Dunki Collection: ‘ಸಲಾರ್‌’ ಎಫೆಕ್ಟ್‌ನಿಂದ ಡೊಂಕಾಯಿತು ‘ಡಂಕಿ’ ಕಲೆಕ್ಷನ್‌! ಗಳಿಕೆಯಲ್ಲಿ ಪಠಾಣ್‌, ಜವಾನ್‌ ಚಿತ್ರಕ್ಕಿಂತ ಕಡಿಮೆ ಕಮಾಯಿ
ಕನ್ನಡ ಸುದ್ದಿ  /  ಮನರಂಜನೆ  /  Dunki Collection: ‘ಸಲಾರ್‌’ ಎಫೆಕ್ಟ್‌ನಿಂದ ಡೊಂಕಾಯಿತು ‘ಡಂಕಿ’ ಕಲೆಕ್ಷನ್‌! ಗಳಿಕೆಯಲ್ಲಿ ಪಠಾಣ್‌, ಜವಾನ್‌ ಚಿತ್ರಕ್ಕಿಂತ ಕಡಿಮೆ ಕಮಾಯಿ

Dunki Collection: ‘ಸಲಾರ್‌’ ಎಫೆಕ್ಟ್‌ನಿಂದ ಡೊಂಕಾಯಿತು ‘ಡಂಕಿ’ ಕಲೆಕ್ಷನ್‌! ಗಳಿಕೆಯಲ್ಲಿ ಪಠಾಣ್‌, ಜವಾನ್‌ ಚಿತ್ರಕ್ಕಿಂತ ಕಡಿಮೆ ಕಮಾಯಿ

ಶಾರುಖ್‌ ಖಾನ್‌ ಮತ್ತು ರಾಜ್‌ಕುಮಾರ್‌ ಹಿರಾನಿ ಜೋಡಿಯ ಡಂಕಿ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಲೆಕ್ಷನ್‌ ವಿಚಾರದಲ್ಲೂ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಕಡಿಮೆ ಗಳಿಸಿದೆ. ಈ ನಡುವೆ, ಸಲಾರ್‌ ಎಫೆಕ್ಟ್‌ ನಿಂದಲೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Dunki Collection: ‘ಸಲಾರ್‌’ ಎಫೆಕ್ಟ್‌ನಿಂದ ಡೊಂಕಾಯಿತು ‘ಡಂಕಿ’ ಕಲೆಕ್ಷನ್‌! ಗಳಿಕೆಯಲ್ಲಿ ಪಠಾಣ್‌, ಜವಾನ್‌ ಚಿತ್ರಕ್ಕಿಂತ ಕಡಿಮೆ ಕಮಾಯಿ
Dunki Collection: ‘ಸಲಾರ್‌’ ಎಫೆಕ್ಟ್‌ನಿಂದ ಡೊಂಕಾಯಿತು ‘ಡಂಕಿ’ ಕಲೆಕ್ಷನ್‌! ಗಳಿಕೆಯಲ್ಲಿ ಪಠಾಣ್‌, ಜವಾನ್‌ ಚಿತ್ರಕ್ಕಿಂತ ಕಡಿಮೆ ಕಮಾಯಿ

Dunki Box Office Collection: ಶಾರುಖ್‌ ಖಾನ್‌ಗೆ ಡಂಕಿ ಸಿನಿಮಾ ಕೈ ಹಿಡಿದಿದೆ. ಈ ಮೂಲಕ ೀ ವರ್ಷ ಹ್ಯಾಟ್ರಿಕ್‌ ಗೆಲುವು ಅವರ ಮುಡಿಗೇರಿದೆ. ಪಠಾಣ್‌ ಸಾವಿರ ಕೋಟಿ ಕಲೆಕ್ಷನ್‌ ಮಾಡಿದರೆ, ಜವಾನ್‌ ಅದನ್ನೂ ಮೀರಿಸಿ ಮುಂದೆ ಸಾಗಿತ್ತು. ರಾಜ್‌ಕುಮಾರ್‌ ಹಿರಾನಿಯ ಡಂಕಿ ಸಿನಿಮಾ ಗುರುವಾರ (ಡಿ. 21) ಜಗತ್ತಿನಾದ್ಯಂತ ಬಿಡುಗಡೆಯಾದರೂ, ಕಲೆಕ್ಷನ್‌ ವಿಚಾರದಲ್ಲಿ ಅವರ ಈ ಹಿಂದಿನ ಸಿನಿಮಾಗಳ ದಾಖಲೆಯನ್ನು ಮುರಿಯಲಾಗಲಿಲ್ಲ.

