Casting couch: ಅನಿಮಲ್‌ ನಟನಿಗೂ ಕಾಡಿತ್ತು ಕಾಸ್ಟಿಂಗ್‌ ಕೌಚ್‌, ನಟನೆಗೆ ಅವಕಾಶ ಬೇಕಿದ್ರೆ ಲೈಂಗಿಕ ಸುಖ ನೀಡೆಂದು ಬೆದರಿಸಿದ್ರು ಆ ವ್ಯಕ್ತಿ
ಕನ್ನಡ ಸುದ್ದಿ  /  ಮನರಂಜನೆ  /  Casting Couch: ಅನಿಮಲ್‌ ನಟನಿಗೂ ಕಾಡಿತ್ತು ಕಾಸ್ಟಿಂಗ್‌ ಕೌಚ್‌, ನಟನೆಗೆ ಅವಕಾಶ ಬೇಕಿದ್ರೆ ಲೈಂಗಿಕ ಸುಖ ನೀಡೆಂದು ಬೆದರಿಸಿದ್ರು ಆ ವ್ಯಕ್ತಿ

Casting couch: ಅನಿಮಲ್‌ ನಟನಿಗೂ ಕಾಡಿತ್ತು ಕಾಸ್ಟಿಂಗ್‌ ಕೌಚ್‌, ನಟನೆಗೆ ಅವಕಾಶ ಬೇಕಿದ್ರೆ ಲೈಂಗಿಕ ಸುಖ ನೀಡೆಂದು ಬೆದರಿಸಿದ್ರು ಆ ವ್ಯಕ್ತಿ

Casting couch in Bollywood: ನಟ ಸಿದ್ಧಾಂತ್ ಕಾರ್ಣಿಕ್‌ ಅನಿಮಲ್ ಮತ್ತು ಆದಿಪುರುಷ್ ನಂತಹ ಚಿತ್ರಗಳಲ್ಲಿ ಮತ್ತು ಮೇಡ್ ಇನ್ ಹೆವನ್ ಸೀಸನ್ 2 ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಇವರು ತನ್ನ ಆರಂಭಿಕ ವೃತ್ತಿಜೀವನದ ಕಾಸ್ಟಿಂಗ್‌ ಕೌಚ್‌ ಅನುಭವಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

Casting couch: ಅನಿಮಲ್‌ ನಟನಿಗೂ ಕಾಡಿತ್ತು ಕಾಸ್ಟಿಂಗ್‌ ಕೌಚ್‌
Casting couch: ಅನಿಮಲ್‌ ನಟನಿಗೂ ಕಾಡಿತ್ತು ಕಾಸ್ಟಿಂಗ್‌ ಕೌಚ್‌

ಬೆಂಗಳೂರು: ನಟ ಸಿದ್ಧಾಂತ್ ಕಾರ್ಣಿಕ್‌ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಲು ಸುಮಾರು ಎರಡು ದಶಕಗಳು ಬೇಕಾಯಿತು ಎಂದು ಹೇಳಿರುವ ಅವರಿಗೆ ಈಗ 41 ವರ್ಷ ವಯಸ್ಸು. ವೃತ್ತಿಜೀವನದ ಆರಂಭದ ದಿನಗಳನ್ನು ಹೇಗೆ ಉತ್ತಮವಾಗಿ ನ್ಯಾವಿಗೇಟ್‌ ಮಾಡಬೇಕೆಂದು ಅರ್ಥಮಾಡಿಕೊಳ್ಳಲು ಇದು ನೆರವಾಯಿತು ಎಂದು ಅವರು ಹೇಳಿದ್ದಾರೆ. ಆರಂಭಿಕ ವೃತ್ತಿಜೀವನದಲ್ಲಿ ಎದುರಾಗುವ ಇಂತಹ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುವುದು ಅತ್ಯಂತ ಅಗತ್ಯ. ಇದು ನಿಮ್ಮ ಮುಂದಿನ ಭವಿಷ್ಯವನ್ನು ರೂಪಿಸುತ್ತದೆ ಎಂದು ಅವರು ಹೇಳಿದ್ದಾರೆ.

"ಆಗ ಇಸವಿ 2005. ನನಗೆ ಕೇವಲ 22 ವರ್ಷ ವಯಸ್ಸು. ಆಗಲೇ ನಾನು ನಟನಾ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದೆ. ನಾನು ಕೋ-ಆರ್ಡಿನೇಟರ್‌ನನ್ನು ಭೇಟಿಯಾದೆ. ಅವರು ನನ್ನ ಪೋರ್ಟ್‌ಫೋಲಿಯೊವನ್ನು ಪಡೆದರು. ರಾತ್ರಿ 10.30 ಗಂಟೆಗೆ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು. ವಿಚಿತ್ರವೆನಿಸಿತು. ಆಗ ನನಗೆ ಅಷ್ಟು ಅಂದಾಜಿರಲಿಲ್ಲ. ಅವರ ಮನೆಗೆ ಹೋಗಿ ಭೇಟಿಯಾದೆ" ಎಂದು ಕಾರ್ಣಿಕ್‌ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮುಂಬೈನ ಬೊರಿವಾಲಿ ಬಳಿ ಕೋ ಆರ್ಡಿನೇಟರ್‌ ಮನೆಯಿತ್ತು. ಅವರ ಮನೆಯ ಕೊಠಡಿಯಲ್ಲಿ ಕುಟುಂಬದ ಸದಸ್ಯರ ಫೋಟೋಗಳಿದ್ದವು. ಒಂದು ಫ್ಯಾಮಿಲಿ ಫೀಲ್‌ ಇತ್ತು. ಸುರಕ್ಷಿತ ವಾತಾವರಣದಂತೆ ಇತ್ತು. ಆದರೆ, ಏನೋ ಮಿಸ್‌ ಆಗಿತ್ತು, ಏನೋ ಆಫ್‌ ಆಗಿತ್ತು. ಎಲ್ಲೋ ಏನೋ ಸರಿಯಿಲ್ಲ ಎನ್ನುವಂತಹ ಫೀಲ್‌ ಅಲ್ಲಿತ್ತು. ಅಲ್ಲಿ ಅವರ ಮನೆಯಲ್ಲಿ ಕುಳಿತು ಮಾತನಾಡಿದೆವು. ಕೋ ಆರ್ಡಿನೇಟರ್‌ ಸಿನಿಮಾ ಉದ್ಯಮದ ನಿಯಮಗಳ ಕುರಿತು ಚರ್ಚೆ ಮಾಡಿದರು. ವೃತ್ತಿ ಅವಕಾಶಗಳಿಗಾಗಿ ರಾಜಿ ಮಾಡಿಕೊಳ್ಳುವ ಬಗ್ಗೆ ಸೂಕ್ಷ್ಮವಾಗಿ ಸುಳಿವು ನೀಡಿದರು. "ರಾಜಿ ಮಾಡಿಕೊಳ್ಳದೆ ಇದ್ದರೆ ತಬ್ ತಕ್ ಕಾಮ್ ನಹೀಂ ಆಯೇಗಾ" ಎಂದು ಹೇಳಿದರು. ಈ ಚರ್ಚೆ ಎಲ್ಲಿಗೆ ತಲುಪಲಿದೆ ಎಂದು ನನಗೆ ಅರಿವಾಯ್ತು. "ನಾನು ಆ ಸಮಯದಲ್ಲಿ ಚಿಕ್ಕವನಾಗಿದ್ದೆ. ಅಲ್ಲಿ ಕುಟುಂಬದ ಎಲ್ಲರ ಫೋಟೋಗಳಿದ್ದರೂ ಅಲ್ಲಿ ಇಂತಹ ಮಾತುಕತೆ ನಡೆಯಬಹುದು ಎಂದು ಊಹಿಸಿರಲಿಲ್ಲ" ಎಂದು ಕಾರ್ಣಿಕ್‌ ನೆನಪಿಸಿಕೊಳ್ಳುತ್ತಾರೆ.

