Rishab Shetty Politics: ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾದ ರಿಷಬ್‌ ಶೆಟ್ಟಿ!?; ಊಹಾಪೋಹಗಳಿಗೆ ತೆರೆ ಎಳೆದ ಕಾಡುಬೆಟ್ಟು ಶಿವ
ಕನ್ನಡ ಸುದ್ದಿ  /  ಮನರಂಜನೆ  /  Rishab Shetty Politics: ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾದ ರಿಷಬ್‌ ಶೆಟ್ಟಿ!?; ಊಹಾಪೋಹಗಳಿಗೆ ತೆರೆ ಎಳೆದ ಕಾಡುಬೆಟ್ಟು ಶಿವ

Rishab Shetty Politics: ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾದ ರಿಷಬ್‌ ಶೆಟ್ಟಿ!?; ಊಹಾಪೋಹಗಳಿಗೆ ತೆರೆ ಎಳೆದ ಕಾಡುಬೆಟ್ಟು ಶಿವ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈ ನಡುವೆ ನಿರ್ದೇಶಕ ರಿಷಬ್‌ ಶೆಟ್ಟಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ! ಹಾಗಾದರೆ ಯಾವ ಪಕ್ಷವಿರಬಹುದು?

ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾದ ರಿಷಬ್‌ ಶೆಟ್ಟಿ!?; ಊಹಾಪೋಹಗಳಿಗೆ ತೆರೆ ಎಳೆದ ಕಾಡುಬೆಟ್ಟು ಶಿವ
ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾದ ರಿಷಬ್‌ ಶೆಟ್ಟಿ!?; ಊಹಾಪೋಹಗಳಿಗೆ ತೆರೆ ಎಳೆದ ಕಾಡುಬೆಟ್ಟು ಶಿವ

Rishab Shetty Politics: ಸ್ಯಾಂಡಲ್‌ವುಡ್‌ನ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯ ‘ಕಾಂತಾರʼ ಸಿನಿಮಾದ ಯಶಸ್ಸಿನ ಗುಂಗಿನಿಂದ ಆಚೆ ಬಂದು, ಆ ಚಿತ್ರದ ಮತ್ತೊಂದು ಭಾಗದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇನ್ನುಳಿದಂತೆ ತಂಡದ ಜತೆಗೆ ಲೊಕೇಷನ್‌ ಹಂಟಿಂಗ್‌, ಸ್ಕ್ರಿಪ್ಟಿಂಗ್‌ ವರ್ಕ್‌ಗೂ ಚಾಲನೆ ನೀಡಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಚುನಾವಣೆಯ ಬಿಸಿಯೂ ಜೋರಾಗಿದೆ.

ಹೌದು, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 10ರಂದು ಚುನಾವಣೆ ನಡೆದರೆ, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ ಸರ್ಕಾರದಿಂದಲೂ ಒಂದಷ್ಟು ಕಟ್ಟು ನಿಟ್ಟಿನ ಆದೇಶಗಳು ಹೊರಬಿದ್ದಿವೆ. ನೀತಿ ಸಂಹಿತೆ ಅಡಿಯಲ್ಲಿ ಖಾಕಿ ಪಡೆಯೂ ಸರ್ವ ಸನ್ನದ್ಧವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಲ್ಲಲ್ಲಿ ರೈಡ್‌, ಅಕ್ರಮ ಸಾಗಣೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಈ ನಡುವೆ, ಸ್ಯಾಂಡಲ್‌ವುಡ್‌ನಲ್ಲಿಯೂ ರಾಜಕೀಯ ಪರ್ವ ಶುರುವಾಗಿದೆ. ಸಾಲು ಸಾಲು ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡು, ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕೆಲವರಿಗೆ ಟಿಕೆಟ್‌ ಸಹ ಅಧಿಕೃತವಾಗಿದೆ. ಈಗ ಇತ್ತೀಚಿನ ಕೆಲ ತಿಂಗಳಿಂದ ಕೇವಲ ಕರ್ನಾಟಕ ಮಾತ್ರವಲ್ಲ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿರುವ ನಟ ರಿಷಬ್‌ ಶೆಟ್ಟಿ ಸಹ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದೇ ಈ ಹಿಂದೆ ಸುದ್ದಿಯಾಗಿತ್ತು.

ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಿಷಬ್‌ ಶೆಟ್ಟಿ ರಾಷ್ಟ್ರೀಯ ಪಕ್ಷವೊಂದಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಪ್ರಬಲವಾಗಿ ಕೇಳಿಬರುತ್ತಿದೆ. ಇನ್ನೇನು ಶೀಘ್ರದಲ್ಲಿ ಘೋಷಣೆಯನ್ನೂ ಮಾಡಲಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಬಿಜೆಪಿಯಿಂದಲೇ ರಿಷಬ್‌ ಕಣಕ್ಕಿಳಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ, ಹುಟ್ಟೂರು ಕುಂದಾಪುರದಿಂದಲೇ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರಂತೆ!

((ಅಷ್ಟಕ್ಕೂ ಈ ಮೇಲಿನ ಸುದ್ದಿಯನ್ನು ನೀವು ನಿಜ ಎಂದುಕೊಂಡರೆ ಇದು ನಿಜವಲ್ಲ.. ಇವತ್ತು ಏಪ್ರಿಲ್‌ 1.. ಹಾಗಾಗಿ ಈ ಏಪ್ರಿಲ್‌ ಪೂಲ್‌ ದಿನಕ್ಕೆ ಈ ಒಂದು ಚುಟುಕು ಸುಳ್‌ ಸುದ್ದಿ..))

ರಾಜಕೀಯದ ಬಗ್ಗೆ ರಿಷಬ್‌ ಸ್ಪಷ್ಟನೆ..

ಇನ್ನು ಈ ರಾಜಕೀಯ ಸೇರ್ಪಡೆ ಬಗ್ಗೆ ನಟ ರಿಷಬ್‌ ಶೆಟ್ಟಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಸೇರಬೇಕೋ ಬೇಡವೋ ಎಂಬುದನ್ನು ಖಚಿತಪಡಿಸಿದ್ದಾರೆ. "ಈಗಾಗಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ" ಎಂದಿದ್ದಾರೆ.

Whats_app_banner