ಕನ್ನಡ ಸುದ್ದಿ  /  ಮನರಂಜನೆ  /  ಮಸ್ತ್‌ ಕಾಮಿಡಿ: ಡೇವಿಡ್‌ ವಾರ್ನರ್‌ ಆಕ್ಟಿಂಗ್‌, ಎಸ್‌ಎಸ್‌ ರಾಜಮೌಳಿ ಶೂಟಿಂಗ್‌; ಹೇ ರಾಜಾ ಕುದುರೆ ಬೇಡ, ಕಾಂಗಾರೂ ಬೇಕು

ಮಸ್ತ್‌ ಕಾಮಿಡಿ: ಡೇವಿಡ್‌ ವಾರ್ನರ್‌ ಆಕ್ಟಿಂಗ್‌, ಎಸ್‌ಎಸ್‌ ರಾಜಮೌಳಿ ಶೂಟಿಂಗ್‌; ಹೇ ರಾಜಾ ಕುದುರೆ ಬೇಡ, ಕಾಂಗಾರೂ ಬೇಕು

ಆಸ್ಟ್ರೆಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಮತ್ತು ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ ಕಮರ್ಷಿಯಲ್‌ ಜಾಹೀರಾತೊಂದು ವೈರಲ್‌ ಆಗಿದೆ. ಡೇವಿಡ್‌ ವಾರ್ನರ್‌ನನ್ನು ಹಾಕಿಕೊಂಡು ಸಿನಿಮಾ ತೆಗೆಯುವ ಅನಿವಾರ್ಯ ಪರಿಸ್ಥಿತಿ ರಾಜಮೌಳಿಗೆ ಬಂದಿದೆ. ಈ ಶೂಟಿಂಗ್‌ ಸನ್ನಿವೇಶ ಸಖತ್‌ ಕಾಮಿಡಿಯಾಗಿದೆ.

ಮಸ್ತ್‌ ಕಾಮಿಡಿ: ಡೇವಿಡ್‌ ವಾರ್ನರ್‌ ಆಕ್ಟಿಂಗ್‌, ಎಸ್‌ಎಸ್‌ ರಾಜಮೌಳಿ ಶೂಟಿಂಗ್‌
ಮಸ್ತ್‌ ಕಾಮಿಡಿ: ಡೇವಿಡ್‌ ವಾರ್ನರ್‌ ಆಕ್ಟಿಂಗ್‌, ಎಸ್‌ಎಸ್‌ ರಾಜಮೌಳಿ ಶೂಟಿಂಗ್‌ (X/@davidwarner31)

ಆಸ್ಟ್ರೆಲಿಯಾದ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಮತ್ತು ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಇಬ್ಬರೂ ಒಂದಾಗಿದ್ದಾರೆ. ಇಬ್ಬರೂ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಡೇವಿಡ್‌ ವಾರ್ನರ್‌ ಕ್ರಿಕೆಟ್‌ ಬಿಟ್ಟು ಸಿನಿಮಾದಲ್ಲಿ ಆಕ್ಟಿಂಗ್‌, ಡೈರೆಕ್ಷನ್‌ ಏನಾದ್ರೂ ಶುರು ಮಾಡಿದ್ನ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಜಾಹೀರಾತವೊಂದರಲ್ಲಿ ಎಸ್‌ಎಸ್‌ ರಾಜಮೌಳಿ ಮತ್ತು ಡೇವಿಡ್‌ ವಾರ್ನರ್‌ ಜತೆಯಾಗಿದ್ದಾರೆ. ಇಲ್ಲಿ ಡೇವಿಡ್‌ ವಾರ್ನರ್‌ ಮಾತುಗಳು ಒಳ್ಳೆ ಕಾಮಿಡಿ ಎಂದೆನಿಸಬಹುದು. "ಹೇ ರಾಜಾ ಅದು ಆರ್‌ಆರ್‌ಆರ್‌ (ಸಿನಿಮಾದ ಹೆಸರು) ಅಥವಾ ರ್‌ರ್‌ರ್‌ಅ" ಎಂದು ವಾರ್ನರ್‌ ಪ್ರಶ್ನಿಸುವುದು ಸೇರಿದಂತೆ ಹಲವು ಅಂಶಗಳು ಇವೆ. ಬಾಹುಬಲಿ ಸಿನಿಮಾವನ್ನು ಹೋಲುವ ಹಲವು ದೃಶ್ಯಗಳು ಇವೆ.

