ಕನ್ನಡ ಸುದ್ದಿ  /  ಮನರಂಜನೆ  /  Director Vs Actor: ರಾಜಮೌಳಿ ಪ್ರಭಾಸ್‌, ಪ್ರಶಾಂತ್‌ ನೀಲ್‌ ಯಶ್‌; ನಿರ್ದೇಶಕ ವರ್ಸಸ್‌ ನಾಯಕರಲ್ಲಿ ಯಾರು ಗ್ರೇಟ್‌, ಯಾರಿಗೆ ಹೆಚ್ಚು ಸಂಬಳ

Director vs Actor: ರಾಜಮೌಳಿ ಪ್ರಭಾಸ್‌, ಪ್ರಶಾಂತ್‌ ನೀಲ್‌ ಯಶ್‌; ನಿರ್ದೇಶಕ ವರ್ಸಸ್‌ ನಾಯಕರಲ್ಲಿ ಯಾರು ಗ್ರೇಟ್‌, ಯಾರಿಗೆ ಹೆಚ್ಚು ಸಂಬಳ

Director vs Actor: ಸಲಾರ್‌ ಸಿನಿಮಾ ಮುಂದಿನ ವಾರ ಬಿಡುಗಡೆಯಾಗಲಿದೆ. ಈಗ ಡೈರೆಕ್ಟರ್‌ ವರ್ಸಸ್‌ ನಾಯಕ ನಟರ ಕಾಲ. ರಾಜಮೌಳಿ, ಪ್ರಶಾಂತ್‌ ನೀಲ್‌ರಂತಹ ನಿರ್ದೇಶಕರ ಸಿನಿಮಾದಲ್ಲಿ ನಾಯಕ ಅಥವಾ ನಾಯಕಿಯಾಗಲು ಸಾಕಷ್ಟು ಕಲಾವಿದರು ಕನಸು ಕಾಣುತ್ತಾರೆ. ಈ ಲೇಖನದಲ್ಲಿ ಪ್ರಮುಖ ನಿರ್ದೇಶಕರು ಮತ್ತು ನಾಯಕ ನಟರ ನಡುವಿನ ಹೋಲಿಕೆ ನೀಡಲಾಗಿದೆ.

Director vs Actor: ರಾಜಮೌಳಿ ಪ್ರಭಾಸ್‌, ಪ್ರಶಾಂತ್‌ ನೀಲ್‌ ಯಶ್‌
Director vs Actor: ರಾಜಮೌಳಿ ಪ್ರಭಾಸ್‌, ಪ್ರಶಾಂತ್‌ ನೀಲ್‌ ಯಶ್‌

ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಡೈರೆಕ್ಟರ್‌ಗೆ ಸ್ಟಾರ್‌ ನಟನಿಗಿಂತ ಹೆಚ್ಚು ಪ್ರಶಂಸೆ ದೊರಕಲು ಆರಂಭವಾಗಿರುವುದು ಉತ್ತಮ ಬೆಳವಣಿಗೆ. ಈ ಟ್ರೆಂಡ್‌ ಹಲವು ದಶಕಗಳ ಹಿಂದೆಯೂ ಆಗಿರಬಹುದು. ಪುಟ್ಟಣ ಕಣಗಾಲ್‌ರಂತಹ ನಿರ್ದೇಶಕರನ್ನು ಕಂಡ ನಾಡು ಇದು. ಇತ್ತೀಚಿನ ವರ್ಷಗಳಲ್ಲಿ ರಾಜಮೌಳಿ, ಪ್ರಶಾಂತ್‌ ನೀಲ್‌ ಸ್ಟಾರ್‌ ನಿರ್ದೇಶಕರಾಗಿ ಜನಪ್ರಿಯರು. ಈ ಸ್ಟಾರ್‌ ನಿರ್ದೇಶಕರ ಕೈಗೆ ಯಾವುದಾದರೂ ಕಥೆ ಸಿಕ್ಕರೆ ಅದೊಂದು ಸುಂದರ ಕಲಾಕೃತಿ ಸಿನಿಮಾವಾಗಿ ಹೊರಬರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅಂತಹ ಅದ್ಭುತ ಪ್ರತಿಭಾನ್ವಿತರು. ಇವರ ಕೈಗೆ ಸಿಕ್ಕ ನಾಯಕ ನಟರೂ ಸಾಕಷ್ಟು ಜನಪ್ರಿಯತೆ ಪಡೆಯುತ್ತಾರೆ. ಇಲ್ಲಿ ನಾಯಕರ ಪ್ರತಿಭೆಯೂ ಕಾರಣವಾಗಿರುತ್ತದೆ. ನಾಯಕರ ಪ್ರತಿಭೆಯನ್ನು ಇನ್ನಷ್ಟು ಒರೆಗೆ ಹಚ್ಚುವ ಸಾಮರ್ಥ್ಯ ಈ ನಿರ್ದೇಶಕರಿಗಿದೆ.

