Dance Karnataka Dance ಶೋನಲ್ಲಿ ಓಂ ಚಿತ್ರದ ಮರುಸೃಷ್ಟಿ; ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ ಶಿವಣ್ಣ- ಪ್ರೇಮಾ ಜೋಡಿ-kannada television news recreation of om movie at the dance karnataka dance show shiva rajkumar prema stuns everyone mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Dance Karnataka Dance ಶೋನಲ್ಲಿ ಓಂ ಚಿತ್ರದ ಮರುಸೃಷ್ಟಿ; ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ ಶಿವಣ್ಣ- ಪ್ರೇಮಾ ಜೋಡಿ

Dance Karnataka Dance ಶೋನಲ್ಲಿ ಓಂ ಚಿತ್ರದ ಮರುಸೃಷ್ಟಿ; ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ ಶಿವಣ್ಣ- ಪ್ರೇಮಾ ಜೋಡಿ

ಓಂ ಸಿನಿಮಾದ ದೃಶ್ಯವೊಂದನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆ ಮೇಲೆ ಮರುಸೃಷ್ಟಿ ಮಾಡಲಾಗಿದೆ. ಶಿವಣ್ಣ ಮತ್ತು ಪ್ರೇಮಾ ಜೋಡಿಯ ಮೋಡಿಗೆ ಇಡೀ ಶೋ ಸ್ಟನ್‌ ಆಗಿದೆ. ಶಿವಣ್ಣನ ಕೈಗೆ ಲಾಂಗ್‌ ಬಂದರೆ, ಪ್ರೇಮಾ ಮಧು ಆಗಿ ಎವರ್‌ಗ್ರೀನ್‌ ದೃಶ್ಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಓಂ ಸಿನಿಮಾದ ದೃಶ್ಯವೊಂದನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆ ಮೇಲೆ ಮರುಸೃಷ್ಟಿ ಮಾಡಲಾಗಿದೆ. ಶಿವಣ್ಣ ಮತ್ತು ಪ್ರೇಮಾ ಜೋಡಿಯ ಮೋಡಿಗೆ ಇಡೀ ಶೋ ಸ್ಟನ್‌ ಆಗಿದೆ.
ಓಂ ಸಿನಿಮಾದ ದೃಶ್ಯವೊಂದನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆ ಮೇಲೆ ಮರುಸೃಷ್ಟಿ ಮಾಡಲಾಗಿದೆ. ಶಿವಣ್ಣ ಮತ್ತು ಪ್ರೇಮಾ ಜೋಡಿಯ ಮೋಡಿಗೆ ಇಡೀ ಶೋ ಸ್ಟನ್‌ ಆಗಿದೆ.

Dance Karnataka Dance: ಜೀ ಕನ್ನಡದ ರಿಯಾಲಿಟಿ ಶೋ ಡಾನ್ಸ್‌ ಕರ್ನಾಟಕ ಡಾನ್ಸ್‌ನಲ್ಲೀಗ ಓಂ ಚಿತ್ರದ ರಂಗೇರಿದೆ. ಅಂದರೆ, ಈ ವಾರ ಡಾನ್ಸಿಂಗ್‌ ವೇದಿಕೆ ಮೇಲೆ ಶಿವಣ್ಣನ ಕೈಗೆ ಲಾಂಗ್‌ ಬಂದರೆ, ಪ್ರೇಮಾ ಮಧು ಆಗಿ ಎವರ್‌ಗ್ರೀನ್‌ ದೃಶ್ಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಜೋಡಿ ವೇದಿಕೆ ಮೇಲೆ ಮತ್ತೆ ಮೋಡಿ ಮಾಡುತ್ತಿದ್ದಂತೆ, ಇಡೀ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಕೇಕೆ ಹೊಡೆದು ಕುಣಿದಾಡಿದ್ದಾರೆ. ತೀರ್ಪುಗಾರರಂತೂ ಕಣ್ಣುಮಿಟುಕಿಸದೇ ಶಿವಣ್ಣ- ಪ್ರೇಮಾರನ್ನೇ ಕಣ್ತುಂಬಿಕೊಂಡಿದ್ದಾರೆ. ಇದು ಓಂ ಚಿತ್ರದ ಗತ್ತು, ತಾಕತ್ತು!

DKD ವೇದಿಕೆ ಮೇಲೆ ಸತ್ಯ- ಮಧು ಮೋಡಿ

ಇದೀಗ ಇದೇ ಓಂ ಸಿನಿಮಾದ ದೃಶ್ಯವೊಂದನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆ ಮೇಲೆ ಮರುಸೃಷ್ಟಿ ಮಾಡಲಾಗಿದೆ. ಈ ವಾರದ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಎಂದಿನಂತೆ ತೀರ್ಪುಗಾರರು ಮತ್ತು ಮಹಾಗುರು ಶಿವಣ್ಣನ ಜತೆಗೆ ಮಹಾನಟಿ ಶೋನ ಮೂವರು ತೀರ್ಪುಗಾರರಾದ ತರುಣ್‌ ಸುಧೀರ್‌, ಪ್ರೇಮಾ ಮತ್ತು ನಿಶ್ವಿಕಾ ನಾಯ್ಡು ಸಹ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ವೇದಿಕೆ ಮೇಲೆ ಓಂ ಸಿನಿಮಾದಲ್ಲಿ ಕೈಯಲ್ಲಿ ಲಾಂಗ್‌ ಹಿಡಿದು ನಟಿ ಪ್ರೇಮ ಅವರಿಗೆ ಪ್ರೇಮ ನಿವೇದನೆ ಮಾಡುವ ದೃಶ್ಯದಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ. ಈ ಫರ್ಪಾಮನ್ಸ್‌ ನೋಡಿದ ಇಡೀ ಡಿಕೆಡಿ ಗ್ಯಾಂಗ್‌ ಮೂಕವಿಸ್ಮತವಾಗಿದೆ.

