ಕನ್ನಡ ಸುದ್ದಿ  /  Entertainment  /  Bollywood News Actress Rani Mukerji Opens Up About Miscarriage Rani Mukerji Reveals Personal Pain Mnk

‘7500 ಕೋಟಿ ಇದ್ರೂ ಉಪಯೋಗಕ್ಕೆ ಬರಲಿಲ್ಲ, ಇನ್ನೊಂದು ಮಗು ಬೇಕಂದ್ರೂ ದೇವ್ರು ಕರುಣಿಸಲಿಲ್ಲ!​’ ಗರ್ಭಪಾತದ ನೋವಲ್ಲಿ ರಾಣಿ ಮುಖರ್ಜಿ

ಬಾಲಿವುಡ್‌ ನಟಿ ರಾಣಿ ಮುಖರ್ಜಿ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಮಗಳಿಗೆ ಇನ್ನೊಬ್ಬ ತಂಗಿ ಅಥವಾ ತಮ್ಮನನ್ನು ಕೊಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಗರ್ಭಪಾತ ನಮ್ಮ ಕನಸನ್ನೇ ನುಚ್ಚು ನೂರು ಮಾಡಿತು ಎಂದು ಬಚ್ಚಿಟ್ಟ ರಹಸ್ಯವೊಂದನ್ನು ತೆರೆದಿಟ್ಟಿದ್ದಾರೆ.

‘7500 ಕೋಟಿ ಇದ್ರೂ ಉಪಯೋಗಕ್ಕೆ ಬರಲಿಲ್ಲ, ಇನ್ನೊಂದು ಮಗು ಬೇಕಂದ್ರೂ ದೇವ್ರು ಕರುಣಿಸಲಿಲ್ಲ!​’ ಗರ್ಭಪಾತದ ನೋವಲ್ಲಿ ರಾಣಿ ಮುಖರ್ಜಿ
‘7500 ಕೋಟಿ ಇದ್ರೂ ಉಪಯೋಗಕ್ಕೆ ಬರಲಿಲ್ಲ, ಇನ್ನೊಂದು ಮಗು ಬೇಕಂದ್ರೂ ದೇವ್ರು ಕರುಣಿಸಲಿಲ್ಲ!​’ ಗರ್ಭಪಾತದ ನೋವಲ್ಲಿ ರಾಣಿ ಮುಖರ್ಜಿ

Rani Mukerji About her Miscarriage: ಬಾಲಿವುಡ್‌ನ ಅತೀ ಶ್ರೀಮಂತ ಜೋಡಿ ಎಂದರೆ ಅದು ಆದಿತ್ಯಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಅವರದ್ದು. ಬರೋಬ್ಬರಿ 7500 ಕೋಟಿಯ ಆಸ್ತಿ ಈ ಜೋಡಿಯದ್ದು! ಬಾಲಿವುಡ್‌ನ ಬೇರಾವ ಸೆಲೆಬ್ರಿಟಿಗಳೂ ಇವರಷ್ಟು ಶ್ರೀಮಂತರಲ್ಲ. ಅಷ್ಟೊಂದು ಆಸ್ತಿ ಪಾಸ್ತಿ, ಹೂಡಿಕೆ ಹೊಂದಿದೆ ಈ ಜೋಡಿ. ಇತ್ತ ಬಾಲಿವುಡ್‌ ಚಿತ್ರರಂಗದಲ್ಲಿ ಇಂದಿಗೂ ಈ ನಟಿ ಬಿಜಿಯಾಗಿದ್ದಾರೆ. ವಯಸ್ಸು 46 ಆದರೂ ತಮ್ಮದೇ ಶೈಲಿಯ ಸಿನಿಮಾಗಳನ್ನು ನೋಡುಗರಿಗೆ ನೀಡುತ್ತಿದ್ದಾರೆ. ಹೀಗಿರುವ ರಾಣಿ ಮುಖರ್ಜಿ ಇದೀಗ ತಮ್ಮ ಜೀವನದ ನೋವಿನ ಕ್ಷಣವನ್ನು ತೆರೆದಿಟ್ಟಿದ್ದಾರೆ.

