ಕನ್ನಡ ಸುದ್ದಿ  /  Entertainment  /  Bollywood News Aishwarya Rai Latest News Emraan Hashmi Calling Aishwarya Rai Plastic Rahul Gandhi Called Dancer Mnk

Aishwarya Rai: ಐಶ್ವರ್ಯಾ ರೈ ಮೇಲೇಕೆ ಎಲ್ಲರ ಕಣ್ಣು? ಕುಣಿಯೋಳು ಅಂದ್ರು ರಾಹುಲ್ ಗಾಂಧಿ, ಪ್ಲಾಸ್ಟಿಕ್ ಎಂದ್ರು ಕಿಸ್ಸಿಂಗ್ ಸ್ಟಾರ್!

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಆಡಿದ ಒಂದೇ ಒಂದು ಮಾತು, ತೀವ್ರ ಟೀಕೆಗೆ ಗುರಿಯಾಗಿತ್ತು. ಐಶ್ವರ್ಯಾ ರೈ, ಎಷ್ಟೇ ಆದ್ರೂ ಅವಳು ಕುಣಿಯುವವಳು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು. ಈಗ ಇದೇ ಐಶ್ವರ್ಯಾ ರೈ ಬಗ್ಗೆ ಬಾಲಿವುಡ್‌ನ ನಟನೂ ಕಾಮೆಂಟ್‌ ಮಾಡಿದ್ದಾರೆ.

Aishwarya Rai: ಎಲ್ಲರ ಕಣ್ಣು ಐಶ್ವರ್ಯಾ ರೈ ಮೇಲೆ, ಕುಣಿಯೋಳು ಅಂದ್ರು ರಾಹುಲ್ ಗಾಂಧಿ, ಪ್ಲಾಸ್ಟಿಕ್ ಎಂದ್ರು ಕಿಸ್ಸಿಂಗ್ ಸ್ಟಾರ್!
Aishwarya Rai: ಎಲ್ಲರ ಕಣ್ಣು ಐಶ್ವರ್ಯಾ ರೈ ಮೇಲೆ, ಕುಣಿಯೋಳು ಅಂದ್ರು ರಾಹುಲ್ ಗಾಂಧಿ, ಪ್ಲಾಸ್ಟಿಕ್ ಎಂದ್ರು ಕಿಸ್ಸಿಂಗ್ ಸ್ಟಾರ್!

Aishwarya Rai: ಕಳೆದ ಮೂರ್ನಾಲ್ಕು ದಿನಗಳಿಂದ ಬಾಲಿವುಡ್‌ ನಟಿ ಐಶ್ವರ್ಯಾ ರೈ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ರೈ ಬಗ್ಗೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಆಡಿದ ಒಂದೇ ಒಂದು ಮಾತು, ತೀವ್ರ ಟೀಕೆಗೆ ಗುರಿಯಾಗಿತ್ತು. ಎಷ್ಟೇ ಆದ್ರೂ ಅವಳು ಕುಣಿಯುವವಳು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು. ಹೀಗೆ ಹೇಳಿದ್ದೇ ತಡ ರಾಹುಲ್‌ ಗಾಂಧಿ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಈಗ ಇದೇ ಐಶ್ವರ್ಯಾ ರೈ ಬಗ್ಗೆ ಬಾಲಿವುಡ್‌ನ ನಟನೂ ಕಾಮೆಂಟ್‌ ಮಾಡಿದ್ದಾರೆ.

ಐಶ್ವರ್ಯಾ ರೈ ಪ್ಲಾಸಿಕ್‌ ಇದ್ದಂತೆ..

ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಕಿಸ್ಸಿಂಗ್‌ ಸ್ಟಾರ್‌ ಎಂದೇ ಕರೆಸಿಕೊಳ್ಳುತ್ತಿದ್ದ ನಟ ಇಮ್ರಾನ್‌ ಹಶ್ಮಿ ಇದೀಗ ಇದೇ ಐಶ್ವರ್ಯಾ ರೈ ವಿಚಾರವಾಗಿ ಮತ್ತ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಇಮ್ರಾನ್‌ ಹಶ್ಮಿ, ಇತ್ತೀಚೆಗಷ್ಟೇ ಕಾಫಿ ವಿಥ್‌ ಕರನ್‌ ಸೀಸನ್‌ 8ರಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ವೇಳೆ, ಈ ಹಿಂದೆ ಸೀಸನ್‌ 4ರಲ್ಲಿ ಇದೇ ಶೋನಲ್ಲಿ ಭಾಗವಹಿಸಿದ್ದಾಗ ರ್ಯಾಪಿಡ್‌ ಫೈರ್‌ನಲ್ಲಿ ಐಶ್ವರ್ಯಾ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದರು. ನೀವು ಬಾಲಿವುಡ್‌ನಲ್ಲಿ ಯಾರನ್ನು ಪ್ಲಾಸ್ಟಿಕ್‌ಗೆ ಹೋಲಿಸುತ್ತೀರಿ ಎಂದಿದ್ದರು. ಅದಕ್ಕೆ ಉತ್ತರಿಸಿದ್ದ ಇಮ್ರಾನ್‌ ಹಶ್ಮಿ ಐಶ್ವರ್ಯಾ ಹೆಸರು ಹೇಳಿದ್ದರು. ಶೋ ಬಳಿಕ ಆ ಒಂದು ಕಾಮೆಂಟ್‌ನಿಂದ ಸಾಕಷ್ಟು ಟೀಕೆ ಎದುರಿಸಿದ್ದೆ ಎಂದು, ಇದೀಗ 8ನೇ ಸೀಸನ್‌ನಲ್ಲಿ ನೆನಪು ಮಾಡಿಕೊಂಡಿದ್ದಾರೆ.