ಓಂ.. ಹಲವು ದಾಖಲೆಗಳ ಸರದಾರ

1995ರಲ್ಲಿ ಬಿಡುಗಡೆಯಾಗಿದ್ದ ಓಂ ಸಿನಿಮಾವನ್ನು ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನ ಮಾಡಿದ್ದಾರೆ. 30 ವರ್ಷಗಳ ಹಿಂದೆಯೇ ಈ ಚಿತ್ರವನ್ನು ಬರೋಬ್ಬರಿ 70 ಲಕ್ಷ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. ಡಾ, ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌ ಒಡೆತನದ ವಜ್ರೇಶ್ವರಿ ಕಂಬೈನ್ಸ್‌ನ ಅತ್ಯಂತ ದುಬಾರಿ ಸಿನಿಮಾ ಎಂದೂ ಖ್ಯಾತಿ ಪಡೆದಿತ್ತು ಓಂ ಸಿನಿಮಾ. ಹೀಗೆ ಬಿಡುಗಡೆಯಾದ ಈ ಚಿತ್ರ 2 ಕೋಟಿಗೂ ಅಧಿಕ ಗಳಿಕೆ ಕಂಡು, ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆದಿತ್ತು.

ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಕಲ್ಟ್ ಕ್ಲಾಸಿಕ್ ಸಿನಿಮಾ ಎಂದೇ ಗುರುತಿಸಿಕೊಂಡಿರುವ ಓಂ ಸಿನಿಮಾ, ಕಳೆದ 30 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 550 ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾ ಎಂದು ಲಿಮ್ಕಾ ದಾಖಲೆಯಲ್ಲಿ ತನ್ನ ಹೆಸರು ಸೇರಿಸಿಕೊಂಡಿದೆ. ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿಯೇ ಓಂ ಚಿತ್ರವು 30 ಬಾರಿ ಬಿಡುಗಡೆಯಾಗಿ, ದಾಖಲೆ ಬರೆದಿದೆ. ಸತ್ಯ ಪಾತ್ರದಲ್ಲಿ ಶಿವರಾಜ್‌ಕುಮಾರ್‌, ಮಧು ಪಾತ್ರದಲ್ಲಿ ಪ್ರೇಮಾ ನಟಿಸಿ ಸೈ ಎನಿಸಿಕೊಂಡಿದ್ದರು.

ವೀಕ್ಷಕರಿಂದ ಕಾಮೆಂಟ್ಸ್‌ ಸುರಿಮಳೆ

ಜೀ ಕನ್ನಡ ಓಂ ಚಿತ್ರದ ಝಲಕ್‌ಅನ್ನು ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಂತೆ, ವೀಕ್ಷಕರಿಂದ ಕಾಮೆಂಟ್ಸ್‌ ಸುರಿಮಳೆಯೇ ಹರಿದುಬಂದಿದೆ.

- ಪ್ರೇಮಾ ಅಭಿನಯ ಬೆಂಕಿ. ಓಂ 2 ಮಾಡ್ಬಹುದು ಈ ಜೋಡಿ

- ಮೃದು ಮನಸ್ಸಿನಿಂದ ಪ್ರೀತಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟಂತ ಒಂದು ಪ್ರೇಮ ಪ್ರೀತಿಯ ರಂಗ

- ಉಪೇಂದ್ರ ನಮ್ಮ ಯಜಮಾನ್ರ DIRECTION

- ಹ್ಯಾಟ್ರಿಕ್ ಹೀರೋ ಶಿವಣ್ಣ ಅಂಡ್ ಬ್ಯುಟಿ ಕ್ವೀನ್ ಪ್ರೇಮ ಮೇಡಂ ಆಕ್ಟಿಂಗ್ ಸೂಪರ್

- ಯಪ್ಪಾ goosebumps ಗುರು

- ಈ ದೃಶ್ಯ ನೋಡಕ್ಕೆ ಇಷ್ಟು ದಿನ ಕಾಯುತ್ತಾ ಇದ್ದೆ ಬೆಂಕಿ ಡೈಲಾಗ್ ಈ ಮೂವೀ ಕ್ರೇಜ್ ಯಾವ ಅಪ್ಪನೂ ಬೀಟ್ ಮಾಡಕ್ಕೆ ಆಗಲ್ಲಾ.

- ಎಷ್ಟು ವರ್ಷ ಬಿಟ್ಟು ಮಾಡಿದ್ರು ಶಿವಣ್ಣ ಅದೇ ಕದರ್... ಸೂಪರ್ ಶಿವಣ್ಣ ನೀವು