ಕನ್ನಡ ಸುದ್ದಿ  /  ಮನರಂಜನೆ  /  ‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ

‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ

ಸೋನಾಲಿ ಬೇಂದ್ರೆ ಒಂದು ಕಾಲದಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದವರು. ನೀಳ ಕಾಯದ ಈ ಚೆಲುವೆ ಒಂದೇ ಭಾಷೆಗೆ ಸೀಮಿತವಾಗದೆ ಹಿಂದಿ ಜತೆಗೆ ಸೌತ್‌ ಸಿನಿಮಾಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಈಗ 90ರ ಕಾಲಘಟ್ಟದ ನಿರ್ಮಾಪಕರ ಮನಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ
‘ನಿರ್ಮಾಪಕರಿಗೆ ನನ್ನ ಎದೆ ಸೀಳು ಕಾಣಬೇಕಿತ್ತು, ಸ್ಲಿಮ್‌ ಇದ್ದ ನನಗೆ ದಪ್ಪ ಮಾಡಲು ಸಿಕ್ಕಿದ್ದನ್ನೆಲ್ಲ ತಿನಿಸುತ್ತಿದ್ರು !’ ಸೋನಾಲಿ ಬೇಂದ್ರೆ

Sonali Bendre: ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿಯರ ಪೈಕಿ ಸೋನಾಲಿ ಬೇಂದ್ರೆ ಕೂಡ ಒಬ್ಬರು. ಬಾಲಿವುಡ್, ಮರಾಠಿ ಸಿನಿಮಾಗಳ ಜತೆಗೆ ದಕ್ಷಿಣದ ದಕ್ಷಿಣದಲ್ಲಿ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲೂ ಈ ನಟಿ ಮಿಂಚಿದ್ದಾರೆ. 90ರ ದಶಕದಲ್ಲಿ ಬಹುಭಾಷೆಗಳಲ್ಲಿ ನಟಿಸುತ್ತ ಸೈ ಎನಿಸಿಕೊಂಡಿದ್ದ ಸೋನಾಲಿ, ತಮ್ಮ ನೀಳ ಕಾಯದ ಅಂದ ಚೆಂದದ ಮೂಲಕವೂ ಎಲ್ಲರನ್ನು ಆಕರ್ಷಿಸಿದ್ದರು. ಸ್ಟಾರ್‌ ಹೀರೋಗಳಿಗೂ ನಾಯಕಿಯಾಗಿಯೂ ನಟಿಸಿದರು.

ಟ್ರೆಂಡಿಂಗ್​ ಸುದ್ದಿ

ಅದಾಗಲೇ ಹಿಂದಿ ಮತ್ತು ದಕ್ಷಿಣದ ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಹೆಸರು ಮಾಡಿದ್ದ ಸೋನಾಲಿ, 2000ರಲ್ಲಿ ಕನ್ನಡಕ್ಕೂ ಆಗಮಿಸಿದರು. ಸೈಕಲಾಜಿಕಲ್‌ ಥ್ರಿಲ್ಲರ್‌ ಪ್ರೀತ್ಸೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಪರಿಚಿತರಾದರು. ಶಿವರಾಜ್‌ಕುಮಾರ್‌ ಮತ್ತು ಉಪೇಂದ್ರ ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದರೆ, ಈ ಇಬ್ಬರಿಗೂ ನಾಯಕಿಯಾಗಿದ್ದರು ಸೋನಾಲಿ. ಕಿರಣ್‌ ಎಂಬ ಪಾತ್ರದ ಮೂಲಕವೇ ಗಮನ ಸೆಳೆದು, ಯಾರಿಟ್ಟರಿ ಚುಕ್ಕಿ ಹಾಡಿನಿಂದಲೂ ಈಗಲೂ ಕನ್ನಡಿಗರ ನೆನಪಿನಲ್ಲಿದ್ದಾರೆ.

