ಹುಬ್ಬಳ್ಳಿಯ ಶಹರದಾಗ, ಏಳು ಬಣ್ಣದ ಪ್ರೀತಿ ಇದು ಹಾಡುಗಾರನಿಗೆ ಗೂಗಲ್ ಡೂಡಲ್ ಗೌರವ; ಇಲ್ಲಿದೆ ಕೃಷ್ಣಕುಮಾರ್ ಕುನ್ನತ್ ಪರಿಚಯ
Krishnakumar Kunnath KK: ಹುಬ್ಬಳ್ಳಿಯ ಶಹರದಾಗ, ಏಳು ಬಣ್ಣದ ಪ್ರೀತಿಯಿದು ಮುಂತಾದ ಹಾಡುಗಳನ್ನು ಹಾಡಿರುವ ದಿವಂಗತ ಕೃಷ್ಣಕುಮಾರ್ ಕುನ್ನತ್ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಇವರು ಹಾಡಿರುವ ಪ್ರಮುಖ ಹಾಡುಗಳ ವಿವರ ಇಲ್ಲಿದೆ.
Krishnakumar Kunnath KK: ಕೆಕೆ ಎಂದು ಜನಪ್ರಿಯತೆ ಪಡೆದಿರುವ ಲೆಜೆಂಡರಿ ಪ್ಲೇ ಬ್ಯಾಕ್ ಸಿಂಗರ್ ಕೃಷ್ಣಕುಮಾರ್ ಕುನ್ನತ್ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಭಾರತೀಯ ಸಂಗೀತಕ್ಕೆ ಇವರು ನೀಡಿರುವ ಕೊಡುಗೆಯನ್ನು ಗಮನಿಸಿ ಗೂಗಲ್ ಡೂಡಲ್ ಗೌರವ ನೀಡಲಾಗಿದೆ. ಹುಬ್ಬಳ್ಳಿಯ ಶಹರದಾಗ, ಏಳು ಬಣ್ಣದ ಪ್ರೀತಿಯಿದು ಸೇರಿದಂತೆ ಹಲವು ಜನಪ್ರಿಯ ಹಾಡುಗಳ ಹಿಂದೆಯೂ ಇವರ ಧ್ವನಿಯಿದೆ ಬನ್ನಿ ಯಾರಿವರು ಕೃಷ್ಣಕುಮಾರ್ ಕುನ್ನತ್, ಇವರು ಹಾಡಿರುವ ಜನಪ್ರಿಯ ಹಾಡುಗಳು ಯಾವುವು? ತಿಳಿಯೋಣ.
ಯಾರಿವರು ಕೆಕೆ?
ಕೃಷ್ಣಕುಮಾರ್ ಕುನ್ನತ್ 1968ರ ಆಗಸ್ಟ್ 23ರಂದು ಜನಿಸಿದರು. ಇವರು ಜಾಹೀರಾತುಗಳಿಗೆ ಜಿಂಗಲ್ಸ್ ಹಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಕರಿಯರ್ ಆರಂಭಿಸಿದ್ದರು. 1966ರಲ್ಲಿ ಬಾಜಿಗರ್ ಚಿತ್ರದ Chura Liya Hai Tumne Jo Dil Ko ಹಾಡಿಗೆ ಧ್ವನಿ ನೀಡಿದರು. ಈ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಇದು ಇವರ ಬದುಕಿಗೆ ಬಿಗ್‌ಬ್ರೇಕ್ ನೀಡಿರುವ ಹಾಡೆಂದರೂ ತಪ್ಪಾಗದು. ಈ ಹಾಡಿನ ಮೂಲಕ ಇವರು ಸಂಗೀತಪ್ರಿಯರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು.
ಕೃಷ್ಣಕುಮಾರ್ ಕುನ್ನತ್ ಹಾಡಿರುವ ಪ್ರಮುಖ ಹಾಡುಗಳು
ಕೆಕೆ ಎಂದು ಜನಪ್ರಿಯತೆ ಪಡೆದಿರುವ ಕೃಷ್ಣಕುಮಾರ್ ಕುನ್ನತ್ ಅವರು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬೆಂಗಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಇವರ ಕೆಲವು ಜನಪ್ರಿಯ ಹಿಂದಿ ಹಾಡುಗಳನ್ನು ಹೀಗೆ ಪಟ್ಟಿ ಮಾಡಬಹುದು.