ರಾಹುಲ್‌ ಗಾಂಧಿ ಬಾಯಲ್ಲೂ ನಲಿದ ಐಶ್ವರ್ಯಾ

ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ವಿರುದ್ಧ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಬೆನ್ನಲ್ಲೇ, ಯಶಸ್ವಿ ಮಹಿಳೆಯರ ವಿರುದ್ಧ ರಾಹುಲ್ ಗಾಂಧಿಗೆ ಕೆಟ್ಟದಾಗಿ ಮಾತನಾಡುವ ಗೀಳಿದೆ. ಈ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈ ಕೂಡಲೇ ಕ್ಷಮೆಯಾಚಿಸುವಂತೆಯೂ ಹೇಳಿತ್ತು.

ರಾಹುಲ್‌ ಗಾಂಧಿ ಹೇಳಿಕೆ ಏನಾಗಿತ್ತು?

ರಾಮಮಂದಿರ ಶಂಕುಸ್ಥಾಪನೆ ವಿಚಾರವಾಗಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಸಿನಿಮಾ ತಾರೆಯರು ಮತ್ತು ಕೋಟ್ಯಾಧಿಪತಿಗಳಷ್ಟೇ ಭಾಗವಹಿಸಿದ್ದರು. ಆದರೆ ಹಿಂದುಳಿದ ವರ್ಗದವರು, ದಲಿತರು ಮತ್ತು ಬುಡಕಟ್ಟು ಜನಾಂಗದವರು ದೇಶದ ಒಟ್ಟು ಜನಸಂಖ್ಯೆಯ 73%ರಷ್ಟಿದ್ದರೂ ಸಹ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಟಿವಿಯಲ್ಲಿ ಏನೇ ಆದರೂ ಮೋದಿಯನ್ನು ತೋರಿಸುತ್ತಾರೆ. ಅದನ್ನು ಬಿಟ್ಟರೆ, ಐಶ್ವರ್ಯಾ ರೈ ಕುಣಿಯುವುದನ್ನು ತೋರಿಸುತ್ತಾರೆ. ಇಲ್ಲವೆ ಅಮಿತಾಬ್‌ ಬಚ್ಚನ್‌ ಅವರನ್ನು ತೋರಿಸುತ್ತಾರೆ. ಆಕೆ ಎಷ್ಟೋ ಆದ್ರೂ ಕುಣಿಯೋಳಲ್ಲವೇ" ಎಂದಿದ್ದರು ರಾಹುಲ್‌ ಗಾಂಧಿ.

ರಾಜ್ಯ ಬಿಜೆಪಿಯಿಂದಲೂ ಖಂಡನೆ

ಈ ಬಗ್ಗೆ ಕರ್ನಾಟಕ ಬಿಜೆಪಿಯೂ ಸೋಷಿಯಲ್‌ ಮೀಡಿಯಾ Xನಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು. "ಭಾರತೀಯರಿಂದ ನಿರಂತರ ತಿರಸ್ಕಾರಕ್ಕೆ ಒಳಗಾಗಿ ಹತಾಶರಾಗಿರುವ ರಾಹುಲ್ ಗಾಂಧಿ ಅವರು ಭಾರತದ ಹೆಮ್ಮೆ ಐಶ್ವರ್ಯಾ ರೈ ಅವರನ್ನು ಅವಹೇಳನೆ ಮಾಡುವ ಮೂಲಕ ಮತ್ತಷ್ಟು ಕೆಳಕ್ಕೆ ಇಳಿದಿದ್ದಾರೆ. ಶೂನ್ಯ ಸಾಧನೆಯ ನಾಲ್ಕನೇ ಪೀಳಿಗೆಯ ವಂಶೀಯ, ರಾಹುಲ್ ಗಾಂಧಿ ಅವರ ಇಡೀ ಕುಟುಂಬಕ್ಕಿಂತಲೂ ಭಾರತಕ್ಕೆ ಮತ್ತಷ್ಟು ಘನತೆ ತಂದ ಐಶ್ವರ್ಯಾ ರೈ ವಿರುದ್ಧ ನಿಂದನೆ ಮಾಡುತ್ತಾರೆ. ಸಿದ್ದರಾಮಯ್ಯ ಅವರೇ, ನಿಮ್ಮ ಬಾಸ್ ಕನ್ನಡಿಗರನ್ನು ಅವಮಾನಿಸುವುದನ್ನು ಮುಂದುವರಿಸಿದ್ದಾರೆ. ನೀವು ಪ್ರತಿಪಾದಿಸಿಕೊಂಡಿರುವ ನಿಮ್ಮ ಕನ್ನಡದ ಹೆಮ್ಮೆಯನ್ನು ಎತ್ತಿ ಹಿಡಿಯುತ್ತೀರಾ ಮತ್ತು ಅಂತಹ ಅಗೌರವದ ವಿರುದ್ಧ ಮಾತನಾಡುತ್ತೀರಾ? ಅಥವಾ ನಿಮ್ಮ ಸಿಎಂ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಲು ಮೌನವಾಗಿ ಇರುತ್ತೀರಾ?" ಎಂದಿತ್ತು.

IPL_Entry_Point