ಕ್ರೇಜಿಸ್ಟಾರ್‌ ರವಿಚಂದ್ರನ್ ಜತೆ ನಟಿಸಿದ ಈ ನಟಿ ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್; ಒಟ್ಟು ಆಸ್ತಿ ಬರೋಬ್ಬರಿ 4600 ಕೋಟಿ!-bollywood news hurun rich list 2024 released richest heroine in india juhi chawla with net worth of 4600 crore rs mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕ್ರೇಜಿಸ್ಟಾರ್‌ ರವಿಚಂದ್ರನ್ ಜತೆ ನಟಿಸಿದ ಈ ನಟಿ ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್; ಒಟ್ಟು ಆಸ್ತಿ ಬರೋಬ್ಬರಿ 4600 ಕೋಟಿ!

ಕ್ರೇಜಿಸ್ಟಾರ್‌ ರವಿಚಂದ್ರನ್ ಜತೆ ನಟಿಸಿದ ಈ ನಟಿ ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್; ಒಟ್ಟು ಆಸ್ತಿ ಬರೋಬ್ಬರಿ 4600 ಕೋಟಿ!

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ವಿಶೇಷ ಮನ್ನಣೆ ಗಳಿಸಿದ ನಾಯಕಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಟಿ ಜೂಹಿ ಚಾವ್ಲಾ. ಇದೀಗ ಇದೇ ನಟಿ ಭಾರತದ ಶ್ರೀಮಂತ ನಟಿಯರ ಸಾಲಿನಲ್ಲಿ ಮೊದಲಿಗರು. ಇವರ ಒಟ್ಟು ಆಸ್ತಿ ಎಷ್ಟಿರಬಹುದು? ಆದಾಯದ ಮೂಲ ಯಾವುದು? ಇಲ್ಲಿದೆ ವಿವರ.

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ವಿಶೇಷ ಮನ್ನಣೆ ಗಳಿಸಿದ ನಾಯಕಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಟಿ ಜೂಹಿ ಚಾವ್ಲಾ. ಇದೀಗ ಇದೇ ನಟಿ ಶ್ರೀಮಂತ ನಟಿಯರ ಸಾಲಿನಲ್ಲಿ ಮೊದಲಿಗರು.
ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ವಿಶೇಷ ಮನ್ನಣೆ ಗಳಿಸಿದ ನಾಯಕಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಟಿ ಜೂಹಿ ಚಾವ್ಲಾ. ಇದೀಗ ಇದೇ ನಟಿ ಶ್ರೀಮಂತ ನಟಿಯರ ಸಾಲಿನಲ್ಲಿ ಮೊದಲಿಗರು.

Richest Heroine in India: ಭಾರತದ ಶ್ರೀಮಂತ ನಾಯಕಿ ಯಾರು? ಥಟ್‌ ಅಂತ ಈ ಪ್ರಶ್ನೆಗೆ ಉತ್ತರಿಸುವುದು ತುಸು ಕಷ್ಟ. ಸಹಜವಾಗಿ ಸದ್ಯದ ಟಾಪ್‌ ನಟಿಯರೇ ಎಲ್ಲರ ಕಣ್ಣಮುಂದೆ ಬಂದು ನಿಲ್ಲಬಹುದು. ಆದರೆ, ಅಚ್ಚರಿ ವಿಚಾರ ಏನೆಂದರೆ ನಟನೆಯಿಂದ ದೂರವೇ ಉಳಿದಿರುವ ನಟಿಯೊಬ್ಬರು ಇದೀಗ ಭಾರತದ ಅತಿ ಶ್ರೀಮಂತ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಹುರುನ್ ಇಂಡಿಯಾ (Hurun India Rich List 2024) ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಆ ನಟಿಯೇ ಟಾಪ್‌ ಸ್ಥಾನದಲ್ಲಿದ್ದಾರೆ. ಅಷ್ಟಕ್ಕೂ ಯಾರವರು?

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ವಿಶೇಷ ಮನ್ನಣೆ ಗಳಿಸಿದ ನಾಯಕಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಟಿ ಜೂಹಿ ಚಾವ್ಲಾ. ಬರೀ ಬಾಲಿವುಡ್‌ಗೆ ಮಾತ್ರ ಸೀಮಿತವಾಗದ ಈ ನಟಿ, ಸೌತ್‌ ಸಿನಿಮಾರಂಗದಲ್ಲೂ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪ್ರೇಮಲೋಕ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಮೋಡಿದ್ದರು. ಇದೀಗ ಇದೇ ನಟಿ ಭಾರತದ ಶ್ರೀಮಂತ ಹೀರೋಯಿನ್‌ ಎಂಬ ಪಟ್ಟ ಅಲಂಕರಿಸಿದ್ದಾರೆ. ಇದೀಗ ಹುರುನ್ ಇಂಡಿಯಾ ರಿಚ್‌ 2024 ಪಟ್ಟಿ ಬಿಡುಗಡೆ ಆಗಿದೆ.

ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರಂತಹ ಭಾರತೀಯ ಸೆಲೆಬ್ರಿಟಿಗಳಿರುವ ಈ ಪಟ್ಟಿಯಲ್ಲಿ ಬಾಲಿವುಡ್ ನಾಯಕಿ ಸ್ಥಾನ ಪಡೆದಿರುವುದು ಗಮನಾರ್ಹ ಸಂಗತಿ. 15 ವರ್ಷಗಳಿಂದ ಯಾವುದೇ ದೊಡ್ಡ ಸಿನಿಮಾ ಮಾಡದ ಈ ನಟಿಯ ಒಟ್ಟು ಸಂಪತ್ತು ಬರೋಬ್ಬರಿ 4600 ಕೋಟಿ ರೂಪಾಯಿ ಎಂದರೆ ನಂಬಲಸಾಧ್ಯ.

ಶಾರುಖ್‌ ಖಾನ್‌ ಮೊದಲ ಸ್ಥಾನ

ಕನಿಷ್ಠ 1000 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಭಾರತೀಯರು ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಈ ಬಾರಿ ಹೊಸದಾಗಿ 220 ಮಂದಿ ಈ ಪಟ್ಟಿಯಲ್ಲಿ ಸೇರಿದ್ದಾರೆ. ಒಟ್ಟು 1539 ಮಂದಿ ಇದರಲ್ಲಿದ್ದಾರೆ. ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ 7300 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ಸಿನಿಮಾ ಸೆಲೆಬ್ರಿಟಿಯಾಗಿದ್ದಾರೆ.

ಜೂಹಿಗೆ ಇಷ್ಟು ಸಂಪತ್ತು ಹೇಗೆ?

ಜೂಹಿ ಚಾವ್ಲಾ 1990ರ ದಶಕದಲ್ಲಿ ಹಿಂದಿ ಚಿತ್ರರಂಗದ ಟಾಪ್ ನಾಯಕಿಯರಲ್ಲಿ ಒಬ್ಬರು. ಕನ್ನಡದ ಪ್ರೇಮಲೋಕ ಸಿನಿಮಾ ಬಳಿಕ ಅಮೀರ್ ಖಾನ್ ಅವರೊಂದಿಗೆ ಖಯಾಮತ್ ಸೆ ಖಯಾಮತ್ ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಹತ್ತು ವರ್ಷಗಳಿಗೂ ಹೆಚ್ಚು ಕಾಲ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2000ರ ನಂತರ, ಸಿನಿಮಾ ನಿರ್ಮಾಣಕ್ಕೂ ಇಳಿದರು ಜೂಹಿ. ಮೊದಲು ಡ್ರೀಮ್ಸ್ ಅನ್‌ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದರು. ಈಗ ಶಾರುಖ್ ಖಾನ್‌ ಜೊತೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಪಾಲುದಾರರಾಗಿದ್ದಾರೆ. ಪೂರ್ಣ ಪ್ರಮಾಣದ ನಟನೆಯಿಂದ ಹಿಂದೆ ಸರಿದ ಜೂಹಿ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಫ್ರಾಂಚೈಸಿಯಲ್ಲಿ ಪಾಲನ್ನು ಹೊಂದಿದ್ದಾರೆ. ಇವುಗಳ ಮೂಲಕ ಜೂಹಿ ಸಾಕಷ್ಟು ಸಂಪಾದಿಸಿದ್ದಾರೆ.

ಲಿಸ್ಟ್‌ನಲ್ಲಿ ಇನ್ನೂ ಯಾರೆಲ್ಲ ಇದ್ದಾರೆ?

ಶ್ರೀಮಂತ ನಟಿಯರ ಸಾಲಿನಲ್ಲಿ ಜೂಹಿ ನಂತರದ ಸ್ಥಾನದಲ್ಲಿ ಯಾರೆಲ್ಲ ಇದ್ದಾರೆ? ಇಲ್ಲಿದೆ ನೋಡಿ ವಿವರ. ಐಶ್ವರ್ಯಾ ರೈ 900 ಕೋಟಿ, ಪ್ರಿಯಾಂಕಾ ಚೋಪ್ರಾ 850 ಕೋಟಿ, ಆಲಿಯಾ ಭಟ್ 550 ಕೋಟಿ, ದೀಪಿಕಾ ಪಡುಕೋಣೆ 400 ಕೋಟಿ ಮತ್ತು ಕತ್ರಿನಾ ಕೈಫ್ 240 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.