ಟ್ರೆಂಡಿಂಗ್​ ಸುದ್ದಿ

"ಡೇವಿಡ್‌ ಅವರೇ ನನಗೆ ನಿಮ್ಮ ಮ್ಯಾಚ್‌ ಟಿಕೆಟ್‌ಗೆ ಡಿಸ್ಕೌಂಟ್‌ ಏನಾದ್ರು ದೊರಕಬಹುದಾ?" ಎಂದು ಎಸ್‌ಎಸ್‌ ರಾಜಮೌಳಿ ಅವರು ಡೇವಿಡ್‌ ವಾರ್ನರ್‌ಗೆ ಕಾಲ್‌ ಮಾಡಿ ಕೇಳುತ್ತಾರೆ. ಅದಕ್ಕೆ ಡೇವಿಡ್‌ "ರಾಜಾ ಸರ್‌, ನಿಮ್ಮಲ್ಲಿ ಕ್ರೆಡ್‌ ಯುಪಿಐ ಇದ್ರೆ ನಿಮಗೆ ಡಿಸ್ಕೌಂಟ್‌ ದೊರಕುತ್ತದೆ" ಎಂದು ಹೇಳುತ್ತಾನೆ. "ನಾರ್ಮಲ್‌ ಯುಪಿಐ ಇದ್ರೆ ಆಗೋದಿಲ್ವ?" ಎಂದು ರಾಜಮೌಳಿ ಪ್ರಶ್ನಿಸುತ್ತಾರೆ.

ಕತ್ತಿ ಬದಲು ಬ್ಯಾಟ್‌ ತೆಗೆದ ವಾರ್ನರ್‌

"ನಿಮಗೆ ಡಿಸ್ಕೌಂಟ್‌ ದೊರಕಬೇಕಾದ್ರೆ ನೀವು ನನಗಾಗಿ ಒಂದು ಫೇವರ್‌ ಮಾಡಬೇಕು" ಎಂದು ವಾರ್ನರ್‌ ಹೇಳುತ್ತಾನೆ. ಈ ಮೂಲಕ ನೀವು ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎನ್ನುವ ಅರ್ಥದಲ್ಲಿ ಮಾತನಾಡುತ್ತಾನೆ. ಮುಂದೆ ಬಾಹುಬಲಿಯಂತಹ ದೃಶ್ಯ ಕಾಣಿಸಿಕೊಳ್ಳುತ್ತದೆ. ವಾರ್ನರ್‌ ಹೀರೋ ಲುಕ್‌ನಲ್ಲಿದ್ದಾನೆ. ರಾಕ್ಷಸ ಮುಖದ ವಿಲನ್‌ ಬಂದಾಗ ಡೇವಿಡ್‌ ವಾರ್ನರ್‌ ಕತ್ತಿ ಹೊರಕ್ಕೆ ತೆಗೆಯುವ ಬದಲು ಬ್ಯಾಟ್‌ ತೆಗೆಯುತ್ತಾರೆ. ರಾಜಮೌಳಿ ಕೋಪದಿಂದ ಕಟ್‌ ಕಟ್‌ ಅನ್ನುತ್ತಾರೆ. ಸಹಾಯಕನೊಬ್ಬ ಡೇವಿಡ್‌ ಕೈಯಿಂದ ಬ್ಯಾಟ್‌ ಕಸಿದು ಕತ್ತಿ ನೀಡುತ್ತಾನೆ.

