ಕುಡಿದ ಮತ್ತಿನಲ್ಲಿ ಐ ಲವ್‌ ಯೂ ಹೆಂಡ್ತಿ ಎಂದ ತಾಂಡವ್‌, ಈಗಲೇ ತಾಳಿ ಕಟ್ಟುವಂತೆ ಶ್ರೇಷ್ಠಾ ಡಿಮ್ಯಾಂಡ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕುಡಿದ ಮತ್ತಿನಲ್ಲಿ ಐ ಲವ್‌ ಯೂ ಹೆಂಡ್ತಿ ಎಂದ ತಾಂಡವ್‌, ಈಗಲೇ ತಾಳಿ ಕಟ್ಟುವಂತೆ ಶ್ರೇಷ್ಠಾ ಡಿಮ್ಯಾಂಡ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಕುಡಿದ ಮತ್ತಿನಲ್ಲಿ ಐ ಲವ್‌ ಯೂ ಹೆಂಡ್ತಿ ಎಂದ ತಾಂಡವ್‌, ಈಗಲೇ ತಾಳಿ ಕಟ್ಟುವಂತೆ ಶ್ರೇಷ್ಠಾ ಡಿಮ್ಯಾಂಡ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 14ರ ಎಪಿಸೋಡ್‌ನಲ್ಲಿ ಶ್ರೇಷ್ಠಾಳನ್ನು ಇಂಪ್ರೆಸ್‌ ಮಾಡಲು ಇಷ್ಟೆಲ್ಲಾ ಅರೇಂಜ್‌ಮೆಂಟ್‌ ಮಾಡಿರುವರಿಗೆ ತಾಂಡವ್‌ ಥ್ಯಾಂಕ್ಸ್‌ ಹೇಳುತ್ತಾನೆ. ಕುಡಿದ ಮತ್ತಿನಲ್ಲಿ ಶ್ರೇಷ್ಠಾ, ಈಗಲೇ ನನಗೆ ತಾಳಿ ಕಟ್ಟುವಂತೆ ತಾಂಡವ್‌ ಬಳಿ ಡಿಮ್ಯಾಂಡ್‌ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಎಪಿಸೋಡ್‌ನಲ್ಲಿ ತಾಳಿ ಕಟ್ಟುವಂತೆ ತಾಂಡವ್‌ಗೆ  ಡಿಮ್ಯಾಂಡ್‌ ಮಾಡಿದ ಶ್ರೇಷ್ಠಾ
ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರದ ಎಪಿಸೋಡ್‌ನಲ್ಲಿ ತಾಳಿ ಕಟ್ಟುವಂತೆ ತಾಂಡವ್‌ಗೆ ಡಿಮ್ಯಾಂಡ್‌ ಮಾಡಿದ ಶ್ರೇಷ್ಠಾ (PC: Colors Kannada Facebook)

Bhagyalakshmi Kannada Serial: ಹೋಟೆಲ್‌ಗೆ ಬಂದ ಅತಿಥಿಗಳಿಗಾಗಿ ಭಾಗ್ಯಾ ಖುದ್ದು ಮುಂದೆ ನಿಂತು ಎಲ್ಲಾ ಅರೇಂಜ್‌ಮೆಂಟ್‌ ಮಾಡುತ್ತಾಳೆ. ಆದರೆ ಅಲ್ಲಿಗೆ ಬಂದಿರೋದು ತನ್ನ ಗಂಡ ತಾಂಡವ್‌ ಹಾಗೂ ಶ್ರೇಷ್ಠಾ ಅನ್ನೋದು ಅವಳಿಗೆ ಇನ್ನೂ ಗೊತ್ತಾಗಿಲ್ಲ. ಇತ್ತ ನನ್ನ ಹೆಂಡತಿ ಭಾಗ್ಯಾಳೇ ಇದೆಲ್ಲಾ ಅರೇಂಜ್‌ ಮಾಡಿರೋದು ಎಂಬ ವಿಚಾರ ತಾಂಡವ್‌ಗೆ ಕೂಡಾ ಗೊತ್ತಾಗ್ತಿಲ್ಲ.

ಎಲ್ಲಾ ಅರೇಂಜ್‌ಮೆಂಟ್‌ ಮಾಡಿದ ಭಾಗ್ಯಾಗೆ ಮನಸ್ಸಿನಲ್ಲೇ ಧನ್ಯವಾದ ಹೇಳಿದ ತಾಂಡವ್‌

ಟ್ರಿಪ್‌ಗೆ ಬಂದ ಕಪಲ್‌ ಜಗಳ ಮಾಡಿಕೊಂಡಿದ್ದಾರೆ ಎಂದು ತಿಳಿದ ಭಾಗ್ಯಾ ಒಂದು ಪತ್ರ ಬರೆದಿಡುತ್ತಾಳೆ. ಹೆಂಡತಿಯನ್ನು ಯಾವ ರೀತಿ ಟ್ರೀಟ್‌ ಮಾಡಬೇಕು ಅಂತ ಟಿಪ್ಸ್‌ ಕೊಡುತ್ತಾಳೆ. ತಾಂಡವ್‌ಗೆ ಇಷ್ಟವಾಗುವಂಥ ಕಲರ್‌ ಲೈಟ್ಸ್‌ , ಡಿನ್ನರ್‌ ಆಯೋಜಿಸುತ್ತಾಳೆ. ಇದೆಲ್ಲವನ್ನೂ ನೋಡಿ ತಾಂಡವ್‌ ಇಂಪ್ರೆಸ್‌ ಆಗುತ್ತಾನೆ. ಶ್ರೇಷ್ಠಾ ಅಂತೂ ತಾಂಡವ್‌ ನನಗೋಸ್ಕರ ಇಷ್ಟೆಲ್ಲಾ ಮಾಡ್ತಿರೋದು ಅಂತ ಖುಷಿಯಾಗುತ್ತಾಳೆ. ಆದರೆ ತಾಂಡವ್‌ ಮಾತ್ರ, ಇದನ್ನೆಲ್ಲಾ ರೆಡಿ ಮಾಡಿರುವ ಆ ವ್ಯಕ್ತಿಗೆ ಮನಸ್ಸಿನಲ್ಲೇ ಥ್ಯಾಂಕ್ಸ್‌ ಹೇಳುತ್ತಾನೆ.

