Chiranjeevi:ಅಭಿಮಾನಿಯ ಕೊನೆ ಆಸೆ ನೆರವೇರಿಸಿದ ಮೆಗಾಸ್ಟಾರ್​​​​...ನೀವು ಎಷ್ಟು ಸಹೃದಯಿ ಎಂದ ನೆಟಿಜನ್ಸ್​​​​​​​​​​​​​​​​​​​​​
ಕನ್ನಡ ಸುದ್ದಿ  /  ಮನರಂಜನೆ  /  Chiranjeevi:ಅಭಿಮಾನಿಯ ಕೊನೆ ಆಸೆ ನೆರವೇರಿಸಿದ ಮೆಗಾಸ್ಟಾರ್​​​​...ನೀವು ಎಷ್ಟು ಸಹೃದಯಿ ಎಂದ ನೆಟಿಜನ್ಸ್​​​​​​​​​​​​​​​​​​​​​

Chiranjeevi:ಅಭಿಮಾನಿಯ ಕೊನೆ ಆಸೆ ನೆರವೇರಿಸಿದ ಮೆಗಾಸ್ಟಾರ್​​​​...ನೀವು ಎಷ್ಟು ಸಹೃದಯಿ ಎಂದ ನೆಟಿಜನ್ಸ್​​​​​​​​​​​​​​​​​​​​​

ಚಿರಂಜೀವಿ ಅವರ ಹುಟ್ಟೂರಾದ ಮೊಗಲ್ತೂರಿನ ನಾಗರಾಜು ಎಂಬ ವ್ಯಕ್ತಿ ಮೆಗಾಸ್ಟಾರ್ ಅವರ ಕಟ್ಟಾ ಅಭಿಮಾನಿ. ಎರಡೂ ಕಿಡ್ನಿಗಳು ವಿಫಲವಾಗಿರುವ ಅವರು, ಚಿರಂಜೀವಿ ಅವರನ್ನು ಕೊನೆಯ ಬಾರಿ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯ ಚಿರಂಜೀವಿಗೆ ಕೂಡಾ ತಿಳಿದು ಕೂಡಲೇ ಮೆಗಾಸ್ಟಾರ್, ತಮ್ಮ ಅಭಿಮಾನಿಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ.

<p>ಅಭಿಮಾನಿಯನ್ನು ಭೇಟಿ ಮಾಡಿದ ಚಿರಂಜೀವಿ</p>
ಅಭಿಮಾನಿಯನ್ನು ಭೇಟಿ ಮಾಡಿದ ಚಿರಂಜೀವಿ

ವಯಸ್ಸು 66 ಆದ್ರೂ ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದಲ್ಲಿ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಇನ್ನು ಚಿರಂಜೀವಿಗೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಮ್ಮ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದು ಹೇಳುತ್ತಲೇ ಬಂದಿರುವ ಮೆಗಾಸ್ಟಾರ್ ಇದೀಗ, ತಮ್ಮ ಅಭಿಮಾನಿಯೊಬ್ಬರ ಕಡೆಯ ಆಸೆಯನ್ನು ನೆರವೇರಿಸಿದ್ದಾರೆ.

ಮೆಗಾಸ್ಟಾರ್ ಕೈಯಲ್ಲಿ ಈಗ 4ಕ್ಕೂ ಹೆಚ್ಚು ಸಿನಿಮಾಗಳಿವೆ. ಶೂಟಿಂಗ್, ಡಬ್ಬಿಂಗ್​​​​​ ಸೇರಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಚಿರಂಜೀವಿಗೆ ಮನೆಯವರ ಬಳಿ ಸರಿಯಾಗಿ ಕೂತು ಮಾತನಾಡಲು ಪುರುಸೊತ್ತು ಇಲ್ಲವಂತೆ. ಆದರೆ ಇದೀಗ ಅವರು ತಮ್ಮ ಅಭಿಮಾನಿಯೊಬ್ಬರಿಗಾಗಿ ಎಲ್ಲಾ ಕೆಲಸಗಳನ್ನು ಬದಿಗೊತ್ತಿದ್ದಾರೆ. ತಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಯೊಬ್ಬರನ್ನು ಚಿರಂಜೀವಿ ಭೇಟಿಯಾಗಿದ್ದಾರೆ. ಅವರಿಗೆ ಸಾಂತ್ವನ ಹೇಳಿ, ಅಭಿಮಾನಿಯ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಅಭಿಮಾನಿಗಳ ಬಗ್ಗೆಯೂ ಕಾಳಜಿ ವಹಿಸುವ ಮೆಗಾಸ್ಟಾರ್ ಹಲವಾರು ಅಭಿಮಾನಿಗಳಿಗೆ ಆರ್ಥಿಕವಾಗಿ ಬೆಂಬಲ ನೀಡಿದ್ದಾರೆ. ಅಭಿಮಾನಿಗಳಿಗೆ ಆಪತ್ತು ಬಂದರೆ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಇದೀಗ ತಮ್ಮ ಅಭಿಮಾನಿಯೊಬ್ಬರ ಕೊನೆಯ ಆಸೆಯನ್ನು ಚಿರು ಈಡೇರಿಸಿದ್ದಾರೆ. ಚಿರಂಜೀವಿ ಅವರ ಹುಟ್ಟೂರಾದ ಮೊಗಲ್ತೂರಿನ ನಾಗರಾಜು ಎಂಬ ವ್ಯಕ್ತಿ ಮೆಗಾಸ್ಟಾರ್ ಅವರ ಕಟ್ಟಾ ಅಭಿಮಾನಿ. ಎರಡೂ ಕಿಡ್ನಿಗಳು ವಿಫಲವಾಗಿರುವ ಅವರು, ಚಿರಂಜೀವಿ ಅವರನ್ನು ಕೊನೆಯ ಬಾರಿ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಈ ವಿಷಯ ಚಿರಂಜೀವಿಗೆ ಕೂಡಾ ತಿಳಿದು ಕೂಡಲೇ ಮೆಗಾಸ್ಟಾರ್,

