ಕನ್ನಡ ಸುದ್ದಿ  /  ಮನರಂಜನೆ  /  Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಸ್ಯಾಂಡಲ್‌ವುಡ್‌ನಲ್ಲಿ ಕಾಸ್ಟಿಂಗ್‌ ಕೌಚ್‌ ವಿರುದ್ಧ ನಟಿಯೊಬ್ಬರು ಪೊಲೀಸ್‌ ದೂರು ನೀಡಿದ್ದಾರೆ. ಅಡಿಷನ್‌ಗೆ ಆಹ್ವಾನಿಸುವ ನೆಪದಲ್ಲಿ ನಟಿ ಅಮೂಲ್ಯ ಗೌಡರಿಗೆ ಸೂರ್ಯ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ
Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ

ಬೆಂಗಳೂರು: ಕನ್ನಡ ನಟಿ ಅಮೂಲ್ಯ ಗೌಡ ಕಾಸ್ಟಿಂಗ್‌ ಕೌಚ್‌ ವಿರುದ್ಧ ದೂರು ನೀಡಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನಿಸಿದ ಸೂರ್ಯ ಎಂಬಾತನ ವಿರುದ್ಧ ಬೆಂಗಳೂರು ಆರ್‌ಆರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಟಿವಿ9 ವರದಿ ಮಾಡಿದೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿರುವುದಾಗಿ ದೂರು ದಾಖಲಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಸೂರ್ಯ ಎಂಬಾತ ಸಿನಿಮಾ ಅಡಿಷನ್‌ ಹೆಸರಿನಲ್ಲಿ ವಾಟ್ಸಪ್‌ನಲ್ಲಿ ಕೆಟ್ಟದ್ದಾಗಿ ಸಂದೇಶ ಕಳುಹಿಸಿದ್ದಾನೆ. ತನ್ನ ವಾಟ್ಸಪ್‌ ಸ್ಟೇಟಸ್‌ಗೆ ಕೆಟ್ಟದ್ದಾಗಿ ಕಾಮೆಂಟ್‌ ಮಾಡಿದ್ದ. ಅದನ್ನು ಪ್ರಶ್ನಿಸಿದ್ದರೆ ಯಾವ ಪೊಲೀಸರಿಗೂ ಹೋಗಿ ಹೇಳು ಎಂದು ಬೈದಿದ್ದ. ಕಾಸ್ಟಿಂಗ್‌ ಡೈರೆಕ್ಟರ್‌ ಎಂದು ಪರಿಚಯಿಸಿಕೊಂಡು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ. ಈತನ ವಿರುದ್ಧ ದೂರು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.

ರಾತ್ರಿ ಇಡೀ ವಾಟ್ಸಪ್‌ನಲ್ಲಿ ಮೆಸೆಜ್‌ ಕಳುಹಿಸುತ್ತ. ಕಾಲ್‌ ಮಾಡುತ್ತ ಕಿರುಕುಳ ನೀಡಿದ್ದ ಈತನ ನಡೆಯಿಂದ ಬೇಸೆತ್ತ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಈತನನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಎಂದು ದೂರಿನಲ್ಲಿ ನಟಿ ಅಮೂಲ್ಯ ಗೌಡ ಮನವಿ ಮಾಡಿದ್ದಾನೆ. ವರದಿಗಳ ಪ್ರಕಾರ ಇಂದು (ಮೇ 6)ರಂದು ಈತನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಸುದ್ದಿಯನ್ನು ಹಿಂದೂಸ್ತಾನ್‌ ಟೈಮ್ಸ್‌ ಸ್ವತಂತ್ರವಾಗಿ ದೃಢೀಕರಿಸಿಲ್ಲ.

ಕಾಸ್ಟಿಂಗ್ ಕೌಚ್ ಎಂದರೇನು?

ಸಿನಿಮಾರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಎಂಬ ಪದ ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಕಾಸ್ಟಿಂಗ್‌ ಕೌಚ್‌ ಪದದ ನಿಜವಾದ ಅರ್ಥ ಕಾಸ್ಟಿಂಗ್‌ ಆಫೀಸ್‌ನಲ್ಲಿ ಇರುವ ಮಂಚ. ಮನರಂಜನಾ ಕ್ಷೇತ್ರದಲ್ಲಿ (ಸಿನಿಮಾ, ಧಾರಾವಾಹಿ) ನಟನೆಯ ಅವಕಾಶಕ್ಕಾಗಿ ಬರುವ ನಟನಟಿಯರಲ್ಲಿ ಲೈಂಗಿಕ ಸುಖವನ್ನು ಬಯಸುವ ಅಭ್ಯಾಸವನ್ನು ತಿಳಿಸಲು ಸೂಚಕವಾಗಿ ಕಾಸ್ಟಿಂಗ್‌ ಕೌಚ್‌ ಪದಗಳನ್ನು ಬಳಸಲಾಗುತ್ತದೆ. ಪುರುಷ ಕಾಸ್ಟಿಂಗ್‌ ಡೈರೆಕ್ಟರ್‌ಗಳು ನಟಿಯರಲ್ಲಿ ಇಂತಹ ಬೇಡಿಕೆ ಇಡುತ್ತಾರೆ. ಇಲ್ಲಿ ಕಾಸ್ಟಿಂಗ್‌ ಡೈರೆಕ್ಟರ್‌ಗಳು ತನಗಾಗಿ ಮಾತ್ರವಲ್ಲದೆ ಇತರರ ಪರವಾಗಿಯೂ ಇಂತಹ ಬೇಡಿಕೆ ಇಡಬಹುದು. ಇದೇ ರೀತಿ ಮಹಿಳಾ ಕಾಸ್ಟಿಂಗ್‌ ಡೈರೆಕ್ಟರ್‌ಗಳು ನಟರಲ್ಲಿ ಇಂತಹ ಲೈಂಗಿಕ ಸುಖದ ಬೇಡಿಕೆ ಇಡಬಹುದು.

ಕಾಸ್ಟಿಂಗ್‌ ಡೈರೆಕ್ಟರ್‌ ವೃತ್ತಿ

ಕಾಸ್ಟಿಂಗ್‌ ಡೈರೆಕ್ಟರ್‌ ಎನ್ನುವುದು ಒಂದು ವೃತ್ತಿ (Casting director). ಚಲನಚಿತ್ರ ಅಥವಾ ಟಿವಿ ಧಾರಾವಾಹಿಗಳಿಗೆ ನಟ/ನಟಿಯರನ್ನು ಹುಡುಕಾಟ ನಡೆಸುವ ಉದ್ದೇಶಕ್ಕಾಗಿ ನಿರ್ಮಾಣ ಸಂಸ್ಥೆಗಳು ಕಾಸ್ಟಿಂಗ್‌ ಡೈರೆಕ್ಟರ್‌ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಸಿನಿಮಾ ಅಥವಾ ಧಾರಾವಾಹಿಯ ಕತೆ, ಸಂಭಾಷಣೆಯನ್ನು ಓದಿ ಆ ಚಿತ್ರಕ್ಕೆ ಸೂಕ್ತವಾಗುವಂತಹ ನಟ, ನಟಿಯರನ್ನು ಹೊಂದಿಸುವುದು ಇವರ ಕೆಲಸ.

IPL_Entry_Point