Kannada News  /  Entertainment  /  Does Adil Khan Rejected To Marry Rakhi Sawanth

Adil Khan Rejected Rakhi Sawanth: ರಾಖಿಯನ್ನು ಮದುವೆಯಾಗಲು ನಿರಾಕರಿಸಿದ್ರಾ ಆದಿಲ್ ಖಾನ್?..ಇಲ್ಲಿದೆ ವಿಡಿಯೋ..!

ಆದಿಲ್‌ ಖಾನ್‌ಗೆ ಪ್ರಪೋಸ್‌ ಮಾಡಿದ ರಾಖಿ ಸಾವಂತ್
ಆದಿಲ್‌ ಖಾನ್‌ಗೆ ಪ್ರಪೋಸ್‌ ಮಾಡಿದ ರಾಖಿ ಸಾವಂತ್ (PC: Varinder Chawla)

ಇತ್ತೀಚೆಗೆ ರಾಖಿ ಹಾಗೂ ಆದಿಲ್‌ ಖಾನ್‌ ಮತ್ತೆ ಮಾಧ್ಯಮಗಳೆದುರು ಕಾಣಿಸಿಕೊಂಡಿದ್ದರು. ಈ ವೇಳೆ ರಾಖಿ ಸಾವಂತ್‌ ಹೂವಿನ ಬೊಕ್ಕೆ ಹಿಡಿದು ಮಂಡಿಯೂರಿ ನನ್ನನ್ನು ಮದುವೆಯಾಗು ಎಂದು ಆದಿಲ್‌ಗೆ ಪ್ರಪೋಸ್‌ ಮಾಡಿದ್ದಾರೆ.

ಬಾಲಿವುಡ್‌ ನಟಿ ರಾಖಿ ಸಾವಂತ್‌ ಬಗ್ಗೆ ಬರೆಯೋಕೆ ಪುಟಗಳೇ ಸಾಲದು, ಸದಾ ಒಂದಲ್ಲಾ ಒಂದು ವಿಚಾರಕ್ಕೆ ಆಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಒಮ್ಮೆ ಇಲ್ಲದ್ದೆಲ್ಲಾ ಮಾತನಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಮತ್ತೊಮ್ಮೆ ಸಮಾಜಸೇವೆ ಮಾಡುವ ಮೂಲಕ ಸದ್ದು ಮಾಡುತ್ತಾರೆ. ಇದೀಗ ಮತ್ತೆ ರಾಖಿ ಸಾವಂತ್‌ ತಮ್ಮ ಬಾಯ್‌ ಫ್ರೆಂಡ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಖಿ ಸಾವಂತ್‌ ಸದ್ಯಕ್ಕೆ ಮೈಸೂರು ಮೂಲದ ಹುಡುಗ ಆದಿಲ್‌ ಜೊತೆ ಡೇಟಿಂಗ್‌ನಲ್ಲಿರುವುದು ತಿಳಿದ ವಿಚಾರ. ಆದಿಲ್‌ ಖಾನ್‌ಗೆ ರಾಖಿ ಸಾವಂತ್‌ ಎಂದರೆ ಬಹಳ ಇಷ್ಟ. ರಾಖಿಗೆ ಮೊದಲು ಪ್ರಪೋಸ್‌ ಮಾಡಿದ್ದೇ ಆದಿಲ್‌. ರಾಖಿಯನ್ನು ಒಲಿಸಿಕೊಳ್ಳಲು ಆದಿಲ್‌ ದುಬಾರಿ ಬೆಲೆಯ ಗಿಫ್ಟ್‌ಗಳನ್ನು ನೀಡಿದ್ದಾರಂತೆ. ದುಬೈನಲ್ಲಿ ಆಕೆ ಹೆಸರಿನಲ್ಲಿ ಆಸ್ತಿ ಕೂಡಾ ಖರೀದಿಸಿದ್ದಾರಂತೆ. ಈ ವಿಚಾರವನ್ನು ಸ್ವತ: ರಾಖಿ ಹೇಳಿಕೊಂಡಿದ್ದರು. ಆದಿಲ್‌ನಂತೆ ನನ್ನನ್ನು ಬೇರೆ ಯಾರೂ ಪ್ರೀತಿಸಲು ಸಾಧ್ಯವಿಲ್ಲ ಎಂದು ಕೂಡಾ ಹೇಳಿಕೊಂಡಿದ್ದರು. ಆದರೆ ಇದೀಗ ಆದಿಲ್‌, ರಾಖಿಯ ಮ್ಯಾರೇಜ್‌ ಪ್ರಪೋಸಲನ್ನು ನಿರಾಕರಿಸಿದ್ದಾರಂತೆ. ಹಾಗಂತ 2 ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಆದರೆ ಅಸಲಿ ವಿಚಾರವೇ ಬೇರೆ.

