ಸರಿಗಮಪ ಸೀಸನ್‌ 20: ನನ್ನನ್ನು 9ನೇ ತಿಂಗಳಲ್ಲಿ ಡೇಕೇರ್‌ನಲ್ಲಿ ಬಿಟ್ರು; ಅಪ್ಪ ಅಮ್ಮನ ತ್ಯಾಗದ ಕಥೆ ಹೇಳಿ ಕಣ್ಣೀರಾದ ಅಮೂಲ್ಯ-televison news saregamapa kannada season 20 today episode singer amulya talk about parents sacrifice pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸರಿಗಮಪ ಸೀಸನ್‌ 20: ನನ್ನನ್ನು 9ನೇ ತಿಂಗಳಲ್ಲಿ ಡೇಕೇರ್‌ನಲ್ಲಿ ಬಿಟ್ರು; ಅಪ್ಪ ಅಮ್ಮನ ತ್ಯಾಗದ ಕಥೆ ಹೇಳಿ ಕಣ್ಣೀರಾದ ಅಮೂಲ್ಯ

ಸರಿಗಮಪ ಸೀಸನ್‌ 20: ನನ್ನನ್ನು 9ನೇ ತಿಂಗಳಲ್ಲಿ ಡೇಕೇರ್‌ನಲ್ಲಿ ಬಿಟ್ರು; ಅಪ್ಪ ಅಮ್ಮನ ತ್ಯಾಗದ ಕಥೆ ಹೇಳಿ ಕಣ್ಣೀರಾದ ಅಮೂಲ್ಯ

Saregamapa Kannada Season 20: ಝೀ ಕನ್ನಡ ಸರಿಗಮಪ ಸೀಸನ್‌ 20ರ ಇಂದಿನ ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಸರಿಗಮಪ ವೇದಿಕೆಯಲ್ಲಿ ಅಮೂಲ್ಯ ತನ್ನ ತಂದೆತಾಯಿ ಪರಿಶ್ರಮ, ತ್ಯಾಗದ ಕಥೆಯನ್ನು ಹೇಳಿದ್ದಾರೆ. ಇದೇ ಸಮಯದಲ್ಲಿ ಮಗಳ ಸಾಧನೆಯ ಕಥೆಯನ್ನು ಅಮ್ಮನೂ ಬಿಚ್ಚಿಟ್ಟಿದ್ದಾರೆ.

ಸರಿಗಮಪ ಸೀಸನ್‌ 20 ಅಮೂಲ್ಯ
ಸರಿಗಮಪ ಸೀಸನ್‌ 20 ಅಮೂಲ್ಯ

ಬೆಂಗಳೂರು: ಝೀ ಕನ್ನಡದ ಸರಿಗಮಪ ಸೀಸನ್‌ 20 ಇಂದಿನ (ಶನಿವಾರ) ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಸರಿಗಮಪ ವೇದಿಕೆಯಲ್ಲಿ ಸ್ಪರ್ಧಿ ಅಮೂಲ್ಯ ತನ್ನ ತಂದೆತಾಯಿಯ ಜತೆ ಇದ್ದಾರೆ. ಇಲ್ಲಿ ತನ್ನ ತಂದೆತಾಯಿಯ ಕುರಿತು ಅಮೂಲ್ಯ ಭಾವುಕರಾಗಿ ಮಾತನಾಡಿರುವುದು ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋದಿಂದ ತಿಳಿದುಬಂದಿದೆ. ನನಗೆ ಅಪ್ಪ ಅಮ್ಮನೇ ಎಲ್ಲಾ ಎಂದು ಅಮೂಲ್ಯ ಹೇಳಿದ್ದಾಳೆ. ಇದೇ ಸಮಯದಲ್ಲಿ ಅಮೂಲ್ಯಳ ಬಗ್ಗೆ ಆಕೆಯ ಅಮ್ಮ ಕೂಡ ಭಾವುಕರಾಗಿ ಮಾತನಾಡಿದ್ದು, ನೋಡುಗರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದೆ.

ನನಗೆ ನನ್ನ ಅಪ್ಪ ಅಮ್ಮನೇ ಎಲ್ಲಾ: ಅಮೂಲ್ಯ

ಸರಿಗಮಪ ಸೀಸನ್‌ 20ರ ಇಂದಿನ ಸಂಚಿಕೆಯಲ್ಲಿ ಸ್ಪರ್ಧಿ ಅಮೂಲ್ಯ ಅವರು ತನ್ನ ತಂದೆತಾಯಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನನಗೆ ನನ್ನ ಅಪ್ಪ ಅಮ್ಮನೇ ಎಲ್ಲಾ. ತುಂಬಾ ಅವರ ಬಗ್ಗೆ ಹೇಳೋಕ್ಕೆ ಇದೆ ಅವರ ಬಗ್ಗೆ. ಇವರು ಮದುವೆಯಾದ ಸಂದರ್ಭದಲ್ಲಿ ಹಣಕಾಸು ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ಒಂದು ಮಗುನಾ ಬೆಳೆಸಬೇಕು ಎನ್ನುವಷ್ಟು ಫೈನಾನ್ಶಿಯಲ್‌ ಇರಲಿಲ್ಲ. ನನಗೆ ಒಂಬತ್ತು ತಿಂಗಳು ಇರುವಾಗಲೇ ನನ್ನನ್ನು ಡೇಕೇರ್‌ಗೆ ಹಾಕಿದ್ರು. ನಾನು ಹೀಗೆನೇ ಕೇಳಿದ್ದೆ "ನನಗೆ ನೀವು ಟೈಮ್‌ ನೀಡೋಲ್ಲ" ಅಂತ. ಅದಕ್ಕೆ ಅವರು "ಜೀವನದಲ್ಲಿ ಹೀಗೆಲ್ಲ ಆಗಿದೆ, ಕಷ್ಟಗಳ ಕುರಿತು ನನಗೆ ಮಾಹಿತಿ ನೀಡಿದ್ರು" ಎಂದು ಅಮೂಲ್‌ ಹೇಳಿದ್ದಾರೆ.

