ಕನ್ನಡ ಸುದ್ದಿ  /  ಮನರಂಜನೆ  /  Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

ಖಾಸಗಿ ಫೋಟೋ, ವಿಡಿಯೋ ಲೀಕ್‌ ಆದ ಬೆನ್ನಲ್ಲೇ ನಟಿ ಜ್ಯೋತಿ ರೈ, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಿ, ಕೆಲವರಿಗೆ ಸವಾಲ್‌ ಹಾಕಿದ್ದಾರೆ. ನಿಮಗೆ ಧೈರ್ಯ ಇದ್ದರೆ ಈ ವಿಡಿಯೋ ವೈರಲ್‌ ಮಾಡಿ ಎಂದಿದ್ದಾರೆ. ಅಷ್ಟಕ್ಕೂ ಜ್ಯೋತಿ ರೈ ಹಂಚಿಕೊಂಡ ವಿಡಿಯೋ ಹೀಗಿದೆ.

Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ
Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

jyothi rai: ಸೋಷಿಯಲ್‌ ಮೀಡಿಯಾದಲ್ಲಿ ಒಂದು ಕಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳು ಹರಿದಾಡಿ ಸುದ್ದಿಯಾದರೆ, ಮತ್ತೊಂದು ಕಡೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋಗಳೂ ಸಂಚಲನ ಸೃಷ್ಟಿಸಿವೆ. ಅದರಲ್ಲೂ ಕನ್ನಡ ಕಿರುತೆರೆ ಮತ್ತು ತೆಲುಗು ಸೀರಿಯಲ್‌ನಲ್ಲೂ ಗುರುತಿಸಿಕೊಂಡಿರುವ ಜ್ಯೋತಿ ರೈ ಅವರದ್ದೆ ಎನ್ನುವ ಕೆಲವು ಖಾಸಗಿ ವಿಡಿಯೋಗಳು ಹಲವು ಅನುಮಾನಗಳಿಗೂ ಕಾರಣವಾಗಿವೆ. ಈಗ ಆ ವಿಡಿಯೋ ಹರಿದಾಡಿದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಜ್ಯೋತಿ ರೈ. ಅಷ್ಟೇ ಅಲ್ಲ, ಧೈರ್ಯ ಇದ್ದರೆ, ಈ ವಿಡಿಯೋವನ್ನು ವೈರಲ್‌ ಮಾಡಿ ಎಂದು ಸವಾಲ್‌ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಡಿಯೋ ವೈರಲ್‌ ಆದ ಬಳಿಕ ನೇರವಾಗಿ ಎಲ್ಲಿಯೂ ಉತ್ತರ ನೀಡದ ಜ್ಯೋತಿ ರೈ, ಇದೀಗ ಒಮ್ಮಿಂದೊಮ್ಮೆಲೇ ಮಹತ್ಕಾರ್ಯವೊಂದನ್ನು ಮಾಡಿದ್ದಾರೆ. ಅದರ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿಯೂ ಹಂಚಿಕೊಂಡು, ಧೈರ್ಯ ಇದ್ದರೆ ಈ ವಿಡಿಯೋ ವೈರಲ್‌ ಮಾಡಿ ನೋಡೋಣ ಎಂದು ಸವಾಲ್‌ ಹಾಕಿದ್ದಾರೆ. ಕೆಲವು ಹತಾಶ, ಕೆಲಸವಿಲ್ಲದ ಮತ್ತು ಅಶಿಕ್ಷಿತ ಟೈಂಪಾಸ್ ಚಿಲ್ಲರ್ ಫೆಲೋಗಳಿಗಾಗಿ" ಎಂದು ಸುದೀರ್ಘವಾದ ಬರಹದ ಜತೆಗೆ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಅಷ್ಟಕ್ಕೂ ಏನಿದು ವಿಡಿಯೋ?

ತೆಲುಗುನಾಡಿನಲ್ಲಿ ಪದ್ಮಶ್ರೀ ಕಿನ್ನೇರ ಮೊಗಲಯ್ಯ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರೂ, ಆರ್ಥಿಕವಾಗಿ ದುರ್ಬಲರು. ಅವರ ಸಹಾಯಕ್ಕೆ ನಟಿ ಜ್ಯೋತಿ ರೈ ಸಾಥ್‌ ನೀಡಿದ್ದಾರೆ. ಬರೋಬ್ಬರಿ 50 ಸಾವಿರ ಹಣಕಾಸಿನ ಸಹಾಯ ಮಾಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಜ್ಯೋತಿ ರೈ, ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಕಂಡು, ಅನುಭವಿಸಿದ ನೋವನ್ನು ಬರಹದ ಮೂಲಕ ಅಕ್ಷರಕ್ಕಿರಳಿಸಿದ್ದಾರೆ. ಜತೆಗೆ ಎಲ್ಲರಿಗೂ ಈ ವಿಡಿಯೋ ಮೂಲಕ ಚಾಲೆಂಜ್‌ವೊಂದನ್ನು ನೀಡಿದ್ದಾರೆ. ವಿಡಿಯೋ ಹಂಚಿದ ವಿಕೃತ ಮನಸ್ಸುಗಳಿಗೂ ಚಾಟಿ ಬೀಸಿದ್ದಾರೆ. ಹಾಗಾದರೆ, ಜ್ಯೋತಿ ರೈ ಹೇಳಿದ್ದೇನು? ಇಲ್ಲಿದೆ.