ಟ್ರೆಂಡಿಂಗ್​ ಸುದ್ದಿ

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಬಿಡುಗಡೆಯಾದ ಬಳಿಕ ಸಾಕಷ್ಟು ಜನರು ಅಚ್ಚರಿಗೊಂಡಿದ್ದರು. ಈ ಸಿನಿಮಾದಲ್ಲಿ ಸಹಜವಾಗಿ ಸಿನಿಮಾ ಪ್ರೇಕ್ಷಕರಿಗೆ ಮೊದಲು ಕಣ್ಣಿಗೆ ಬಿದ್ದವರು ನಟ ರಾಮ್‌ ಚರಣ್‌. ತೆರೆಯ ಮೇಲೆ ಕಾಣುವ ಪ್ರತಿಭೆಯಾಗಿರುವ ಕಾರಣ ರಾಮ್‌ ಚರಣ್‌ ನಟನೆಗೆ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಜತೆಗೆ, ಇಷ್ಟೊಂದು ಅದ್ಭುತವಾದ ಸಿನಿಮಾವನ್ನು ಕಟ್ಟಿಕೊಟ್ಟದ್ದು ಯಾರು? ಆ ಅರಮನೆಯ ದೃಶ್ಯಗಳು, ವಿಎಫ್‌ಎಕ್ಸ್‌, ಗ್ರಾಫಿಕ್ಸ್‌, ಹಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸುವಂತಹ ತಂತ್ರಜ್ಞಾನ ಇತ್ಯಾದಿಗಳನ್ನೆಲ್ಲ ನೋಡಿದಾಗ ಈ ಸಿನಿಮಾ ನಿರ್ದೇಶಿಸಿದ್ದು ಯಾರು ಎಂದು ಎಲ್ಲರೂ ಯೋಚಿಸಲು ಶುರು ಮಾಡಿದರುು. ರಾಜಮೌಳಿ ಕೂಡ ಈ ಸಿನಿಮಾದಲ್ಲಿ ತೆರೆಹಿಂದಿನ ಹೀರೋ ಆಗಿ ಕಾಣಿಸಿಕೊಂಡರು.

ಒಳ್ಳೆಯ ನಿರ್ದೇಶಕನಿಗೆ ಹೀರೋ ಇಲ್ಲದೆ ಇದ್ದರೂ ಜನಪ್ರಿಯ ಸಿನಿಮಾ ಹೊರತೆಗೆಯಲು ಸಾಧ್ಯವಾಗುತ್ತದೆಯೇ? ಏಕೆ ಸಾಧ್ಯವಿಲ್ಲ? “ಈಗ” ಸಿನಿಮಾದಲ್ಲಿ ಒಂದು ಸೊಳ್ಳೆಯನ್ನೇ ಹೀರೋ ಮಾಡಿದ ಖ್ಯಾತಿ ಇವರದ್ದು. ಆ ಸಿನಿಮಾದಲ್ಲಿ ವಿಲನ್‌ ಆಗಿ ನಟಿಸಿದ್ದ ನಮ್ಮ ಕಿಚ್ಚ ಸುದೀಪ್‌ ನಟನೆಯೂ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದಾದ ಬಳಿಕ ಬಾಹುಬಲಿ, ಆರ್‌ಆರ್‌ಆರ್‌ ಇತ್ಯಾದಿ ಸಿನಿಮಾಗಳು ಜಗತ್ತಿನ ಗಮನ ಸೆಳೆದಿವೆ.

ಅಲ್ಲೊಬ್ಬ ರಾಜಮೌಳಿ ಹೀಗೆ ಶೈನ್‌ ಆಗುತ್ತಿರುವಾಗ ನಮ್ಮ ಹೊಂಬಾಳೆ ಟೀಮ್‌ನಲ್ಲಿ ಪ್ರಶಾಂತ್‌ ನೀಲ್‌ ಎಲ್ಲರ ಗಮನ ಸೆಳೆದಿದ್ದರು. ರಾಜಮೌಳಿಗೆ ಸರಿಸಾಟಿಯಾದ ಇನ್ನೊಬ್ಬ ನಿರ್ದೇಶಕ ತಾನೆಂದು ಕೆಜಿಎಫ್‌ ಸಿನಿಮಾದ ಮೂಲಕ ಸಾಬೀತುಪಡಿಸಿದರು. ಈ ಸಿನಿಮಾದ ಮೂಲಕ ನಮ್ಮ ಸ್ಯಾಂಡಲ್‌ವುಡ್‌ನ ನೆಚ್ಚಿನ ಹೀರೋ ಯಶ್‌ ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ ವಿಶ್ವಾದ್ಯಂತ ಶೈನ್‌ ಆದ್ರು.