"ನನಗೆ ಈ ರೀತಿಯ ಕೆಲಸದಲ್ಲಿ ಆಸಕ್ತಿ ಇಲ್ಲ. ವಿಶೇಷವಾಗಿ ಈ ವಿಧಾನಗಳ ಮೂಲಕ ಕರಿಯರ್‌ ರೂಪಿಸಲು ಉದ್ದೇಶಿಸಿಲ್ಲ ಎಂದು ಅವರಿಗೆ ಹೇಳಿದೆ. ನಾನು ಈ ರೀತಿ ನಿರಾಕರಿಸಿರುವುದು ಕೋ ಆರ್ಡಿನೇಟರ್‌ನನ್ನು ಕೋಪಗೊಳಿಸಿತ್ತು" ಎಂದು ಕಾರ್ಣಿಕ್‌ ಹೇಳಿದ್ದಾರೆ. ಅವರು ಕಾರ್ಣಿಕ್‌ ಅವರ ವೃತ್ತಿಜೀವನದ ಭವಿಷ್ಯವನ್ನು ಹಾಳು ಮಾಡುವ ಬೆದರಿಕೆ ಒಡ್ಡಿದ್ದರು. "ಆ ರಾತ್ರಿ ನಾನು ಒಪ್ಪಿಗೆ ನೀಡದೆ ಇದ್ದರೆ ನನ್ನ ಭವಿಷ್ಯ ಹಾಳು ಮಾಡುವ ಕುರಿತು ಹೆಚ್ಚು ಭರವಸೆ ಹೊಂದಿದ್ದರು. ನನಗೆ ಯಾವುದೇ ಕೆಲಸ ಸಿಗದಂತೆ ನೋಡಿಕೊಳ್ಳುತ್ತೇನೆ ಎಂದರು. ಅವರು ಜೋರಾಗಿ ವಾಗ್ದಾಳಿ ನಡೆಸಿದರು. ನಾನು ಒಪ್ಪಲಿಲ್ಲ. ನನಗೆ ಆಗ ಉದ್ಯಮದಲ್ಲಿ ಯಾರೂ ಇರಲಿಲ್ಲ. ವಿಶೇಷವಾದ ಮೆಂಟರ್‌ಗಳು ಇರಲಿಲ್ಲ. ಈ ಸಮಯದಲ್ಲಿ ಸ್ವಲ್ಪ ಆಘಾತವಾಗಿತ್ತು. ಆದರೆ, ಮೌಲ್ಯಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದೆಂದು ನನಗೆ ತಿಳಿದಿತ್ತು. ಸಂಭಾವ್ಯ ಹಿಂಸಾಚಾರಕ್ಕೆ ನಾನು ಹೆದರಲಿಲ್ಲ. ನಾನು ಒಂದು ನಿಲುವನ್ನು ತೆಗೆದುಕೊಂಡೆ. ಈ ರೀತಿಯಾಗಿ ಅವಕಾಶ ಪಡೆಯಬಾರದೆಂದು ದೃಢ ನಿರ್ಧಾರ ತೆಗೆದುಕೊಂಡೆ" ಎಂದು ಕಾರ್ಣಿಕ್‌ ಮಾಧ್ಯಮ ಸಂದರ್ಶನವೊಂದರಲ್ಲಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ದಿನಗಳು ಉರುಳಿದವು. ವರ್ಷಗಳು ಕಳೆದವು. ಕಾಲೇಜು ಕಾರ್ಯಕ್ರಮವೊಂದರಲ್ಲಿ ಆ ಕೋ ಆರ್ಡಿನೇಟರ್‌ ನನ್ನನ್ನು ಭೇಟಿಯಾಗಿದ್ದರು. ಅವರನ್ನು ಆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅವರು ಆಗ ನನ್ನನ್ನು ಅಭಿನಂದಿಸಿದ್ದರು. ಏಕೆಂದರೆ, ಆಗ ನನ್ನ ಕಾರ್ಯಕ್ರಮಗಳು, ನನ್ನ ಕರಿಯರ್‌ ಉತ್ತಮವಾಗಿತ್ತು" ಎಂದು ಕಾರ್ಣಿಕ್‌ ನೆನಪಿಸಿಕೊಂಡಿದ್ದಾರೆ. "ಇದರಿಂದ ಏನು ತಿಳಿದುಕೊಳ್ಳಬಹುದು. ಅವರು ಅತ್ಯಾಚಾರಿಗಳಲ್ಲ. ಅವರ ಮಾತುಗಳಿಗೆ ನೀವು ಬೆಂಬಲ ನೀಡಿದರೆ ಅವರು ಮುಂದುವರೆಯುತ್ತಾರೆ. ಅವರಿಗೆ ನೀವು ಅವಕಾಶ ನೀಡದೆ ಇದ್ದರೆ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಅವರಂತಹ ಅವಕಾಶವಾದಿಗಳು ಬದಲಾಗುವುದಿಲ್ಲ. ನಿಜವಾದ ಬದಲಾವಣೆಯಾಗಬೇಕಾದರೆ ಅವರು ಪ್ರತಿಕ್ರಿಯಿಸುವ ವಿಧಾನವನ್ನು ಬದಲಾಯಿಸಬೇಕಾಗಿದೆ. ಈಗ 20 ವರ್ಷಗಳ ನಂತರ ನಾನು ಇಂದು ಇಲ್ಲಿದ್ದೇನೆ. ನನ್ನ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ" ಎಂದು ಕಾರ್ಣಿಕ್‌ ಹೇಳಿದ್ದಾರೆ.