ಬಾಲಿವುಡ್‌ನಲ್ಲಿ ಡಂಕಿ ಸಿನಿಮಾ ಮೇಲೆ ಮೊದಲಿಂದಲೂ ಕ್ರೇಜ್‌ ಇತ್ತು. ಶಾರುಖ್‌ ಖಾನ್‌ ಸಿನಿಮಾ ಎಂಬ ಕಾರಣಕ್ಕೆ ಈ ಸಿನಿಮಾ ಒಂದು ಕಡೆ ಕುತೂಹಲ ಮೂಡಿಸಿದರೆ, ಇನ್ನೊಂದು ಕಡೆ ರಾಜ್‌ಕುಮಾರ್‌ ಹಿರಾನಿ ಅವರ ಸಿನಿಮಾ ಎಂಬ ವಿಶೇಷಣವನ್ನೂ ಪಡೆದುಕೊಂಡಿತ್ತು. ಅದರಂತೆ ಬಿಡುಗಡೆಯಾದ ಡಂಕಿ ಒಳ್ಳೆಯ ಓಪನಿಂಗ್‌ ಪಡೆದುಕೊಂಡಿದೆ. ಮೊದಲ ದಿನವೇ 30 ಕೋಟಿ ರೂ. ಕಮಾಯಿ ಮಾಡುವ ಮೂಲಕ ಚಿತ್ರ ಮುನ್ನುಗ್ಗುತ್ತಿದೆ.

Sacnilk ವರದಿಯ ಪ್ರಕಾರ, ಡಂಕಿ ಸಿನಿಮಾ ಮೊದಲ ದಿನ ಭಾರತದಲ್ಲಿ 30 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಆದಾಗ್ಯೂ, ಶಾರುಖ್ ಖಾನ್ ಅವರ ಈ ಹಿಂದಿನ ಜವಾನ್ ಮತ್ತು ಪಠಾಣ್ ಮೊದಲ ದಿನದಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ್ದವು. ಬಿಡುಗಡೆಯಾದ ಮೊದಲ ದಿನವೇ ಜವಾನ್ ಭಾರತದಲ್ಲಿ 89 ಕೋಟಿ ಗಳಿಸಿದ್ದರೆ, ಪಠಾಣ್ ಮೊದಲ ದಿನವೇ 57 ಕೋಟಿ ರೂ. ಬಾಚಿಕೊಂಡಿತ್ತು. ಆದರೆ ಈ ಎರಡೂ ಚಿತ್ರಗಳಿಗಿಂತ ಡಂಕಿ ಗಳಿಕೆ ಕಡಿಮೆಯಾಗಿದೆ. ಆದರೂ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಂದಾಯವಾಗುತ್ತಿದೆ.

ವಿಶ್ವದಾದ್ಯಂತ ಡಂಕಿ ಗಳಿಸಿದ ಹಣವೆಷ್ಟು?

