Bigg Boss Kannada 10: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಮಸ್ಯೆಯೊಂದು ಎದುರಾಗಿದೆ!
Kannada Bigg Boss 10: ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಒಂದು ಸಮಸ್ಯೆ ಶುರುವಾಗಿದೆ ಎಂದು ಬಿಗ್ ಬಾಸ್ ಹೇಳಿದಾಗ ಸ್ಪರ್ಧಿಗಳಿಗೆ ಗೊಂದಲವಾಗುತ್ತದೆ. ಆದರೆ ಅದು ಇಬ್ಬರು ಸಂತೋಷ್ ಹೆಸರಿನ ಸಮಸ್ಯೆ ಎಂದು ತಿಳಿದಾಗ ಎಲ್ಲರೂ ನಿರಾಳವಾಗುತ್ತಾರೆ.
Kannada Bigg Boss 10 ಕಿರುತೆರೆಪ್ರಿಯರು ಕಾತರದಿಂದ ಕಾಯುತ್ತಿದ್ದ ಬಿಗ್ ಬಾಸ್ ಸೀಸನ್ 10 ಆರಂಭವಾಗಿದೆ. ಈ ಬಾರಿ 17 ಮಂದಿ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ವೇಟಿಂಗ್ ಲಿಸ್ಟ್‌ನಲ್ಲಿದ್ದ ಐವರು ಸ್ಪರ್ಧಿಗಳನ್ನು ಷರತ್ತಿನ ಅನ್ವಯ ಬಿಗ್ ಮಾಸ್, ದೊಡ್ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ಮೊದಲ ದಿನ ಸ್ಪರ್ಧಿಗಳೆಲ್ಲರೂ ಖುಷಿಯಾಗಿಯೇ ಕಾಲ ಕಳೆದಿದ್ದಾರೆ. ಸ್ಪರ್ಧಿಗಳು ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುವಾಗ ಬಿಗ್ ಬಾಸ್ ಸಮಸ್ಯೆಯೊಂದನ್ನು ಹೊತ್ತು ತಂದು ಸ್ಪರ್ಧಿಗಳು ಗಾಬರಿ ಆಗುವಂತೆ ಮಾಡಿದ್ದಾರೆ.
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಶುರುವಾಗಿದೆ ಸಮಸ್ಯೆ
ಇದು ಬಿಗ್ ಬಾಸ್, ಈ ಬಾರಿ ಮನೆಯಲ್ಲಿ ಒಂದು ಸಮಸ್ಯೆ ಶುರುವಾಗಿದೆ ಎಂದು ಬಿಗ್ ಬಾಸ್ ಮಾತು ಆರಂಭಿಸಿದಾಗ ಗಾರ್ಡನ್ ಏರಿಯಾದಲ್ಲಿ ನಿಶ್ಯಬ್ಧ ಆವರಿಸುತ್ತದೆ. ಇದಕ್ಕೂ ಮುನ್ನ ಈ ರೀತಿಯ ಪ್ರಾಬ್ಲಂ ಎಂದಿಗೂ ಎದುರಾಗಿರಲಿಲ್ಲ ಎಂದು ಬಿಗ್ ಬಾಸ್ ಹೇಳಿದಾಗ ಎಲ್ಲರೂ ಗಾಬರಿಗೊಳ್ಳುತ್ತಾರೆ. ಏನಪ್ಪಾ ಇದು ಸಮಸ್ಯೆ, ಇದುವರೆಗೂ ಇಲ್ಲದ್ದು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಾರೆ. ಆದರೆ ನಂತರ ಬಿಗ್ ಬಾಸ್ ಹೇಳಿದ್ದನ್ನು ಕೇಳಿ ಎಲ್ಲರೂ ನಗುತ್ತಾರೆ. ಅಸಲಿಗೆ ಈ ಬಾರಿ ಮನೆಯಲ್ಲಿ ಸಂತೋಷ್ ಹೆಸರಿನ ಇಬ್ಬರು ಸ್ಪರ್ಧಿಗಳು ಇರುವುದು ಎಲ್ಲರಿಗೂ ಕನ್ಫ್ಯೂಸ್ ಆಗುತ್ತಿದೆಯಂತೆ.
