ಬಘೀರ ಸಿನಿಮಾದಲ್ಲಿ ತನ್ನ ಪಾತ್ರ ಏನೆಂದು ತಿಳಿಸಿದ ಪ್ರಶಾಂತ್ ನೀಲ್; ಡಾ ಸೂರಿ ನಿರ್ದೇಶನವೇ ಚಿತ್ರದ ಜೀವಾಳ
ನಟ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಬಘೀರ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಸಿನಿಮಾಗೆ ಚಿತ್ರಕಥೆ ಬರೆದಿರುವುದು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್. ದಶಕದ ಹಿಂದೆ ‘ಉಗ್ರಂ‘ ನಂತಹ ಹಿಟ್ ಸಿನಿಮಾ ಕೊಟ್ಟಿರುವ ಜೋಡಿ ಈಗ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದು, ಬಘೀರ ಸೃಷ್ಟಿಕರ್ತನ ಮಾತುಗಳು ಇಲ್ಲಿವೆ.
ರೋರಿಂಗ್‌ಸ್ಟಾರ್ ಮುರಳಿ ಅಭಿನಯದ ಬಹುನಿರೀಕ್ಷಿತ ‘ಬಘೀರ‘ ಸಿನಿಮಾ ನಾಳೆ (ಅಕ್ಟೋಬರ್ 31) ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿರುವುದು ಕೆಜಿಎಫ್, ಸಲಾರ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್. ಡಾ ಸೂರಿ ಬಘೀರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಈ ಹೊತ್ತಿನಲ್ಲಿ ಹಿಂದೂಸ್ತಾನ್ ಟೈಮ್ಸ್‌ನ ಸಹೋದರ ಸಂಸ್ಥೆಯಾದ ಒಟಿಟಿ ಪ್ಲೇಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ನೀಲ್ ಬಘೀರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅವರು ಮಾತುಗಳ ತುಣುಕಿಗೆ ಇಲ್ಲಿ ಅಕ್ಷರ ರೂಪ ನೀಡಲಾಗಿದೆ.
ಬಘೀರಾದಲ್ಲಿ ಪ್ರಶಾಂತ್ ನೀಲ್ ಪಾತ್ರವೇನು?
‘ನಿಮ್ಮಲ್ಲಿರುವ ಐಡಿಯಾಗಳ ಬಗ್ಗೆ ಚರ್ಚಿಸುವಾಗ ನೀವು ಏನನ್ನು ಬೇಕಾದರೂ ಹೇಳಬಹುದು. ಆದರೆ ಆ ಐಡಿಯಾವನ್ನು ಒಂದು ಸಿನಿಮಾವಾಗಿ ರೂಪಿಸಲು ನಿರ್ದೇಶಕನಿಂದ ಮಾತ್ರ ಸಾಧ್ಯ. ಒಮ್ಮೆ ಮಾತನಾಡುತ್ತಿರುವಾಗ ನಾನು ಹೇಳಿದ ಮಾತು ಡಾ ಸೂರಿ ಅವರಿಗೆ ಇಷ್ಟವಾಗಿತ್ತು. ಇದರ ಮೇಲೆ ಏನಾದ್ರೂ ವರ್ಕ್ ಮಾಡಬಹುದಾ ಎಂದು ಅವರು ನನ್ನ ಬಳಿ ಕೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಬಘೀರ ವಿಕಾಸಗೊಂಡ ಹಾದಿಯನ್ನು ಡಾ ಸೂರಿ ನೋಡಿದ್ದಾರೆ. ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ನೀವು ಕೂಡ ಅದನ್ನು ನೋಡಲಿದ್ದೀರಿ. ಈ ಸಿನಿಮಾದಲ್ಲಿ ಶೇ 100 ರಷ್ಟು ಪ್ರಯತ್ನ ಡಾ ಸೂರಿ ಅವರದ್ದೇ. ಸಿನಿಮಾ ಚೆನ್ನಾಗಿದ್ದರೆ ಸೂರಿ ಅವರನ್ನೇ ಹೊಗಳಬೇಕು. ಒಂದು ವೇಳೆ ಸಿನಿಮಾ ಚೆನ್ನಾಗಿಲ್ಲ ಅಂದ್ರು ನೀವು ಸೂರಿ ಅವರಿಗೆ ಬೈಯಬೇಕು‘ ಎಂದು ಹೇಳಿದ್ದಾರೆ.
