂದಿತ್ತು.

ನಾನಿಲ್ಲಿ ಹೇಳ ಹೊರಟಿರುವುದು ಸ್ಪ್ಯಾನಿಷ್‌ ನಟ ಜೇವಿಯರ್‌ ಬಾರ್ಡೆಮ್‌ ಬಗ್ಗೆ.(ಅವನ ಹೆಸರನ್ನು ಹೇಳುವುದು ಹಾವಿಯರ್‌ ಬಾರ್ದೆಮ್‌ ಅಂತೆ, ಜೆ ಸೈಲೆಂಟ್‌ ಅಂತೆ) ಆಂಟನ್‌ (Anton Chigurh) ಪಾತ್ರದಲ್ಲಿ ಹೇಗೆ ನಟಿಸಿದ್ದಾನೆಂದರೆ ನಾನಂತೂ ಅವನು ತೆರೆಯ ಮೇಲೆ ಬಂದಾಗಲೆಲ್ಲ ಅಕ್ಷರಶಃ ನಡುಗುತ್ತಿದ್ದೆ. ಎಂಥಹ ನಟನೆ ಎಂದರೆ ಅಬ್ಬಾ, ವರ್ಣಿಸಲು ಪದಗಳೇ ಇಲ್ಲ. ಅರ್ಹವಾಗಿಯೇ ಅತ್ಯುತ್ತಮ ಸಹನಟ ಆಸ್ಕರ್‌ ಬಂದಿದೆ ಬಾರ್ದೆಮ್‌ಗೆ.

ವಿಭಿನ್ನ ಪಾತ್ರಗಳಲ್ಲಿ ನಟನೆ

ನಾನು ಹೇಳ ಹೊರಟಿರುವುದು ಇಷ್ಟೇ ಅಲ್ಲ, ಈ ಸಿನಿಮಾ ಅಮೆಝಾನ್‌ ಪ್ರೈಮ್‌ನಲ್ಲಿದೆ ನೋಡಿ (ಡಿಸ್ಟರ್ಬಿಂಗ್‌ ಸಿನಿಮಾ, ಮಕ್ಕಳಿಗಲ್ಲ). ಅದಾದ ಮೇಲೆ ಇವನದ್ದೇ ಅಭಿನಯದ Biutiful (2010) (ಬ್ಯೂಟಿಫುಲ್‌ ಸ್ಪೆಲ್ಲಿಂಗ್‌ ಬರೆದು ಹುಡುಕಬೇಡಿ, ಈ ಸ್ಪೆಲ್ಲಿಂಗ್‌ ಫೊನೆಟಿಕ್‌ ಸೌಂಡ್‌ ಮೇಲೆ ಆಧಾರಿತವಾಗಿದೆ. ಹಾ, ಯುಟ್ಯೂಬ್‌ನಲ್ಲಿ ಸಿನಿಮಾ ಇದೆ ) ಈ ಸ್ಪ್ಯಾನಿಷ್‌ ಸಿನಿಮಾದಲ್ಲಿ ಇವನ ಪಾತ್ರ ಹೇಗೆಂದರೆ ಕರುಣಾರಸ ಉಕ್ಕಿ ಉಕ್ಕಿ ಹರಿಯಬೇಕು. ಮಾರಣಾಂತಿಕ ಖಾಯಿಲೆಗೆ ತುತ್ತಾಗಿರುವ ಸಿಂಗಲ್‌ ಫಾದರ್‌ ಒಬ್ಬ ಸಾಯುವ ಮೊದಲು ತನ್ನ ಜವಾಬ್ದಾರಿ ಮುಗಿಸಲು ಪ್ರಯತ್ನಿಸುವ ಕಥೆ ಹೊಂದಿರುವ ಈ ಚಿತ್ರ ಬಹಳ ಸಂಕಟ ಉಂಟು ಮಾಡುತ್ತದೆ. ಆಂಟನ್‌ ಪಾತ್ರದವನೇ ಈ ಪಾತ್ರ ಮಾಡಿದ್ದಾನೆಂದರೆ ನಂಬುವುದಕ್ಕೇ ಸಾಧ್ಯವಿಲ್ಲ. ಇವೆರಡು ಸಿನಿಮಾಗಳಲ್ಲಿ ಇವನ ನಟನೆ ನೋಡಿ ನಾನು ಫಿದಾ ಆಗಿಬಿಟ್ಟೆ. ಅಭಿನಯ ಎಂಬುದು ಎಂತಹ ಒಂದು ಅದ್ಭುತವಾದ ಕಲೆ ಎಂಬುದಕ್ಕೆ ಇವನ ಇವೆರಡು ಪಾತ್ರಗಳೇ ಸಾಕ್ಷಿ. ಈ ಸಿನಿಮಾಕ್ಕೂ ಅತ್ಯುತ್ತಮ ನಟ ಆಸ್ಕರ್‌ಗೆ ಈತ ನಾಮಿನೇಟ್‌ ಆಗಿದ್ದ. ಆದರೆ 2011ರ ಆ ಆಸ್ಕರ್‌ ಸಿಕ್ಕಿದ್ದು ʼದ ಕಿಂಗ್ಸ್‌ ಸ್ಪೀಚ್‌ʼ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಕಾಲಿನ್‌ ಫರ್ತ್‌ಗೆ, ಈ ಚಿತ್ರವೂ ಬಹಳ ಅಂದರೆ ಬಹಳ ಇಷ್ಟ ನನಗೆ)