ಮತ್ತೊಂದು ದೃಶ್ಯದಲ್ಲಿ ಎದೆಗೆ ಬಾಣ ಚುಚ್ಚಿಕೊಂಡ ವಾರ್ನರ್‌ "ಗೋಪಾಲಾ......" ಎಂದು ಹೇಳಿ ಪ್ರಾಣ ಬಿಡುತ್ತಾನೆ. ಇದರ ಸೀನ್‌ ನೋಡಿಕೊಂಡು ವಾರ್ನರ್‌ "ಆಸ್ಕರ್‌ ಸಿಗಬಹುದಾ" ಎಂದಾಗ ಡೈರೆಕ್ಟರ್‌ ರಾಜಮೌಳಿಗೆ ಇನ್ನಷ್ಟು ತಲೆ ಕೆಡುತ್ತದೆ.

ಕುದುರೆ ಬೇಡ, ಕಾಂಗಾರೂ ರೈಡ್‌

ಇದಾದ ಬಳಿಕ ಅಹ್ಹಾ ಅಹ್ಹಾ ಎಂಬ ಹಾಡು ಇರುತ್ತದೆ. ಅದಾದ ಬಳಿಕ ಊಟ ಮಾಡುವ ಸಂದರ್ಭದಲ್ಲಿ ಡೇವಿಡ್‌ ವಾರ್ನರ್‌ "ಹೇ ರಾಜಾ ಅದು ಆರ್‌ ಆರ್‌ ಆರ್‌ ಅಥವಾ ರ್‌ರ್‌ರ್‌" ಎಂದು ಉಚ್ಛಾರದ ಬಗ್ಗೆ ಪ್ರಶ್ನಿಸುತ್ತಾನೆ. ಬಳಿಕ ಫೈಟಿಂಗ್‌ ಸೀನ್‌ನಲ್ಲಿ ಡೇವಿಡ್‌ ವಾರ್ನರ್‌ ತಾರಾಮಾರಾ ಗದೆಯಲ್ಲಿ ಹೊಡೆಯುತ್ತಾನೆ. ಎದುರಾಳಿಗಳು ಮಾತ್ರವಲ್ಲದೆ ಶೂಟಿಂಗ್‌ ಮಾಡುವ ಕ್ಯಾಮೆರಾವೂ ಹೊಡೆದು ಹೋಗುತ್ತದೆ. ಇದಾದ ಬಳಿಕ ಕುದುರೆಯಲ್ಲಿ ಪ್ರಯಾಣಿಸುವ ದೃಶ್ಯದಲ್ಲಿ "ನನಗೆ ಕುದುರೆ ಬದಲು ಕಾಂಗಾರೂ ದೊರಕಬಹುದೇ" ಎಂದು ಡೇವಿಡ್‌ ಕೇಳುತ್ತಾನೆ. ಇವನ ಜತೆ ಶೂಟಿಂಗ್‌ಗಿಂತ ಯುಪಿಐ ಅಪ್‌ಗ್ರೇಡ್‌ ಮಾಡಿ ಟಿಕೆಟ್‌ಗೆ ಡಿಸ್ಕೌಂಟ್‌ ಪಡೆಯುವುದೇ ವಾಸಿ ಎಂದು ರಾಜಮೌಳಿ ಭಾವಿಸುತ್ತಾನೆ. ಈ ಜಾಹೀರಾತು ವಿಡಿಯೋ ಮುಂದಿದೆ.

ಈ ಜಾಹೀರಾತು ವಿಡಿಯೋವನ್ನು ಎಸ್‌ಎಸ್‌ ರಾಜಮೌಳಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು "ನನ್ನ ಜೀವನದ ದೀರ್ಘವಾದ ಶೂಟಿಂಗ್‌" ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನರು "ಹಿಲರಿಯಸ್‌" "ಸಖತ್‌ ಕಾಮಿಡಿ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

IPL_Entry_Point