Bhagyalakshmi Serial: ಭಾಗ್ಯಾಗೆ ಡಿವೋರ್ಸ್‌ ಕೊಡಲು ಲಾಯರ್‌ ಭೇಟಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾಗೆ ಡಿವೋರ್ಸ್‌ ಕೊಡಲು ಲಾಯರ್‌ ಭೇಟಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾಗೆ ಡಿವೋರ್ಸ್‌ ಕೊಡಲು ಲಾಯರ್‌ ಭೇಟಿ ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 19ರ ಸಂಚಿಕೆ ಹೀಗಿದೆ. ನಡೆಯುತ್ತಿರುವ ಪ್ರತಿ ಘಟನೆಗಳಿಗೂ ಭಾಗ್ಯಾಳೇ ಕಾರಣ ಎಂದು ದೂರುವ ತಾಂಡವ್‌ ಹೆಂಡತಿಗೆ ಡಿವೋರ್ಸ್‌ ಕೊಡಲು ಲಾಯರ್‌ ಭೇಟಿ ಮಾಡುತ್ತಾನೆ.

 ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 19ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 19ರ ಸಂಚಿಕೆ (PC: Colors Kannada)

Bhagyalakshmi Kannada Serial: ಅಪ್ಪ ತಾಂಡವ್‌ನನ್ನು ಭೇಟಿ ಮಾಡಿ ವಾಪಸ್‌ ಬರುವಾಗ ಅಪಘಾತಕ್ಕೀಡಾಗಿದ್ದ ತನ್ವಿ ಈಗ ಗುಣಮುಖಳಾಗುತ್ತಿದ್ದಾಳೆ. ಮಗಳನ್ನು ನೋಡಲು ಬಂದ ತಾಂಡವ್‌ಗೆ ಮುಖಭಂಗವಾಗಿ ಮತ್ತೆ ಶ್ರೇಷ್ಠಾ ಮನೆಗೆ ಹೊರಟಿದ್ದಾನೆ. ತಾಂಡವ್‌ಗೆ ತನ್ವಿ ತೋರಿಸಿದ ಆ ಮೆಸೇಜ್‌ ಬಗ್ಗೆಯೇ ಅನುಮಾನ.

ತನ್ನ ತಪ್ಪನ್ನು ಮುಚ್ಚಿಟ್ಟು ಮತ್ತೆ ಭಾಗ್ಯಾಳನ್ನು ದೂರಿದ ಶ್ರೇಷ್ಠಾ

ಶ್ರೇಷ್ಠಾಳನ್ನು ಭೇಟಿ ಮಾಡಿದ ತಾಂಡವ್‌, ತನ್ವಿ ನನಗೆ ಕರೆ ಮಾಡಿದ್ದಾಗ ನೀನು ಕಾಲ್‌ ರಿಸೀವ್‌ ಮಾಡಿದ್ಯಾ? ಅವಳಿಗೆ ಮೆಸೇಜ್‌ ರಿಪ್ಲೇ ಮಾಡಿದ್ಯಾ ಎಂದು ಕೇಳುತ್ತಾನೆ ಆದರೆ ಶ್ರೇಷ್ಠಾ ಮಾತ್ರ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಯಾವ ಮೆಸೇಜ್‌ ಕೂಡಾ ಮಾಡಿಲ್ಲ. ಸುಂದರಿ ಮಾಡಿರಬಹುದು ಎನ್ನುತ್ತಾಳೆ. ಸುಂದರಿ ಹೇಗೆ ಮಾಡುತ್ತಾಳೆ. ಆಕೆಗೂ ತನ್ವಿಗೂ ಏನು ಸಂಬಂಧ ಎಂದು ತಾಂಡವ್‌ ಮರು ಪ್ರಶ್ನಿಸುತ್ತಾನೆ. ಇಷ್ಟಾದರೂ ಶ್ರೇಷ್ಠಾ, ತಾನು ಮಾಡಿರುವ ತಪ್ಪನ್ನು ಮುಚ್ಚಿಟ್ಟು ತಾಂಡವ್‌ ಮನಸ್ಸನ್ನು ಡೈವರ್ಟ್‌ ಮಾಡುತ್ತಾಳೆ. ಮಗಳನ್ನು ನೋಡಲು ಹೋದ ನಿನಗೆ ಅವಕಾಶ ಮಾಡಿಕೊಡದೆ ಭಾಗ್ಯಾ ವಾಪಸ್‌ ಕಳಿಸಿದ್ದಾಳೆ. ನೀನು ಅವಳನ್ನು ವಿಚಾರಿಸಿಕೊಳ್ಳುವುದನ್ನು ಬಿಟ್ಟು ನನ್ನನ್ನು ದೂರುತ್ತಿದ್ದೀಯ ಎಂದು ಕೇಳುತ್ತಾಳೆ. ಶ್ರೇಷ್ಠಾ ಮಾತು ಕೇಳಿದ ನಂತರ ತಾಂಡವ್‌ ತನ್ವಿ ವಿಚಾರ ಮರೆಯುತ್ತಾನೆ.