ಅದಾದ ಮೇಲೆ ಬಾರ್ದೆಮ್‌ನ ಬೇರೆ ಸಿನಿಮಾಗಳನ್ನು ನೋಡಿದ್ದೇನೆ. ಅದ್ಭುತವಾಗಿ ನಟಿಸಿದ್ದಾನೆ. ಆದರೆ ಇವೆರಡು ಸಿನಿಮಾಗಳ ಅವನ ಪಾತ್ರಗಳು ನನ್ನ ಮೇಲೆ ಮಾಡಿರುವ ಪರಿಣಾಮ ಬಹಳ ಆಳವಾದದ್ದು. ಫೋಟೋ: ಮೊದಲು ಇರುವುದು ನೋ ಕಂಟ್ರಿ ಫಾರ್‌ ಓಲ್ಡ್‌ ಮೆನ್‌ ಚಿತ್ರದ್ದು, ಎರಡನೆಯದ್ದು Biutiful ಚಿತ್ರದ್ದು.P.S: ಹಾ ಈಗ ತಾನೇ ಸ್ನೇಹಿತರಾದ Rangaswamy N R Mookanahalli ಯವರು ಸ್ಪ್ಯಾನಿಷ್‌ ಭಾಷೆಯಲ್ಲಿ ಜ ಮಾತ್ರವಲ್ಲ ಡ ಉಚ್ಛಾರಣೆ ಕೂಡ ಇಲ್ಲ ಹಾಗಾಗಿ ಹಾವಿಯರ್ ಬಾರ್ದೆಮ್ ಅನ್ನಬೇಕು. ಮತ್ತು ಡಬಲ್‌ ಎಲ್‌ ಬಂದಾಗ ಅದನ್ನು ಯ ಎಂದು ಉಚ್ಛರಿಸಬೇಕು ಎಂದು ಹೇಳಿದರು. ಮತ್ತು ಹೆಸರುಗಳ ಉಚ್ಛಾರಣೆ ನಾವು ಮಾಡುವುದಕ್ಕಿಂತ ಭಿನ್ನವಾಗಿಯೇ ಇರುತ್ತದಂತೆ. ಧನ್ಯವಾದಗಳು ರಂಗಣ್ಣ, ಮಾಹಿತಿಗಾಗಿ. ಎಂದು ದೀಪಾ ಹಿರೇಗುತ್ತಿ ಬರೆದುಕೊಂಡಿದ್ದಾರೆ.

Whats_app_banner