- ಹಮ್ ದಿಲ್‌ದೆ ಚುಕೆ ಸನಮ್‌ನ ತಡಪ್ ತಡಪ್ ಕೆ ಹಾಡು
- ಕೈಟ್ಸ್ ಸಿನಿಮಾದ ಪ್ಯಾರ್ ಕೆ ಪಾಲ್
- ಬಚ್ನಾ ಎ ಹಸೆನೊ ಸಿನಿಮಾದ ಖುಡಾ ಜಾನೆ
- ತುಮ್‌ಮಿಲೆ ದಿಲ್ ಇಬಾತ್
ಕೃಷ್ಣಕುಮಾರ್ ಹಾಡಿರುವ ಕನ್ನಡ ಹಾಡುಗಳು
ಪ್ರೇಮಕ್ಕೆ ಸೈ ಸಿನಿಮಾದ ಪ್ರೇಮದ ಲೋಕ, ಹೆಲೋ ಸಿನಿಮಾದ ಸಿಂಗಪೂರಲ್ಲಿ, ಲವ್ ಸಿನಿಮಾದ ಏಳು ಬಣ್ಣದ, ಮಾರ್‌ಗಯರೇ ಹಾಡುಗಳನ್ನು ಹಾಡಿದ್ದಾರೆ., ರೌಡಿ ಅಳಿಯ ಸಿನಿಮಾದ ನನ್ನ ಹಿಂದೆ ಯಾರು, ಸೆಲ್ಫಿಷ್ ಸೆಲ್ಫಿಷ್, ನ್ಯೂಸ್ ಸಿನಿಮಾದ ಗಿರಗಿಡ ಹಾಡಿಗೆ ಧ್ವನಿಯಾಗಿದ್ದಾರೆ. ಅಣ್ಣತಂಗಿ ಸಿನಿಮಾದ ಹುಬ್ಬಳ್ಳಿಯ ಶಹರಾದಾಗ ಇವರ ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದಾಗಿದೆ. ಮದನ ಸಿನಿಮಾದ ಕಣ್ಣು ನಿನ್ನದು, ಕ್ಷಣಕ್ಷಣ ಸಿನಿಮಾದ ಮಧಿರ ಮಧಿರ ಹಾಡು, ನೀನ್ಯಾರೇ ಸಿನಿಮಾದ ಸೂಪರ್ ಕಂಪ್ಯೂಟರ್, ಪರಿಚಯ ಸಿನಿಮಾದ ನಡೆದಾಡುವ ಕಾಮನಬಿಲ್ಲಿಗೆ ಧ್ವನಿಯಾಗಿದ್ದಾರೆ. ಮನಸಾರಿ ಸಿನಿಮಾದ ಕಣ್ಣ ಹನಿಯೊಂದಿಗೆ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ. ಮಳೆ ಬರಲಿ ಮಂಜು ಇರಲಿ ಸಿನಿಮಾದ ವಿದಾಯದ ವೇಳೆಯಲ್ಲಿ, ಯೋಗಿ ಸಿನಿಮಾದ ಬ್ರೂಸ್ಲಿ ವಂಶ, ಸಂಚಾರಿ ಸಿನಿಮಾದ ಮರೆತೋದ ಮಾತಿದೆ, ಬಹುಪರಾಕ್‌ಸಿನಿಮಾದ ಸ್ನೇಹ ಎಂಬುದು ಮತ್ತು ಆರ್ಯನ್ ಸಿನಿಮಾದ ಒಂದು ಹಾಡು ಮೆಲ್ಲ ಹಾಡಿಗೆ ಧ್ವನಿಯಾಗಿದ್ದಾರೆ.
ಭಾರತದ ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್1968ರ ಆಗಸ್ಟ್ 23ರಂದು ಜನಿಸಿದರು. 2022ರ ಮೇ 31ರಂದು ತನ್ನ 53ನೇ ವಯಸ್ಸಿನಲ್ಲಿ ಮೃತಪಟ್ಟರು. ಕೋಲ್ಕತ್ತಾದ ನಜ್ರುಲ್ ಮಂಚ ಆಡಿಟೋರಿಯಂನಲ್ಲಿ ನಡೆದ ಕಾನ್ಸರ್ಟ್‌ನಲ್ಲಿ ಗಾಯಕ ಕೃಷ್ಣಕುಮಾರ್ ಕುನ್ನತ್ ಲೈವ್ ಪರ್ಫಾಮೆನ್ಸ್ ನೀಡುವಾಗಲೇ ಹೃದಯಘಾತದಿಂದ ಇವರು ಮೃತಪಟ್ಟಿದ್ದರು. ಇವರು ರೋಮ್ಯಾಂಟಿಕ್ ಹಾಡುಗಳ ಮೂಲಕ ಹೆಚ್ಚು ಖ್ಯಾತಿ ಪಡೆದರು. ಇವರು ತನ್ನ ಹಾಡುಗಳಿಗೆ ಹಲವು ಪ್ರಶಸ್ತಿಗಳನ್ನು ಪಡೆದಿದಾರೆ. ಇವರ ಕೆಲವು ಕನ್ನಡ ಹಾಡುಗಳನ್ನು ಕೇಳೋಣ ಬನ್ನಿ.