ನಿರ್ದೇಶಕ ವರ್ಸಸ್‌ ನಾಯಕರಲ್ಲಿ ಯಾರು ಗ್ರೇಟ್‌?

ಈ ಪ್ರಶ್ನೆಗೆ ನಿಸ್ಸಂಶಯವಾಗಿ ನಿರ್ದೇಶಕರೇ ಗ್ರೇಟ್‌ ಎನ್ನಬಹುದು. ಜನಸಾಮಾನ್ಯ ಪ್ರೇಕ್ಷಕರಿಗೆ ನಾಯಕ ನಟ ಗ್ರೇಟ್‌ ಆಗಿ ಕಾಣಿಸಬಹುದು. ಆದರೆ, ಸಿನಿಮಾರಂಗ ಬಲ್ಲವರಿಗೆ ನಿರ್ದೇಶಕರು ಗ್ರೇಟ್‌ ಆಗಿ ಕಾಣಿಸುತ್ತಾರೆ. ಆದರೆ, ಹೊರಜಗತ್ತಿನಲ್ಲಿ ಹೆಚ್ಚು ಮನ್ನಣೆ ದೊರಕುವುದು ನಾಯಕನಿಗೆ. ಸುಂದರ ಶಿಲ್ಪವೊಂದು ದೇಗುಲದಲ್ಲಿ ಮೂರ್ತಿಯಾಗಿ ಆರಾದಿಸುತ್ತಿರುವಾಗ, ಆ ಮೂರ್ತಿ ಕೆತ್ತಿದ ಕಲಾವಿದ ತೆರೆಮೆರೆಯಲ್ಲಿ ಇರುತ್ತಾನೆ. ಕೆಜಿಎಫ್‌ ಸಿನಿಮಾದ ಬಳಿಕ ಯಶ್‌ಗೂ ಇದೇ ರೀತಿಯ ಜನಪ್ರಿಯತೆ ದೊರಕಿತ್ತು. ಪ್ರಭಾಸ್‌ ಕೂಡ ಹೆಚ್ಚು ಜನಪ್ರಿಯತೆ ಪಡೆದರು. ರಾಮ್‌ಚರಣ್‌ಗೂ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ದೊರಕಿತು. ಒಳ್ಳೆಯ ನಿರ್ದೇಶಕರ ಕೈಗೆ ಪ್ರತಿಭಾನ್ವಿತ ಕಲಾವಿದರು ಸಿಕ್ಕಿದರೆ ಅದ್ಭುತ ಫಲಿತಾಂಶ ದೊರಕುತ್ತದೆ ಎನ್ನುವುದಕ್ಕೆ ಇದನ್ನು ನಿದರ್ಶನವಾಗಿ ಪರಿಗಣಿಸಬಹುದು.

ನಿರ್ದೇಶಕ ವರ್ಸಸ್‌ ನಾಯಕ: ಯಾರಿಗೆ ಹೆಚ್ಚು ಸಂಬಳ

ಈ ವಿಷಯದಲ್ಲಿ ರಾಜಮೌಳಿ, ಪ್ರಶಾಂತ್‌ ನೀಲ್‌ ವಿಷಯದಲ್ಲಿ ಡೈರೆಕ್ಟರೇ ಗ್ರೇಟ್‌ ಎನ್ನಬಹುದು. ಆರ್‌ಆರ್‌ಆರ್‌ ಸಿನಿಮಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ಗೆ ತಲಾ 45 ಕೋಟಿ ರೂಪಾಯಿ ಸಂಭಾವನೆ ದೊರಕಿದೆ. ರಾಜಮೌಳಿಗೆ ಸಿನಿಮಾದ ಶೇಕಡ 30 ಪರ್ಸೆಂಟ್‌ ಲಾಭವೇ ಸಂಭಾವನೆಯಾಗಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಕೆಲವು ವರದಿಗಳ ಪ್ರಕಾರ ಎಸ್‌ಎಸ್‌ ರಾಜಮೌಳಿ ಅವರು ಬಾಹುಬಲಿ ಸಿನಿಮಾಕ್ಕೆ ರಾಜಮೌಳಿ ಅವರು 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅದಾದ ಬಳಿಕ ಮುಂದಿನ ಪ್ರಾಜೆಕ್ಟ್‌ಗಳಿಗೆ ತನ್ನ ಸಂಭಾವನೆಯನ್ನು 100 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಬಾಹುಬಲಿ ಭಾಗ ಒಂದು ಮತ್ತು ಭಾಗ ಎರಡರಲ್ಲಿ ನಟಿಸಲು ಪ್ರಭಾಸ್‌ಗೆ ಒಟ್ಟು 25 ಕೋಟಿ ರೂಪಾಯಿ ವೇತನ ನೀಡಲಾಗಿದೆಯಂತೆ. ವೇತನದ ವಿಷಯದಲ್ಲಿ ಇಲ್ಲಿ ರಾಜಮೌಳಿಯೇ ಹೆಚ್ಚು ಎನ್ನುವುದನ್ನು ಕಂಡುಕೊಳ್ಳಬಹುದು.