ತಮ್ಮ ಅಭಿಮಾನಿಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ. ಸಾವಿನೊಂದಿಗೆ ಹೋರಾಡುತ್ತಿರುವ ತಮ್ಮ ಅಭಿಮಾನಿ ನಾಗರಾಜ್​ ಅವರನ್ನು ಕಂಡು ಭಾವುಕರಾದ ಚಿರು, ಅವರನ್ನು ಪ್ರೀತಿಯಿಂದ ತಬ್ಬಿಕೊಂಡರು. ಅಭಿಮಾನಿಯೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ ಮಾನಸಿಕ ಸ್ಥೈರ್ಯ ತುಂಬಿದರು. ಆರ್ಥಿಕ ಸಹಾಯವನ್ನೂ ನೀಡಿದರು. ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಚಿರು ಅವರ ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ವೃತ್ತಿ ಜೀವನದ ಆರಂಭದಿಂದಲೂ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡಿದ್ದಾರೆ. ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ಸೃಹೃದಯದ ವ್ಯಕ್ತಿ ಮೆಗಾಸ್ಟಾರ್ ಚಿರಂಜೀವಿ. ಬಹುಶ: ಇದೇ ಕಾರಣದಿಂದ ಜನರು ಅವರನ್ನು ಮೆಗಾಸ್ಟಾರ್ ಎನ್ನಲು ಕಾರಣ ಎನ್ನಬಹುದು. ತೆಲುಗು ಚಿತ್ರರಂಗ ಕೂಡಾ ಚಿರಂಜೀವಿ ಅವರಿಗೆ ನಾಯಕನ ಸ್ಥಾನ ನೀಡಿದೆ. ಎಲ್ಲಿ ಏನೇ ಕಷ್ಟ ಬಂದರೂ ನಾನಿದ್ದೇನೆ ಎಂದು ಚಿರಂಜೀವಿ ಭರವಸೆ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ಚಿತ್ರರಂಗದ ಪರ ನಿಂತು ಕೊರೋನಾ ವೆಲ್​​ಫೇರ್​​​​​​​​​ ಫಂಡ್ ಸ್ಥಾಪಿಸಿ ಅನೇಕ ಸಿನಿಮಾ ಕಾರ್ಯಕರ್ತರಿಗೆ ನೆರವು ನೀಡಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಮೋಹನ್‌ ರಾಜ್​​​​​​​ ನಿರ್ದೇಶನದ 'ಗಾಡ್‌ ಫಾದರ್‌' ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಅಕ್ಟೋಬರ್‌ನಲ್ಲಿ ದಸರಾ ವೇಳೆಗೆ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಇದರೊಂದಿಗೆ ಬಾಬಿ ನಿರ್ದೇಶನದಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾ ಕೂಡಾ ಮಾಡುತ್ತಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಚಿರಂಜೀವಿ ಅಂಡರ್ ಕವರ್ ಪೊಲೀಸ್ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರವಿತೇಜ ಕೂಡಾ ನಟಿಸುತ್ತಿದ್ದಾರಂತೆ. ಇದಲ್ಲದೇ ಮೆಹರ್ ರಮೇಶ್ ನಿರ್ದೇಶನದ 'ಭೋಲಾ ಶಂಕರ್' ಸಿನಿಮಾ ಮಾಡುತ್ತಿದ್ದಾರೆ. ಇದರೊಂದಿಗೆ ಅವರು ಒಪ್ಪಿಕೊಂಡಿರುವ ಮತ್ತೊಂದು ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

Whats_app_banner