ರಾಣಿ ಮುಖರ್ಜಿ ದಶಕಗಳಿಂದ ಚಿತ್ರರಂಗವನ್ನು ಆಳುತ್ತಿದ್ದಾರೆ. 46ರ ಹರೆಯದಲ್ಲೂ ಅಂದವನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ನಡುವೆ ರಾಣಿ ಮುಖರ್ಜಿ ತಮ್ಮ ಜೀವನದಲ್ಲಿ ಎದುರಿಸಿದ ನೋವಿನ ವಿಚಾರವನ್ನು, ಎಲ್ಲೂ ಹೇಳದ ಒಂದಷ್ಟು ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಯಾಕಂದ್ರೆ ರಾಣಿ ಕೇಳಿದ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಅದೇನೆಂದರೆ, ಇನ್ನೊಂದು ಜೀವಕ್ಕೆ ಕಾದಿದ್ದ ದಿನಗಳಲ್ಲಿ ರಾಣಿ ಮುಖರ್ಜಿ ಗರ್ಭಪಾತದ ನೋವುಂಡಿದ್ದರು. ಏಳು ವರ್ಷ ಪ್ರಯತ್ನ ಪಟ್ಟರೂ ಮಗಳು ಆದಿರಾಗೆ ಒಡಹುಟ್ಟಿದವರನ್ನು ಕೊಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಗರ್ಭಪಾತದ ರಹಸ್ಯ ಬಿಚ್ಚಿಟ್ಟ ರಾಣಿ ಮುಖರ್ಜಿ

'ಗಲಾಟಾ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ರಾಣಿ, "ಹಲವು ವರ್ಷಗಳ ಹಿಂದೆ ಮಿಸ್‌ಕ್ಯಾರೇಜ್‌ಗೆ ಒಳಗಾಗಬೇಕಾಯಿತು. ಆವತ್ತಿನದು ನನ್ನ ಪಾಲಿಗೆ ತುಂಬಾ ಕಷ್ಟಕರ ಸಮಯವಾಗಿತ್ತು. ನಾನು ನನ್ನ ಎರಡನೇ ಮಗುವಿಗೆ ಏಳು ವರ್ಷಗಳ ಕಾಲ ನಿರಂತರವಾಗಿ ಪ್ರಯತ್ನಿಸಿದೆ. ನನ್ನ ಮಗಳಿಗೆ ಈಗ 8 ವರ್ಷ. ಅವಳು ಹುಟ್ಟಿದ ಕೂಡಲೇ ನಾನು ನನ್ನ ಎರಡನೇ ಮಗುವಿಗೆ ಪ್ರಯತ್ನಿಸಲು ಪ್ರಾರಂಭಿಸಿದೆ. ನಾನು ಪ್ರಯತ್ನಿಸುತ್ತಲೇ ಇದ್ದೆ. ಅಂತಿಮವಾಗಿ ಗರ್ಭಿಣಿಯೂ ಆದೆ. ಅದರ ಸಂಭ್ರಮವನ್ನೂ ಮಾಡಿದೆ. ಆದರೆ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಗರ್ಭಪಾತ ಘಟಿಸಿತು. ನಾನು ಮಗುವನ್ನು ಕಳೆದುಕೊಂಡೆ" ಎಂದಿದ್ದಾರೆ.

