ನಟಿ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಕೊಡಬೇಕು! ಪಕ್ಕದ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ವಿಮರ್ಶಕನ ಹೇಳಿಕೆ-kollywood news tamil movie critic bailwan ranganathan made a controversial statement about actress meena mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಟಿ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಕೊಡಬೇಕು! ಪಕ್ಕದ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ವಿಮರ್ಶಕನ ಹೇಳಿಕೆ

ನಟಿ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಕೊಡಬೇಕು! ಪಕ್ಕದ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ವಿಮರ್ಶಕನ ಹೇಳಿಕೆ

ಬಹುಭಾಷಾ ನಟಿ ಮೀನಾ ಇಂದಿಗೂ ಅದೇ ಸ್ಟಾರ್‌ಡಮ್‌ ಇಟ್ಟುಕೊಂಡಿರುವ ನಟಿ. ಪೋಷಕ ಪಾತ್ರಗಳಲ್ಲಿ ನಟಿಸುತ್ತ ಬಿಜಿಯಾಗಿದ್ದಾರೆ. ಪತಿ ನಿಧನದ ಬಳಿಕ ವಿವಾದಕ್ಕೂ ತುತ್ತಾದ ಹಲವು ಉದಾಹರಣೆಗಳಿವೆ. ಇದೀಗ ಇದೇ ನಟಿಯ ಬಗ್ಗೆ ಅಚ್ಚರಿಯ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ.

ನಟಿ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಕೊಡಬೇಕು! ಪಕ್ಕದ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ವಿಮರ್ಶಕನ ಹೇಳಿಕೆ
ನಟಿ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಕೊಡಬೇಕು! ಪಕ್ಕದ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ವಿಮರ್ಶಕನ ಹೇಳಿಕೆ

Actress Meena: ಬಹುಭಾಷಾ ನಟಿ ಮೀನಾ ಭಾರತೀಯ ಚಿತ್ರೋದ್ಯಮದಲ್ಲಿ ಒಂದು ಕಾಲದಲ್ಲಿ ಸ್ಟಾರ್‌ ಆಗಿ ಮೆರೆದವರು. ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಮಾಲಿವುಡ್‌ ಹೀಗೆ ಎಲ್ಲ ಚಿತ್ರರಂಗದಲ್ಲೂ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದರು. ಕೇವಲ 4ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದ ಈ ನಟಿ, ಅದಾದ ಮೇಲೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಬಾಲನಟಿಯಾಗಿ ನಟಿಸುವುದರ ಜತೆಗೆ ನಾಯಕಿಯಾಗಿಯೂ ಮಿಂಚಿದ್ದಾರೆ. ಇದೀಗ ಪೋಷಕ ಪಾತ್ರಗಳಲ್ಲಿಯೂ ಅವರು ನಟಿಸುತ್ತಿದ್ದಾರೆ.

2022ರ ಜೂನ್‌ನಲ್ಲಿ ಮೀನಾ ಪತಿ ವಿದ್ಯಾ ಸಾಗರ್‌ ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದರು. ವಿದ್ಯಾಸಾಗರ್‌ ನಿಧನಕ್ಕೆ ಸೌತ್‌ನ ಸಿನಿ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಬಳಿಕ ಸಾಕಷ್ಟು ಗಾಸಿಪ್‌ಗಳಲ್ಲೂ ಮೀನಾ ಅವರ ಹೆಸರು ತೇಲಿ ಬಂತು. ಮೀನಾ ಇನ್ನೇನು ಎರಡನೇ ಮದುವೆ ಆಗಲಿದ್ದಾರೆ, ತಮಿಳು ನಟ ಧನುಷ್ ಜತೆ ಕೈ ಹಿಡಿಯಲಿದ್ದಾರೆ ಎಂದೆಲ್ಲ ಪುಕಾರು ಹಬ್ಬಿತ್ತು. ಆದರೆ, ಆ ಬಗ್ಗೆ ಓಪನ್‌ ಆಗಿ ಮೀನಾ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.

ಧನುಷ್‌ ಜತೆಗೆ ಮೀನಾ ಹೆಸರು ತಳುಕು

ಧನುಷ್ ಮಾತ್ರವಲ್ಲ, ಪತಿಯ ಅಗಲಿಕೆ ನಡುವೆಯೇ ತಮ್ಮ 47ನೇ ವಯಸ್ಸಿನಲ್ಲಿಯೇ ಖ್ಯಾತ ಉದ್ಯಮಿಯ ಜತೆ ಮೀನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮೀನಾ, "ಹೈಪ್‌ ಕ್ರಿಯೆಟ್‌ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಈ ರೀತಿ ಸುದ್ದಿ ಬರೆದರೆ, ನನ್ನ ಕುಟುಂಬಕ್ಕೆ ಏನಾಗುತ್ತದೆ ಎಂದು ಯಾರಾದರೂ ಊಹಿಸಿದ್ದಾರಾ? ಸಾರ್ವಜನಿಕ ವಲಯದಲ್ಲಿ ಇರುತ್ತೇವೆ ಎಂದ ಮಾತ್ರಕ್ಕೆ ನಮ್ಮನ್ನು ಕೇಳದೇ ಅನಿಸಿದ್ದನ್ನು ಪೋಸ್ಟ್‌ ಮಾಡುವುದು ಎಷ್ಟು ಸರಿ?" ಎಂದಿದ್ದರು.

ಮೀನಾಗೆ 2 ಗಂಟೆಗೆ 13 ಲಕ್ಷ ಕೊಡಬೇಕು!

ಕಾಲಿವುಡ್‌ನಲ್ಲಿ ಸಿನಿಮಾ ವಿಮರ್ಶೆಗಳನ್ನು ಮಾಡುತ್ತ, ಸಂದರ್ಶನಗಳಲ್ಲಿ ಅನಿಸಿದ್ದನ್ನು ನೇರವಾಗಿ ಹೇಳುತ್ತ ವಿವಾದಕ್ಕೆ ತುಪ್ಪ ಸುರಿಯುವ ಬೈಲ್ವಾನ್‌ ರಂಗನಾಥನ್‌, ಇತ್ತೀಚೆಗಷ್ಟೇ ಮೀನಾ ಬಗ್ಗೆ ಕಟುವಾಗಿ ಮಾತನಾಡಿದ್ದರು. ಧನುಷ್ ಜತೆ ಅವರ ವಿವಾಹವಾಗಲಿದೆ ಎಂದಿದ್ದರು. ಇದೀಗ ಮತ್ತೊಂದು ಹೇಳಿಕೆ ಮೂಲಕ ಎದುರಾಗಿದ್ದಾರೆ. ಇದೀಗ ಮೀನಾ ಬೇಕೆಂದರೆ 2 ಗಂಟೆಗೆ 13 ಲಕ್ಷ ಹಣ ನೀಡಬೇಕು ಎಂದಿದ್ದಾರೆ. ಅಷ್ಟಕ್ಕೂ ಬೈಲ್ವಾನ್‌ ರಂಗನಾಥನ್‌ ಹೇಳಿದ್ದು ಈ ವಿಚಾರಕ್ಕೆ.

ಆವಾಗೆಲ್ಲ ಹಾಗಿರಲಿಲ್ಲ..

ಈ ಮೊದಲೆಲ್ಲ ಅಂದರೆ 90ರ ಸಮಯದಲ್ಲಿ ಸಿನಿಮಾಗಳಲ್ಲಿ ನಟಿಸುವಾಗ, ಈ ಯೂಟ್ಯೂಬ್‌ನ ಹಾವಳಿ ಇಲ್ಲದಿರುವಾಗ, ಸಂದರ್ಶನಕ್ಕೆ ಬನ್ನಿ ಎಂದಾಗ ನೇರವಾಗಿ ಸ್ಟುಡಿಯೋಕ್ಕೆ ಆಗಮಿಸುತ್ತಿದ್ದರು. ಇಲ್ಲವಾದರೆ, ನಾನು ಈ ಸ್ಟುಡಿಯೋದಲ್ಲಿದ್ದೇನೆ. ಇಲ್ಲಿಯೇ ಬನ್ನಿ ಎನ್ನುತ್ತಿದ್ದರು. ಆದರೆ ಈಗ ಕಾಲಮಾನ ಬದಲಾಗಿದೆ. ಸಂದರ್ಶನ ಬೇಕು ಎಂದರೆ, ಅವರು ಹೇಳಿದಷ್ಟು ಹಣಕ್ಕೆ ಕೊಡಲೇಬೇಕು ಎಂದು ಹೇಳಿಕೊಂಡಿದ್ದಾರೆ ಬೈಲ್ವಾನ್.‌

ಇತ್ತೀಚೆಗಷ್ಟೇ ಮೀನಾ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನಕ್ಕಾಗಿ ಆ ಯೂಟ್ಯೂಬ್‌ ಚಾನೆಲ್‌ನವರು 2 ಗಂಟೆಯ ಸಂದರ್ಶನಕ್ಕೆ 13 ಲಕ್ಷ ಹಣವನ್ನು ಮೀನಾಗೆ ನೀಡಿದ್ದರು. ಯೂಟ್ಯೂಬ್‌ಗೂ ಪ್ರಚಾರ ಅನಿವಾರ್ಯ. ಹಾಗಾಗಿ ಅವರು ಹೇಳಿದಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಬೈಲ್ವಾನ್‌ ರಂಗನಾಥನ್‌ ತಮ್ಮ ಯೂಟ್ಯೂಬ್‌ನಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಹೇಳಿದ್ದೇ ತಡ ಕಾಲಿವುಡ್‌ನಲ್ಲಿ ಈ ವಿಚಾರ ಹಲ್‌ಚಲ್‌ ಸೃಷ್ಟಿಸಿತ್ತು.

mysore-dasara_Entry_Point