ಕನ್ನಡ ಸುದ್ದಿ  /  ಮನರಂಜನೆ  /  ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಮಾತ್ರವಲ್ಲ ಕಲ್ಕಿ 2898 ಎಡಿ ಚಿತ್ರದಲ್ಲಿದ್ದಾರೆ ಮಲಯಾಳಂ, ತೆಲುಗು, ತಮಿಳು ಸ್ಟಾರ್‌ ನಟರು

ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಮಾತ್ರವಲ್ಲ ಕಲ್ಕಿ 2898 ಎಡಿ ಚಿತ್ರದಲ್ಲಿದ್ದಾರೆ ಮಲಯಾಳಂ, ತೆಲುಗು, ತಮಿಳು ಸ್ಟಾರ್‌ ನಟರು

ಬಹುನಿರೀಕ್ಷಿತ ಕಲ್ಕಿ 2898 ಎಡಿ ಸಿನಿಮಾ ಇಂದು ( ಜೂನ್‌ 27) ರಿಲೀಸ್‌ ಆಗಿದೆ. ಚಿತ್ರ ತಂಡ ಗುರುವಾರ ಇನ್‌ಸ್ಟಾಗ್ರಾಮ್‌ ಲೈವ್‌ ಬಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಪ್ರಭಾಸ್‌, ದೀಪಿಕಾ ಪಡುಕೋಣೆಯಂಥ ಸೂಪರ್‌ ಸ್ಟಾರ್‌ಗಳು ಮಾತ್ರವಲ್ಲ ವಿಜಯ್‌ ದೇವರಕೊಂಡ, ದುಲ್ಕರ್‌ ಸಲ್ಮಾನ್‌ನಂಥ ಸ್ಟಾರ್‌ ನಟರೂ ಇದ್ದಾರೆ ಎಂದಿದೆ.

ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಮಾತ್ರವಲ್ಲ ಕಲ್ಕಿ 2898 ಎಡಿ ಚಿತ್ರದಲ್ಲಿದ್ದಾರೆ ಮಲಯಾಳಂ, ತೆಲುಗು, ತಮಿಳು ಸ್ಟಾರ್‌ ನಟರು
ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಮಾತ್ರವಲ್ಲ ಕಲ್ಕಿ 2898 ಎಡಿ ಚಿತ್ರದಲ್ಲಿದ್ದಾರೆ ಮಲಯಾಳಂ, ತೆಲುಗು, ತಮಿಳು ಸ್ಟಾರ್‌ ನಟರು

ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ಸೇರಿದಂತೆ ದೊಡ್ಡ ತಾರಾಬಳಗವೇ ಇರುವ ಕಲ್ಕಿ 2898 AD ಬಹುನಿರೀಕ್ಷಿತ ಸಿನಿಮಾ ಇಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಪ್ರಭಾಸ್‌ ಅಭಿಮಾನಿಗಳಂತೂ ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಕೆಲವರು ಆನ್‌ ಲೈನ್‌ ಟಿಕೆಟ್‌ ದೊರಕದೆ ನಿರಾಶರಾಗಿದ್ದಾರೆ. ಸಿನಿಮಾ ನೋಡಿದವರು ಚಿತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಈ ನಡುವೆ ಸಿನಿಮಾ ಬಗ್ಗೆ ಅನೇಕ ಕುತೂಹಲಕಾರಿ ವಿಚಾರಗಳು ಬಹಿರಂಗವಾಗಿದೆ. ಬುಧವಾರ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಹಾಗೂ ನಾಗ್‌ ಅಶ್ವಿನ್‌ ಇನ್‌ಸ್ಟಾಗ್ರಾಮ್‌ ಲೈವ್‌ಗೆ ಬಂದು ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬರುವ ಅತಿಥಿ ಪಾತ್ರಗಳು, ನಾಯಕ ಭೈರವನ ಎಂಟ್ರಿ ಸೇರಿದಂತೆ ಇನ್ನೂ ಅನೇಕ ವಿಷಯಗಳನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಅದರಂತೆ ನಾಯಕ ಭೈರವನ ಪಾತ್ರ ಸಿನಿಮಾ ಆರಂಭವಾದ ಸುಮಾರು 20 ನಿಮಿಷಗಳ ನಂತರ ಎಂಟ್ರಿ ಆಗಲಿದೆ. ಭೈರವನ ಎಂಟ್ರಿಯಂತೂ ಪ್ರಭಾಸ್‌ ಅಭಿಮಾನಿಗಳಿಗೆ ಬಹಳ ಥ್ರಿಲ್‌ ಕೊಡಲಿದೆ. ಥಿಯೇಟರ್‌ಗಳಲ್ಲಿ ಕುಳಿತವರಿಗೆ ಗೂಸ್‌ ಬಂಪ್ಸ್‌ ಪಕ್ಕಾ ಎಂದು ನಿರ್ದೇಶಕ ನಾಗ್‌ ಅಶ್ವಿನ್‌ ಹೇಳಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

