ಲಕ್ಷ್ಮೀ ಮದುವೆಯಲ್ಲಿ ಭಾಗ್ಯಾ ಹಣ ಕದ್ದಿದ್ದು ಯಾರು? ಫ್ಲಾಶ್‌ಬ್ಯಾಕ್‌ಗೆ ಹೋದ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 15ರ ಎಪಿಸೋಡ್. ತನ್ನ ಮನೆ ಸೇರಿಕೊಂಡಿರುವ ಪೂಜಾಳನ್ನು ಹೇಗಾದರೂ ಮಾಡಿ ಹೊರ ಹಾಕಬೇಕು ಎಂದು ಶ್ರೇಷ್ಠಾ ಪ್ಲ್ಯಾನ್ ಮಾಡುತ್ತಿದ್ದಾಳೆ. ಇದಕ್ಕಾಗಿ ಲಕ್ಷ್ಮೀ ಮದುವೆಯಲ್ಲಿ ಹಣ ಕದ್ದ ವಿಚಾರ ತನಗೆ ಗೊತ್ತಿರುವುದಾಗಿ ಪೂಜಾ ಬಳಿ ಹೇಳುತ್ತಾಳೆ.
Bhagyalakshmi Serial: ಶ್ರೇಷ್ಠಾ ಪ್ರತಿ ಹೆಜ್ಜೆಗೂ ಪೂಜಾ ಅಡ್ಡಗಾಲಾಗಿದ್ದಾಳೆ. ಅವಳು ಏನು ಮಾಡುತ್ತಾಳೆ ಎಂಬುದನ್ನು ಗಮನಿಸಲು ಅವಳ ಮನೆಗೆ ಬಂದು ಸೇರಿಕೊಂಡಿದ್ದಾಳೆ. ಪೂಜಾಗೆ ಸುಂದರಿ ಸಹಾಯ ಮಾಡುತ್ತಿದ್ದಾಳೆ. ಮಧ್ಯರಾತ್ರಿ ಜೋರು ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಪೂಜಾ ಹಾಗೂ ಸುಂದರಿ ಶ್ರೇಷ್ಠಾ ನಿದ್ರೆ ಹಾಳು ಮಾಡಿದ್ಧಾರೆ. ಇವರ ಹಾವಳಿಗೆ ಶ್ರೇಷ್ಠಾ ಬೇಸತ್ತಿದ್ದಾಳೆ.
ತಾಂಡವ್‌ಗೆ ಕರೆ ಮಾಡುವ ಶ್ರೇಷ್ಠಾ, ಆದಷ್ಟು ಬೇಗ ಪೂಜಾಳನ್ನು ಇಲ್ಲಿಂದ ಕಳಿಸುವ ವ್ಯವಸ್ಥೆ ಮಾಡು ಎಂದು ತಾಂಡವ್ ಬಳಿ ಬೇಡಿಕೆ ಇಡುತ್ತಾಳೆ. ಆದರೆ ತಾಂಡವ್ ಕಷ್ಟ ತಾಂಡವ್‌ಗೆ. ಶ್ರೇಷ್ಠಾ ಹಾಗೂ ತನ್ನ ಲಗ್ನ ಪತ್ರಿಕೆ ಭಾಗ್ಯಾ ಬಳಿ ಇದೆ. ಅದನ್ನು ಹೇಗಾದರೂ ಹೊರ ತರಬೇಕು ಎಂದು ತಾಂಡವ್ ಒದ್ದಾಡುತ್ತಿದ್ದಾನೆ. ಇದರ ಜೊತೆ ಶ್ರೇಷ್ಠಾ ತಲೆ ನೋವನ್ನು ಅವನಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೂಜಾ ನಿನ್ನ ಪ್ರಾಬ್ಲಂ, ಅವಳನ್ನು ಮನೆಯಿಂದ ಹೇಗೆ ಹೊರ ಕಳಿಸಬೇಕು ಅನ್ನೋದನ್ನು ನೀನು ಪ್ಲ್ಯಾನ್ ಮಾಡು. ಲಗ್ನ ಪತ್ರಿಕೆಯನ್ನು ಹೇಗೆ ಹೊರ ತರಬೇಕು ಅನ್ನೋದನ್ನು ನಾನು ನೋಡುತ್ತೇನೆ ಎಂದು ಫೋನ್ ಡಿಸ್ಕನೆಕ್ಟ್ ಮಾಡುತ್ತಾನೆ.