ನಿಮ್ಮಿಬ್ಬರನ್ನು ಏನೆಂದು ಕರೆಯಬೇಕು ಎಂದು ಕೇಳಿದಾಗ ನನ್ನನ್ನು ವರ್ತೂರು ಸಂತೋಷ್ ಎಂದು ಕರೆಯಿರಿ, ನನ್ನನ್ನು ತುಕಾಲಿ ಸಂತು ಎಂದೇ ಕರೆಯಿರಿ ಎಂದು ಇಬ್ಬರೂ ಉತ್ತರಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಗ್ ಬಾಸ್, ಸರಿ ಇನ್ಮುಂದೆ ನಿಮ್ಮನ್ನು ಸಂತೋಷ್ ಎಂದೇ ಕರೆಯುವುದಾಗಿ ಹೇಳುತ್ತಾರೆ. ಆದರೆ ಬಿಗ್ ಬಾಸ್ ಯಾರನ್ನು ಸಂತೋಷ್ ಹೆಸರಿನಲ್ಲಿ ಕರೆಯುವುದು ಎಂದು ಮತ್ತೆ ಸ್ಪರ್ಧಿಗಳು ಗೊಂದಲಕ್ಕೆ ಒಳಗಾಗುತ್ತಾರೆ. ಬಲಬದಿಯಲ್ಲಿರುವ ಸಂತೋಷ್ ಎಂದಾಗ, ಮತ್ತೆ ಕನ್ಫ್ಯೂಸ್. ಕೊನೆಗೆ ಬಿಗ್ ಬಾಸ್, ನನ್ನ ಬಲಬದಿಯಲ್ಲಿರುವ ಸಂತೋಷ್ ಎನ್ನುತ್ತಾರೆ.
ಕೊನೆಗೂ ಸಮಸ್ಯೆಗೆ ಪರಿಹಾರ ಸಿಕ್ತು
ಬಿಗ್ ಬಾಸ್ ಮಾತು, ಸ್ಪರ್ಧಿಗಳಿಗೆ ತಮಾಷೆ ಎನಿಸುತ್ತದೆ. ಹಾಗಾದರೆ ನನ್ನನ್ನು ಏನೆಂದು ಕರೆಯಬಹುದು ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಯೋಚಿಸುವಾಗ, ಮಾತು ಮುಂದುವರೆಸುವ ಬಿಗ್ ಬಾಸ್, ನಿಮ್ಮನ್ನು ತುಕಾಲಿ ಎಂದು ಕರೆಯುವುದು ಅಷ್ಟು ಸರಿ ಎನಿಸುತ್ತಿಲ್ಲ. ಆದ್ದರಿಂದ ನಿಮ್ಮನ್ನು ಗೌರವಯುವಾಗಿ, ತುಕಾಲಿ ಅವರೇ ಎಂದು ಕರೆಯುವುದಾಗಿ ಹೇಳಿದಾಗ ಮತ್ತೆ ಸ್ಪರ್ಧಿಗಳು ಬಿಗ್ ಬಾಸ್ ಮಾತಿಗೆ ಗೊಳ್ ಎಂದು ನಗುತ್ತಾರೆ.
ಒಟ್ಟಿನಲ್ಲಿ ಮೊದಲ ದಿನ ಎಲ್ಲವೂ ಚೆನ್ನಾಗಿದೆ. ವೇಟಿಂಗ್ ಲಿಸ್ಟ್‌ನಲ್ಲಿರುವವರಿಗೆ ಕೇಸರಿ ಬಣ್ಣದ ಬಟ್ಟೆ ನೀಡಲಾಗಿದೆ. ಮೊದಲ ವಾರ ಯಾರೆಲ್ಲಾ ನಾಮಿನೇಟ್ ಆಗಬಹುದು. ಯಾರು ಮನೆಯಿಂದ ಹೊರ ಹೋಗಬಹುದು, ಸ್ಟಾಂಗ್ ಕಂಟೆಸ್ಟಂಟ್ ಯಾರು, ವೀಕ್ ಯಾರು ಎಂಬುದನ್ನು ತಿಳಿಯಲು ವೀಕ್ಷಕರು ಕಾಯುತ್ತಿದ್ದಾರೆ.
ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಬಿಗ್ ಬಾಸ್ ಸುದ್ದಿಗಳನ್ನು ಓದಲು ಈ ಲಿಂಕ್ ಒತ್ತಿ
ವಿಭಾಗ