ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಸೇರಿ ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಮೋಕ್ಷಿತಾ ಪೈ, ಗೌತಮಿ ಜಾಧವ್‌ ವಿರುದ್ಧ ವೀಕ್ಷಕರು ಗರಂ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಸೇರಿ ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಮೋಕ್ಷಿತಾ ಪೈ, ಗೌತಮಿ ಜಾಧವ್‌ ವಿರುದ್ಧ ವೀಕ್ಷಕರು ಗರಂ

ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಸೇರಿ ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಮೋಕ್ಷಿತಾ ಪೈ, ಗೌತಮಿ ಜಾಧವ್‌ ವಿರುದ್ಧ ವೀಕ್ಷಕರು ಗರಂ

ಬಿಗ್‌ಬಾಸ್‌ ಕನ್ನಡ 11: ಶುಕ್ರವಾರದ ಎಪಿಸೋಡ್‌ನಲ್ಲಿ ಕ್ಯಾಪ್ಟನ್ಸಿ ಸ್ಪರ್ಧೆಗೆ ಫೈನಲಿಸ್ಟ್‌ ಆಗಿದ್ದ ಭವ್ಯಾ ಗೌಡ ವಿರುದ್ದ ಅನೇಕರು ಮತ ಚಲಾಯಿಸಿದ್ದಾರೆ. ಗೌತಮಿ ಜಾಧವ್‌, ಮೋಕ್ಷಿತಾ ಪೈ ಹಾಗೂ ಸ್ವತಃ ಭವ್ಯಾ ಗೌಡ ತಂಡಲ್ಲಿದ್ದ ಉಗ್ರಂ ಮಂಜು ಮ್ಯಾಚ್‌ ಫಿಕ್ಸಿಂಗ್‌ ಮಾಡುತ್ತಿರುವ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ಕನ್ನಡ 11: ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಗೌತಮಿ ಜಾಧವ್‌, ಮೋಕ್ಷಿತಾ ಪೈ, ಉಗ್ರಂ ಮಂಜು
ಬಿಗ್‌ಬಾಸ್‌ ಕನ್ನಡ 11: ಭವ್ಯಾಗೌಡ ವಿರುದ್ಧ ಮತ ಚಲಾಯಿಸಿದ ಗೌತಮಿ ಜಾಧವ್‌, ಮೋಕ್ಷಿತಾ ಪೈ, ಉಗ್ರಂ ಮಂಜು (PC: Jio Cinema)

ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು (ಶನಿವಾರ) ಕಿಚ್ಚನ ಪಂಚಾಯ್ತಿ ಇರಲಿದೆ. ಮನೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಶುರುವಾಗಿದೆ. ಕೆಲವೊಂದು ಸ್ಪರ್ಧಿಗಳ ವರ್ತನೆಗೆ ಸ್ವತಃ ವೀಕ್ಷಕರೇ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಭವ್ಯಾ ಗೌಡ ಕ್ಯಾಪ್ಟನ್ಸಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವ ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾಧವ್‌ ಬಗ್ಗೆಯೂ ನೋಡುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್‌ಶಿಪ್‌ ಟಾಸ್ಕ್‌ನಲ್ಲಿ ಉತ್ತಮ ಆಟ ಆಡಿದ್ದ ಭವ್ಯಾ ಗೌಡ

ಹನುಮಂತನ ಕ್ಯಾಪ್ಟನ್ಸಿ ಅವಧಿ ಮುಗಿದಿದೆ. ಗುರುವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಹನುಮಂತನಿಗೆ ಕ್ಯಾಪ್ಟನ್‌ ರೂಮ್‌ ಖಾಲಿ ಮಾಡುವಂತೆ ಸೂಚಿಸಿದ್ದರು. ಅದೇ ವಿಚಾರವಾಗಿ ಫನ್ನಿ ಮಾತುಗಳನ್ನಾಡಿದ್ದರು. ಬಿಗ್‌ಬಾಸ್‌ ಹಾಗೂ ಹನುಮಂತನ ನಡುವಿನ ಸಂಭಾಷಣೆ ಸಹ ಸ್ಪರ್ಧಿಗಳು ಹಾಗೂ ನೋಡುಗರಿಗೆ ನಗು ತರಿಸಿತ್ತು. ಜೊತೆಗೆ ಗುರುವಾರ ಹೊಸ ಕ್ಯಾಪ್ಟನ್‌ ಆಯ್ಕೆ ಟಾಸ್ಕ್‌ ಕೂಡಾ ನಡೆದಿತ್ತು. ಈ ಬಾರಿ ಭವ್ಯಾಗೌಡ ಒಳ್ಳೆ ಪರ್ಫಾರ್ಮ್‌ ಮಾಡಿದ್ದರು. ಕೊನೆಗೆ ತ್ರಿವಿಕ್ರಮ್‌ ಹಾಗೂ ಭವ್ಯಾ ಗೌಡ ಇಬ್ಬರೂ ಕ್ಯಾಪ್ಟನ್‌ ರೇಸ್‌ನಲ್ಲಿ ಉಳಿದರು. ಕೊನೆಯಲ್ಲಿ ಇವರಿಬ್ಬರಲ್ಲಿ ಯಾರು ಕ್ಯಾಪ್ಟನ್‌ ಆಗಲು ಅರ್ಹರಲ್ಲ ಅವರ ಫೋಟೋಗೆ ಮಸಿ ಬಳಿಯುವಂತೆ ಸೂಚಿಸಲಾಗಿತ್ತು. ಅದರಂತೆ ಬಹಳಷ್ಟು ಸ್ಪರ್ಧಿಗಳು ಭವ್ಯಾ ಫೋಟೋಗೆ ಕಪ್ಪು ಬಣ್ಣ ಹಚ್ಚಿದ್ದರು.