ಲಕ್ಷ್ಮೀ ಮದುವೆಯಲ್ಲಿ ಹಣ ಕದ್ದಿದ್ದು ಯಾರು?
ಪೂಜಾಳನ್ನು ಮನೆಯಿಂದ ಹೇಗೆ ಕಳಿಸುವುದು ಅನ್ನೋದು ಶ್ರೇಷ್ಠಾಗೆ ದೊಡ್ಡ ಸವಾಲಾಗಿದೆ. ಪೂಜಾ ಬಳಿ ಬಂದು ಮನೆ ಬಿಟ್ಟು ಹೋಗು, ಮತ್ತೊಬ್ಬರ ಮನೆಯಲ್ಲಿ ಬಿಟ್ಟಿ ಊಟ ತಿಂದುಕೊಂಡು ಇರಲು ನಿನಗೆ ಹೇಗೆ ಮನಸ್ಸಾಗುತ್ತದೆ, ನಾಚಿಕೆ ಆಗುದಿಲ್ಲವಾ ಎಂದು ಕೇಳುತ್ತಾಳೆ. ನಾನು ಖಂಡಿತ ಹೋಗುತ್ತೇನೆ. ನೀನೂ ಕೂಡಾ ನನ್ನ ಭಾವನನ್ನು ಬಿಟ್ಟು ಹೋಗು, ಇಬ್ಬರು ಮಕ್ಕಳ ತಂದೆಯ ಮನಸ್ಸು ಕೆಡಿಸಿ ಅವನನ್ನು ಮದುವೆ ಆಗಲು ನೋಡುತ್ತಿದ್ದೀಯ, ಅಷ್ಟು ಮಾತ್ರವಲ್ಲದೆ ನಿನಗೆ ಮದುವೆಗೆ ಹಣದ ಅವಶ್ಯಕತೆ ಇಲ್ಲದಿದ್ದರೂ ನನ್ನ ಅಕ್ಕನಿಗೆ ಟಾರ್ಚರ್ ಕೊಡುವ ಉದ್ದೇಶದಿಂದ ಹಣ ಕೊಡುವಂತೆ ಪೀಡಿಸುತ್ತಿದ್ದೀಯ ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಪೂಜಾ ಶ್ರೇಷ್ಠಾಳನ್ನು ಕೇಳುತ್ತಾಳೆ.