ಲಾಯರ್‌ ಭೇಟಿ ಮಾಡಿದ ತಾಂಡವ್

ಭಾಗ್ಯಾಳನ್ನು ನನ್ನ ಜೀವನದಿಂದ ದೂರ ಮಾಡಿಕೊಳ್ಳಲೇಬೇಕು ಎಂದು ನಿರ್ಧರಿಸಿ ಲಾಯರ್‌ ಆಫೀಸಿಗೆ ಹೋಗುತ್ತಾನೆ. ಅಲ್ಲಿ ತನಗೆ ಡಿವೋರ್ಸ್‌ ಕೊಡಿಸುವಂತೆ ಲಾಯರ್‌ ಬಳಿ ಮನವಿ ಮಾಡುತ್ತಾನೆ. ತಾಂಡವ್‌ ಮಾತನ್ನು ಕೇಳಿ ಶ್ರೇಷ್ಠಾಗೆ ಒಂದು ಕಡೆ ಆಶ್ಚರ್ಯ ಆದರೆ ಮತ್ತೊಂದು ಕಡೆ ಖುಷಿ. ಗಂಡ ಮೊದಲು ಡಿವೋರ್ಸ್‌ ಫೈಲ್‌ ಮಾಡಿದರೆ ಜೀವನಾಂಶ ಕೊಡಬೇಕು ಎನ್ನುತ್ತಾಳೆ. ಎಷ್ಟು ಬೇಕಾದರೂ ಕೇಳಲಿ ತಂದು ಸುರಿಯುತ್ತೇನೆ ಎನ್ನುತ್ತಾನೆ. ನೀನು ಹಣ ಕೊಟ್ಟರೆ ಭಾಗ್ಯಾ ರಾಣಿಯಂತೆ ಆ ಮನೆಯಲ್ಲಿ ಜೀವನ ಮಾಡುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ತಾಂಡವ್‌, ಭಾಗ್ಯಾ ನನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾಳೆ. ಅಮ್ಮನಿಗೆ ಸೊಸೆಯ ಮೇಲಿರುವ ವ್ಯಾಮೋಹ ಹೆಚ್ಚು ದಿನ ಉಳಿಯುವುದಿಲ್ಲ. ಡಿವೋರ್ಸ್‌ ಆದ ನಂತರ ನನಗೆ ನನ್ನ ಅಪ್ಪ, ಅಮ್ಮ, ಮಕ್ಕಳು ಎಲ್ಲರೂ ಸಿಗುತ್ತಾರೆ. ಆಗ ಭಾಗ್ಯಾಳನ್ನು ಆ ಮನೆಯಿಂದ ಓಡಿಸುತ್ತೇನೆ. ನಂತರ ಆ ಮನೆಯೂ ನಿಂದೆ, ಭಾಗ್ಯಾಳ ಜಾಗವೂ ನಿನ್ನದೇ. ನಾವೆಲ್ಲರೂ ಸಂತೋಷವಾಗಿರೋಣ ಎಂದು ತಾಂಡವ್‌ ಹೇಳುತ್ತಾನೆ.‌

ಅಮ್ಮನ ಮೇಲೆ ತನ್ವಿಗೆ ಪ್ರೀತಿ

ಇತ್ತ ತನ್ವಿಗೆ ಅಪ್ಪನ ನಿಜ ಬುದ್ಧಿ ಅರ್ಥವಾಗಿದೆ. ತನ್ವಿ ನಿಧಾನವಾಗಿ ಅಮ್ಮನತ್ತ ವಾಲುತ್ತಿದ್ದಾಳೆ. ತನಗೆ ಅಪಘಾತವಾದಾಗ ಅಮ್ಮ ತನ್ನನ್ನು ಎಷ್ಟು ಕೇರ್‌ ಮಾಡುತ್ತಿದ್ದಾಳೆ ಎಂಬುದು ತನ್ವಿಗೆ ಗೊತ್ತಾಗುತ್ತಿದೆ. ಮಕ್ಕಳ ಬೇಡಿಕೆಗಳನ್ನು ಪೂರೈಸಲು ಭಾಗ್ಯಾ, ಮೊದಲಿನಂತೆ ಹೊಲಿಗೆ ಕೆಲಸ ಶುರು ಮಾಡಲು ನಿರ್ಧರಿಸುತ್ತಾಳೆ. ಲಕ್ಷ್ಮಿ ಟೈಲರ್‌ ಶಾಪ್‌ ಎಂಬ ಹೆಸರು ಚೆನ್ನಾಗಿಲ್ಲ ಲಕ್ಷ್ಮಿ ಡಿಸೈನರ್‌ ಶಾಪ್‌ ಎಂದು ಸ್ಟೈಲ್‌ ಆಗಿ ಹೆಸರಿಡುವಂತೆ ತನ್ವಿ ಅಮ್ಮನಿಗೆ ಸೂಚಿಸುತ್ತಾಳೆ. ಆದರೆ ಗುಂಡಣ್ಣನಿಗೆ ಅಮ್ಮ ಶಾಲೆ ಬಿಡುತ್ತಾಳೆ ಎಂಬ ಭಯ. ಆದರಿಂದ ಈ ಟೈಲರಿಂಗ್‌ ಶಾಪ್‌ ವಿಚಾರವನ್ನು ಅಜ್ಜಿ ಬಳಿ ಹೇಳುತ್ತಾನೆ. ಕುಸುಮಾ ಭಾಗ್ಯಾಳನ್ನು ಕರೆದು ಟೈಲರ್‌ ಶಾಪ್‌ ತೆಗೆದು, ಅಕ್ಕ ಪಕ್ಕದವರಿಗೆ ನಮ್ಮ ಮನೆ ವಿಚಾರ ತಿಳಿಸುವುದು ಬೇಡ ಎಂದು ತಿಳಿಹೇಳುತ್ತಾಳೆ.

ತಾಂಡವ್‌ ಫೈಲ್‌ ಮಾಡಿದ ಪೇಪರ್‌ಗಳು ಭಾಗ್ಯಾಗೆ ತಲುಪುವುದಾ? ಅದನ್ನು ನೋಡಿ ಭಾಗ್ಯಾ, ಕುಸುಮಾ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner