ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ಕೋರ್ಟ್ ನಿರ್ಧಾರಕ್ಕೆ ರೇಣುಕಾಸ್ವಾಮಿ ತಂದೆ ಸ್ವಾಗತ
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್ ಇನ್ನು ಮುಂದಿನ ದಿನಗಳಲ್ಲೂ ಅಲ್ಲೇ ಇರಬೇಕಾದ ಪ್ರಸಂಗ ಎದುರಾಗಿದೆ. ಯಾಕೆಂದರೆ ದರ್ಶನ್‌ಗೆ ಇಂದೂ ಸಹ ಬೇಲ್ ಸಿಕ್ಕಿಲ್ಲ. ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ.
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ದರ್ಶನ್ ಇನ್ನು ಮುಂದಿನ ದಿನಗಳಲ್ಲೂ ಅಲ್ಲೇ ಇರಬೇಕಾದ ಪ್ರಸಂಗ ಎದುರಾಗಿದೆ. ಯಾಕೆಂದರೆ ದರ್ಶನ್‌ಗೆ ಇಂದೂ ಸಹ ಬೇಲ್ ಸಿಕ್ಕಿಲ್ಲ. ಇನ್ನಷ್ಟು ದಿನ ದರ್ಶನ್ ಜೈಲಿನಲ್ಲೇ ಇರಬೇಕಾಗಿದೆ. A1 ಆಗಿರುವ ಪವಿತ್ರಾ ಗೌಡ ಅವರಿಗೂ ಜಾಮೀನು ಅರ್ಜಿ ವಜಾ ಆಗಿದೆ. ಕನಿಷ್ಠ ಹದಿನೈದು ದಿನಗಳ ಕಾಲವಂತೂ ದರ್ಶನ್ ಜೈಲಿನಲ್ಲೇ ಇರಬೇಕಾಗುತ್ತದೆ. ಮುಂದಿನ ತೀರ್ಮಾನಕ್ಕೆ ಸಮಯ ತಗುಲುತ್ತದೆ. ಬಳ್ಳಾರಿ ಜೈಲಿನ ಎದುರು ಬಂದಿರುವ ದರ್ಶನ್ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ.
ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ. ನಾಳೆ ಮತ್ತೆ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ರವಿಶಂಕರ್ ಹಾಗೂ ದೀಪಕ್ ಈ ಇಬ್ಬರಿಗೆ ಈಗ ಜಾಮೀನು ಸಿಕ್ಕಿದೆ. 57ನೇ ಸಿಟಿ ಸಿವಿಲ್ ಕೋರ್ಟ್‌ನಿಂದ ಈ ಆದೇಶ ಹೊರಬಂದಿದೆ. ಎಂಟನೇ ಆರೋಪಿ ರವಿಶಂಕರ್ ಅಲಿಯಾಸ್ ರವಿಗೆ ಜಾಮೀನು ಮಂಜೂರಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತು ಕಳೆದ ನೂರಿಪ್ಪತ್ತು ದಿನಗಳಿಂದ ಜೈಲಿನಲ್ಲಿದ್ದ ಎ-2 ಚಿತ್ರ ನಟ ದರ್ಶನ್ ಮತ್ತು ಎ-1 ಆಗಿದ್ದ ಪವಿತ್ರಾ ಗೌಡಗೆ ಜಾಮೀನು ನಿರಾಕರಿಸಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದೀಪಕ್ ಮತ್ತು ರವಿಶಂಕರ್ ಗೆ ಜಾಮೀನು ನೀಡಲಾಗಿದೆ. ಇತರ ಆರೋಪಿಗಳಾದ ಲಕ್ಷ್ಮಣ್, ನಾಗರಾಜು ಅವರಿಗೂ ಜಾಮೀನು ನಿರಾಕರಿಸಲಾಗಿದೆ. ಸದ್ಯ ದರ್ಶನ್ ಬಾರಿ ಜೈಲು ಮತ್ತು ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ. ತನ್ನ ಆಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಎಂಬ ಸಿಟ್ಟು ದರ್ಶನ್‌ಗಿತ್ತು. ಇದರಿಂದ ಕೆರಳಿದ ಅವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಹತ್ಯೆ ಮಾಡಲಾಗಿದೆ ಎನ್ನುವುದು ಆರೋಪದ ಹೂರಣ. ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಮಂದಿಯನ್ನು ಬಂಧಿಸಲಾಗಿದ್ದು, ಮೂವರಿಗೆ ಈಗಾಗಲೇ ಜಾಮೀನು ದೊರೆತಿದೆ. ಉಳಿದ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರಂಭದಲ್ಲಿ ದರ್ಶನ್ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ದರ್ಶನ್ ಕೆಲವು ಆರೋಪಿಗಳೊಂದಿಗೆ ಕುಳಿತು ಚಹಾ ಸೇವಿಸುತ್ತಿದ್ದ ಫೋಟೋ ವೈರಲ್ ಆದ ನಂತರ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಇವರ ಜಾಮೀನು ಅರ್ಜಿ ಕುರಿತು ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ವಾದ ಪ್ರತಿವಾದ ಪೂರ್ಣಗೊಂಡ ನಂತರ ನ್ಯಾಯಾಧೀಶ ಜೈ ಶಂಕರ್ ಅವರು ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ನ್ಯಾಯಾಲಯದಲ್ಲಿ ದರ್ಶನ್ ಜಾಮೀನು ಅರ್ಜಿ ಕುರಿತು ವಾದ ಪ್ರತಿವಾದ ಜೋರಾಗಿಯೇ ನಡೆದಿತ್ತು. ದರ್ಶನ್ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರೂ ಸಹ ಸಮರ್ಥವಾಗಿ ವಾದ ಮಂಡಿಸಿ ದರ್ಶನ್ ಗೆ ಜಾಮೀನು ನೀಡದಂತೆ ವಾದಿಸಿದ್ದರು.
ಕೋರ್ಟ್ ತೀರ್ಮಾನಕ್ಕೆ ರೇಣುಕಾಸ್ವಾಮಿ ತಂದೆ ಸ್ವಾಗತ
ಕೋರ್ಟ್ ತೀರ್ಪು ಬರುತಿದ್ದಂತೆ ಭಾವುಕರಾದ ರೇಣುಕಸ್ವಾಮಿ ತಂದೆ ಕಾಶಿನಾಥ್ ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ ಎಂದಿದ್ದಾರೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪು ಸ್ವಾಗತಿಸುತ್ತೇನೆ ಎನ್ನುತ್ತಲೇ ಭಾವುಕರಾಗಿದ್ದಾರೆ. ಕೋರ್ಟ್‌ನಲ್ಲಿ SPP ಕೂಡ ತಮ್ಮ ಪರವಾಗಿ ಉತ್ತಮವಾಗಿ ವಾದ ಮಂಡನೆ ಮಾಡುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ವರದಿ: ಮಾರುತಿ ಎಚ್