ಇನ್ನೂ ಆ ನೋವಿಂದ ಹೊರಬಂದಿಲ್ಲ ರಾಣಿ

ಅಂದಹಾಗೆ, ರಾಣಿ ಮುಖರ್ಜಿಗೆ ಈ ನೋವು ಕೋವಿಡ್ ಸಮಯದಲ್ಲಿ ಸಂಭವಿಸಿತ್ತು. ಜತೆಗೆ ವಯಸ್ಸೂ ಇದಕ್ಕೆ ಕಾರಣವಾಗಿತ್ತು ಎಂದಿದ್ದಾರವರು. ಈಗಲೂ ಆ ನೋವಿನಿಂದ ಸಂಪೂರ್ಣವಾಗಿ ರಾಣಿ ಚೇತರಿಕೆ ಕಂಡು ಹೊರಬಂದಿಲ್ಲ. ಅದರಿಂದ ಹೊರಬರಲು ಇನ್ನೂ ಸಮಯ ಬೇಕಿದೆ ಎಂದಿದ್ದಾರೆ. 'ನಿಜಕ್ಕೂ ಅಂದಿನ ಆ ಸಮಯ ನನಗೆ ಅಷ್ಟು ಸುಲಭದ್ದಾಗಿರಲಿಲ್ಲ. ನನ್ನ ಜೀವನದ ದೊಡ್ಡ ಅಗ್ನಿ ಪರೀಕ್ಷೆಯಂತಿತ್ತು. ಇದೀಗ ನಾನು ಇನ್ನೊಂದು ಮಗುವನ್ನು ಹೊಂದುವ ವಯಸ್ಸಿನಲ್ಲಿಲ್ಲ. ಇದು ನನಗೆ ದುಃಖ ತರಿಸಿದೆ. ನಾನು ಈಗ ನನ್ನ ಮಗಳಿಗೆ ಯಾವುದೇ ತಮ್ಮ ಅಥವಾ ತಂಗಿಯನ್ನು ನೀಡಲು ಸಾಧ್ಯವಿಲ್ಲ" ಎಂದು ಬೇಸರ ಹೊರಹಾಕಿದ್ದಾರೆ.

ಕೋಟಿ ಕೋಟಿ ಇದ್ದರೂ ಉಪಯೋಗಕ್ಕೆ ಬರಲಿಲ್ಲ..

ಗರ್ಭಪಾತದ ಬಗ್ಗೆ ಮಾತನಾಡಿದ ರಾಣಿ, 'ನನಗೆ ನಿಜವಾಗಿಯೂ ದುಃಖವಾಗಿದೆ. ವಿಷಾದವನ್ನು ಅನುಭವಿಸಿದ ನಂತರ, ನಮ್ಮಲ್ಲಿ ಏನಿದೆ ಮತ್ತು ನಮ್ಮಲ್ಲಿ ಇಲ್ಲದಿರುವುದಕ್ಕೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು. ನಮ್ಮ ಬಳಿ ಸಾವಿರಾರು ಕೋಟಿ ಆಸ್ತಿ ಎಲ್ಲವೂ ಇದ್ದರೂ, ನಮ್ಮ ಮಗಳಿಗೆ ಇನ್ನೊಬ್ಬ ಸಹೋದರ. ಸಹೋದರಿಯನ್ನು ನೀಡಲು ಸಾಧ್ಯವಾಗಲಿಲ್ಲ. ಈಗ ಅನಿಸುತ್ತಿದೆ, ನಿಮ್ಮಲ್ಲಿ ಏನಿರುತ್ತೋ ಅದರಲ್ಲಿಯೇ ತೃಪ್ತರಾಗಲು ನಾವು ಕಲಿಯಬೇಕು" ಎಂದಿದ್ದಾರೆ.

ಇನ್ನು ಯಶ್‌ ರಾಜ್‌ ಫಿಲಂಸ್‌ನ ಆದಿತ್ಯಾ ಚೋಪ್ರಾ ಜತೆಗೆ ಸುದೀರ್ಘ 5 ವರ್ಷಗಳ ಡೇಟಿಂಗ್‌ ಬಳಿಕ 2014ರ ಏಪ್ರಿಲ್‌ 10ರಂದು ಅಂದರೆ 36ನೇ ವಯಸ್ಸಿನಲ್ಲಿ ರಾಣಿ ಮುಖರ್ಜಿ ಅವರ ವಿವಾಹವಾಯ್ತು. ಕೇವಲ 20 ಜನರ ಸಮ್ಮುಖದಲ್ಲಿ ಖಾಸಗಿಯಾಗಿಯೇ ವಿವಾಹ ನೆರವೇರಿತ್ತು. 2015ರಲ್ಲಿ ಹೆಣ್ಣು ಮಗು ಅಧಿರಾಗೆ ಜನ್ಮ ನೀಡಿದರು ರಾಣಿ.