ತಮ್ಮ ಬಾಯ್‌ ಫ್ರೆಂಡ್‌ ಆದಿಲ್‌ ಖಾನ್‌ ಜೊತೆ ರಾಖಿ ಸಾವಂತ್‌ ಈಗಾಗಲೇ ಅನೇಕ ಬಾರಿ ಮಾಧ್ಯಮಗಳೆದುರು ಕಾಣಿಸಿಕೊಂಡಿದ್ದಾರೆ. ಆತನೊಂದಿಗೆ ಇರುವ ಫೋಟೋ, ವಿಡಿಯೋಗಳನ್ನು ಕೂಡಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಖಿ ಹಾಗೂ ಆದಿಲ್‌ ಖಾನ್‌ ಮತ್ತೆ ಮಾಧ್ಯಮಗಳೆದುರು ಕಾಣಿಸಿಕೊಂಡಿದ್ದರು. ಈ ವೇಳೆ ರಾಖಿ ಸಾವಂತ್‌ ಹೂವಿನ ಬೊಕ್ಕೆ ಹಿಡಿದು ಮಂಡಿಯೂರಿ ನನ್ನನ್ನು ಮದುವೆಯಾಗು ಎಂದು ಆದಿಲ್‌ಗೆ ಪ್ರಪೋಸ್‌ ಮಾಡಿದ್ದಾರೆ. ಆದರೆ ಆದಿಲ್‌ ನಗುತ್ತಲೇ ಈ ಪ್ರಪೋಸಲ್‌ ರಿಜೆಕ್ಟ್ ಮಾಡಿದ್ದಾರೆ. ಆದಿ ನೋ ಎಂದಿದ್ದಕ್ಕೆ ರಾಖಿ ಕೋಪಗೊಂಡು ಹಾಗಿದ್ದರೆ ನಾನು ಕೊಟ್ಟಿರೋ ಬೊಕ್ಕೆ ವಾಪಸ್‌ ಕೊಡು ಎಂದು ಕಸಿದುಕೊಳ್ಳಲು ಯತ್ನಿಸುತ್ತಾರೆ. ನಂತರ ಇಬ್ಬರೂ ನಗುತ್ತಲೇ ಹಗ್‌ ಮಾಡುತ್ತಾರೆ. ವಿಡಿಯೋ ಈಗ ವೈರಲ್‌ ಆಗುತ್ತಿದ್ದು, ರಾಖಿಯನ್ನು ಆದಿಲ್‌, ರಿಜೆಕ್ಟ್‌ ಮಾಡಿದ್ದು ತಮಾಷೆಗೆ ಎಂಬ ನಿಜ ವಿಚಾರ ಎಲ್ಲರಿಗೂ ತಿಳಿದಿದೆ.

ದುಬೈನಲ್ಲಿ ಮತ್ತಷ್ಟು ಫ್ಲಾಟ್‌ ಖರೀದಿಸುತ್ತೇವೆ ಎಂದ ರಾಖಿ ಸಾವಂತ್‌

ಮುಂಬೈನಲ್ಲಿ ಆಸ್ತಿ ಬಹಳ ದುಬಾರಿ. ಆದ್ದರಿಂದ ದುಬೈನಲ್ಲಿ 10 ಪ್ಲಾಟ್​​​ಗಳನ್ನು ಕೊಳ್ಳಲು ಆದಿಲ್, ಪ್ಲ್ಯಾನ್ ಮಾಡಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಸುಮಾರು 3 ತಿಂಗಳ ಹಿಂದೆ ರಾಖಿ ಸಾವಂತ್ ತನ್ನ ಬಾಯ್ ಫ್ರೆಂಡ್ ಆದಿಲ್ ಖಾನ್​​​​​ನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ಅಲ್ಲದೆ, ಮುಂದಿನ ಬಿಗ್ ಬಾಸ್ ಸೀಸನ್​​​​​ನಲ್ಲಿ ಬಾಯ್ ಫ್ರೆಂಡ್ ಆದಿಲ್ ಜೊತೆ ಬಿಗ್ ಬಾಸ್​​​​ಗೆ ಎಂಟ್ರಿ ಕೊಡುವ ಪ್ಲ್ಯಾನ್ ಇದೆ ಎಂದು ಕೂಡಾ ರಾಖಿ ಹೇಳಿಕೊಂಡಿದ್ದರು. ಅಂದಿನಿಂದ ಇದುವರೆಗೂ ರಾಖಿ ಹಾಗೂ ಆದಿಲ್ ಇಬ್ಬರೂ ಅನೇಕ ಬಾರಿ ಪಾಪರಾಜಿಗಳ ಕ್ಯಾಮರಾದಲ್ಲಿ ಜೊತೆಯಾಗಿ ಸೆರೆಯಾಗಿದ್ದಾರೆ.

''ಆದಿಲ್, ನನ್ನ ಹೆಸರಿನಲ್ಲಿ ದುಬೈನಲ್ಲಿ ಈಗಾಗಲೇ ಒಂದು ಮನೆ ಖರೀದಿಸಿದ್ದಾರೆ. ನಂತರ ಅವರು ನನಗೆ ಒಂದು ಬಿಎಂಡಬ್ಲ್ಯೂ ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಆದಿಲ್​​ ಅವರದ್ದು ನಿಜವಾದ ಪ್ರೀತಿ. ಆತ ನನ್ನ ವಿಚಾರದಲ್ಲಿ ಬಹಳ ಸೀರಿಯಸ್ ಆಗಿದ್ದಾರೆ. ಇಲ್ಲದಿದ್ದರೆ ಆತ ನನ್ನನ್ನು ತನ್ನ ಮನೆಯವರಿಗೆ ಪರಿಚಯಿಸುತ್ತಿರಲಿಲ್ಲ'' ಎಂದು ರಾಖಿ ಆದಿಲ್ ಬಗ್ಗೆ ಹೇಳಿಕೊಂಡಿದ್ದಾರೆ. ಮೈಸೂರು ಮೂಲದ ಆದಿಲ್, ರಾಖಿಗಿಂತ 6 ವರ್ಷ ಚಿಕ್ಕವರು.