ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್‌, ಮುಂದಿನ ಜಗತ್ತಿನ ದರ್ಶನ ನೀಡಿರುವ ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ-hollywood news best future movies of all time a space odyssey clockwork orange district 9 interstellar ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್‌, ಮುಂದಿನ ಜಗತ್ತಿನ ದರ್ಶನ ನೀಡಿರುವ ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ

ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್‌, ಮುಂದಿನ ಜಗತ್ತಿನ ದರ್ಶನ ನೀಡಿರುವ ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ

Best Future Movies of All Time: ದಿನಭವಿಷ್ಯ, ವಾರಭವಿಷ್ಯ, ಮಾಸಭವಿಷ್ಯ, ವಾರ್ಷಿಕ ಭವಿಷ್ಯಗಳ ಕುರಿತು ನಾವು ಆಸಕ್ತಿವಹಿಸುತ್ತಿದ್ದರೆ, ಕೆಲವು ಸಿನಿಮಾ ನಿರ್ದೇಶಕರು ಮುಂದಿನ ಶತಮಾನಗಳಲ್ಲಿ ಈ ಜಗತ್ತಿನಲ್ಲಿ ಏನಾಗಬಹುದು ಎಂದು ಯೋಚಿಸಿ ಫ್ಯೂಚರಿಸ್ಟಿಕ್‌ ಸಿನಿಮಾಗಳನ್ನು ರಿಲೀಸ್‌ ಮಾಡಿ ಅಚ್ಚರಿ ನೀಡಿದ್ದಾರೆ.

ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್‌, ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ
ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್‌, ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ

Best Future Movies of All Time: ದಿನಭವಿಷ್ಯ, ವಾರಭವಿಷ್ಯ, ಮಾಸಭವಿಷ್ಯ, ವಾರ್ಷಿಕ ಭವಿಷ್ಯಗಳ ಕುರಿತು ನಾವು ಆಸಕ್ತಿವಹಿಸುತ್ತಿದ್ದರೆ, ಕೆಲವು ಸಿನಿಮಾ ನಿರ್ದೇಶಕರು ಮುಂದಿನ ಶತಮಾನಗಳಲ್ಲಿ ಈ ಜಗತ್ತಿನಲ್ಲಿ ಏನಾಗಬಹುದು ಎಂದು ಯೋಚಿಸಿ ಫ್ಯೂಚರಿಸ್ಟಿಕ್‌ ಸಿನಿಮಾಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ವಿಜ್ಞಾನ ಮೊದಲ, ಹಾಲಿವುಡ್‌ ಸಿನಿಮಾ ಮೊದಲ ಎಂದು ಪ್ರಶ್ನಿಸುವಂತೆ ಈ ಸಿನಿಮಾಗಳು ಇರುತ್ತವೆ. ಜಗತ್ತಿಗೆ ಕೊರೊನಾ ಸಾಂಕ್ರಾಮಿಕ ಆಕ್ರಮಿಸುವ ಮೊದಲೇ ಇಂತಹ ವೈರಸ್‌ಗಳಿಂದ ಜಗತ್ತು ತೊಂದರೆ ಅನುಭವಿಸಲಿದೆ ಎಂದು ಎಷ್ಟೋ ಹಾಲಿವುಡ್‌, ಚೈನೀಸ್‌ ಸಿನಿಮಾಗಳು ಬಂದಿದ್ದವು. ಬಾಹ್ಯಾಕಾಶಕ್ಕೆ ಸಂಬಂಧಪಟ್ಟಂತೆಯೂ ಸಾಕಷ್ಟು ವೈಜ್ಞಾನಿಕ ಊಹೆಗಳ ಸಿನಿಮಾಗಳು ಬಂದಿವೆ. ನಮ್ಮ ಭೂಮಿಯ, ಭೂಮಿಯ ಜೀವಜಗತ್ತಿನ, ವಿಶೇಷವಾಗಿ ಭವಿಷ್ಯದ ಮನುಷ್ಯರ ಬದುಕಿನ ಭವಿಷ್ಯದಂತಹ ಸಿನಿಮಾಗಳ ವಿವರ ಪಡೆಯೋಣ ಬನ್ನಿ.

1. ಎ ಸ್ಪೋಸ್‌ ಒಡೆಸ್ಸಿ (2001: A Space Odyssey)

1968ರಲ್ಲಿ ಬಿಡುಗಡೆಯಾದ ಎ ಸ್ಪೇಸ್‌ ಒಡೆಸ್ಸಿ ಸಿನಿಮಾವು ಭವಿಷ್ಯದ ದರ್ಶನ ನೀಡುವ ಸಿನಿಮಾ. ಚಂದ್ರನ ಮೇಲ್ಮೈಗೆ ಅಪರಿಚಿತ ವಸ್ತುವೊಂದು ಬಿದ್ದಾಗ ಅದರ ಜಾಡು ಹಿಡಿದು ಗುರುಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗುತ್ತದೆ. ಇಬ್ಬರು ಗಗನಯಾನಿಗಳು ಮತ್ತು ಸೂಪರ್‌ ಕಂಪ್ಯೂಟರ್‌ ಎಚ್‌ಎಎಲ್‌ 9000 ಅದರಲ್ಲಿರುತ್ತದೆ. ಹಲವು ದಶಕದ ಹಿಂದಿನ ಈ ಸಿನಿಮಾದ ಕಥೆ ವಿಜ್ಞಾನದ ವಾಸ್ತವವೂ ಹೌದು. ಈಗ ಹಲವು ಗ್ರಹಗಳಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗಿದೆ. ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ.

