OTT News: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಒಟಿಟಿ ಬಿಡುಗಡೆ ಯಾವಾಗ, ಅಮೆಜಾನ್‌ ಪ್ರೈಮ್‌ನಲ್ಲಿ ನೋಡಲು ರೆಡಿಯಾಗಿ
ಕನ್ನಡ ಸುದ್ದಿ  /  ಮನರಂಜನೆ  /  Ott News: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಒಟಿಟಿ ಬಿಡುಗಡೆ ಯಾವಾಗ, ಅಮೆಜಾನ್‌ ಪ್ರೈಮ್‌ನಲ್ಲಿ ನೋಡಲು ರೆಡಿಯಾಗಿ

OTT News: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಒಟಿಟಿ ಬಿಡುಗಡೆ ಯಾವಾಗ, ಅಮೆಜಾನ್‌ ಪ್ರೈಮ್‌ನಲ್ಲಿ ನೋಡಲು ರೆಡಿಯಾಗಿ

Sagaradaache Ello Side B OTT Release: ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌, ಚೈತ್ರಾ ಆಚಾರ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸದ್ಯದಲ್ಲಿಯೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಇದೇ ಡಿಸೆಂಬರ್‌ 22ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರತಂಡ ಯಾವುದೇ ಅಪ್‌ಡೇಟ್‌ ನೀಡಿಲ್ಲ.

OTT News: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಒಟಿಟಿ ವಿವರ
OTT News: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಒಟಿಟಿ ವಿವರ

ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾವನ್ನು ಸಾಕಷ್ಟು ಜನರು ಚಿತ್ರಮಂದಿರಗಳಲ್ಲಿ ನೋಡಿದ್ದಾರೆ. ಈ ಚಿತ್ರವನ್ನು ಸಾಕಷ್ಟು ಜನರು ಥಿಯೇಟರ್‌ನಲ್ಲಿ ನೋಡುವ ಅವಕಾಶ ಪಡೆಯದೆ ಇರಬಹುದು. ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ನೋಡೋಣ ಎಂದು ಒಂದಿಷ್ಟು ಜನರು ಅಂದುಕೊಂಡಿರಬಹುದು. ಈಗಾಗಲೇ ಒಟಿಟಿಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ನೋಡಿರುವವರು ಅದರ ಮುಂದಿನ ಭಾಗ ನೋಡಲು ಕಾಯುತ್ತಿದ್ದಾರೆ. ವರದಿಗಳ ಪ್ರಕಾರ ಈ ಸಿನಿಮಾ ಇದೇ ಡಿಸೆಂಬರ್‌ 22ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ಹೇಮಂತ್‌ ರಾವ್‌ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾದಲ್ಲಿ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ಅಭಿನಯಸಿದ್ದಾರೆ. ರುಕ್ಮಿಣಿ ವಸಂತ್‌, ಚೈತ್ರಾ ಜೆ ಆಚಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯ ಮುಂದುವರೆದ ಭಾಗ. ಸೈಡ್‌ ಎ ಚಿತ್ರವು ಸೆಪ್ಟೆಂಬರ್‌ 2023ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಸೈಡ್‌ ಬಿಯನ್ನು ಡಿಜಿಟಲ್‌ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.

ಒಟಿಟಿ ಪ್ಲೇ ವರದಿ ಪ್ರಕಾರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು ಅಮೆಜಾನ್‌ ಪ್ರೈಮ್‌ನಲ್ಲಿ ಡಿಸೆಂಬರ್‌ 22ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂದರೆ, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾದ ಒಂದು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ ಪ್ರೈಮ್‌ ಚಂದಾದಾರರು ಇನ್ನು ಮೂರು ದಿನಗಳಲ್ಲಿ ಈ ಸಿನಿಮಾ ನೋಡಬಹುದು. ಆದರೆ, ಈ ಕುರಿತು ರಕ್ಷಿತ್‌ ಶೆಟ್ಟಿ ಕಡೆಯಿಂದ ಯಾವುದೇ ಅಪ್‌ಡೇಟ್‌ ಬಂದಿಲ್ಲ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರವು ಸಿನಿಮಾ ಮಂದಿರಗಳಲ್ಲಿ ನವೆಂಬರ್‌ 17ರಂದು ಬಿಡುಗಡೆಯಾಗಿತ್ತು. ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಸುಮಾರು 2.50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಇದು ಮೊದಲ ದಿನವೇ ಭಾರತದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಇದು ಸುಮಾರು 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಿದ ಸಿನಿಮಾವಾಗಿದೆ. ಚಿತ್ರ ಬಿಡುಗಡೆಯಾದ ಆರು ದಿನಗಳಲ್ಲಿ ಸುಮಾರು ಹತ್ತು ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಗಲೇ ಸಪ್ತ ಸಾಗರದಾಚೆ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಹೊಗಳಿಕೆ ಕೇಳಿಬಂದಿತ್ತು. ಈ ಸಿನಿಮಾ ನೋಡಿ ಸಾಕಷ್ಟು ಜನರು ಮೆಚ್ಚಿದ್ದಾರೆ. ನಿಸ್ಸಂಶಯವಾಗಿ ಸಪ್ತ ಸಾಗರದಾಚೆ ಸಿನಿಮಾವು ಈ ದಶಕದ ಅದ್ಭುತ ಪ್ರೇಮಕಥೆ. ಇದು ಸಿನಿಮಾವಲ್ಲ, ಒಂದು ಅನುಭವ. ಮನು ಮತ್ತು ಪ್ರಿಯ ಸಾವಿರ ಸಾಗರ ದಾಟುತ್ತಾರೆ ಎಂದು ಈ ಸೈಡ್‌ ಬಿ ಸಿನಿಮಾದ ಕುರಿತು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದಯವಿಟ್ಟು ಈ ಸಿನಿಮಾದ ಕ್ಲೈಮ್ಯಾಕ್ಸ್‌ ಮತ್ತು ಬ್ಯಾಕ್‌ ಗ್ರೌಂಡ್‌ ಮ್ಯೂಸಿಕ್‌ ಮಿಸ್‌ ಮಾಡಿಕೊಳ್ಳಬೇಡಿ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಸೆಪ್ಟೆಂಬರ್‌ 1ರಂದು ಬಿಡುಗಡೆ ಆಗಿದ್ದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮನು ಮತ್ತು ಪ್ರಿಯಾಳ ನವಿರಾದ ಪ್ರೇಮಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕರು. ಹೀಗೆ ಸಾಗಿದ ಇಬ್ಬರ ಪ್ರೇಮಕಥೆ, ರೋಚಕ ಘಟ್ಟಕ್ಕೆ ಬಂದು ತಲುಪಿತ್ತು. ಮನು ಜೈಲಿನಲ್ಲಿಯೇ ಉಳಿದರೆ, ಪ್ರಿಯಾ ಬೇರೆಯವನ ಮದುವೆಯಾಗಿ ಜೀವನ ಮುಂದುವರಿಸಿದ್ದಳು. ಇದರ ಕಥೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಮುಂದುವರೆಯಿತು. ಈ ಸಿನಿಮಾದ ಕಥೆಯೇನು ಎಂದು ಇನ್ನೂ ಚಿತ್ರಮಂದಿರದಲ್ಲಿ ನೋಡದೆ ಇರುವವರು ಒಟಿಟಿ ಬಿಡುಗಡೆಗಾಗಿ ಕಾಯಬಹುದು.

Whats_app_banner