ಕ್ಲೈಮಾಕ್ಸ್‌ನಲ್ಲಿ ಟ್ವಿಸ್ಟ್‌

ಇನ್ನು ಚಿತ್ರದ ಕ್ಲೈಮಾಕ್ಸ್‌ ಅಂತೂ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಲಿದೆ. ಚಿತ್ರದ ಕೊನೆಯಲ್ಲಿ ಬರುವ ಹಾಡು ಎಲ್ಲರಿಗೂ ಆಲ್‌ ಟೈಮ್‌ ಫೇವರೆಟ್‌ ಎನಿಸಿಕೊಳ್ಳುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅದ್ಧೂರಿ ಟ್ವಿಸ್ಟ್ ಇರಲಿದೆ ಎಂಬ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ನಿರ್ದೇಶಕ ನಾಗ್‌ ಅಶ್ವಿನ್‌ ಕೂಡಾ ಅದೇ ವಿಚಾರ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಈಗಾಗಲೇ ಟ್ರೇಲರ್‌ನಲ್ಲಿ ತೋರಿರುವಂತೆ, ಅಧಿಕೃತವಾಗಿ ಅನೌನ್ಸ್‌ ಮಾಡಿರುವಂತೆ ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ, ದಿಶಾ ಪಠಾನಿ, ಬ್ರಹ್ಮಾನಂದಂ ಮಾತ್ರವಲ್ಲದೆ ಇನ್ನೂ ಅನೇಕ ಸ್ಟಾರ್‌ ನಟರು ಇದ್ದಾರೆ ಎಂಬ ವಿಚಾರ ಕೂಡಾ ಬಹಿರಂಗವಾಗಿದೆ. ಚಿತ್ರದಲ್ಲಿ ಕಮಲ್‌ ಹಾಸನ್‌ ಇರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರ. ಆದರೆ ಸಿನಿಮಾದಲ್ಲಿ ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ಹಾಗೂ ತೆಲುಗು ರೌಡಿ ಬಾಯ್‌ ವಿಜಯ್‌ ದೇವರಕೊಂಡ ಕೂಡಾ ಇದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿರುವ ಅಶ್ವಿನ್‌, ಇಬ್ಬರೂ ನಟರಿಗೂ ಧನ್ಯವಾದ ಅರ್ಪಿಸಿದ್ದಾರೆ. ಚಿತ್ರದಲ್ಲಿ ನಾನಿ, ಮೃಣಾಲ್ ಠಾಕೂರ್, ನಿರ್ದೇಶಕ ಧೀರು ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಕೂಡಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸೀಕ್ವೆಲ್‌ ಕೆಲಸಗಳು ಶೀಘ್ರದಲ್ಲೇ ಆರಂಭ

ಮುಂದುವರೆದು ಮಾನಾಡಿದ ನಿರ್ದೇಶಕ ನಾಗ್‌ ಅಶ್ವಿನ್‌, ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಕೂಡಾ ಫಿಕ್ಸ್ ಆಗಿದೆ. ಆದರೆ ಅದಕ್ಕೆ ಇನ್ನೂ ಕೆಲಸಗಳು ಬಾಕಿ ಇವೆ. ಸ್ವಲ್ಪ ದಿನಗಳ ಕಾಲ ರೆಸ್ಟ್‌ ಮಾಡಿ ಅದರ ಬಗ್ಗೆ ಗಮನ ಕೊಡಬೇಕು ಎಂದು ಡೈರೆಕ್ಟರ್‌ ನಾಗ್‌ ಅಶ್ವಿನ್‌ ಹೇಳಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಭೈರವನ ಪಾತ್ರದಲ್ಲಿ ನಟಿಸಿದ್ದು ಈ ಪಾತ್ರಕ್ಕೆ ಬಹಳ ಟ್ವಿಸ್ಟ್‌ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಾಲಿವುಡ್ ಲೆಜೆಂಡ್ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಅಶ್ವತ್ಥಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಕಲ್ಕಿ 2898 ಎಡಿ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಸುಮಾರು Rs.600 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು ಅತಿ ದೊಡ್ಡ ಬಜೆಟ್‌ನ ಭಾರತೀಯ ಸಿನಿಮಾವಾಗಿ ಮೂಡಿ ಬಂದಿದೆ.

ಪ್ರಭಾಸ್-ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ ಸಿನಿಮಾದ ಸಮಗ್ರ ಮಾಹಿತಿ ಇಲ್ಲಿದೆ