Bhagyalakshmi Serial: ತಾಂಡವ್‌ಗೆ ಶುರುವಾಯ್ತು ಮತ್ತೆ ಬ್ಲಾಕ್‌ಮೇಲ್; ಶ್ರೇಷ್ಠಾ ವಿಚಾರ ತೆಗೆದು ಭರ್ಜರಿ ಶಾಪಿಂಗ್ ಮಾಡಿದ ಪೂಜಾ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಅಕ್ಟೋಬರ್ 9 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ತಾಂಡವ್ ,ಶ್ರೇಷ್ಠಾ ಮಾತನಾಡುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುವ ಪೂಜಾ ಭಾವನಿಗೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ.
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ 289ನೇ ಎಪಿಸೋಡ್
ಅಮ್ಮನ ಕಾಲು ಮುರಿಯಲು ಶ್ರೇಷ್ಠಾಳೇ ಕಾರಣ ಎಂದು ತಿಳಿದ ತಾಂಡವ್ ಆಕೆಗೆ ಗುಡ್ ಬೈ ಹೇಳುತ್ತಾನೆ. ನಿನಗೆ ನನ್ನ ಅಪ್ಪ, ಅಮ್ಮ, ಮಕ್ಕಳು ಬೇಡ ಎಂದರೆ ನನಗೆ ನೀನೂ ಬೇಡ, ನಿನ್ನ ಪ್ರೀತಿಯೂ ಬೇಡ, ನನ್ನ ಲೈಫ್‌ನಿಂದ ದೂರ ಹೋಗು ಎಂದು ಶ್ರೇಷ್ಠಾಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾನೆ. ಇತ್ತ ಪೂಜಾ, ತನ್ನ ಮೊಬೈಲ್‌ನಲ್ಲಿ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ಪೂಜಾಳನ್ನು ನೋಡಿ ಗಾಬರಿ ಆಗುವ ತಾಂಡವ್
ಬೆಟ್ಟದ ಬಳಿ ಪೂಜಾಳನ್ನು ನೋಡಿದ ತಾಂಡವ್ ಗಾಬರಿ ಆಗುತ್ತಾನೆ. ಇವಳು ನನ್ನನ್ನು ಶ್ರೇಷ್ಠಾ ಜೊತೆಗೆ ನೋಡಿಬಿಟ್ಟಳಾ ಎಂದು ತಾಂಡವ್ ಗಾಬರಿ ಆಗುತ್ತಾನೆ. ಪೂಜಾ ಪರೋಕ್ಷವಾಗಿ ತಾಂಡವ್‌ಗೆ ಬ್ಲಾಕ್‌ಮೇಲ್ ಮಾಡಲು ಶುರು ಮಾಡುತ್ತಾಳೆ. ಅವಳ ಪ್ರತಿ ಮಾತಿಗೂ ತಾಂಡವ್ ಭಯ ಬೀಳುತ್ತಾನೆ. ರಸ್ತೆಯಲ್ಲಿ ಬಟ್ಟೆ ಅಂಗಡಿಯೊಂದನ್ನು ನೋಡುವ ಪೂಜಾ, ನಾನು ಶಾಪಿಂಗ್ ಮಾಡಬೇಕು ಕಾರು ನಿಲ್ಲಿಸಿ ಎಂದು ಹೇಳಿ ಕಾರಿನಿಂದ ಇಳಿಯುತ್ತಾಳೆ. ಆದರೆ ತಾಂಡವ್, ಕಾರಿನಿಂದ ಇಳಿಯದೆ ಪೂಜಾಳನ್ನು ಅಲ್ಲೇ ಬಿಟ್ಟು ಹೋಗುತ್ತಾನೆ.