ಇತ್ತ ಭಾಗ್ಯಾ ಕಪಲ್‌ಗಾಗಿ ಕೇಕ್‌ ರೆಡಿ ಮಾಡುತ್ತಾಳೆ. ಅದರ ಮೇಲೆ ಮುದ್ದು ಹೆಂಡ್ತಿ ಎಂದು ಬರೆಯುತ್ತಾಳೆ. ಅದನ್ನು ನೋಡುತ್ತಿದ್ದಂತೆ ಶ್ರೇಷ್ಠಾ ಖುಷಿಯಾಗುತ್ತಾಳೆ. ಕೇಕ್‌ ರುಚಿ ಇಷ್ಟಪಟ್ಟು ಈಗಲೇ ನಿಮ್ಮ ಬಾಸ್‌ ಜೊತೆ ಮಾತನಾಡಬೇಕು ಅವರನ್ನು ಕರೆಸಿ ಎಂದು ತಾಂಡವ್‌ ಸಹನಾಗೆ ಹೇಳುತ್ತಾನೆ. ಅಷ್ಟರಲ್ಲಿ ತಾಂಡವ್‌ ಹಾಗೂ ಶ್ರೇಷ್ಠಾ ಇಬ್ಬರಿಗೂ ಮತ್ತು ಏರಿರುತ್ತದೆ. ಕುಡಿದ ಮತ್ತಿನಲ್ಲಿ ಶ್ರೇಷ್ಠಾ ತಾಂಡವ್‌ಗೆ ಐ ಲವ್‌ ಯು ಹೆಂಡ್ತಿ ಎಂದು ಹೇಳುವಂತೆ ಹೇಳುತ್ತಾಳೆ. ತಾಂಡವ್‌ ಹೇಳಲು ನಿರಾಕರಿಸಿದರೂ, ಮತ್ತೆ ಐ ಲವ್‌ ಯೂ ಹೆಂಡ್ತಿ ಎನ್ನುತ್ತಾನೆ. ಜೋರಾಗಿ ಹೇಳು ಎನ್ನುತ್ತಾಳೆ. ಆದರೆ ಎಲ್ಲರೂ ನೋಡುತ್ತಾರೆ ಸುಮ್ಮನಿರು ಎಂದು ತಾಂಡವ್‌ ಶ್ರೇಷ್ಠಾಗೆ ಹೇಳುತ್ತಾನೆ.

ತಾಳಿ ಕಟ್ಟುವಂತೆ ಶ್ರೇಷ್ಠಾ ಡಿಮ್ಯಾಂಡ್

ನಾನು ನಿನ್ನ ಹೆಂಡ್ತಿ ಅಲ್ಲ, ಅದಕ್ಕೆ ನೀನು ಜೋರಾಗಿ ಹೇಳಲು ನಿರಾಕರಿಸುತ್ತಿದ್ದೀಯ. ಈಗಾಗಲೇ 2 ಬಾರಿ ನನಗೆ ತಾಳಿ ಕಟ್ಟಲು ಬಂದು ವಾಪಸ್‌ ಹೋಗಿದ್ದೀಯ, ಆದರೆ ಈಗ ಬಿಡುವುದಿಲ್ಲ, ಇಲ್ಲೇ ನೀನು ನನಗೆ ತಾಳಿ ಕಟ್ಟಬೇಕು ಎಂದು ಹಟ ಮಾಡುತ್ತಾಳೆ. ನಶೆಯಲ್ಲಿ ತಾಂಡವ್‌ ಕೂಡಾ ಸರಿ ಕಟ್ಟುವೆ ಎನ್ನುತ್ತಾಳೆ. ಸಹನಾಳನ್ನು ಕರೆಯುವ ಶ್ರೇಷ್ಠಾ, ಎಲ್ಲಾದರೂ ಹೋಗಿ ತಾಳೆ ತೆಗೆದುಕೊಂಡು ಬಾ, ಈಗಲೇ ತಾಂಡವ್‌ ನನಗೆ ತಾಳಿ ಕಟ್ಟಬೇಕು ಎನ್ನುತ್ತಾಳೆ.

ಸಹನಾ ಈ ವಿಚಾರವನ್ನು ಭಾಗ್ಯಾಗೆ ಹೇಳುತ್ತಾಳಾ? ಭಾಗ್ಯಾ, ತಾಂಡವ್‌-ಶ್ರೇಷ್ಠಾ ಇಬ್ಬರನ್ನೂ ನೋಡುತ್ತಾಳಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner