OTT Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾ ಬಿಡುಗಡೆ, ಇವುಗಳಲ್ಲಿ 7 ಸ್ಪೆಷಲ್‌, ಈ ವಾರ ಯಾವುದನ್ನು ನೋಡ್ತಿರಿ?-ott movies release this week ten movies web series released tangalaan cid ramachandran retd si etc pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾ ಬಿಡುಗಡೆ, ಇವುಗಳಲ್ಲಿ 7 ಸ್ಪೆಷಲ್‌, ಈ ವಾರ ಯಾವುದನ್ನು ನೋಡ್ತಿರಿ?

OTT Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾ ಬಿಡುಗಡೆ, ಇವುಗಳಲ್ಲಿ 7 ಸ್ಪೆಷಲ್‌, ಈ ವಾರ ಯಾವುದನ್ನು ನೋಡ್ತಿರಿ?

OTT New Movies: ಒಟಿಟಿಯಲ್ಲಿ ಒಂದೇ ದಿನ 10 ಚಲನಚಿತ್ರಗಳು ಬಿಡುಗಡೆಯಾಗಿವೆ. ಶುಕ್ರವಾರ ಹತ್ತು ಸಿನಿಮಾಗಳು ಬಿಡುಗಡೆಯಾಗಿದ್ದರೆ, ಇಂದು ಅಂದರೆ ಸೆಪ್ಟೆಂಬರ್‌ 21ರಂದು ಹಲವು ವೆಬ್‌ ಸರಣಿ ಮತ್ತು ರಿಯಾಲಿಟಿ ಶೋಗಳು ಬಿಡುಗಡೆಯಾಗಿವೆ.

OTT Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾಗಲೂ ಬಿಡುಗಡೆ
OTT Movies: ಒಟಿಟಿಯಲ್ಲಿ ಒಂದೇ ಬಾರಿ 10 ಸಿನಿಮಾಗಲೂ ಬಿಡುಗಡೆ

OTT New Movies: ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು, ವೆಬ್‌ ಸರಣಿಗಳು ಬಿಡುಗಡೆಯಾಗಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮಾತ್ರವಲ್ಲದೆ ಹಾಲಿವುಡ್‌ನ ಹಲವು ಚಿತ್ರಗಳು ರಿಲೀಸ್‌ ಆಗಿವೆ. ಈ ವಾರ ಒಟ್ಟು 20 ಸಿನಿಮಾ, ವೆಬ್‌ಸರಣಿಗಳು ಒಟಿಟಿಗೆ ಬಂದಿವೆ. ಇವುಗಳಲ್ಲಿ ಸೆಪ್ಟೆಂಬರ್‌ 20ರಂದು 10 ಸಿನಿಮಾ, ಸರಣಿ ರಿಲೀಸ್‌ ಆಗಿವೆ. ಈ ವಾರಾಂತ್ಯದಲ್ಲಿ ಮನೆಯಲ್ಲಿಯೇ ಕುಳಿತು ಹೊಸ ಸಿನಿಮಾ, ವೆಬ್‌ ಸರಣಿ ನೋಡುವವರಿಗೆ ಹಲವು ಆಯ್ಕೆಗಳಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಜೀ 5, ಜಿಯೋ ಸಿನಿಮಾ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಬಿಡುಗಡೆಯಾಗಿರುವ ಹೊಸ ಸಿನಿಮಾ, ವೆಬ್‌ ಸರಣಿಗಳ ವಿವರ ಇಲ್ಲಿದೆ.

ನೆಟ್‌ಫ್ಲಿಕ್ಸ್‌ ಒಟಿಟಿ

  • ಹಿಸ್‌ ತ್ರೀ ಡಾಟರ್ಸ್‌ (ಇಂಗ್ಲಿಷ್ ಚಲನಚಿತ್ರ) - ಸೆಪ್ಟೆಂಬರ್ 20
  • ತಂಗಲಾನ್ (ತೆಲುಗು ಡಬ್ಬಿಂಗ್ ತಮಿಳು ಚಲನಚಿತ್ರ)- ಸೆಪ್ಟೆಂಬರ್ 20
  • ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 2 (ಹಿಂದಿ ರಿಯಾಲಿಟಿ ಶೋ) - ಸೆಪ್ಟೆಂಬರ್ 21

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ

  • ದಿ ಮಿಸ್ಟರಿ ಆಫ್‌ ಮೋಕ್ಷ ಐಲ್ಯಾಂಡ್‌ (ತೆಲುಗು ವೆಬ್ ಸರಣಿ) - ಸೆಪ್ಟೆಂಬರ್ 20
  • ತಲೈವೆಟ್ಟಯಮಾಪಾಳ್ಯಂ (ತಮಿಳು ವೆಬ್ ಸರಣಿ) – ಸೆಪ್ಟೆಂಬರ್ 20
  • ದಿ ಜಡ್ಜ್‌ ಆಫ್‌ ಹೆಲ್‌ (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 21

ಆಹಾ ಒಟಿಟಿ

  • ದ್ರಭದರ ಸಾಮಿ (ತೆಲುಗು ಚಲನಚಿತ್ರ) - ಸೆಪ್ಟೆಂಬರ್ 19
  • ಮಾರುತಿನಗರ ಸುಬ್ರಮಣ್ಯಂ (ತೆಲುಗು ಚಲನಚಿತ್ರ) - ಸೆಪ್ಟೆಂಬರ್ 20

ಜಿಯೋ ಸಿನೆಮಾ ಒಟಿಟಿ

  • ಜೋ ತೇರಾ ಹೈ ವೋ ಮೇರಾ ಹೈ (ಹಿಂದಿ ಚಲನಚಿತ್ರ)- ಸೆಪ್ಟೆಂಬರ್ 20
  • ಪೆಂಗ್ವಿನ್ (ಇಂಗ್ಲಿಷ್ ವೆಬ್ ಸರಣಿ) - ಸೆಪ್ಟೆಂಬರ್ 20

ಇತರೆ ಒಟಿಟಿಗಳಲ್ಲಿ ಹೊಸ ಸಿನಿಮಾಗಳು

  • ಮತ್ಸ್ಯಗಂಧ (ಕನ್ನಡ ಆಕ್ಷನ್ ಡ್ರಾಮಾ ಚಲನಚಿತ್ರ) - ಸಿನಿ ಬಜಾರ್ ಒಟಿಟಿ - ಸೆಪ್ಟೆಂಬರ್ 20
  • ಸಿಐಡಿ ರಾಮಚಂದ್ರನ್ ರಿಟೈರ್ಡ್‌ ಎಸ್‌ಐ (ಮಲಯಾಳಂ ಕ್ರೈಂ ಥ್ರಿಲ್ಲರ್)- ಮನೋರಮಾ ಮ್ಯಾಕ್ಸ್ ಒಟಿಟಿ- ಸೆಪ್ಟೆಂಬರ್ 20
  • Dopamine@2.22 (ತಮಿಳು ಥ್ರಿಲ್ಲರ್ ಚಲನಚಿತ್ರ) - ಅಮೆಜಾನ್‌ ಪ್ರೈಮ್‌ ವಿಡಿಯೋ - ಸೆಪ್ಟೆಂಬರ್ 20

ಈ ವಾರ ಬಿಡುಗಡೆಯಾಗಿರುವ ಒಟಿಟಿ ಸಿನಿಮಾಗಳಲ್ಲಿ ತಂಗಲಾನ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡದವರು ಮನೆಯಲ್ಲಿಯೇ ಕುಳಿತು ಈ ಚಿತ್ರ ನೋಡಲು ಬಯಸಿದ್ದಾರೆ. ಈ ಚಿತ್ರದ ಮೂಲಕ ಕೆಜಿಎಫ್‌ನ ಇನ್ನೊಂದು ಕಥೆಯನ್ನು ತಂಗಲಾನ್‌ ಮೂಲಕ ಪಾ ರಂಜಿತ್‌ ಹೇಳಿದ್ದಾರೆ. ತಂಗಲಾನ್‌ ಎಂದರೆ ಚಿನ್ನದ ಮಗ (ಸನ್‌ ಆಫ್‌ ಗೋಲ್ಡ್‌) ಎಂದು ಅರ್ಥ. ತಮಿಳಿನ ಈ ಸಾಹಸ ಸಿನಿಮಾವನ್ನು ಪಾ ರಂಜಿನ್‌ ನಿರ್ದೇಶಿಸಿದ್ದಾರೆ. ಚಿಯಾನ್‌ ವಿಕ್ರಮ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್‌ ನಟನೆಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ಪಾರ್ವತಿ ತಿರುವೊಟ್ಟು, ಡೇನಿಯಲ್ ಕ್ಯಾಲ್ಟಗಿರೋನ್, ಪಶುಪತಿ, ಹರಿ ಕೃಷ್ಣನ್ ಅನ್ಬುದುರೈ ಮತ್ತು ಸಂಪತ್ ರಾಮ್ ನಟಿಸಿದ್ದಾರೆ.

ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕೆಜಿಎಫ್‌ನ ಹಳ್ಳಿಯಲ್ಲಿ ಚಿನ್ನವನ್ನು ಪತ್ತೆಹಚ್ಚಲು ಬ್ರಿಟಿಷ್‌ ಜನರಲ್‌ಗೆ ಸಹಾಯ ಮಾಡುವ ಬುಡಕಟ್ಟು ನಾಯಕ, ಇದಕ್ಕೆ ಅಡ್ಡಿಯಾಗುವ ಮಾಯಾ ಹೆಣ್ಣು... ಹೀಗೆ ವಿಭಿನ್ನ ಕಥೆಯನ್ನು ಹೊಂದಿರುವ ತಂಗಲಾನ್‌ ಸಿನಿಮಾ ಇದೀಗ ಒಟಿಟಿಯಲ್ಲಿ ರಿಲೀಸ್‌ ಆಗಿದೆ.

mysore-dasara_Entry_Point