ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು?-kannada television news mysore mp yaduveer wadiyar participated in colors kannada anubandha awards 2024 rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು?

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು?

ಇಂದಿನಿಂದ (ಸೆ.20) ಮೂರು ದಿನಗಳ ಕಾಲ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಪ್ರಸಾರವಾಗಲಿದೆ. ಮೈಸೂರು-ಕೊಡಗು ಸಂಸದರಾದ ಯುದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಂಸದರಿಗೆ ನಿರೂಪಕ ಸೃಜನ್‌ ಲೋಕೇಶ್‌ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು?
ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಯದುವೀರ್‌ ಒಡೆಯರ್‌; ಸೃಜನ್‌ ಲೋಕೇಶ್‌ ತರ್ಲೆ ಪ್ರಶ್ನೆಗಳಿಗೆ ಸಂಸದರು ಕೊಟ್ಟ ಉತ್ತರವೇನು? (PC: Colors Kannada Instagram)

ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ದಿನ ಇಂದು ಬಂದಿದೆ. ಇಂದು ಸಂಜೆಯಿಂದ 3 ದಿನಗಳ ಕಾಲ ಪ್ರತಿ ದಿನ 7 ಗಂಟೆಗೆ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇಂದಿನಿಂದ ಸಂಜೆ 7 ಗಂಟೆಯಿಂದ ಪ್ರಸಾರವಾಗುವ ಧಾರಾವಾಹಿಗಳಿಗೂ ಬ್ರೇಕ್‌ ಹಾಕಲಾಗಿದೆ.

ಮೂರು ದಿನಗಳ ಕಾಲ ಪ್ರಸಾರವಾಗಲಿರುವ ಕಾರ್ಯಕ್ರಮ

ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಸೆರೆ ಹಿಡಿಯಲಾಗಿದ್ದು, ಇಂದು ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಜನ ಮೆಚ್ಚಿದ ನಾಯಕ, ಜನ ಮೆಚ್ಚಿದ ನಾಯಕಿ, ಜನ ಮೆಚ್ಚಿದ ಸಹೋದರಿ, ಜನ ಮೆಚ್ಚಿದ ಸಂಸಾರ, ಜನ ಮೆಚ್ಚಿದ ಯೂತ್‌ ಐಕಾನ್‌, ಜನ ಮೆಚ್ಚಿದ ಹೊಸ ಪರಿಚಯ, ಜನ ಮೆಚ್ಚಿದ ಕಾಮಿಡಿಯನ್‌, ಜನ ಮೆಚ್ಚಿದ ಎಂಟರ್‌ಟೈನರ್‌, ಜನ ಮೆಚ್ಚಿದ ಶಕುನಿ, ಜನ ಮೆಚ್ಚಿದ ಅತ್ತೆ ಸೇರಿದಂತೆ ಈ ಬಾರಿ ಯಾರಿಗೆ ಯಾವ ಪ್ರಶಸ್ತಿ ದೊರೆಯಬಹುದು ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕಲರ್ಸ್‌ ಕನ್ನಡದ ಎಲ್ಲಾ ಧಾರಾವಾಹಿ ತಂಡ ಬಣ್ಣ ಬಣ್ಣದ ಡ್ರೆಸ್‌ ಕೋಡ್‌ನಲ್ಲಿ ಮಿಂಚಿದ್ದಾರೆ.

ಕಾರ್ಯಕ್ರಮದಲ್ಲಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

ಕಾರ್ಯಕ್ರಮದಲ್ಲಿ ಚಿತ್ರರಂಗ , ರಾಜಕೀಯ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಲಾಗಿತ್ತು. ಮೈಸೂರು ರಾಜವಂಶಸ್ಥ ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡಾ ಆಗಮಿಸಿದ್ದರು. ಕಾರ್ಯಕ್ರಮದುದ್ದಕ್ಕೂ ಹಾಡು, ಡ್ಯಾನ್ಸ್‌ ನೋಡಿ ಎಂಜಾಯ್‌ ಮಾಡಿದರು. ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸೃಜನ್‌ ಲೋಕೇಶ್‌, ಯದುವೀರ್‌ ಅವರನ್ನು ವೇದಿಕೆಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ನಾನೂ ಕಲರ್ಸ್‌ ಕನ್ನಡ ಚಾನೆಲ್‌ ನೋಡುತ್ತೇನೆ ಎಂದು ಯದುವೀರ್‌ ವಾಹಿನಿ ಬಗ್ಗೆ ಹೊಗಳಿಗೆ ಮಾತುಗಳ್ನನಾಡಿದರು.

ರಾಜ-ರಾಣಿ ಜಗಳ ಆಡಿದ್ರೆ ಮೊದಲು ಸಾರಿ ಕೇಳೋದು ಯಾರು?

ನಿಮಗೆ ಒಂದೆರಡು ತರ್ಲೆ ಪ್ರಶ್ನೆಗಳನ್ನು ಕೇಳುತ್ತೇನೆ ದಯವಿಟ್ಟು ತಪ್ಪು ತಿಳಿಯಬೇಡಿ ಎಂದು ಸೃಜನ್‌ ಲೋಕೇಸ್‌ ತಮ್ಮ ಮಾತಿನ ಧಾಟಿ ಆರಂಭಿಸಿದರು. ಮೈಸೂರು ಪ್ಯಾಲೇಸ್‌ಗೆ ಎಷ್ಟು ಕರೆಂಟ್‌ ಬಿಲ್‌ ಬರುತ್ತದೆ? ಎಂದು ಕೇಳುತ್ತಾರೆ. ರಾಜ ರಾಣಿ ಜಗಳ ಮಾಡಿದಾಗ ಮೊದಲು ಯಾರು ಸಾರಿ ಕೇಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುವ ಯದುವೀರ್‌ ಒಡೆಯರ್‌ ಸಾಮಾನ್ಯವಾಗಿ ನಾನೇ ಸಾರಿ ಕೇಳುತ್ತೇನೆ ಎಂದು ಉತ್ತರಿಸುತ್ತಾರೆ. ನಮ್ಮ ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ರಾಣಿಯವರು ಚಿತ್ರಾನ್ನ ಮಾಡಿ ನಿಮಗೆ ಟೇಸ್ಟ್‌ ಮಾಡಿಸಿದ್ದಾರಾ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಉತ್ತರಿಸುವ ಯದುವೀರ್‌ ಒಡೆಯರ್‌, ಎಲ್ಲರ ಮನೆಯಲ್ಲಿ ನಡೆಯುವುದೇ ನಮ್ಮ ಮನೆಯಲ್ಲೂ ನಡೆಯುತ್ತದೆ ಎಂದು ಉತ್ತರಿಸಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿ ಈ ಪ್ರೋಮೋವನ್ನು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪೂರ್ತಿ ಕಾರ್ಯಕ್ರಮ ವೀಕ್ಷಿಸಲು ಕಿರುತೆರೆಪ್ರಿಯರು ಕಾಯುತ್ತಿದ್ದಾರೆ.

mysore-dasara_Entry_Point