ಭಾರತದಲ್ಲಿ 30 ಪ್ಲಸ್ ಕೋಟಿ ಗಳಿಸಿರುವ ಡಂಕಿ ಸಿನಿಮಾ, ವಿಶ್ವದಾದ್ಯಂತ ಅದೇ ರೀತಿ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ ಡಂಕಿ ಸಿನಿಮಾ ಜಗತ್ತಿನಾದ್ಯಂತ ಬರೋಬ್ಬರಿ 55 ಕೋಟಿ ಗಳಿಸಿದೆ. ಶಾರುಖ್‌ ಅವರ ಈ ಹಿಂದಿನ ಜವಾನ್ ಸಿನಿಮಾ ಮೊದಲ ದಿನವೇ 129 ಕೋಟಿ ಗಳಿಸಿದ್ದರೆ, ಪಠಾಣ್ ಚಿತ್ರ ಮೊದಲ ದಿನ ವಿಶ್ವದಾದ್ಯಂತ 106 ಕೋಟಿ ಬಿಜಿನೆಸ್ ಮಾಡಿತ್ತು. ಆದರೆ, ಈ ಎರಡೂ ಚಿತ್ರಗಳ ದಾಖಲೆ ಮುರಿಯಲು ಡಂಕಿಗೆ ಸಾಧ್ಯವಾಗಿಲ್ಲ.

120 ಕೋಟಿ ಬಜೆಟ್‌ನ ಡಂಕಿ

'ಮುನ್ನಾ ಭಾಯ್ ಎಂಬಿಬಿಎಸ್ ಮತ್ತು ಸಂಜು' ದಂತಹ ಅದ್ಭುತ ಚಿತ್ರಗಳನ್ನು ನೀಡಿದ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಡಂಕಿ ಮೂಲಕ ಆಗಮಿಸಿದ್ದಾರೆ. ಸ್ಟಾರ್‌ ನಿರ್ದೇಶಕ ಎನಿಸಿಕೊಂಡಿರುವ ರಾಜ್‌ಕುಮಾರ್‌ ಹಿರಾನಿ, ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಅದೇ ರೀತಿ ಡಂಕಿ ಸಿನಿಮಾ ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಒಟ್ಟು, 120 ಕೋಟಿ ಬಜೆಟ್‌ನಲ್ಲಿ ಡಂಕಿ ಸಿನಿಮಾ ನಿರ್ಮಾಣವಾಗಿದೆ.

ಸಲಾರ್‌ ಎಫೆಕ್ಟ್;‌ ಡಂಕಿ ಕಲೆಕ್ಷನ್‌ ಡೊಂಕು

ಗುರುವಾರ ಬಿಡುಗಡೆಯಾದ ಡಂಕಿ ಸಿನಿಮಾ ಮೊದಲ ದಿನ 30 ಕೋಟಿ ಗಳಿಸಿರಬಹುದು. ಆದರೆ, ಶುಕ್ರವಾರ ಸಲಾರ್‌ ಅಬ್ಬರ ಜೋರಾಗಿದೆ. ಕಲೆಕ್ಷನ್‌ ಮಾತ್ರವಲ್ಲದೆ, ಎಲ್ಲೆಡೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕ ಹಿನ್ನೆಲೆಯಲ್ಲಿ ಸಲಾರ್‌ ನಡೆದಿದ್ದೇ ದಾರಿಯಂತಾಗಿದೆ. ಡಂಕಿಯ ಗುರುವಾರದ ಕಲೆಕ್ಷನ್‌ ಶುಕ್ರವಾರಕ್ಕೂ ಮುಂದುವರಿಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಉತ್ತರ ಭಾರತದಲ್ಲಿ ಪ್ರಭಾಸ್‌ ಮಾಸ್‌ ಅವತಾರಕ್ಕೆ ಸಲಾರ್‌ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಅಲ್ಲಿನ ಪ್ರೇಕ್ಷಕ. ಹಾಗಾಗಿ ಶುಕ್ರವಾರದ ಕಲೆಕ್ಷನ್‌ ವಿಚಾರದಲ್ಲಿ ಡಂಕಿಗೆ ಹಿನ್ನೆಡೆ ಕಟ್ಟಿಟ್ಟ ಬುತ್ತಿ.

Whats_app_banner