2023ರಲ್ಲಿ, ಕಾರ್ಣಿಕ್‌ ಅನಿಮಲ್ ಮತ್ತು ಆದಿಪುರುಷ್‌ನಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ವೆಬ್ ಸರಣಿ ಮೇಡ್ ಇನ್ ಹೆವನ್ ಸೀಸನ್ 2 ರ ಸಂಚಿಕೆಯಲ್ಲಿ ಕಾಣಿಸಿಕೊಂಡರು. ಕರಣ್ ವಾಹಿ, ಶ್ವೇತಾ ಗುಲಾಟಿ, ರಾಜ್ ಸಿಂಗ್ ಅರೋರಾ ಮತ್ತು ಪ್ರಿಯಾ ವಾಲ್ ಅವರೊಂದಿಗೆ 2004 ರಲ್ಲಿ ಹಿಟ್ ಟಿವಿ ಶೋ ರೀಮಿಕ್ಸ್ ಮೂಲಕ ಅವರ ಪ್ರಯಾಣ ಪ್ರಾರಂಭವಾಗಿತ್ತು.

ಕಾಸ್ಟಿಂಗ್ ಕೌಚ್ ಎಂದರೇನು?

ಕಾಸ್ಟಿಂಗ್‌ ಕೌಚ್‌ ಪದದ ಅರ್ಥ ಕಾಸ್ಟಿಂಗ್‌ ಆಫೀಸ್‌ನಲ್ಲಿ ಇರುವ ಮಂಚ ಎಂದಾಗಿದೆ. ಆದರೆ, ಇದು ಇನ್ನೊಂದು ಅರ್ಥವನ್ನು ಹೊಂದಿದ್ದು, ಅದೇ ಕಾರಣಕ್ಕೆ ಕುಖ್ಯಾತಿ ಪಡೆದಿದೆ. ಎಂಟರ್‌ಟೇನ್‌ಮೆಂಟ್‌ ವಿಭಾಗದಲ್ಲಿ (ಸಿನಿಮಾ, ಧಾರಾವಾಹಿ) ನಟನೆಯ ಅವಕಾಶಕ್ಕಾಗಿ ಬರುವ ನಟನಟಿಯರಲ್ಲಿ ಲೈಂಗಿಕ ಸುಖವನ್ನು ಬಯಸುವ ಅಭ್ಯಾಸವನ್ನು ತಿಳಿಸಲು ಸೂಚಕವಾಗಿ ಬಳಸುವ ಒಂದು ಪದ ಇದಾಗಿದೆ. ಪುರುಷ ಕಾಸ್ಟಿಂಗ್‌ ಡೈರೆಕ್ಟರ್‌ಗಳು ನಟಿಯರಲ್ಲಿ ಇಂತಹ ಬೇಡಿಕೆ ಇಡುತ್ತಾರೆ. ಇಲ್ಲಿ ಕಾಸ್ಟಿಂಗ್‌ ಡೈರೆಕ್ಟರ್‌ಗಳು ತನಗಾಗಿ ಮಾತ್ರವಲ್ಲದೆ ಇತರರಿಗಾಗಿಯೂ ಇಂತಹ ಬೇಡಿಕೆ ಇಡಬಹುದು. ಮಹಿಳಾ ಕಾಸ್ಟಿಂಗ್‌ ಡೈರೆಕ್ಟರ್‌ಗಳು ಯುವ ನಟರಲ್ಲಿ ಇಂತಹ ಲೈಂಗಿಕ ಸುಖದ ಬೇಡಿಕೆ ಇಡಬಹುದು. ಗೇ ಅಥವಾ ಲೆಸ್ಬಿಯನ್‌ ಬೇಡಿಕೆಯನ್ನೂ ಇಡಬಹುದು. ಒಟ್ಟಾರೆ, ಅವಕಾಶ ಹುಡುಕಿಕೊಂಡು ಬಂದವರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳಲು ಪ್ರಯತ್ನಿಸುವಂತಹ ಒಂದು ಕೆಟ್ಟ ಪ್ರವೃತಿ ಇದಾಗಿದೆ.

Whats_app_banner