‘ಬರವಣಿಗೆಯ ಸಮಯದಲ್ಲಿ ನನ್ನ ಪಾತ್ರವು ಡಾ ಸೂರಿ ಅವರು ಸರಿಯಾದ ಹಾದಿಯಲ್ಲಿದ್ದಾರೆ ಎಂದು ಮೌಲ್ಯೀಕರಿಸುವುದು ಮಾತ್ರ. ಈ ಕಥೆಗೆ ನನ್ನ ತಲೆಯಲ್ಲಿ ವಿಭಿನ್ನ ಇದಿದ್ದು ವಿಭಿನ್ನ ಯೋಚನೆ. ಆದರೆ ಈಗ ಚಿತ್ರ ಅತ್ಯದ್ಭುತವಾಗಿ ಮೂಡ ಬಂದಿದೆ. ಇದಕ್ಕೆ ಡಾ ಸೂರಿ ಸಹಿ ಬಿದಿದ್ದು ಅದ್ಭುತ ಚಿತ್ರ ತೆರೆ ಮೇಲೆ ಮೂಡಿ ಬರಲು ಕಾರಣವಾಗಿದೆ ಎಂದು ಡಾ ಸೂರಿ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳಿದ್ದಾರೆ.
ಬಘೀರನ ಪಾತ್ರ ಪರಿಚಯ
ಚಿತ್ರದಲ್ಲಿ ಶ್ರೀಮುರಳಿ ಪಾತ್ರದ ಬಗ್ಗೆ ವಿವರಿಸುವ ಪ್ರಶಾಂತ್ ‘ಈ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ತತ್ವ ಸಿದ್ಧಾಂತದೊಂದಿಗೆ ಬದುಕುವ ಗುರಿಯನ್ನು ಹೊಂದಿರುತ್ತಾರೆ. ಆದರೆ ಕಠಿಣ ಪರಿಸ್ಥಿತಿ ಎದುರಿಸುವಾಗಲೂ ಅದೇ ತತ್ವವನ್ನು ಮುಂದುವರಿಸಿಕೊಂಡು ಹೋಗುತ್ತೀರಾ ಎಂಬುದು ಪ್ರಶ್ನೆಯಾಗುತ್ತದೆ. ಉದಾಹರಣೆಗೆ, ಸತ್ಯ, ಗೌರವ ಮತ್ತು ನ್ಯಾಯವು ನಮಗೆ ಶಾಲೆಯಿಂದ ಕಲಿಸಲ್ಪಟ್ಟ ವಿಷಯಗಳಾಗಿವೆ, ಆದರೆ ಜೀವನದ ಸಂದರ್ಭಗಳ ಆಧಾರದ ಮೇಲೆ, ಇವು ಬದಲಾಗುತ್ತವೆ. ಬಘೀರಾದಲ್ಲಿ, ತನ್ನ ತತ್ವಗಳನ್ನು ದೃಢವಾಗಿ ನಂಬುವ ಪೋಲೀಸ್ ಅಧಿಕಾರಿ ವೇದಾಂತ್ ಬಹಳ ಪರೀಕ್ಷೆಯ ಸಮಯವನ್ನು ಎದುರಿಸುತ್ತಾನೆ. ಹಾಗಾದರೆ, ಅವನು ತನ್ನ ಮೌಲ್ಯಗಳಿಗೆ ನಿಷ್ಠನಾಗಿರುತ್ತಾನೆಯೇ, ಬೂದು ಬಣ್ಣಕ್ಕೆ ತಿರುಗುತ್ತಾನೆಯೇ ಅಥವಾ ಅವನು ತನ್ನ ತತ್ವಗಳಿಗೆ ಪರಿಹಾರವನ್ನು ನೋಡುತ್ತಾನೆಯೇ ಎಂಬುದನ್ನು ನೀವು ಸಿನಿಮಾದಲ್ಲಿ ನೋಡುತ್ತೀರಿ ಎನ್ನುತ್ತಾರೆ.