2. ಎ ಕ್ಲಾಕ್‌ವರ್ಕ್‌ ಆರೆಂಜ್‌

ಎ ಕ್ಲಾಕ್‌ವರ್ಕ್ ಆರೆಂಜ್ ಆಂಥೋನಿ ಬರ್ಗೆಸ್‌ನ ಅತ್ಯಂತ ಪ್ರಸಿದ್ಧ ಕಾದಂಬರಿಯಾಗಿದೆ. ಸಾಹಿತ್ಯಿಕ, ಸಂಗೀತ ಮತ್ತು ದೃಶ್ಯ ಸಂಸ್ಕೃತಿಯ ಮೇಲೆ ಈ ಸಿನಿಮಾದ ಪ್ರಭಾವ ವ್ಯಾಪಕ. ಈ ಸಿನಿಮಾದಲ್ಲಿ ಭವಿಷ್ಯದಲ್ಲಿ ಯುವ ಜನರು ಹೇಗಿರಲಿದ್ದಾರೆ ಎಂದು ಊಹಿಸಲಾಗಿತ್ತು. ಬಳಿಕ ಸಾಕಷ್ಟು ಅಪರಾಧಗಳು ಈ ಸಿನಿಮಾದಲ್ಲಿದ್ದಂತೆ ನಡೆದದ್ದು ಇತಿಹಾಸ.

3. ಡಿಸ್ಟ್ರಿಕ್ಟ್‌ 9

ಇದು ಅನ್ಯಗ್ರಹ ಜೀವಿಗಳಿಗೆ ಸಂಬಂಧಪಟ್ಟ ಸಿನಿಮಾ. ಭೂಮಿಯ ಡಿಸ್ಟ್ರಿಕ್ಟ್‌ ನೈನ್‌ಗೆ ಆಗಮಿಸುವ ಏಲಿಯನ್ಸ್‌ಗಳ ಕಥೆ ಹೊಂದಿದೆ. ಅನ್ಯಲೋಕದ ಕಥೆಯೊಂದಿಗೆ ವೀಕ್ಷಕರಿಗೆ ಚಿಂತನೆಗೆ ಹಚ್ಚುವಂತಹ ಸಿನಿಮಾ ಇದಾಗಿದೆ. ಈ ಸಿನಿಮಾವು ಕಥೆ ಹೇಳುವ ರೀತಿ, ಚಿಂತನೆಗೆ ಪ್ರಚೋದಿಸುವ ವಿಷಯಗಳಿಂದ ಜನಪ್ರಿಯತೆ ಪಡೆದಿದೆ. 2009ರಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ನೀಲ್‌ ಬ್ಲೂಮ್‌ಕ್ಯಾಂಪ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

4. ಇಂಟರ್‌ಸ್ಟೆಲ್ಲರ್‌ (Interstellar)

ಬಾಹ್ಯಾಕಾಶದ ಕಥೆ ಹೊಂದಿರುವ ಇಂಟರ್‌ಸ್ಟೆಲ್ಲರ್‌ ಸಿನಿಮಾವು ಜಗತ್ತಿನ ಪ್ರಮುಖ ಫ್ಯೂಚರಿಸ್ಟಿಕ್‌ ಸಿನಿಮಾಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಈ ಭೂಮಿ ವಾಸಕ್ಕೆ ಯೋಗ್ಯವಲ್ಲದ ಪ್ರದೇಶವಾದ ಸಂದರ್ಭದಲ್ಲಿ ಮನುಷ್ಯರ ವಾಸಕ್ಕೆ ಭೂಮಿಯ ಹತ್ತಿರದಲ್ಲಿರುವ ಬೇರೆ ಗ್ರಹವನ್ನು ಹುಡುಕುವಂತಹ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ನಮ್ಮ ಭವಿಷ್ಯದಲ್ಲಿ ಹಲವು ನೂರು ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ.

5. 12 ಮಂಕೀಸ್‌ (12 Monkeys)

1990ರ ಈ ಸಿನಿಮಾವು ಪ್ರಮುಖ ಫ್ಯೂಚರಿಸ್ಟಿಕ್‌ ಸಿನಿಮಾಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಸಂಭವಿಸುವುದಕ್ಕೆ ಭೂತಕಾಲ ಹೇಗೆ ಸಹಾಯ ಮಾಡುತ್ತದೆ ಇತ್ಯಾದಿ ಅಂಶಗಳನ್ನು ಈ ಸಿನಿಮಾ ಹೊಂದಿದೆ.

ಇದು ಭವಿಷ್ಯದ ಆಲೋಚನೆ ಹೊಂದಿರುವಂತಹ ಪ್ರಮುಖ ಸಿನಿಮಾಗಳಿಗೆ ಉದಾಹರಣೆಗಳು. ಇವಿಷ್ಟೇ ಅಲ್ಲ. ಇಂತಹ ಸುಮಾರು 25 ಸಿನಿಮಾಗಳ ನೀವು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಓದಲಿದ್ದೀರಿ. ಸಿನಿಮಾ, ಸೀರಿಯಲ್‌ ಮತ್ತು ಒಟಿಟಿ ಸುದ್ದಿಗಳಿಗಾಗಿ ನಿರಂತರವಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಮನರಂಜನೆ ವಿಭಾಗಕ್ಕೆ ಭೇಟಿ ನೀಡುತ್ತ ಇರಿ.