ಈ ಸಿನಿಮಾಗಳ ಜತೆಗೆ ತೆಲುಗಿನಲ್ಲಿ ಮಹೇಶ್‌ ಬಾಬು ಜತೆಗೆ ಮುರಾರಿ ಸಿನಿಮಾದಲ್ಲೂ ನಟಿಸಿದರು. ಆ ಚಿತ್ರ ಸೂಪರ್ ಹಿಟ್ ಆಯಿತು. ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿಯೂ ಈ ಸಿನಿಮಾ ಒಂದು ಮೈಲಿಗಲ್ಲಾಯಿತು. ಸೋನಾಲಿ ಬೇಂದ್ರೆ ಈ ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ನಂತರ ಇಂದ್ರ ಚಿತ್ರದಲ್ಲಿ ಚಿರಂಜೀವಿ ಎದುರು ಕಾಣಿಸಿಕೊಂಡರು. ಅದಾದ ಬಳಿಕ ಖಡ್ಗಂ ಚಿತ್ರದಲ್ಲೂ ನಟಿಸಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ಕನ್ನಡಕ್ಕೆ ಮಾತ್ರ ಮತ್ತೆ ಮರಳಲಿಲ್ಲ. ಪ್ರೀತ್ಸೆ ಚಿತ್ರವೇ ಕೊನೇ!

ದಿ ಬ್ರೋಕನ್‌ ನ್ಯೂಸ್‌ 2 ಸಿರೀಸ್‌ ರಿಲೀಸ್‌

ಈಗ ವಿಷಯಕ್ಕೆ ಬರುವುದಾದರೆ, ಇದೇ ಸೋನಾಲಿ ಬೇಂದ್ರೆ ಸೌತ್‌ ಸಿನಿಮಾ ನಿರ್ಮಾಪಕರ ಮನಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ದಿ ಬ್ರೋಕನ್‌ ನ್ಯೂಸ್‌ 2 ಹೆಸರಿನ ವೆಬ್‌ಸಿರೀಸ್‌ ಮೇ 3ರಿಂದ ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿರೀಸ್‌ನ ಪ್ರಚಾರದ ವೇಳೆ ನಟಿ ಸೋನಾಲಿ, 90ರ ಕಾಲಘಟ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್‌ ನಟಿ ಪಟ್ಟ ಪಡೆದಿದ್ದ ಸೋನಾಲಿಗೆ ನಿರ್ಮಾಪಕರು ವಿಶೇಷ ಬೇಡಿಕೆ ಇಟ್ಟಿದ್ದರಂತೆ. ನಮ್ಮ ಸಿನಿಮಾಕ್ಕೆ ತೆಳ್ಳನೆಯ ನಾಯಕಿಗಿಂತ, ಕೊಂಚ ದಪ್ಪ ಇರುವ ನಟಿಯೇ ಸೂಟ್‌ ಆಗ್ತಾರೆ. ನೀವ್ಯಾಕೆ ದಪ್ಪ ಆಗಬಾರದು? ಎಂದಿದ್ದರಂತೆ, ಅದನ್ನು ಸ್ವತಃ ಸೋನಾಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನಿರ್ಮಾಪಕರ ಆಸೆಯೇ ಬೇರೆ..

“ನಾನು ಸಿನಿಮಾ ಇಂಡಸ್ಟ್ರಿಗೆ ಬಂದಾಗ ಹೀರೋಯಿನ್‌ಗಳು ತೆಳ್ಳಗೆ ಇರುತ್ತಿರಲಿಲ್ಲ. ಕೊಂಚ ದಪ್ಪಗೇ ಇರುತ್ತಿದ್ದರು. ಅದರಲ್ಲೂ ನಾನು ತುಂಬ ತೆಳ್ಳಗಿದ್ದೆ. ಆಗ ಪ್ರತಿ ನಿರ್ಮಾಪಕರು ನನ್ನನ್ನು ದಪ್ಪಗಾಗುವಂತೆ ದುಂಬಾಲು ಬಿದ್ದ ಸಾಕಷ್ಟು ಉದಾಹರಣೆಗಳಿವೆ. ಅವಳು ತುಂಬ ತೆಳ್ಳಗಿದ್ದಾಳೆ, ಅವರಿಗೆ ಚೆನ್ನಾಗಿ ತಿನಿಸಿ ಎನ್ನುತ್ತಿದ್ದರು. ಅವರು ಹಾಗೆ ಮಾಡುತ್ತಿದ್ದಿದ್ದಕ್ಕೆ ಕಾರಣವೂ ಇದೆ. ಅವರಿಗೆ ತೆರೆಮೇಲೆ ನಟಿಯರ ಎದೆ ಸೀಳು ಕಾಣಬೇಕು, ಕರ್ಲಿ ಹೇರ್‌ ಇರಬೇಕು. ಅದು ನಿರ್ಮಾಪಕರ ಬಯಕೆ. ಆದರೆ, ನಾನು ಮಾತ್ರ ಅವರು ಹೇಳಿದಂತೆ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ. 

IPL_Entry_Point