ಯಶ್‌ ವರ್ಸಸ್‌ ಪ್ರಶಾಂತ್‌ ನೀಲ್‌

ಕನ್ನಡ ನಟ ಯಶ್‌ಗೆ ಕೆಜಿಎಫ್‌ ಸಿನಿಮಾಕ್ಕೆ ಒಳ್ಳೆಯ ಸಂಭಾವನೆಯೇ ದೊರಕಿದೆ. ಕೆಜಿಎಫ್‌ 2ಗೆ ಇವರಿಗೆ 30 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾಕ್ಕಾಗಿ ತನ್ನ ಅಮೂಲ್ಯ 4 ವರ್ಷಗಳನ್ನು ರಾಕಿಂಗ್‌ ಸ್ಟಾರ್‌ ಯಶ್‌ ಮೀಸಲಿಟ್ಟಿದ್ದರು. ಅವರ ಕಠಿಣ ಪರಿಶ್ರಮ, ಶ್ರದ್ಧೆಯ ಕಾರಣಕ್ಕಾಗಿ 30 ಕೋಟಿ ರೂಪಾಯಿ ನೀಡಲಾಗಿತ್ತು. ಇದೇ ಸಿನಿಮಾ ನಿರ್ದೇಶನ ಮಾಡಿದ ಪ್ರಶಾಂತ್‌ ನೀಲ್‌ಗೆ 20 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಲ್ಲಿ ನಿರ್ದೇಶಕರಿಗಿಂತ ನಾಯಕ ನಟ ಹೆಚ್ಚು ವೇತನ ಪಡೆದಿದ್ದಾರೆ. ಆದರೆ, ಸಲಾರ್‌ ಸಿನಿಮಾಕ್ಕೆ ಇದೇ ಪ್ರಶಾಂತ್‌ ನೀಲ್‌ಗೆ 50 ಕೋಟಿ ರೂಪಾಯಿ ವೇತನ ನೀಡಲಾಗಿದೆ. ಇದೇ ಸಮಯದಲ್ಲಿ ಪ್ರಭಾಸ್‌ಗೆ ಸಲಾರ್‌ ಸಿನಿಮಾ ಪ್ರಾಜೆಕ್ಟ್‌ಗೆ 100 ಕೋಟಿ ರೂಪಾಯಿ ಮತ್ತು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಶೇಕಡ 10 ಹೆಚ್ಚುವರಿಯಾಗಿ ದೊರಕಲಿದೆ ಎಂದು ವರದಿಗಳು ತಿಳಿಸಿವೆ. ಇಲ್ಲೂ ಡೈರೆಕ್ಟರ್‌ಗಿಂತ ನಾಯಕ ನಟನಿಗೆ ಹೆಚ್ಚು ವೇತನ ದೊರಕಿದ ಹಾಗಾಯಿತು.

ಕಾಂತಾರ ಸಿನಿಮಾದ ರಿಷಬ್‌ ಶೆಟ್ಟಿಗೆ ಈ ರೀತಿಯ ಹೋಲಿಕೆ ಕಷ್ಟವಿಲ್ಲ. ಕಾಂತಾರ ಸಿನಿಮಾಕ್ಕೆ ಅವರೇ ನಿರ್ದೇಶಕರು, ಅವರೇ ನಾಯಕರು. ಸ್ಟಾರ್‌ ನಟರಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ. ಸಿನಿಮಾವೊಂದು ಯಶಸ್ಸು ಪಡೆಯಲು, ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚಿನ ಗಳಿಕೆ ಮಾಡಲು ಇಂತಹ ಫ್ಯಾನ್‌ ಬೇಸ್‌ ನೆರವಾಗುತ್ತದೆ. ನಿರ್ದೇಶಕರ ಫ್ಯಾನ್‌ ಬೇಸ್‌ಗಿಂತ ನಾಯಕ, ನಾಯಕಿ, ಇತರೆ ಕಲಾವಿದರ ಫ್ಯಾನ್‌ ಬೇಸ್‌ ಕೂಡ ಸಿನಿಮಾದ ಯಶಸ್ಸಿಗೆ ಪೂರಕವಾಗುತ್ತದೆ.

IPL_Entry_Point