Mazar Songs out: ಹುಚ್ಚ ವೆಂಕಟ್ ದನಿಗೂಡಿಸಿರುವ 'ಮಾಜರ್' ಆಡಿಯೋ ಬಿಡುಗಡೆಗೊಳಿಸಿದ ಸಚಿವ ಕೆ. ಗೋಪಾಲಯ್ಯ
ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಈ ಹಾಡುಗಳಿಗೆ ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ದನಿಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದ್ದು ಎಂದು ಲೋಕಲ್ ಲೋಕಿ ಮಾಹಿತಿ ನೀಡಿದರು.
ಲೋಕಲ್ ಲೋಕಿ ನಿರ್ದೇಶನದ 'ಮಾಜರ್' ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಸಚಿವ ಕೆ. ಗೋಪಾಲಯ್ಯ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದು ಲೋಕಿ ಮೊದಲ ಸಿನಿಮಾ ಆಗಿದ್ದು ಇದಕ್ಕೂ ಮುನ್ನ ಅವರು ಗೀತರಚನೆಕಾರನಾಗಿ ಗುರುತಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕಲ್ ಲೋಕಿ ''ನಾನು ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರನಾಗಿ ಗುರುತಿಸಿಕೊಂಡಿದ್ದೇನೆ. ಈಗ 'ಮಾಜರ್' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್‌ಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಈ ಹಾಡುಗಳಿಗೆ ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ದನಿಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದ್ದು'' ಎಂದು ಮಾಹಿತಿ ನೀಡಿದರು.
ಚಿತ್ರದ ಕಥೆ ಬಗ್ಗೆ ಮಾತನಾಡಿದ ಲೋಕಿ, ''ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಇಷ್ಟೇ ಅಲ್ಲ. ಚಿತ್ರದಲ್ಲಿ ಲವ್ ಸ್ಟೋರಿ ಕೂಡಾ ಇದೆ. ಸದ್ಯದಲ್ಲೇ ನಮ್ಮ ಸಿನಿಮಾವನ್ನು ತೆರೆಗೆ ತರಲಿದ್ದೇವೆ'' ಎಂದರು.
'ಮಾಜರ್' ಚಿತ್ರಕ್ಕೆ ಮುರುಗನಂದನ್ ಬಂಡವಾಳ ಹೂಡಿದ್ದಾರೆ. ಆಡಿಯೋ ಬಿಡುಗಡೆ ಬಳಿಕ ಮಾತನಾಡಿದ ಲೋಕಿ, ಕನ್ನಡದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಲು ನಿರ್ಧರಿಸಿದೆ ಎಂದರು. ಸಂಗೀತ ನಿರ್ದೇಶಕ ರವೀಶ್, ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್ ಹಾಗೂ ನೃತ್ಯ ನಿರ್ದೇಶಕ ಚಿತ್ರದ ಬಗ್ಗೆ ಮಾತನಾಡಿದರು.
ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಟ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಹಾಗೂ ಇನ್ನಿತರರು ಹಾಜರಿದ್ದರು. ಎ2 ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಚಿತ್ರದ ಹಾಡುಗಳು ಬಿಡುಗಡೆ ಆಗಿವೆ.
ಮತ್ತಷ್ಟು ಮನರಂಜನೆ ಸುದ್ದಿಗಳು
'ಬಲಗಂ' ಚಿತ್ರ ನೋಡಿ ಒಂದಾದ ಒಡಹುಟ್ಟಿದವರು.. ಸಿನಿಮಾ ಅಂದ್ರೆ ಹೀಗಿರಬೇಕು ಎಂದು ಉದ್ಘರಿಸಿದ ಜನರು!
'ಬಂಗಾರದ ಮನುಷ್ಯ' ಸಿನಿಮಾ ತೆರೆ ಕಂಡ ನಂತರ ಎಷ್ಟೋ ಯುವಕರು ನಗರದಿಂದ ಹಳ್ಳಿಗೆ ಬಂದು ವ್ಯವಸಾಯದಲ್ಲಿ ತೊಡಗಿಸಿಕೊಂಡು ಇತರ ಯುವಕರಿಗೂ ಮಾದರಿಯಾಗಿದ್ದರು. ಇದೀಗ ತೆಲುಗು ಸಿನಿಮಾವೊಂದು ಬಹಳ ವರ್ಷಗಳಿಂದ ದೂರ ಇದ್ದ ಅಣ್ಣ ತಮ್ಮಂದಿರನ್ನು ಒಂದು ಮಾಡಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.
ಕೀರ್ತಿ ಸುರೇಶ್ ವಿಭಿನ್ನ ಸ್ಟೆಪ್ಸ್‌ಗೆ ಮೆಚ್ಚುಗೆ.. ವೆನ್ನೆಲಾಗೆ ಅವಾರ್ಡ್ ಗ್ಯಾರಂಟಿ ಎಂದ ಫ್ಯಾನ್ಸ್
'ದಸರಾ' ಸಿನಿಮಾ ರಿಲೀಸ್ ಆದ 4 ದಿನಗಳಲ್ಲಿ 87 ಕೋಟಿ ರೂಪಾಯಿ ಲಾಭ ಮಾಡಿದೆ. ಚಿತ್ರಕಥೆ, ಹಾಡುಗಳು, ಮೇಕಿಂಗ್, ಕಲಾವಿದರ ನಟನೆ ಎಲ್ಲದಕ್ಕೂ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರತಂಡ ಕೀರ್ತಿ ಸುರೇಶ್ ಡ್ಯಾನ್ಸ್ ತುಣುಕೊಂದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು ಕೀರ್ತಿ ಸ್ಟೆಪ್ಸ್ ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕೀರ್ತಿ ಸುರೇಶ್ ಡ್ಯಾನ್ಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