ನನ್ನ ಬಗ್ಗೆ ಮಾತನಾಡುವ ನೀನು ಎಷ್ಟು ಪ್ರಾಮಾಣಿಕಳು ಅಂತ ಹೇಳು. ಲಕ್ಷ್ಮೀ ಮದುವೆಯಲ್ಲಿ ಭಾಗ್ಯಾ ಇಟ್ಟುಕೊಂಡಿದ್ದ 2 ಲಕ್ಷ ರೂ. ಹಣ ಕದ್ದಿದ್ದು ನೀನೇ ಅಂತ ನನಗೆ ಚೆನ್ನಾಗಿ ಗೊತ್ತು. ಬೀರುವಿನಿಂದ ಹಣ ಕದ್ದು, ಅದನ್ನು ಹೂವಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದನ್ನು ನಾನು ನೋಡಿದ್ದೇನೆ ಎನ್ನುತ್ತಾಳೆ. ಈ ವಿಚಾರ ಶ್ರೇಷ್ಠಾಗೆ ಹೇಗೆ ಗೊತ್ತಾಯ್ತು ಎಂದು ಪೂಜಾ ಗಾಬರಿ ಆಗುತ್ತಾಳೆ. ಅದರ ಬಗ್ಗೆ ವಿಚಾರಿಸಲು ಭಾಗ್ಯಾಗೆ ಕರೆ ಮಾಡುತ್ತಾಳೆ. ಹಣ ಕಳುವಾದಾಗ ಶ್ರೇಷ್ಠಾ ನಿನಗೆ ಹೇಗೆ ದುಡ್ಡು ಕೊಟ್ಟರು? ಆನ್‌ಲೈನ್ ಪೇಮೆಂಟ್ ಮಾಡಿದ್ರಾ ಎಂದು ಕೇಳುತ್ತಾಳೆ. ಇಲ್ಲ ಅವರು ತಮ್ಮ ಬ್ಯಾಗ್‌ನಿಂಗ್ ಕ್ಯಾಶ್ ಕೊಟ್ಟರು ಎನ್ನುತ್ತಾಳೆ. ಆಗಲೇ ಪೂಜಾಗೆ ಎಲ್ಲವೂ ಅರ್ಥವಾಗುತ್ತದೆ. ತಾನು ಕದ್ದ ಹಣವನ್ನು ಮತ್ತೆ ಶ್ರೇಷ್ಠಾ ಕದ್ದು, ಅದೇ ಹಣವನ್ನು ಭಾಗ್ಯಾಗೆ ಸಾಲವಾಗಿ ಕೊಟ್ಟಂತೆ ನಾಟಕವಾಡುತ್ತಿದ್ದಾಳೆ ಎಂಬುದು ತಿಳಿಯುತ್ತದೆ.
ಕುಸುಮಾ ವಾರ್ಡ್‌ರೋಬ್ ಸೇರಿದ ಲಗ್ನಪತ್ರಿಕೆ
ಇತ್ತ ಭಾಗ್ಯಾ ಬಳಿ ಇದ್ದ ತಾಂಡವ್ ಮದುವೆ ಆಹ್ವಾನ ಪತ್ರಿಕೆ ಸೀರೆ ಸಹಿತ ಕುಸುಮಾ ಕೈ ಸೇರಿದೆ. ಕುಸುಮಾ ಅದನ್ನು ತನ್ನ ವಾರ್ಡ್‌ರೋಬ್‌ಗೆ ಇಟ್ಟು ಬಾಗಿಲು ಹಾಕಿಕೊಳ್ಳುತ್ತಾಳೆ. ತಾಂಡವ್, ಗೆರೆ ದಾಟಿ ಇದೆಲ್ಲವನ್ನೂ ಗಮನಿಸುತ್ತಾನೆ. ಮಗ ಗೆರೆ ದಾಟಿ ಬಂದಿದ್ದನ್ನು ಗಮನಿಸುವ ಕುಸುಮಾ ನೀನು ಇಲ್ಲಿಗೆ ಬರುವಂತಿದ್ದರೆ ನಿನ್ನ ಅಹಂ ತೊರೆದು ನಮ್ಮ ಜೊತೆ ಬದುಕಲು ಬಾ, ಹೀಗೆ ಸುಮ್ಮನೆ ಬರಬೇಡ ಎಂದು ಕಂಡಿಷನ್ ಮಾಡುತ್ತಾಳೆ.
ಹಣ ಕದ್ದ ಶ್ರೇಷ್ಠಾಗೆ ಬುದ್ಧಿ ಕಲಿಸಲು ಪೂಜಾ ಏನು ಪ್ಲಾನ್ ಮಾಡುತ್ತಾಳೆ? ತಾಂಡವ್, ಕುಸುಮಾ ವಾರ್ಡ್‌ರೋಬ್‌ನಿಂದ ಲಗ್ನ ಪತ್ರಿಕೆ ತರುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ವಿಭಾಗ