"ಅವರಿಬ್ಬರು ಹಬ್ಬಕ್ಕೆ ಹೊಸ ಬಟ್ಟೆ ತೆಗೆದುಕೊಳ್ಳುತ್ತಿರಲಿಲ್ಲ. ಚಪ್ಪಲಿ ಹಾಳಾದ್ರೂ ರಿಪೇರಿ ಮಾಡಿಕೊಳ್ತಾ ಇದ್ರು, ಹೊಸದಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಮಗಳಿಗಾಗಿ ಹಣ ಕೂಡಿಡುತ್ತಿದ್ದರು. ಅವರ ತ್ಯಾಗದ ಪ್ರತಿಫಲವಾಗಿ ನಾನು ಇಲ್ಲಿದ್ದೇನೆ. ನನಗೆ ಅವರು ಏನು ಪ್ರೀತಿ ನೀಡಿದ್ದಾರೋ ಅದೇ ಪ್ರೀತಿಯನ್ನು ನನ್ನ ಸ್ಟುಡೆಂಟ್ಸ್‌ಗೆ ನೀಡುತ್ತ ಇದ್ದೇನೆ. ಇವತ್ತು ನಾನು ಏನೇ ಆಗಿದ್ರು, ಎಂತಹ ಸಾಧನೆ ಮಾಡಿದ್ರೂ ಅದಕ್ಕೆ ನನ್ನ ಅಪ್ಪ ಅಮ್ಮನೇ ಕಾರಣ" ಎಂದು ಅಮೂಲ್ಯ ಹೇಳಿದ್ದಾರೆ.

ಆಸೆ, ಆಕಾಂಕ್ಷೆ ಬದಿಗಿಟ್ಟು ಸಾಧನೆ

ಇದೇ ಸರಿಗಮಪ ವೇದಿಕೆಯಲ್ಲಿ ಅಮೂಲ್ಯರ ತಾಯಿ ಕೂಡ ತನ್ನ ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ. "ನಮ್ಮ ಮಕ್ಕಳನ್ನು ನಾವು ನೋಡಿಕೊಳ್ಳುವುದು ಕರ್ತವ್ಯ. ಆದರೆ, ಮಕ್ಕಳು ತಂದೆತಾಯಿಗೆ ಇಂತಹ ಕೆಲಸ ಮಾಡೋದು ಗ್ರೇಟ್‌. ಅವಳು ಚಿಕ್ಕದಿರುವಾಗಲೇ ಕಾಂಪಿಟೇಷನ್‌ನಲ್ಲಿ ಏನೇ ಸ್ಪರ್ಧೆಯಲ್ಲಿ ಬಂದ ಹಣವನ್ನು, ತನ್ನೆಲ್ಲ ಆಸೆ ಆಸಕ್ತಿಗಳನ್ನೆಲ್ಲ ಬಿಟ್ಟು ನಮ್ಮಲ್ಲಿ ನೀಡುತ್ತಿದ್ದಳು. ಮುಂದೆ ಫೀಸ್‌ಗೆ ಬೇಕಾಗುತ್ತೆ ಅಮ್ಮ ಅನ್ನುತ್ತಿದ್ದಳು. ಈ ರೀತಿ ಮಾಡಿದ್ದಕ್ಕೆ ಅವಳು ಈಗ ಒಳ್ಳೆ ಪ್ಲೇಸ್‌ನಲ್ಲಿದ್ದಾಳೆ. ಅವಳಿಗೆ ಮನಿ ವ್ಯಾಲ್ಯೂ ಗೊತ್ತು. ಅವಳ ಕಠಿಣ ಪ್ರಯತ್ನವೇ ಇದಕ್ಕೆ ಕಾರಣ. ಅವಳು ನಾಟಾ ಎಗ್ಸಂನಲ್ಲಿ 29 ರಾಂಕ್‌ ಬರಲು ಇವಳ ಹಾರ್ಡ್‌ವರ್ಕ್‌ ಕಾರಣ. ಅವಳ ಇಂತಹ ಗುಣವೇ ಈ ಎಲ್ಲಾ ಸಾಧನೆಗಳಿಗೆ ಕಾರಣ" ಎಂದು ಅಮೂಲ್ಯರ ಅಮ್ಮ ತಮ್ಮ ಮಗಳ ಗುಣಗಾನ ಮಾಡಿದ್ದಾರೆ.

ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡಿದ ಅಮೂಲ್ಯ

ಅಮೂಲ್ಯ ತನ್ನ ತಾಯಿಯೊಂದಿಗೆ ಕರಿಮಣಿ ಮಾಲೀಕ ನೀನಲ್ಲ ಹಾಡನ್ನು ಹಾಡಿದ್ದಾರೆ. ಏನಿಲ್ಲ ಏನಿಲ್ಲ ಎಂದು ಇವರಿಬ್ಬರು ಹಾಡಿದ್ದಾರೆ. ಸರಿಗಮಪದ ಸಂಪೂರ್ಣ ತಂಡವೇ ಈ ಹಾಡಿಗೆ ಹೆಜ್ಜೆ ಹಾಕಿದ ದೃಶ್ಯವು ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಕಾಣಿಸಿದೆ.

mysore-dasara_Entry_Point