ತ್ರಿವಿಕ್ರಮ್‌ ಜೊತೆ ಮಂಜು ಮ್ಯಾಚ್‌ ಫಿಕ್ಸಿಂಗ್‌

ಗೌತಮಿ ಜಾಧವ್‌, ಮೋಕ್ಷಿತಾ ಪೈ, ಶಿಶಿರ್‌ ಸೇರಿದಂತೆ ಕೆಲವು ಸ್ಪರ್ಧಿಗಳು ಸ್ವತಃ ಭವ್ಯಾ ಗೌಡ ಟೀಮ್‌ನಲ್ಲೇ ಇದ್ದ ಉಗ್ರಂ ಮಂಜು ತಮ್ಮ ತಂಡದ ಭವ್ಯಾ ವಿರುದ್ಧ ನಿಂತಿದ್ದರು. ಜೊತೆಗೆ ತಮಗೆ ಆಪ್ತರಾಗಿದ್ದವರಿಗೆ ಕೂಡಾ ಭವ್ಯಾ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿದ್ದರು. ಉಗ್ರಂ ಮಂಜು, ತ್ರಿವಿಕ್ರಮ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಒಂದು ವೇಳೆ ಕ್ಯಾಪ್ಟನ್‌ ಆದರೆ ತಮ್ಮನ್ನು ನಾಮಿನೇಟ್‌ ಮಾಡದಂತೆ ಕಂಡಿಷನ್‌ ಮಾಡಿದ್ದು, ಅದಕ್ಕೆ ತ್ರಿವಿಕ್ರಮ್‌ ಕೂಡಾ ಒಪ್ಪಿದ ನಂತರವೇ ಮಂಜು ತ್ರಿವಿಕ್ರಮ್‌ ಪರ ನಿಂತು, ಭವ್ಯಾ ಗೌಡ ವಿರುದ್ಧ ಮತ ಹಾಕಿದ್ದಾರೆ. ಈ ರೀತಿ ಒಪ್ಪಂದ ಮಾಡಿಕೊಂಡು ಟಾಸ್ಕ್‌ ಮಾಡಬಾರದು, ಆಟ ಏನಿದ್ದರೂ ಪ್ರಾಮಾಣಿಕವಾಗಿರಬೇಕು ಎಂದು ನೋಡುಗರು ಬೇಸರ ವ್ಯಕ್ತಪಡಿಸಿದ್ದಾರೆ.‌

ಪಾರ್ಟಿ ಬದಲಿಸಿದ ಮೋಕ್ಷಿತಾ, ಗೌತಮಿ ಮ್ಯಾಚ್‌ ಫಿಕ್ಸಿಂಗ್

ತಮ್ಮ ತಂಡ ಗೆಲ್ಲಲು ಭವ್ಯಾ ಗೌಡ ಅವರ ಕೊಡುಗೆ ಹೆಚ್ಚಿದ್ದರೂ ಉಗ್ರಂ ಮಂಜು ಈ ರೀತಿ ಮಾಡಬಾರದಿತ್ತು. ಕಳೆದ ಬಾರಿ ಶಿಶಿರ್‌ ಶಾಸ್ತ್ರಿ ಜೊತೆ ಉಗ್ರಂ ಮಂಜು ಮಾಡಿಕೊಂಡಿದ್ದ ಒಪ್ಪಂದಕ್ಕೆ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್‌ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮೋಕ್ಷಿತಾ, ಗೌತಮಿ ಇಬ್ಬರೂ ಮಂಜು ರೀತಿ ಬದಲಾಗಿದ್ದಾರೆ. ಅವರೂ ಮಂಜು ಜೊತೆ ನಿಂತು ಭವ್ಯಾ ವಿರುದ್ಧ ಮತ ಚಲಾಯಿಸಿರುವುದು ತಪ್ಪು ಎಂದು ವೀಕ್ಷಕರು ಹೇಳುತ್ತಿದ್ದಾರೆ. ಬಹುಶ: ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

Whats_app_banner