ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್-kollywood news superstar rajinikanth angry on reporter in chennai airport tamil film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್

ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್

ಚೆನ್ನೈ ಏರ್‌ಪೋರ್ಟ್‌ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೋಪಗೊಂಡಿದ್ದಾರೆ. ಮತ್ತೊಮ್ಮೆ ಇಂತ ಪ್ರಶ್ನೆಗಳನ್ನು ಕೇಳದಿರುವಂತೆ ವರದಿಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್
ದಯವಿಟ್ಟು ಅಂತಹ ಪ್ರಶ್ನೆಗಳನ್ನು ಕೇಳಬೇಡಿ; ಪತ್ರಕರ್ತರ ಪ್ರಶ್ನೆಗೆ ಗರಂ ಆದ ಸೂಪರ್‌ ಸ್ಟಾರ್‌ ರಜನಿಕಾಂತ್‌; ವಿಡಿಯೋ ವೈರಲ್

ಚೆನ್ನೈ ಏರ್‌ಪೋರ್ಟ್‌ನಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೋಪಗೊಂಡಿದ್ದಾರೆ. ಮತ್ತೊಮ್ಮೆ ಇಂತ ಪ್ರಶ್ನೆಗಳನ್ನು ಕೇಳದಿರುವಂತೆ ವರದಿಗಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೂಪರ್‌ ಸ್ಟಾರ್‌ ರಜನಿಕಾಂತ್ ಎಷ್ಟು ಎತ್ತರಕ್ಕೆ ಬೆಳೆದರೂ ಡೌನ್‌ ಟು ಅರ್ತ್‌ ಎಂಬಂತ ಸರಳ ವ್ಯಕ್ತಿತ್ವದವರು. ಸಾರ್ವಜನಿಕವಾಗಿ ಅವರು ಎಂದಿಗೂ ಕೋಪಗೊಂಡಿಲ್ಲ. ಮಾಧ್ಯಮ ಮತ್ತು ಅಭಿಮಾನಿಗಳೊಂದಿಗೆ ಕೂಡಾ ಅವರು ಬಹಳ ತಾಳ್ಮೆಯಿಂದ ಇರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ತಲೈವಾ, ಪತ್ರಕರ್ತರ ಮೇಲೆ ಕೋಪಗೊಂಡಿದ್ದಾರೆ.

ರಾಜಕೀಯ ಕುರಿತ ಪ್ರಶ್ನೆಗೆ ತಲೈವಾ ಗರಂ

ಚೆನ್ನೈ ವಿಮಾನ ನಿಲ್ದಾಣದಲ್ಲಿ ವರದಿಗಾರರೊಬ್ಬರ ಮೇಲೆ ರಜನಿಕಾಂತ್ ಕೋಪಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸುತ್ತುವರೆದರು. ತಮಗೆ ತೋಚಿದ ಪ್ರಶ್ನೆಗಳನ್ನು ಅವರಿಗೆ ಕೇಳುತ್ತಾರೆ. ತಲೈವಾ ಕೂಡಾ ಎಲ್ಲರಿಗೂ ತಾಳ್ಮೆಯಿಂದ, ನಗುತ್ತಲೇ ಉತ್ತರ ಕೊಡುತ್ತಾರೆ. ಅದರೆ ಮತ್ತೊಬ್ಬ ರಿಪೋರ್ಟರ್‌, ರಜನಿಕಾಂತ್‌ ಬಳಿ ರಾಜಕೀಯ ಕುರಿತ ಪ್ರಶ್ನೆಯೊಂದನ್ನು ಕೇಳುತ್ತಾರೆ. ನಟ ಮತ್ತು ತಮಿಳುನಾಡು ಆಡಳಿತ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುವಂತೆ ರಜನಿಕಾಂತ್‌ಗೆ ಪ್ರಶ್ನೆ ಎದುರಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ ರಜನಿಕಾಂತ್‌. "ನನ್ನ ಬಳಿ ರಾಜಕೀಯ ಕುರಿತು ಪ್ರಶ್ನೆಗಳನ್ನು ಕೇಳಬೇಡಿ. ನಾನು ನಿಮಗೆ ಮೊದಲೇ ಹೇಳಿದ್ದೇನೆ" ಎಂದು ರಜನಿಕಾಂತ್ ವರದಿಗಾರನತ್ತ ಬಹಳ ಕೋಪದಿಂದ ನೋಡುತ್ತಾರೆ.

ಒಮ್ಮೆಲೇ ಕೋಪಗೊಂಡ ತಲೈವಾ ಮತ್ತೆ ಶಾಂತರಾಗುತ್ತಾರೆ. ಆ ಪ್ರಶ್ನೆಗೂ ಮುನ್ನ, ನಂತರ ಕೂಡಾ ಮೊದಲಿನಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ರಾಜಕೀಯಕ್ಕೆ ಬರುತ್ತೇನೆ ಎಂದು ಹಲವು ಬಾರಿ ಹೇಳಿದ್ದ ರಜನಿ, ನಂತರ ಮನಸ್ಸು ಬದಲಿಸಿದ್ದರು. ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದರು. ಆದರೆ ಈಗ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲೂ ಅವರು ಇಷ್ಟಪಡದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ.

ವೆಟ್ಟೈಯನ್ ಆಡಿಯೋ ಲಾಂಚ್

ಶುಕ್ರವಾರ (ಸೆಪ್ಟೆಂಬರ್ 20) ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಿತು. ಇದಕ್ಕೂ ಮುನ್ನ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಚಿತ್ರ ಕೂಲಿ ಚಿತ್ರೀಕರಣವನ್ನು ಚೆನ್ನೈನಲ್ಲಿ ನಡೆಯುತ್ತಿದೆ ಎಂದು ಲೋಕೇಶ್ ಕನಕರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಸಂಪೂರ್ಣ ವಿಭಿನ್ನ ಪಾತ್ರ. ಈ ಚಿತ್ರ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಕೂಲಿ ಚಿತ್ರದಲ್ಲಿ ರಜನಿಕಾಂತ್‌ ಜೊತೆ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡಾ ನಟಿಸುತ್ತಿದ್ದಾರೆ. ಕಾಳೇಶ ಪಾತ್ರದ ಲುಕ್‌ ಈಗಾಗಲೇ ರಿವೀಲ್‌ ಆಗಿದೆ.‌

mysore-dasara_Entry_Point