ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ-bollywood news aishwarya rai reaction for reporter question about aaradhya at iifa utsavam 2024 ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ

ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ

ಮಗಳು ಯಾವಾಗಲೂ ಏಕೆ ನಿಮ್ಮ ಜೊತೆ ಇರುತ್ತಾಳೆ ಎಂದು ರಿಪೋರ್ಟರ್‌ ಕೇಳಿದ ಪ್ರಶ್ನೆಗೆ, ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲೇ ಇರ್ತಾಳೆ ಎಂದು ಐಶ್ವರ್ಯ ರೈ ಉತ್ತರಿಸಿದ್ದಾರೆ. ದುಬೈ ಸೈಮಾ ಅವಾರ್ಡ್‌ ಕಾರ್ಯಕ್ರಮದ ನಂತರ ಐಶ್ವರ್ಯ , ಮಗಳು ಆರಾಧ್ಯ ಜೊತೆ ಅಬುದಾಭಿಯಲ್ಲಿ ನಡೆದ IIFA ಉತ್ಸವಮ್‌ 2024 ಕಾರ್ಯಕ್ರಮಕ್ಕೆ ಮಗಳನ್ನು ಕರೆದೊಯ್ದಿದ್ದಾರೆ.

ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲಿ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ
ಅವಳು ನನ್ನ ಮಗಳು, ಅದಕ್ಕೆ ಸದಾ ನನ್ನ ಜೊತೆಯಲ್ಲಿ ಇರ್ತಾಳೆ; ಆರಾಧ್ಯ ಕುರಿತು ರಿಪೋರ್ಟರ್‌ ಪ್ರಶ್ನೆಗೆ ಐಶ್ವರ್ಯ ರೈ ಉತ್ತರ

ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ಇಂದಿಗೂ ಬೇಡಿಕೆಯಲ್ಲಿರುವ ನಟಿ, ಸಿನಿಮಾಗಳ ಜೊತೆ ಜೊತೆಗೆ ಫ್ಯಾಷನ್‌ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಇಂದು ಬೆಳಗ್ಗೆ ಮುಂಬೈನಲ್ಲಿದ್ದರೆ ಮಧ್ಯಾಹ್ನ ಮತ್ತೊಂದು ದೇಶದಲ್ಲಿ, ಸಂಜೆ ಇನ್ನೊಂದು ಕಡೆ. ಹೀಗೆ ಸದಾ ದೇಶ ಪರ್ಯಟನೆ ಮಾಡುತ್ತಿದ್ದಾರೆ.

ಮಗಳ ವಿಚಾರಕ್ಕೆ ಟ್ರೋಲ್‌ ಆಗುತ್ತಲೇ ಇರುವ ಮಾಜಿ ವಿಶ್ವ ಸುಂದರಿ

ಐಶ್ವರ್ಯಗೆ ಮುದ್ದಾದ ಮಗಳಿರುವುದು ಎಲ್ಲರಿಗೂ ತಿಳಿದ ವಿಚಾರ. ಆರಾಧ್ಯ ಬಚ್ಚನ್‌ ಈಗ ಬಹಳ ಬದಲಾಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಕ್ಯಾಮರಾ ಕಣ್ಣಿನಿಂದ ಮರೆ ಮಾಚುತ್ತಾರೆ. ಆದರೆ ಐಶ್ವರ್ಯ ರೈ ಮಾತ್ರ ಆ ರೀತಿ ಅಲ್ಲ. ಅವರು ಎಲ್ಲೇ ಹೋಗಲಿ , ಎಲ್ಲೇ ಬರಲಿ ಮಗಳು ಆರಾಧ್ಯ ಜೊತೆ ಇದ್ದೇ ಇರುತ್ತಾಳೆ. ಆರಾಧ್ಯ ಕೂಡಾ ಅಮ್ಮನನ್ನು ಬಿಟ್ಟಿರಲಾಗಂತೆ ಆಕೆಯ ಕೈ ಹಿಡಿದು ಜೊತೆಯಲ್ಲೇ ಹೋಗಿ ಬರುತ್ತಾಳೆ. ಇದೇ ವಿಚಾರಕ್ಕೆ ಐಶ್ವರ್ಯ ಬಹಳ ಟ್ರೋಲ್‌ ಆಗುತ್ತಲೇ ಇದ್ದಾರೆ. ಮೊದಲಾದರೂ ಆರಾಧ್ಯ ಪುಟ್ಟ ಕಂದ ಹಾಗಾಗಿ ಜೊತೆಯಲ್ಲಿ ಇದ್ದರೆ ಸರಿ. ಆದರೆ ಈಗ ಮಗಳು ಬೆಳೆದಿದ್ದಾಳೆ. ಅವಳಿಗೆ ಈಗ ವಿದ್ಯಾಭ್ಯಾಸ ಬಹಳ ಅಗತ್ಯ. ಮಗುವಿಗೆ ಓದುವುದು, ಬರೆಯುವುದು ಏನೋ ಇರುವುದಿಲ್ಲವೇ. ಆರಾಧ್ಯ ಹೀಗೆ ಸದಾ ಅಮ್ಮನ ಜೊತೆ ವಿದೇಶಗಳಿಗೆ ಹೋಗಿ ಬರುತ್ತಿದ್ದರೆ ವಿದ್ಯಾಭ್ಯಾಸದ ಕಥೆ ಏನು ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

IIFA ಉತ್ಸವಮ್‌ ಕಾರ್ಯಕ್ರಮಕ್ಕೂ ಮಗಳನ್ನು ಕರೆದೊಯ್ದ ಐಶ್ಚರ್ಯ ರೈ

ಇತ್ತೀಚೆಗೆ ಸ್ಯಾಂಡಲ್‌ವುಡ್‌ ನಟಿ ಮಾಳವಿಕಾ ಅವಿನಾಶ್‌ ಕೂಡಾ ಇದೇ ಪ್ರಶ್ನೆ ಕೇಳಿದ್ದರು. ಮಕ್ಕಳನ್ನು ಹ್ಯಾಂಡ್‌ಬ್ಯಾಗ್‌ನಂತೆ ಎಲ್ಲಿ ಹೋದರೂ ಕರೆದೊಯ್ಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು. ಆದರೆ ಐಶ್ವರ್ಯ ಮಾತ್ರ ಯಾರ ಪ್ರಶ್ನೆಗೂ, ಯಾರ ಮಾತಿಗೂ ತಲೆ ಕೆಡಿಸಿಕೊಂಡವರಂತೆ ಕಾಣುತ್ತಿಲ್ಲ. ಇತ್ತೀಚೆಗೆ ದುಬೈ ಸೈಮಾ ಅವಾರ್ಡ್‌ ಕಾರ್ಯಕ್ರಮಕ್ಕೆ ಮಗಳನ್ನು ಕರೆದೊಯ್ದಿದ್ದ ಐಶ್ವರ್ಯ ರೈ ಇಂದು ಅಬುಧಾಬಿಯಲ್ಲಿ ನಡೆದ IIFA ಉತ್ಸವಮ್‌ 2024 ಕಾರ್ಯಕ್ರಮಕ್ಕೆ ಮಗಳನ್ನು ಕರೆದೊಯ್ದಿದ್ದಾರೆ.

ಅವಳು ನನ್ನ ಮಗಳು, ಅದಕ್ಕೆ ಯಾವಾಗಲೂ ನನ್ನ ಜೊತೆಯಲ್ಲೇ ಇರ್ತಾಳೆ

IIFA ಕಾರ್ಯಕ್ರಮದಲ್ಲಿ ಐಶ್ವರ್ಯ ರೈಗೆ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಿದೆ. ನಿಮ್ಮ ಮಗಳು ಆರಾಧ್ಯರನ್ನು ಯಾವಾಗಲೂ ಏಕೆ ಜೊತೆಗೆ ಕರೆದೊಯ್ಯುತ್ತೀರ ಎಂದು ಪತ್ರಕರ್ತೆಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸುವ ಐಶ್ವರ್ಯ ಅವಳು ನನ್ನ ಮಗಳು ಅದಕ್ಕೆ ಸದಾ ನನ್ನ ಜೊತೆ ಇರುತ್ತಾಳೆ ಎನ್ನುತ್ತಾ ಮುಂದಿನ ಪ್ರಶ್ನೆಗೂ ಕಾಯದೆ ಅಲ್ಲಿಂದ ಹೊರಟಿದ್ದಾರೆ. ಆರಾಧ್ಯ, ಇದಕ್ಕೂ ನನಗೂ ಸಂಬಂಧ ಇಲ್ಲ ಎನ್ನುವಂತೆ ನಗು ನಗುತ್ತಲೇ ಆ ಪತ್ರಕರ್ತೆಯನ್ನೂ ನೋಡುತ್ತಾ ಅಮ್ಮನ ಕೈ ಹಿಡಿದು ಜೊತೆಗೆ ಹೆಜ್ಜೆ ಹಾಕಿದ್ದಾಳೆ.

mysore-dasara_Entry_Point