ಪದ್ಮಶ್ರೀ ಪುರಸ್ಕೃತನಿಗೆ ಧನ ಸಹಾಯ

"ಅಕ್ಷಯ ತೃತೀಯದ ಶುಭ ದಿನದಂದು, ತಮ್ಮ ಖ್ಯಾತಿಯ ಹೊರತಾಗಿಯೂ ಸಾಕಷ್ಟು ವೈಯಕ್ತಿಕ ಮತ್ತು ವೃತ್ತಿಪರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗಲಯ್ಯ ಅವರಿಗೆ 50ಸಾವಿರ ಆರ್ಥಿಕ ನೆರವು ನೀಡಿದ್ದೇನೆ. ಈ ಬಗ್ಗೆ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವಿಚಾರ ಪಿಆರ್‌ ಮೂಲಕ ನನಗೆ ತಿಳಿಯಿತು. ಸದ್ಯ ನಾನೇ ಸವಾಲಿನ ಸ್ಥಿತಿಯಲ್ಲಿದ್ದರೂ, ಅವರ ಕಷ್ಟಕ್ಕೆ ಕರಗುವಂತೆ ಮಾಡಿತು. ಅವರನ್ನು ಮನೆಗೆ ಕರೆಸಿಕೊಂಡು, ಅವರಿಗೆ ಊಟೋಪಚಾರ ನೀಡಿ, ಅವರ ಕಲೆಗೆ ಬೆಂಬಲವಾಗಿ ನಿಂತು ನನ್ನ ಕೈಲಾದ ಸಹಾಯ ಮಾಡಿದ್ದೇನೆ. ನೀವೂ ಇವರ ಕಷ್ಟಕ್ಕೆ ಕೈ ಜೋಡಿಸಿ" ಎಂದಿದ್ದಾರೆ. ನಟಿಯ ಈ ಕಾರ್ಯಕ್ಕೆ ಎಷ್ಟೋ ಮಂದಿ ಭೇಷ್‌ ಎನ್ನುತ್ತಿದ್ದಾರೆ.

ವಿಡಿಯೋ ವೈರಲ್‌ ಮಾಡಿದವ್ರಿಗೆ ನಟಿಯ ಸವಾಲು

ಮುಂದುವರಿದು, "ಈ ವೀಡಿಯೊವನ್ನು ವೈರಲ್ ಮಾಡಲು ನಿಮಗೆ ಧೈರ್ಯವಿದೆಯೇ? ಈ ಸಾಲು ಕೆಲವು ಹತಾಶ, ಕೆಲಸವಿಲ್ಲದ ಅಶಿಕ್ಷಿತ ಟೈಂಪಾಸ್ ಚಿಲ್ಲರ್‌ಗಳಿಗಾಗಿ. ಈ ಜಗತ್ತು ನೆಗೆಟಿವಿಟಿಯ ನೆರಳನ್ನು ಎಸೆದಾಗ, ನಾನು ಅದೇ ನೆರಳಿನಲ್ಲಿ ಮಗದಷ್ಟು ಹೊಳೆಯುತ್ತೇನೆ. ಕತ್ತಲೆ ನನ್ನ ಬೆಳಕಿಗೆ ಇಂಧನ ರೂಪದಲ್ಲಿ ದಾರಿಯಾಗುತ್ತದೆ. ನಿರಾಶಾವಾದದ ಬೂದಿ ಫೀನಿಕ್ಸ್ ರೂಪ ಪಡೆಯುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲಾದರೆ, ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಜಿಗಿಯುತ್ತೇನೆ" ಎಂದು ನೇರವಾಗಿಯೇ ವಿಡಿಯೋ ವೈರಲ್‌ ಮಾಡಿದವರ ಬಗ್ಗೆ ಕೊಂಚ ಬಿರುಸಾಗಿಯೇ ಬರೆದುಕೊಂಡಿದ್ದಾರೆ ಜ್ಯೋತಿ ರೈ.

IPL_Entry_Point