Raghu Thatha: ಸಲಾರ್ ಬಿಡುಗಡೆ ಹೊಸ್ತಿಲಲ್ಲಿ ಕೀರ್ತಿ ಸುರೇಶ್ ನಟನೆಯ ರಘು ತಾತಾ ಚಿತ್ರದ ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್
Raghu Thatha first look: ದಕ್ಷಿಣ ಭಾರತದ ಪ್ರಮುಖ ನಟಿ ಕೀರ್ತಿ ಸುರೇಶ್ ಮುಖ್ಯಪಾತ್ರದಲ್ಲಿ ನಟಿಸಿರುವ ರಘು ತಾತ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ. ಕಾಂತಾರ, ಸಲಾರ್‌ನಂತಹ ಸಿನಿಮಾಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ರಘು ತಾತಾ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಹೊಂಬಾಳೆ ಫಿಲ್ಮ್ಸ್‌ನ ತಮಿಳು ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂದು ಕಳೆದ ವರ್ಷವೇ ಸುದ್ದಿಯಾಗಿತ್ತು. ರಘು ತಾತಾ ಹೆಸರಿನ ಸಿನಿಮಾದ ಕುರಿತು ಇದೀಗ ಹೊಂಬಾಳೆ ಫಿಲ್ಮ್ಸ್ ಹೊಸ ಅಪ್‌ಡೇಟ್ ನೀಡಿದೆ. ರಘು ತಾತಾ (raghu thatha) ಸಿನಿಮಾದ ಶೀರ್ಷಿಕೆಯನ್ನು ರಘು ಥಾಥಾ ಎಂದೂ ಓದಿಕೊಳ್ಳಬಹುದು.
"ರಘು ತಾತಾ ಹೆಸರಿನ ರೋಲಿಕಿಂಗ್, ಹಿಲರಿಯಸ್ ಅಡ್ವೇಂಚರ್ ಸಿನಿಮಾವು ಶೀಘ್ರದಲ್ಲಿ ನಿಮ್ಮ ಸಮೀಪದ ಚಿತ್ರಮಂದಿರಕ್ಕೆ ಆಗಮಿಸಲಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಪುಟ್ಟ ವಿಡಿಯೋ ಕ್ಲಿಪ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: OTT News: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಒಟಿಟಿ ಬಿಡುಗಡೆ ಯಾವಾಗ, ಅಮೆಜಾನ್ ಪ್ರೈಮ್‌ನಲ್ಲಿ ನೋಡಲು ರೆಡಿಯಾಗಿ
ಹಳೆ ಕಾಲದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಂತೆ ಮೈಕ್‌ನಲ್ಲಿ ನೋಡಲು ಮರೆಯದಿರಿ, ಮರೆತು ನಿರಾಶರಾಗಬೇಡಿ ಶೈಲಿಯಲ್ಲಿ ರಘು ತಾತಾ ಸಿನಿಮಾದ ಪ್ರಚಾರ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
ಮಹಿಳಾ ಹಕ್ಕುಗಳು ಮತ್ತು ತನ್ನ ಪಾಲಿನ ಭೂಮಿಗಾಗಿ ಹೋರಾಟ ನಡೆಸುವ ಮಹಿಳೆಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ರಘು ತಾತ ಹೆಸರಿನ ಸಿನಿಮಾದಲ್ಲಿ ಒಳ್ಳೆಯ ಕಥೆ, ಹಾಸ್ಯ ಇರುವ ಸೂಚನೆಯಿದೆ.
ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಕನ್ನಡ, ತೆಲುಗು, ಮಲಯಾಳಂ ಚಿತ್ರಗಳನ್ನು ನಿರ್ಮಾಣ ಮಾಡಿದೆ. ರಘು ತಾತ ಚಿತ್ರದ ಮೂಲಕ ತಮಿಳು ಚಿತ್ರವನ್ನೂ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಇದೊಂದು ಕಾಮಿಡಿ ಡ್ರಾಮ. ಸಮಾಜದಲ್ಲಿ ತೊಂದರೆ ಅನುಭವಿಸಿದಾಗ ಹೋರಾಟ ನಡೆಸುವ ಗಟ್ಟಿಗಿತ್ತಿ ಮಹಿಳೆಯ ಕಥೆಯನ್ನು ಇದು ಹೊಂದಿದೆ. ಎಲ್ಲರೊಂದಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಎಲ್ಲರಿಗೂ ಈಕೆ ಹೇಗೆ ಸ್ಪೂರ್ತಿಯಾಗುತ್ತಾಳೆ ಎಂಬ ಕಥೆಯನ್ನು ಹೊಂದಿದೆ.
ರಘು ತಾತಾ ಸಿನಿಮಾದಲ್ಲಿ ಕೀರ್ತಿ ಸುರೇಶ್ ಮಾತ್ರವಲ್ಲದೆ ದೇವದರ್ಶಿನಿ, ಎಂಎಸ್ ಭಾಸ್ಕರ್, ರವೀಂದ್ರ ವಿಜಯ್ ಮುಂತಾದ ತಮಿಳು ನಟರು, ನಟಿಯರು ನಟಿಸಿದ್ದಾರೆ. ರಘು ತಾತಾ ಸಿನಿಮಾದ ಮೂಲಕ ಫಾರ್ಜಿ, ತಾಪ್ಸೆ ಪನ್ನು ನಟಿಸಿರುವ ಗೇಮ್ ಓವರ್, ಫ್ಯಾಮಿಲಿ ಮ್ಯಾನ್‌ನಂತಹ ಚಿತ್ರಗಳಿಗೆ ಕಥೆ ಬರೆದಿರುವ ಸುಮನ್ ಕುಮಾರ್ ಅವರು ಈ ರಘು ತಾತ ಸಿನಿಮಾದ ಮೂಲಕ ನಿರ್ದೇಶಕನ ಟೋಪಿ ಹಾಕಿಕೊಂಡಿದ್ದಾರೆ.
ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ ಸಿಯನ್ ರೊಲ್ಡನ್ ಸಂಗೀತ, ಯಾಮಿನಿ ಯಗ್ನಮೂರ್ತಿಯವರ ಕ್ಯಾಮೆರಾ, ಟಿಎಸ್ ಸುರೇಶ್ ಸಂಕಲನವಿದೆ.