ತಾಂಡವ್‌ಗೆ ಫೋನ್ ಮಾಡುವ ಪೂಜಾ, ನೀವು ವಾಪಸ್ ಬರದಿದ್ದರೆ ಬೆಟ್ಟದ ಮೇಲಿರುವ ಶ್ರೇಷ್ಠಾಳನ್ನು ಇಲ್ಲಿಗೆ ಕರೆಸಬೇಕಾಗುತ್ತದೆ ಎನ್ನುತ್ತಾಳೆ. ಇವಳಿಗೆ ಏನೋ ಗೊತ್ತಾಗಿದೆ ಎಂದು ತಾಂಡವ್‌ಗೆ ಕನ್ಫರ್ಮ್ ಆಗುತ್ತದೆ. ಕಾರನ್ನು ತಿರುಗಿಸಿಕೊಂಡು ಪೂಜಾಳನ್ನು ಬಿಟ್ಟುಹೋದ ಜಾಗಕ್ಕೆ ಬರುತ್ತಾನೆ. ಪೂಜಾ ಬಟ್ಟೆ ಅಂಗಡಿಗೆ ಹೋಗಿ ತನಗಿಷ್ಟವಾದ ಬಟ್ಟೆ ಶಾಪಿಂಗ್ ಮಾಡಿ ಬಿಲ್ ಕೊಡುವಂತೆ ಭಾವನಿಗೆ ಹೇಳುತ್ತಾಳೆ. ಪೂಜಾ ವರ್ತನೆ ತಾಂಡವ್‌ಗೆ ಸಿಟ್ಟು ತರಿಸುತ್ತದೆ. ಇಷ್ಟಕ್ಕೆ ಕೋಪಗೊಂಡರೆ ಹೇಗೆ ಇನ್ನೂ ಸೀರೆ ಅಂಗಡಿಗೆ ಹೋಗಬೇಕು ಎನ್ನುತ್ತಾಳೆ. ಅಷ್ಟರಲ್ಲಿ ಸುನಂದಾ ಪೂಜಾಗೆ ಕರೆ ಮಾಡಿ ಎಲ್ಲಿದ್ದೀಯ ಎಂದು ಕೇಳುತ್ತಾಳೆ. ಮನೆಯವರಿಗೆ ಶಾಪಿಂಗ್ ಮಾಡಲು ಭಾವ ನನ್ನನ್ನು ಕರೆದರು ಎಂದು ಪೂಜಾ ಸುಳ್ಳು ಹೇಳುತ್ತಾಳೆ.
ತಾಂಡವ್ ನಿರಾಕರಿಸಿದರೂ ಆತನನ್ನು ಬಿಡಲು ಒಪ್ಪದ ಶ್ರೇಷ್ಠಾ
ಇತ್ತ ಶ್ರೇಷ್ಠಾ, ಕೆನ್ನೆಗೆ ಅರಿಶಿನ, ಹಣೆಗೆ ದೊಡ್ಡ ಕುಂಕುಮ ಹಚ್ಚಿದ ಅವತಾರದಲ್ಲೇ ಮನೆಗೆ ಬರುತ್ತಾಳೆ. ಅವಳನ್ನು ನೋಡಿದ ಮನೆಯವರು ಗಾಬರಿ ಆಗುತ್ತಾರೆ. ಹೆತ್ತ ತಂದೆ ತಾಯಿಗೆ ಇಷ್ಟು ಕಷ್ಟ ಕೊಡಬೇಡ, ನಿನ್ನ ಒಳ್ಳೆಯದಕ್ಕೆ ನಾವು ಹೇಳುತ್ತಿರುವುದು. ಆ ಹುಡುಗ ಸರಿ ಇಲ್ಲ. ಅವನನ್ನು ಬಿಟ್ಟು ಊರಿಗೆ ಬಾ ಎಂದಾಗ ಶ್ರೇಷ್ಠಾ, ನಾನು ಎಲ್ಲೂ ಬರುವುದಿಲ್ಲ, ಮದುವೆ ಆದರೆ ಅವನನ್ನೇ ಎಂದು ಅರಚುತ್ತಾಳೆ.
ಪೂಜಾ, ಮನೆಯವರಿಗೆ ಏನೂ ಹೇಳದೆ ಭಾವನನ್ನು ಬ್ಲಾಕ್ ಮೇಲ್ ಮಾಡುತ್ತಾ ತನ್ನ ಡಿಮ್ಯಾಂಡ್ ನೆರವೇರಿಸಿಕೊಳ್ಳುತ್ತಾಳಾ? ತಾಂಡವ್‌ನನ್ನು ಬಿಡುವುದಿಲ್ಲ ಎಂದು ದೇವರ ಮುಂದೆ ಶಪಥ ಮಾಡುವ ಶ್ರೇಷ್ಠಾ ಏನು ನಿರ್ಧಾರ ಮಾಡುತ್ತಾಳೆ ಎಂದು ತಿಳಿಯಲು ಮುಂದಿನ ಎಪಿಸೋಡ್‌ಗಳನ್ನು ನೋಡಬೇಕು.
ಮನರಂಜನೆ ಸುದ್ದಿಯನ್ನು ಓದಲು ಈ ಲಿಂಕ್ ಒತ್ತಿ